ಪ್ರಚಲಿತ

ಬಿಗ್ ಬ್ರೇಕಿಂಗ್! ಮಾಜಿ ರಕ್ಷಣಾ ಸಚಿವ, ಇಂದಿರಾ ಸರಕಾರದ ವಿರುದ್ಧ ಹೋರಾಡಿದ್ದ ಧೀಮಂತ ನಾಯಕ‌ ಜಾರ್ಜ್ ಫರ್ನಾಂಡೀಸ್ ಇನ್ನಿಲ್ಲ! ಮತ್ತೊಂದು ರತ್ನವನ್ನು ಕಳೆದುಕೊಂಡ ಭಾರತ!

ಅದ್ಯಾಕೋ ಏನೋ‌ ಗೊತ್ತಿಲ್ಲ, ದೇಶದ ಒಂದೊಂದು ಅಮೂಲ್ಯ ರತ್ನಗಳು ಮರೆಯಾಗುತ್ತಿವೆ. ಈಗಾಗಲೇ ಕಲಾಂ, ಅಟಲ್ ಜೀ, ಅನಂತ್ ಜೀ ಮತ್ತು ಸಿದ್ದಗಂಗಾ ಶ್ರೀಗಳಂತಹ ಶ್ರೇಷ್ಠ ವ್ಯಕ್ತಿಗಳನ್ನು ಕಳೆದುಕೊಂಡ ಭಾರತ ಇದೀಗ ಮಾಜಿ ರಕ್ಷಣಾ ಸಚಿವ, ಬಡವರ್ಗದ ಜನರಿಗಾಗಿಯೇ ಬದುಕಿದ್ದ ಧೀಮಂತ ರಾಜಕಾರಣಿ ಜಾರ್ಜ್ ಫರ್ನಾಂಡೀಸ್ ಅಸ್ತಂಗತರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ‌ ಹಕ್ಕಿ ಜ್ವರದ ಪರಿಣಾಮವಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ಫರ್ನಾಂಡೀಸ್ ಇಂದು ಬೆಳಿಗ್ಗೆ ೭ ಗಂಟೆಗೆ ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈಗಾಗಲೇ ಸಿದ್ದಗಂಗಾ ಶ್ರೀಗಳ ಸಾವಿನ ದುಃಖ ಆರುವ ಮೊದಲೇ ಮತ್ತೊಂದು ಆಘಾತದ ಸುದ್ದಿ ಭಾರತೀಯರಿಗೆ ಎದುರಾಗಿದೆ.!

ಎಂದೂ ಮರೆಯಲಾಗದ ಮಾಣಿಕ್ಯಗಳಿವು!

ಭಾರತದ ಪಾಲಿಗೆ ಅಟಲ್ ಬಿಹಾರಿ ವಾಜಪೇಯಿ, ಅಬ್ದುಲ್ ಕಲಾಂ ಹಾಗೂ ಜಾರ್ಜ್ ಫರ್ನಾಂಡೀಸ್ ಎಂದೂ ಮರೆಯಲಾಗದ ಮಾಣಿಕ್ಯಗಳು. ಯಾಕೆಂದರೆ ದೇಶದ ವಿಚಾರದಲ್ಲಿ ಯಾವುದೇ ರಾಜಿಮಾಡಿಕೊಳ್ಳದೆ ಸ್ವತಃ ತಾವೇ ಯುದ್ಧ ಭೂಮಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದ ತ್ರಿಮೂರ್ತಿಗಳು ಇವರು. ಒಂದು ನಿರ್ಧಾರ ತೆಗೆದುಕೊಂಡರೆ ಅದರಿಂದ‌ ಹಿಂಜರಿಯುವ ಮಾತೇ ಇಲ್ಲ, ಶತ್ರು ರಾಷ್ಟ್ರ ಯಾವುದೇ ಆಗಿರಲಿ ಆದರೆ ಅದ್ಯಾವುದನ್ನೂ ಕ್ಯಾರೇ ಅನ್ನುತ್ತಿರಲಿಲ್ಲ ಈ ಮೂವರು ನಾಯಕರು. ಅಂತಹ ನಾಯಕರನ್ನು ಇಂದು ಭಾರತ ಕಳೆದುಕೊಂಡಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿ ಆಗಿದ್ದ ಸಂದರ್ಭದಲ್ಲಿ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ ಜಾರ್ಜ್ ಫರ್ನಾಂಡೀಸ್ ರೈಲ್ವೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ‌

Image result for george fernandes with atal ji and kalam

ಮಂಗಳೂರಿನಲ್ಲಿ ಜನಿಸಿದ ಇವರ ದೇಶಸೇವೆ ಅಪಾರ.‌ ರಾಷ್ಟ್ರೀಯ ಮಟ್ಟದಲ್ಲಿ ಒಬ್ಬ ರಾಜಕಾರಣಿ ಏನು ಮಾಡಬೇಕೋ‌ ಅವೆಲ್ಲವನ್ನೂ ಮಾಡಿ ತೋರಿಸಿದ್ದಾರೆ ಜಾರ್ಜ್ ಫರ್ನಾಂಡೀಸ್. ಇದೀಗ ಫರ್ನಾಂಡೀಸ್ ಅವರ ಅಗಲುವಿಕೆಗೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ, ನಮ್ಮ ದೇಶ‌ ಮತ್ತೊಂದು ಧೀಮಂತ ನಾಯಕನನ್ನು ಕಳೆದುಕೊಂಡಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಜಾರ್ಜ್ ಫರ್ನಾಂಡೀಸ್ ಭಾರತೀಯ ಜನತಾ ಪಕ್ಷದ ನಾಯಕರಲ್ಲ, ಜನತಾ ಪರಿವಾರದಿಂದ‌ ಬೆಳೆದು ಬಂದವರು. ಆದರೂ ಬಿಜೆಪಿ ಆಡಳಿತದ ಅವಧಿಯಲ್ಲಿ ಸಚಿವ ಸ್ಥಾನ‌ ಪಡೆದು ದೇಶಕ್ಕಾಗಿ ಶ್ರಮಿಸಿದವರು. ಆದರೆ ಯಾವೊಬ್ಬ ಬಿಜೆಪಿ ನಾಯಕ ಕೂಡ ಇವರನ್ನು ವಿರೋಧಿಸುವುದಿಲ್ಲ, ಬದಲಾಗಿ ಬಹಳ‌ ಗೌರವದಿಂದ ಕಾಣುತ್ತಿದ್ದರು. ಇದೀಗ ಇವರ ಅಗಲುವಿಕೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ನಾಯಕರು ಟ್ವಿಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ.!

-ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close