ಪ್ರಚಲಿತ

ಬಿಜೆಪಿಗೆ ಬರುವಂತೆ ಬಹಿರಂಗ ಕರೆ ನೀಡಿದ ಎಸ್ ಎಮ್ ಕೃಷ್ಣ! ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದ ಕೃಷ್ಣ ಹೇಳಿಕೆ!

ಮುಂಬರುವ ಲೋಕಸಭಾ ಚುನಾವಣೆಗೆ ಈಗಿಂದಲೇ ಭರ್ಜರಿ ತಯಾರಿ ಆರಂಭಿಸಿರುವ ರಾಜಕೀಯ ಪಕ್ಷಗಳು, ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಪಕ್ಷದ ಘಟಾನುಘಟಿ ನಾಯಕರನ್ನು ಬಳಸಿಕೊಂಡು ಚುನಾವಣೆ ಎದುರಿಸಲು ಸಜ್ಜಾಗಿವೆ. ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡೇ ಚುನಾವಣೆ ಎದುರಿಸಿದರೆ, ಇತ್ತ ಭಾರತೀಯ ಜನತಾ ಪಕ್ಷ ಏಕಾಂಗಿಯಾಗಿ ಹೋರಾಡಲು ಸಜ್ಜಾಗಿದೆ. ಭಾರತೀಯ ಜನತಾ ಪಕ್ಷದ ಕಡೆಯಿಂದ‌ ಈಗಾಗಲೇ ಬಲಿಷ್ಠ ನಾಯಕರು ಪಕ್ಷದ ಗೆಲುವಿಗೆ ಶ್ರಮಿಸಲು ಎಲ್ಲಾ ಸಿದ್ಧತೆ ನಡೆಸಿಕೊಂಡಿದ್ದು, ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಶಾಕ್ ನೀಡಲು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅಖಾಡಕ್ಕೆ ಇಳಿದಿದ್ದಾರೆ.

ಹೌದು ಈಗಾಗಲೇ ಕಾಂಗ್ರೆಸ್‌ನಿಂದ ಹೊರ ಬಂದು ಬಿಜೆಪಿ ಸೇರ್ಪಡೆಗೊಂಡಿರುವ ಎಸ್ ಎಮ್ ಕೃಷ್ಣ ಅವರು ಈ ಬಾರಿ ಬಿಜೆಪಿಯನ್ನು ಮತ್ತೊಮ್ಮೆ ಗೆಲ್ಲಿಸಲು ಕರ್ನಾಟಕದಲ್ಲಿ ಶ್ರಮಿಸಲಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ನ ಪ್ರಾಬಲ್ಯ ಹೆಚ್ಚು ಇರುವುದರಿಂದ ಎಸ್ ಎಮ್ ಕೃಷ್ಣರಂತಹ ನಾಯಕರ ಅಗತ್ಯವಿದೆ, ಆದ್ದರಿಂದಲೇ ಬಿಜೆಪಿ ಅವರನ್ನೇ ಆಯ್ಕೆ ಮಾಡಿದ್ದು ಕೃಷ್ಣ ಅವರು ಇಂದು ತಮ್ಮ ಬೆಂಬಲಿಗರಿಗೆ ಬಹಿರಂಗ ಆಹ್ವಾನ ನೀಡಿದ್ದಾರೆ.!

ಕಾಂಗ್ರೆಸಿಗರಿಗೂ ಆಹ್ವಾನ ನೀಡಿದ ಕೃಷ್ಣ!

ನಾನು ಕಾಂಗ್ರೆಸ್‌ನಲ್ಲಿ ಇರುವಾಗ ಯಾರೆಲ್ಲಾ ನನ್ನ ಜೊತೆಗೆ ಇದ್ದರೋ ಅವರೆಲ್ಲರೂ ಬಿಜೆಪಿಗೆ ಬನ್ನಿ ಎಂದು ತಮ್ಮ ಬೆಂಬಲಿಗರಿಗೆ ಕರೆ ಕೊಟ್ಟ ಎಸ್ ಎಮ್ ಕೃಷ್ಣ, ಈ ಬಾರಿ ನಾವು ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸಬೇಕು, ದೇಶವನ್ನು ಉಳಿಸುವ ಸಲುವಾಗಿ ನಾವೆಲ್ಲರೂ ಒಂದಾಗಬೇಕಿದೆ ಎಂದು ಹೇಳಿಕೊಂಡಿದ್ದಾರೆ. ಮಂಡ್ಯದ ಮದ್ದೂರಿನಲ್ಲಿ ಸಮಾರಂಭದಲ್ಲಿ ಮಾತನಾಡಿದ ಕೃಷ್ಣ, ಕಾಂಗ್ರೆಸ್ ಯಾವ ರೀತಿ ಕುಟುಂಬ ರಾಜಕಾರಣ ಮಾಡುತ್ತಿದೆ ಎಂಬುದು ನಮ್ಮ ದೇಶ ನೋಡುತ್ತಿದೆ, ಒಬ್ಬ ಪ್ರಧಾನಮಂತ್ರಿಯನ್ನು ಸೋಲಿಸಲು ಇಂದು ಹತ್ತಾರು ಪಕ್ಷಗಳು ಒಂದಾಗಿವೆ ಎಂದರೆ ನಮ್ಮ ದೇಶವನ್ನು ಉಳಿಸಿಕೊಳ್ಳಲು ನಾವೆಲ್ಲರೂ ಒಂದಾಗಲೇಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಈಗಾಗಲೇ ಕಾರ್ಯಕರ್ತರ ಮತ್ತು ತನ್ನ ಬೆಂಬಲಿಗರ ಜೊತೆ ಮಾತನಾಡಿದ್ದೇನೆ, ಹೆಚ್ಚಿನವರು ಬಿಜೆಪಿ ಸೇರಲು ನಿರ್ಧರಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಎಲ್ಲಾ ಬೆಂಬಲಿಗರೂ ಬಿಜೆಪಿಗೆ ಬನ್ನಿ ಎಂದು ಕೃಷ್ಣ ಕರೆ ನೀಡಿದ್ದಾರೆ.!

ಚುನಾವಣೆಯ ಹೊಸ್ತಿಲಲ್ಲೇ ಇಂತಹ ಒಂದು ಬೆಳವಣಿಗೆ ಕಂಡು ಬಂದಿದ್ದು, ಕಾಂಗ್ರೆಸ್ ಮತ್ತು ಇತರ ವಿರೋಧಿ ಪಕ್ಷಗಳಲ್ಲಿ ಆತಂಕ ಉಂಟು ಮಾಡಿದೆ. ಯಾಕೆಂದರೆ ಎಸ್ ಎಮ್ ಕೃಷ್ಣ ಅವರಿಗೆ ರಾಜ್ಯಾದ್ಯಂತ ಅಪಾರ ಅಭಿಮಾನಿಗಳು ಮತ್ತು ಬೆಂಬಲಿಗರು ಇರುವದರಿಂದ ಅವರು ಬಹಿರಂಗವಾಗಿ ಆಹ್ವಾನ‌ ನೀಡಿರುವುದು ಬಿಜೆಪಿಗೆ ಬಹು ದೊಡ್ಡ ಲಾಭವಾಗಲಿದ್ದು, ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ.!

-ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close