ಪ್ರಚಲಿತ

ಬಿಗ್ ಬ್ರೇಕಿಂಗ್: ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಮಾಜಿ ನ್ಯಾ.ಸಂತೋಷ್ ಹೆಗ್ಡೆ! ನ್ಯಾಯಾಧೀಶರಿಗೆ ಚೂರಿ ಇರಿದಾತ ಹೇಳಿದ್ದೇನು ಗೊತ್ತಾ..?

ಪೊಲೀಸರು, ಕ್ರಿಕೆಟಿಗರು, ಚಲನ ಚಿತ್ರ ನಟರು, ರೈತರು, ಕೂಲಿ ಕಾರ್ಮಿಕರು, ಸಾಮಾಜಿಕ ಹೋರಾಟಗಾರರು, ಪ್ರಗತಿ ಪರ ಚಿಂತಕರು ಸಹಿತ ಎಲ್ಲಾ ಭಾಗಗಳಿಂದಲೂ ಟೀಕೆಯನ್ನೇ ಎದುರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಇಂದು ಮತ್ತೋರ್ವ ಕನ್ನಡಿಗೆ ಸಿಡಿದೆದ್ದಿದ್ದಾರೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಇದು ರಾಜ್ಯದ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಮಾಜಿ ನ್ಯಾ.ಸಂತೋಷ್ ಹೆಗ್ಡೆ!

ಲೋಕಾಯುಕ್ತ ಮಾಜಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ. ನ್ಯಾಯ ಎಂದರೆ ಯಾವೊಬ್ಬನಿಗೂ ಕೇರ್ ಮಾಡದ ಅಪ್ಪಟ ಕನ್ನಡಿಗ. ಬ್ರಹ್ಮಾಂಡ ಭ್ರಷ್ಟಾಚರವನ್ನೇ ನಡೆಸಿ ದೇಶದಿಂದಲೇ ನಾಪತ್ತೆಯಾದ ಯುಪಿಎ ಸರ್ಕಾರದ ವಿರುದ್ಧ ದೆಹಲಿಯಲ್ಲಿ ಘರ್ಜಿಸಿದ ಸಿಂಹ. ಅವರು ಇಂದು ಕರ್ನಾಟಕ ರಾಜ್ಯ ಸರ್ಕಾರದ ಕಾನೂನು ಸುವ್ಯವಸ್ಥೆ ಬಗ್ಗೆ ಕಿಡಿ ಕಾರಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅನ್ನೋದು ಸಂಪೂರ್ಣ ನಾಶವಾಗಿ ಹೋಗಿದೆ. ಇದು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ದೌರ್ಬಲ್ಯ. ಇದನ್ನು ನಾನು ಖಂಡಿಸುತ್ತೇನೆ. ರಾಜ್ಯದಲ್ಲಿ ಕಾನೂನು ಅನ್ನೋದು ಇದಿಯೋ ಇಲ್ಲವೋ ಅನ್ನುವ ಅನುಮಾನ ಮೂಡುತ್ತಿದೆ. ಇದು ಯಾರಿಗೂ ಒಳ್ಳೆಯದಲ್ಲ. ಮಂತ್ರಿಗಳು ರಾಜಕಾರಣಿಗಳು ರಾಜಕೀಯ ಮಾಡೋದ್ರಲ್ಲಿಯೇ ತೊಡಗಿಕೊಂಡಿದ್ದರೆ ಎನ್ನುವ ದಾಟಿಯಲ್ಲಿ ಸುಪ್ರಿಂ ಕೋರ್ಟ್‍ನ ಮಾಜಿ ನ್ಯಾಧೀಶರು ಹಾಗೂ ಕರ್ನಾಟಕ ಲೋಕಾಯುಕ್ತದ ಮಾಜಿ ನ್ಯಾಯಮೂರ್ತಿಗಳಾದ ಸಂತೋಷ್ ಹೆಗ್ಡೆ ಗಂಭೀರ ಆರೋಪವನ್ನು ಮಾಡಿದ್ದಾರೆ.

ಕರ್ನಾಟಕದ ಹಾಲಿ ಲೋಕಾಯುಕ್ತ ನ್ಯಾಯಮೂರ್ತಿಗಳಾದ ವಿಶ್ವನಾಥ್ ಶೆಟ್ಟಿಯವರ ಮೇಲೆ 18 ಪ್ರಕರಣಗಳನ್ನು ಒಳಗೊಂಡ ಆರೋಪಿಯೋರ್ವ ಚೂರಿಯಿಂದ ಇರಿದ ಘಟನೆ ನಡೆಯುತ್ತಿದ್ದಂತೆಯೇ ಮಾಜಿ ಲೋಕಾಯುಕ್ತ ನ್ಯಾಮೂರ್ತಿಗಳು ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆ.

ತಪಾಸನೆ ನಡೆಸಲೇ ಇಲ್ಲ…!

ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಿದ ಪೆÇಲೀಸರು ಆತನಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಈ ವೇಳೆ ತಾನು ಲೋಕಾಯುಕ್ತ ಕಛೇರಿ ಪ್ರವೇಶಿಸುವಾಗ ಯವುದೇ ತಪಾಸನೆಯನ್ನು ನಡೆಸಿಯೇ ಇಲ್ಲ ಎಂದು ವಿಚಾರಣೆ ವೇಳೆಯಲ್ಲಿ ಹೇಳಿಕೆ ನೀಡಿದ್ದಾನೆ. ಈ ಮೂಲಕ ಸರ್ಕಾರದ ಮಹಾ ವೈಫಲ್ಯವನ್ನು ಬಂಧಿತ ತೇಜರಾಜ್ ಬಹಿರಂಗಗೊಳಿಸಿದ್ದಾನೆ.

ಕರ್ನಾಟಕದ ಈ ರಾಜ್ಯ ಸರ್ಕಾರದಲ್ಲಿ ಈವರೆಗೂ ಕೇವಲ ಜನಸಾಮಾನ್ಯರಿಗೆ ಮಾತ್ರವೇ ಭದ್ರತೆ ಇಲ್ಲ ಎಂದು ಅಂದುಕೊಂಡಿದ್ದೆವು ಆದರೆ ಇಂದು ಸ್ವತಃ ಲೋಕಾಯುಕ್ತರಿಗೇ ಈ ರಾಜ್ಯದಲ್ಲಿ ಭದ್ರತೆ ಇಲ್ಲ ಅನ್ನೋದು ಸಾಭೀತಾಗಿದೆ. ಒಂದಲ್ಲಾ ಒಂದು ಕಾರಣದಿಂದ ವಿವಿಧ ಲೋಪಗಳನ್ನು ಎದುರಿಸುತ್ತಿರುವ ರಾಜ್ಯ ಸರ್ಕಾರದ ಗೃಹ ಇಲಾಖೆ ಈಗ ನ್ಯಾಯಾಧೀಶರ ವಿಚಾರದಲ್ಲೂ ತನ್ನ ಅಭದ್ರತೆಯನ್ನು ತೋರ್ಪಡಿಸಿದೆ. ಇಂದು ಇಡೀ ದೇಶವೇ ಬೆಚ್ಚಿ ಬೀಳುವಂತಹಾ ಘಟನೆ ಕರ್ನಾಟಕದಲ್ಲಿ ನಡೆದಿದೆ.

ನ್ಯಾಯಾಧೀಶರಿಗೇ ಚೂರಿ ಇರಿದಿದ್ದ ತೇಜರಾಜ್…

ಕರ್ನಾಟಕದ ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ಇಂದು ದುಷ್ಕರ್ಮಿಯೋರ್ವ ಚೂರಿ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಹಲವಾರು ಆರೋಪಗಳನ್ನು ಹೊತ್ತಿರುವ ಆರೋಪಿ ತೇಜ್ ರಾಜ್ ಎಂಬಾತನಿಂದ ಈ ಕೃತ್ಯ ನಡೆದಿದೆ. ನ್ಯಾಯಾಧೀಶರಿಗೇ ಚೂರಿ ಇರಿದಿದ್ದು, ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಸ್ಥಿತಿ ಗಂಭೀರವಾಗಿದೆ. ಇಂದು ಮಧ್ಯಾಹ್ನ 35 ಸುಮಾರಿಗೆ ಚೂರಿ ಇರಿದು ಹತ್ಯೆ ಮಾಡಲು ಯತ್ನಿಸಿದ್ದಾನೆ.

ಇಂದು ಮಧ್ಯಾಹ್ನ ಲೋಕಾಯುಕ್ತ ನ್ಯಾಮೂರ್ತಿ ವಿಶ್ವನಾಥ್ ಶೆಟ್ಟಿ ತನ್ನ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ತಾನು ವಕೀಲನೆಂದು ಹೇಳಿಕೊಂಡು ಓರ್ವ ವ್ಯಕ್ತಿ ಲೋಕಾಯುಕ್ತರ ಕಛೇರಿಗೆ ಎಂಟ್ರಿಯಾಗಿದ್ದ. ತೇಜ್ ರಾಜ್ ಎಂಬ ಹೆಸರಿನ ಈ ವ್ಯಕ್ತಿ ತಾನು ವಕೀಲ ಎಂದು ಹೇಳಿಕೊಂಡು ಲೋಕಾಯುಕ್ತರ ಕೊಠಡಿ ಪ್ರವೇಶಿಸಿದ್ದ. ಮಧ್ಯಾಹ್ನ 12:45ಕ್ಕೆ ಲೋಕಾಯುಕ್ತರ ಕಛೇರಿ ಪ್ರವೇಶಿಸಿದ್ದ ತೇಜರಾಜ ಶರ್ಮಾ ಲೋಕಾಯುಕ್ತ ಕಛೇರಿಯಲ್ಲಿರುವ ಪುಸ್ತಕಕ್ಕೆ ಸಹಿ ಹಾಕಿದ್ದ. ನಂತ5ರ 1.25ಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರ ಕಛೇರಿಗೆ ಎಂಟ್ರಿ ಕೊಟ್ಟಿದ್ದ. ನನ್ನ ಮೇಲಿನ ಪ್ರಕರಣಗಳನ್ನು ವಜಾ ಮಾಡುವಂತೆ ಕೇಳಿಕೊಂಡಿದ್ದ. 1:35ರ ಸುಮಾರಿಗೆ ಲೋಕಾಯುಕ್ತ ನ್ಯಾಮೂರ್ತಿ ವಿಶ್ವನಾಥ್ ಶೆಟ್ಟಿಗೆ ಚೂರಿಯಿಂದ ಇರಿದು ಹತ್ಯೆಗೆ ಯತ್ನಿಸಿದ್ದಾನೆ. ನ್ಯಾಯಮೂರ್ತಿಗಳು ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಒಳನುಗ್ಗಿದ್ದ ತೇಜರಾಜ ಶರ್ಮಾ ಮಾತನಾಡುತ್ತಲೇ 4 ಬಾರಿ ನ್ಯಾಯಾಧೀಶರಿಗೆ ಚೂರಿಯಿಂದ ಇರಿದಿದ್ದಾನೆ. ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಚೂರಿ ಹಾಕಿದ್ದ ಆರೋಪಿಯ ವೇಗಕ್ಕೆ ಆತ ಬಳಸಿದ್ದ ಚೂರಿ ತುಂಡು ತುಂಡಾಗಿ ಬಿದ್ದಿದೆ. ಸದ್ಯ ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿ ತೇಜರಾಜ ಶರ್ಮಾ ಬರೋಬ್ಬರಿ 18 ಪ್ರಕರಣಗಳನ್ನು ಮೈಮೇಲೆ ಹಾಕಿಕೊಂಡಿದ್ದ. ಆತ ಸರ್ಕಾರಿ ಕಛೇರಿಗಳಿಗೆ ಪೀಠೋಪಕರಣಗಳನ್ನು ಸರಬರಾಜು ಮಾಡುತ್ತಿದ್ದ. ಈ ಸರಬರಾಜು ಪ್ರಕ್ರಿಯೆಯಲ್ಲಿ ಭಾರೀ ಅಕ್ರಮವೇ ನಡೆದುಹೋಗಿತ್ತು. ಇದು ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ತೇಜರಾಜ ಶರ್ಮಾ ಹಾಗೂ ಒಟ್ಟು 18 ಜನರ ಮೇಲೆ ಕೇಸ್ ದಾಖಲಾಗಿತ್ತು. ಈ ನಿಮಿತ್ತ ಲೋಕಾಯುಕ್ತ ನ್ಯಾಯಮೂರ್ತಿಗಳ ಕಛೇರಿಗೆ ಗೂಳಿ ನುಗ್ಗಿದಂತೆ ನುಗ್ಗಿದ ತೇಜರಾಜ ಶರ್ಮಾ ತನ್ನ ಅಕ್ರಮಗಳ ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ಹೇಳಿದ್ದಾನೆ. ನಂತರ ತಡಮಾಡದೆ ಲೋಕಾಯುಕ್ತ ನ್ಯಾಮೂರ್ತಿ ವಿಶ್ವನಾಥ್ ಶೆಟ್ಟಿಯವರ ಮೇಲೆ ಚೂರಿಯಿಂದ ದಾಳಿ ಮಾಡಿದ್ದಾನೆ.

ವಿಶ್ವನಾಥ್ ಸ್ಥಿತಿ ಗಂಭೀರ..!

ಹತ್ಯಾ ಯತ್ನಕ್ಕೊಳಗಾಗಿ ಚೂರಿ ಇರಿಸಿಕೊಂಡ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯನ್ನು ಕೂಡಲೇ ಮಲ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವೇಳೆ ಡಾ.ಆನಂದ್ ಎನ್ನುವವರಿಂದ ವಿಶ್ವನಾಥ್ ಶೆಟ್ಟಿಯವರಿಗೆ ಚಿಕಿತ್ಸೆ ನೀಡಲಾಗಿದೆ. ಭಾರೀ ಪ್ರಮಾಣದ ಇಂಜುರಿಯಾಗಿದ್ದು, ವಿಶ್ವನಾಥ್ ಶೆಟ್ಟಿಯವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. 4 ಬಾರಿ ಚೂರಿ ಇರಿದಿದ್ದರಿಂದ ಗಂಭೀರ ಗಾಯಕ್ಕೊಳಕ್ಕಾದ ನ್ಯಾಯಾಧೀಶರನ್ನು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಎದ್ದು ಕಾಣುವ ಸರ್ಕಾರದ ವೈಫಲ್ಯ..!

ಈ ಎಲ್ಲ ಘಟನೆಗಳಲ್ಲಿ ರಾಜ್ಯ ಸರ್ಕಾರದ ವೈಫಲ್ಯವೇ ಎದ್ದು ಕಾಣುತ್ತಿದೆ. ಓರ್ವ ನ್ಯಾಯಾಧೀಶರಿಗೇ ಸೂಕ್ತ ಭದ್ರತೆ ನೀಡಲಾಗದ ಈ ಸರ್ಕಾರಕ್ಕೆ ಇನ್ನು ಜನಸಾಮಾನ್ಯರಿಗೆ ಅದೇನು ಭದ್ರತೆ ನೀಡುತ್ತೋ! ಲೋಕಾಯುಕ್ತ ನ್ಯಾಯಮೂರ್ತಿಗಳೆಂದರೆ ಭಾರೀ ಭದ್ರೆತೆಯೇ ಅವರಿಗೆ ನೀಡಬೇಕಾಗುತ್ತದೆ. ಅಲ್ಲದೆ ಅವರಿಗೆ ಸ್ವತಃ ಗನ್ ಮ್ಯಾನ್ ಕೂಡಾ ಪ್ರತ್ಯೇಕವಾಗಿರುತ್ತಾರೆ. ಆದರೆ ಗನ್ ಮ್ಯಾನ್ ಕೂಡಾ ನಿರ್ಲಕ್ಷ್ಯ ವಹಿಸಿದ್ದು ಇಲ್ಲಿ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರ ನೇತೃತ್ವದಲ್ಲಿರುವ ರಾಜ್ಯ ಸರ್ಕಾರದಲ್ಲಿ ಈ ರೀತಿ ಘಟನೆಗಳು ಇದೇ ಹೊಸದಲ್ಲ ಆದರೂ ನ್ಯಾಯಾಧೀಶರಿಗೇ ಇಂತಹ ದಾಳಿಗಳು ನಡೆದಿರುವುದು ಭಾರೀ ಆಘಾತಕ್ಕೆ ಕಾರಣವಾಗಿದೆ. ಕೇವಲ ಜನಸಮಾನ್ಯರಿಗೆ ನ್ಯಾಯ ಕೊಡಲಾಗದ ಈ ನಾಲಾಕ್ ಸರ್ಕಾರ ಇನ್ನು ಜನಸಾಮ್ಯಾರಿಗೆ ಯಾವ ರೀತಿಯ ಭದ್ರತೆಯನ್ನು ನೀಡುತ್ತೆ ಎಂದು ಜನ ಕಿಡಿಕಾರುತ್ತಿದ್ದಾರೆ.

ಒಟ್ಟಿನಲ್ಲಿ ಸರ್ಕಾರದ ವೈಫಲ್ಯತರಗಳು ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಗೋಚರಿಸುತ್ತಿದ್ದು, ಈವರೆಗೆ ಬದುಕಲು ಸಾಧ್ಯವಿಲ್ಲ ಎನ್ನುವ ಜನಸಾಮಾನ್ಯರ ಪಟ್ಟಿಗೆ ಇಂದು ಲೋಕಾಯುಕ್ತ ನ್ಯಾಮೂರ್ತಿಗಳೇ ಸೇರಿಕೊಂಡಿದ್ದಾರೆ. ಸ್ವತಃ ಲೋಕಾಯುಕ್ತ ನ್ಯಾಮೂರ್ತಿಗಳಿಗೇ ಸೂಕ್ತ ಭದ್ರತೆಯನ್ನು ನೀಡದ ಈ ಸರ್ಕರ ಇನ್ನು ಜನಸಾಮಾನ್ಯರಿಗೆ ಇನ್ನಾವ ಭದ್ರತೆಯನ್ನು ನೀಡಬಹುದು ಎಂಬ ಮಾತುಗಳೂ ಕೇಳಿ ಬರುತ್ತಿದೆ. ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಮಹ ವೈಫಲ್ಯವಾಗಿದ್ದು ಮುಂದಿನ ಚುನಾವಣೆಯಲ್ಲಿ ಇದರ ಪರಿಣಾಮ ಬೀರಬಹುದು ಎಂಬ ಮಾತುಗಳೂ ಕೇಳಿ ಬರುತ್ತಿದೆ.

source: public tv

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close