ಪ್ರಚಲಿತ

ಕರಾವಳಿಗೆ ಅಪ್ಪಳಿಸಲಿದೆ ಉತ್ತರ ಪ್ರದೇಶದ ಫೈರ್ ಬ್ರಾಂಡ್!! ಛಿದ್ರವಾಗುತ್ತಾ ಕಾಂಗ್ರೆಸ್ ಕೋಟೆ?!

ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚಾಗುತ್ತಿದ್ದಂತೆ ಪ್ರಬಲ ರಾಜಕೀಯ ನಾಯಕರೂ ಕರ್ನಾಟಕದತ್ತ ಬರುತ್ತಿದ್ದಾರೆ. ದೇಶದ ರಾಜಕೀಯದಲ್ಲಿ ಮಹತ್ತರವಾದ ಬದಲಾವಣೆಗಾಗಿ ತಂತ್ರ ರೂಪಿಸುತ್ತರುವ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಕರ್ನಾಟಕದಲ್ಲಿ ರಾಜಕೀಯ ಯುದ್ದಭೂಮಿಯಲ್ಲಿ ಸೆಣೆಸಾಡಲು ಸಜ್ಜಾಗಿವೆ..!

ಈಗಾಗಲೇ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಇಡೀ ದೇಶದಲ್ಲಿ ತನ್ನ ನೆಲೆ ಕಳೆದುಕೊಂಡಿದ್ದು ,ಉಳಿದಿರುವ ಒಂದು ರಾಜ್ಯ ಕರ್ನಾಟಕದಲ್ಲಿ ಗೆಲುವು ಸಾಧಿಸಲು ಪಡುತ್ತಿರುವ ಶ್ರಮ ಅಷ್ಟಿಷ್ಟಲ್ಲ. ಹಿಂದೂ ವಿರೋಧಿ ಕಾಂಗ್ರೆಸ್ ನ ಆಡಳಿತಕ್ಕೆ ಬೇಸತ್ತ ರಾಜ್ಯದ ಜನತೆ ನರೇಂದ್ರ ಮೋದಿಯವರತ್ತ ಮುಖಮಾಡಿದ್ದಾರೆ , ಅದೇ ಕಾರಣದಿಂದಾಗಿ ನಿದ್ದೆಗೆಟ್ಟಿರುವ ಸಿದ್ದರಾಮಯ್ಯ ಸರಕಾರ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಏರಲು ಶಥಪ್ರಯತ್ನ ನಡೆಸುತ್ತಿದೆ..!

ದೇಶದ ಎಲ್ಲಾ ರಾಜ್ಯಗಳಲ್ಲೂ ಕೇಸರಿ ಪತಾಕೆ ಹಾರಿಸುವ ಮೂಲಕ ದೇಶದಿಂದ ಕಾಂಗ್ರೆಸ್ ನ್ನು ಓಡಿಸುವ ಕಾರ್ಯಕ್ಕೆ ಕರ್ನಾಟಕವನ್ನೂ ಸೇರಿಸಲು ಸಜ್ಜಾಗಿದ್ದಾರೆ. ಬಿಜೆಪಿ ರಾಜಕೀಯ ಚಾಣಾಕ್ಯ ಅಮಿತ್ ಷಾ ಈಗಾಗಲೇ ಕರ್ನಾಟಕವನ್ನು ಬಿಜೆಪಿಯ ತೆಕ್ಕೆಗೆ ತೆಗೆದುಕೊಳ್ಳಲು ಎಲ್ಲಾ ರೀತಿಯ ತಯಾರಿ ನಡೆಸಿದ್ದು ಕಾಂಗ್ರೇಸಿಗರ ಎಲ್ಲಾ ತಂತ್ರಗಳನ್ನು ಮುರಿಯಲಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ರಾಜ್ಯ ಬಿಜೆಪಿ ನಾಯಕರಿಗೆ ಈಗಾಗಲೇ ಎಲ್ಲಾ ಜವಾಬ್ದಾರಿಗಳನ್ನು ನೀಡಲಾಗಿದೆ. ಅದರಂತೆಯೇ ನಡೆದುಕೊಳ್ಳುತ್ತಿರುವ ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಗೆ ತಲೆ ನೋವಾಗಿದ್ದಾರೆ.

ಈ ಹಿಂದೆ ನಡೆದ ಉತ್ತರ ಪ್ರದೇಶದ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬಿಜೆಪಿ ಇಡೀ ದೇಶವನ್ನೇ ನಿಬ್ಬೆರಗಾಗಿಸುವಂತೆ ಮಾಡಿತ್ತು. ಉತ್ತರ ಪ್ರದೇಶದಲ್ಲಿ ಕಟ್ಟರ್ ಹಿಂದುತ್ವವಾದಿ , ಹಿಂದೂ ಫೈರ್ ಬ್ರಾಂಡ್ ಎಂದೇ ಖ್ಯಾತಿ ಗಳಿಸಿದ್ದ ಯೋಗಿ ಆದಿತ್ಯನಾಥ್ ರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡುವ ಮೂಲಕ ಹಿಂದೂ ಯೋಗಿಯೊಬ್ಬರ ಕೈಗೆ ಅಧಿಕಾರವನ್ನು ನೀಡಿದ್ದರು. ಕಾಂಗ್ರೆಸ್ ನ ಹಿಂದೂ ವಿರೋಧಿ ಧೋರಣೆಗಳಿಂದ ತತ್ತರಿಸಿದ್ದ ಜನತೆಗೆ ಯೋಗಿ ಅಧಿಕಾರಕ್ಕೆ ಏರುತ್ತಲೇ ಹೊಸ ಚೈತನ್ಯ ಮೂಡಿತ್ತು..!

ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಏರಿದ ದಿನದಿಂದಲೇ ಹಿಂದೂ ಧರ್ಮದ ಮತ್ತು ಸಂಘಪರಿವಾರದ ವಿರುದ್ದ ತೊಡೆ ತಟ್ಟಿ ನಿಂತಿದ್ದರು. ಕೇವಲ ಮುಸ್ಲಿಮರ ಓಲೈಕೆಯಲ್ಲೇ ತೊಡಗಿದ ಸಿದ್ದರಾಮಯ್ಯನವರು ಹಿಂದೂಗಳ ಭಾವನೆಗಳಿಗೆ ಘಾಸಿ ಉಂಟುಮಾಡುತ್ತಲೇ ಬಂದಿದ್ದಾರೆ. ಮುಖ್ಯಮಂತ್ರಿಯಾಗಿ ನೇಮಕಗೊಂಡ ದಿನವೇ ಸಾವಿರಾರು ಮುಸ್ಲಿಮರ ಮೇಲಿನ ಕೇಸ್ ಗಳನ್ನು ವಾಪಾಸು ಪಡೆಯುವ ಮೂಲಕ ಮುಸ್ಲಿಮರ ಬಗ್ಗೆ ತನಗಿರುವ ಒಲವನ್ನು ವ್ಯಕ್ತಪಡಿಸಿದ್ದರು.

ಪದೇ ಪದೇ ಹಿಂದೂ ಕಾರ್ಯಕರ್ತರ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ಸಿದ್ದರಾಮಯ್ಯನವರು ರಾಜಕೀಯ ಲಾಭಕ್ಕಾಗಿ ಮುಸ್ಲೀಮರ ಬೆನ್ನ ಹಿಂದೆ ಬಿದ್ದಿದ್ದಾರೆ..!

ಕರ್ನಾಟಕಕ್ಕೆ ಈಗಾಗಲೇ ೨-೩ ಬಾರಿ ಬಿಜೆಪಿ ಸಮಾವೇಶಕ್ಕೆ ಆಗಮಿಸಿದ ಬಿಜೆಪಿ ರಾಜಕೀಯ ಚಾಣಾಕ್ಯ ಅಮಿತ್ ಷಾ ಕಾಂಗ್ರೆಸ್ ನ ಜನ್ಮ ಜಾಲಾಡಿದ್ದರು . ಇದಾದ ನಂತರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದಲ್ಲಿ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿ ಕರ್ನಾಟಕದ ರಾಜಕೀಯ ಚಿತ್ರಣವನ್ನೇ ಬದಲಾಯಿಸಿಬಿಟ್ಟಿದ್ದರು. ನರೇಂದ್ರ ಮೋದಿಯವರ ಸಮಾವೇಶಕ್ಕೆ ರಾಜ್ಯಾದ್ಯಂತ ಲಕ್ಷ ಲಕ್ಷ ಕಾರ್ಯಕರ್ತರು ಬೆಂಗಳೂರಿನತ್ತ ಆಗಮಿಸಿದ್ದನ್ನು ಕಂಡ ಸಿದ್ದರಾಮಯ್ಯ ಸರಕಾರ ಬೆಚ್ಚಿಬಿದ್ದಿತ್ತು. ಸಮಾವೇಶಗಳಿಗೆ ಅಡ್ಡಿಪಡಿಸುತ್ತಲೇ ಬಂದಿರುವ ಕಾಂಗ್ರೆಸ್ ಗೆ ಭಾರೀ ಮುಖಭಂಗವಾಗಿತ್ತು.

ಬಂದ್ ನಡುವೆಯೇ ಕರ್ನಾಟಕಕ್ಕೆ ಎಂಟ್ರಿ ಕೊಟ್ಟ ಮೋದಿ – ಷಾ..!

ಬಿಜೆಪಿಯ ಸಮಾವೇಶಗಳನ್ನು ಹೇಗಾದರೂ ವಿಫಲಗೊಳಿಸಲೇ ಬೇಕೆಂದು ಪಣತೊಟ್ಟು ನಿಂತಿದ್ದ ಕಾಂಗ್ರೆಸ್ ಕರ್ನಾಟಕ ಬಂದ್ ಮಾಡುವ ಮೂಲಕ ವಿರೋಧ ವ್ಯಕ್ತಪಡಿಸಿತ್ತು‌. ರಾಜ್ಯದ ವಿವಿಧ ಮೂಲೆಗಳಿಂದ ಸಮಾವೇಶದತ್ತ ಬರುವ ಕಾರ್ಯಕರ್ತರನ್ನು ತಡೆಯಲು ಬಂದ್ ಮಾಡುವ ಹುನ್ನಾರಕ್ಕೆ ರಾಜ್ಯ ಸರಕಾರ ಕೈ ಹಾಕಿತ್ತು. ಆದರೆ ಕಾಂಗ್ರೆಸ್ ನ ಎಲ್ಲಾ ತಂತ್ರಗಳನ್ನು ಭೇದಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಕರ್ನಾಟಕಕ್ಕೆ ಆಗಮಿಸಿ ಸಿದ್ದಾಂತ ಸರಕಾರಕ್ಕೆ ಸವಾಲು ಎಸೆದಿದ್ದರು..! ದೇಶದಲ್ಲ ಮೋದಿ – ಷಾ ಜೋಡಿ ಮಾಡುತ್ತಿರುವ ಮೋಡಿಗೆ ಕಂಗಾಲಾದ ಕಾಂಗ್ರೆಸ್ ಕರ್ನಾಟಕವನ್ನು ಉಳಿಸಿಕೊಳ್ಳಲು ಪರದಾಡುತ್ತಿದೆ.

ಇದೀಗ ಹಿಂದೂ ಫೈರ್ ಬ್ರಾಂಡ್ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರಾವಳಿಗೆ ಆಗಮಿಸುತ್ತಿದ್ದು ಸಿದ್ದರಾಮಯ್ಯ ಸರಕಾರ ಸಂಪೂರ್ಣವಾಗಿ ಕಂಗಾಲಾಗಿದೆ. ಈ ಹಿಂದೆ ಕರ್ನಾಟಕಕ್ಕೆ ಆಗಮಿಸಿದ ಯೋಗಿ ಆದಿತ್ಯನಾಥ್ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದರು. ಇದರಿಂದಲೇ ಪರದಾಡುತ್ತಿದ್ದ ಕಾಂಗ್ರೆಸ್ ಚೇತರಿಸಿಕೊಳ್ಳುವ ಮೊದಲೇ ಮತ್ತೆ ಕರ್ನಾಟಕದತ್ತ ಬರುತ್ತಿದ್ದಾರೆ ಯೋಗಿ ಆದಿತ್ಯನಾಥ್..!

ಹೌದು, ರಾಜ್ಯದಲ್ಲಿ ಸಾಲು ಸಾಲು ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಕೊಲೆ ನಡೆಯುತ್ತಿದ್ದರೂ ಕಣ್ಣು ಮುಚ್ಚಿ ಕೂತವರಂತೆ ವರ್ತಿಸುತ್ತಿರುವ ಸಿದ್ದರಾಮಯ್ಯ ಸರಕಾರ , ಪರೋಕ್ಷವಾಗಿ ಕೊಲೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಭ್ರಷ್ಟ ಸಚಿವರನ್ನೇ ತನ್ನ ಸಂಪುಟದಲ್ಲಿ ಇಟ್ಟುಕೊಂಡು ರಾಜ್ಯದ ವಿನಾಶಕ್ಕೆ ಕಾರಣರಾಗುತ್ತಿರುವ ಸಿದ್ದರಾಮಯ್ಯನವರ ಮೇಲೆ ಪ್ರಹಾರ ನೀಡಲು ಮತ್ತೆ ಕರ್ನಾಟಕಕ್ಕೆ ಆಗಮಿಸುತ್ತಿರುವ ಯೋಗಿ ಆದಿತ್ಯನಾಥ್ ಈ ಬಾರಿ ಕರಾವಳಿಗೆ ಆಗಮಿಸಲಿದ್ದಾರೆ..!

ಕರಾವಳಿ ಹಿಂದೂಗಳ ಭದ್ರಕೋಟೆ. ಆದರೂ ಕಾಂಗ್ರೆಸ್ ನ ಆಡಳಿತದಲ್ಲಿ ಇಲ್ಲಿ ಹಿಂದೂಗಳಿಗೆ ಬದುಕುವುದೇ ಕಷ್ಟವಾಗಿದೆ. ಹಿಂದೂ ಪರ ಸಂಘಟನೆಗಳಲ್ಲಿ ಗುರುತಿಸಿಕೊಂಡರೆ ಸಾಕು ಸಿದ್ದರಾಮಯ್ಯನವರ ಚೇಳಾಗಳು ಕೊಲೆ ನಡೆಸುತ್ತಾರೆ. ಕರಾವಳಿಯಲ್ಲಿ ದಿನೇ ದಿನೇ ಕಾಂಗ್ರೆಸ್ ನ ಅಟ್ಟಹಾಸ ಜೋರಾಗುತ್ತಿದ್ದು , ಇದಕ್ಕೆ ಕಡಿವಾಣ ಹಾಕಲು ಬಿಜೆಪಿಯು ಹಿಂದೂ ಯುವಕರ ಹತ್ಯೆ ಖಂಡಿಸಿ ಬ್ರಹತ್ ಪಾದಯಾತ್ರೆ ನಡೆಸಲು ಸಜ್ಜಾಗಿದೆ. ಹಿಂದೂ ಸಮಾಜವನ್ನು ಜಾತಿಯ ಆಧಾರದಲ್ಲಿ ವಿಂಗಡಿಸುತ್ತಿರುವ ಕಾಂಗ್ರೆಸ್ ಗೆ ಸವಾಲೆಸೆಯಲು ಸಜ್ಜಾದ ಬಿಜೆಪಿ ಕೊಡಗು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಇದೇ ಬರುವ ಮಾರ್ಚ್ ೩ ರಿಂದ ೬ ರವರೆಗೆ ಬ್ರಹತ್ ಪಾದಯಾತ್ರೆ ಹಮ್ಮಿಕೊಂಡಿದೆ.

ಈ ಪಾದಯಾತ್ರೆಯು ಕೊಡಗು ಜಿಲ್ಲೆಯ ಕುಶಾಲ ನಗರ ಮತ್ತು ಉತ್ತರ ಕನ್ನಡ ಜಿಲ್ಲೆಯ ಕುಮಟಾದಿಂದ ಹೊರಡಲಿದ್ದು , ಕೊನೆಗೆ ಮಂಗಳೂರಿನ ಸುರತ್ಕಲ್ ಗೆ ಆಗಮಿಸಲಿದೆ. ಪಾದಯಾತ್ರೆಯಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್ , ಪ್ರತಾಪ್ ಸಿಂಹ , ಶೋಭಾ ಕರಂದ್ಲಾಜೆ , ಅನಂತ್ ಕುಮಾರ್ ಹೆಗಡೆ ಭಾಗವಹಿಸಲಿದ್ದು ಯೋಗಿ ಆದಿತ್ಯನಾಥ್ ಕೂಡಾ ಆಗಮಿಸಲಿದ್ದಾರೆ ಎಂಬ ಮಾಹಿತಿ ದೊರಕಿದೆ.

ಮಂಗಳೂರಿನ ಸುರತ್ಕಲ್ ನಲ್ಲಿ ಇತ್ತೀಚೆಗೆ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಹತ್ಯೆಯಾಗಿತ್ತು.ಇದೀಗ ಇದೇ ಪ್ರದೇಶಕ್ಕೆ ಯೋಗಿ ಆದಿತ್ಯನಾಥ್ ಆಗಮಿಸುತ್ತಿದ್ದು ರಾಜ್ಯ ಸರಕಾರಕ್ಕೆ ತಲೆನೋವಾಗಿದೆ..

–ಅರ್ಜುನ್

 

Tags

Related Articles

Close