ಪ್ರಚಲಿತರಾಜ್ಯ

ಆರ್ ಎಸ್ ಎಸ್ ನ್ನು ಹೊಗಳಿ ತನ್ನ ಪ್ರಾಮಾಣಿಕತೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಿದ್ದರಾಮಯ್ಯ..! ಕೆಟ್ಟ ಮೇಲೆ ಬುದ್ದಿ ಬಂತು!

ರಾಜಕೀಯವೇ ಹೀಗೆ ಎಂದು ಅಂದುಕೊಂಡಿದ್ದವರು ಇಂದು ಕಾಂಗ್ರೆಸ್ ಮಾತ್ರ ಹೀಗೆ ಎಂದು ಹೇಳುವಂತಾಗಿದೆ. ಉದಾಹರಣೆ ಸಾವಿರಾರು ಇರಬಹುದು, ಆದರೆ ಅದಕ್ಕೆಲ್ಲಾ ಕಾರಣ ಮಾತ್ರ ಕಾಂಗ್ರೆಸ್. ಯಾಕೆಂದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ತಾನು ಮಾಡಿದ ಎಲ್ಲಾ ಮೋಸವನ್ನು ಕಕ್ಕುವಂತಾಗಿದೆ.

ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ. ಕಳೆದ ಐದು ವರ್ಷಗಳಿಂದ ರಾಜ್ಯವನ್ನು ಯಾವ ಮಟ್ಡಕ್ಕೆ ಇಳಿಸಿದ್ದಾರೆ ಈ ಸಿದ್ದರಾಮಯ್ಯನವರು ಎಂದರೆ ಇಡೀ ದೇಶದಲ್ಲೇ ಹೆಮ್ಮೆಯಿಂದ ತಲೆ ಎತ್ತಿ ನಿಂತಿದ್ದ ಕರ್ನಾಟಕವನ್ನು ಸಿದ್ದರಾಮಯ್ಯನವರು ಇಡೀ ದೇಶವೇ ಕೀಳಾಗಿ ಕಾಣುವಂತೆ ಮಾಡಿದ್ದಾರೆ. ಅಧಿಕಾರದ ಅವಧಿಯಲ್ಲಿ ಏನೆಲ್ಲಾ ಆಗಬಾರದಿತ್ತೋ ಅದೆಲ್ಲಾ ನಮ್ಮ ರಾಜ್ಯದಲ್ಲಿ ನಡೆದು ಹೋಯಿತು.

ಮಾಡಿದ ತಪ್ಪು ಒಂದಲ್ಲ ಎರಡಲ್ಲಾ..!

ರಾಜ್ಯದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಪಟ್ಟ ಏರುತ್ತಿದ್ದಂತೆ ತಮ್ಮ ಕೈಯಲ್ಲಿ ಏನೆಲ್ಲಾ ತಪ್ಪು ಮಾಡಲು ಸಾಧ್ಯವೋ ಅವೆಲ್ಲವನ್ನೂ ಮಾಡಿಬಿಟ್ಟರು. ಕೊಲೆ ಅತ್ಯಾಚಾರ ದರೋಡೆಗಳಂತಹ ದುಷ್ಕ್ರತ್ಯಗಳನ್ನು ನಡೆಸಿ ಜೈಲುಪಾಲಾಗಿದ್ದ ಮುಸ್ಲಿಮರನ್ನು ಅಲ್ಪಸಂಖ್ಯಾತರು ಎಂಬ ಕಾರಣಕ್ಕಾಗಿ , ಆರೋಪಿಗಳ ಮೇಲಿದ್ದ ಸಾವಿರಾರು ಕೇಸ್ ಗಳನ್ನು ಹಿಂಪಡೆಯುವ ಮೂಲಕ ಮೊದಲ ಬಾರಿಗೆ ತಾನೊಬ್ಬ ‘ವಿಶೇಷ ಮುಖ್ಯಮಂತ್ರಿ’ ಎಂಬೂದನ್ನು ಪ್ರದರ್ಶಿಸಿದ್ದರು. ಹಿಂದೂ ವಿರೋಧಿ ನೀತಿಗಳಿಂದಲೇ ಆಡಳಿತ ಆರಂಭಿಸಿದ ಸಿದ್ದರಾಮಯ್ಯನವರು ಹಿಂದೂ ಧರ್ಮದ ಎಲ್ಲಾ ಆಚರಣೆ , ನಂಬಿಕೆಗಳಿಗೆ ವಿರೋಧವಾಗಿಯೇ ನಡೆದುಕೊಂಡು ಬಂದವರು.

ಭ್ರಷ್ಟರಿಗೆ ಬೆಂಗಾವಲಾಗಿ ನಿಂತ ಸಿಎಂ..!

ತನ್ನ ಸರಕಾರದ ಸಂಪುಟದಲ್ಲಿ ತನಗೆ ಬೇಕಾದ ಸಚಿವ, ಅಧಿಕಾರಿಗಳನ್ನೇ ನೇಮಿಸಿಕೊಂಡ ಸಿದ್ದರಾಮಯ್ಯನವರು ಭ್ರಷ್ಟರಿಗೆ ಬೇಕಾದ ಎಲ್ಲಾ ರೀತಿಯ ನೆರವನ್ನೂ ನೀಡುತ್ತಾ ಬಂದರು. ಹಗರಣಗಳಲ್ಲಿ ಸಿಕ್ಕಿಬಿದ್ದ ಸಚಿವರ ಪರವಾಗಿ ನೇರವಾಗಿ ನಿಲ್ಲುವ ಸಿದ್ದರಾಮಯ್ಯನವರು ತಾನೊಬ್ಬ ರಾಜ್ಯದ ಮುಖ್ಯಮಂತ್ರಿ ಎಂಬೂದನ್ನು ಮರೆತಂತಿದೆ. ಪ್ರಾಮಾಣಿಕ ಅಧಿಕಾರಿಗಳಿಗೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಜಾಗವೇ ಇಲ್ಲ, ಯಾಕೆಂದರೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳಿಗೆ ಕಿರುಕುಳ, ಹಿಂಸೆ ನೀಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುವ ವ್ಯವಸ್ಥೆಯೂ ರಾಜ್ಯ ಕಾಂಗ್ರೆಸ್ ಸರಕಾರದಲ್ಲಿದೆ.

ತಪ್ಪೊಪ್ಪಿಕೊಂಡ ಸಿದ್ದರಾಮಯ್ಯ..!

ಸಿದ್ದರಾಮಯ್ಯನವರು ತಾನು ಮಾಡಿದ್ದೇ ನೀತಿ, ತಾನು ಮಾಡಿದ್ದೇ ಕಾನೂನು ಎಂಬ ರೀತಿಯಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ. ತನ್ನ ವಿರುದ್ಧ ಯಾರೇ ಧ್ವನಿ ಎತ್ತಿದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಮಾಡುತ್ತಾರೆ. ತನ್ನ ಸರಕಾರದ ವೈಫಲ್ಯವನ್ನು ಪ್ರಶ್ನಿಸುವವರನ್ನೂ ಮುಲಾಜಿಲ್ಲದೇ ಒರದಬ್ಬುತ್ತಾರೆ. ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದ ಸಿದ್ದರಾಮಯ್ಯನವರು ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ತಾನು ಮಾಡಿರುವ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ. ತನ್ನ ಅಧಿಕಾರದ ಅವಧಿಯಲ್ಲಿ ತಾನು ಎಲ್ಲಾ ನಿಯಮಗಳನ್ನು ಮೀರಿ ತನ್ನದೇ ಹೊಸ ನಿರ್ಧಾರಗಳಿಂದ ತಪ್ಪು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ..!

Image result for siddaramaiah

ನಾನು ಪ್ರಾಮಾಣಿಕನಲ್ಲ..!

ಚುನಾವಣಾ – ರಾಜಕಾರಣ ಎಂಬೂದು ಒಂದು ರೀತಿಯ ಭ್ರಷ್ಟ ವ್ಯವಸ್ಥೆ. ಸ್ಪರ್ಧಿಸಲು ಮುಂದಾದ ಮೇಲೆ ಎದುರಾಳಿಯನ್ನು ಯಾವ ರೀತಿಯಲ್ಲಿ ಬೇಕಾದರೂ ಸೋಲಿಸಬಹುದು, ನಮ್ಮ ಪ್ರಾಮಾಣಿಕತೆಯನ್ನು ಬಿಟ್ಟುಬಿಡಬೇಕು ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳಿಕೊಂಡಿದ್ದಾರೆ.!

ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಎ.ಕೆ. ಸುಬ್ಬಯ್ಯ ಅಭಿನಂದನಾ ಸಮಿತಿ ಆಯೋಜಿಸಿದ್ದ ‘ಅಭಿನಂದನೆ ಮತ್ತು ದಾರಿದೀಪ’ ಎಂಬ ಗ್ರಂಥ ಬಿಡುಗಡೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿದ್ದರಾಮಯ್ಯನವರು ಚುನಾವಣೆಗೆ ಇಳಿದ ಮೇಲೆ ನಾನು ಪ್ರಾಮಾಣಿಕನಲ್ಲ ಎಂಬ ಸತ್ಯ ಒಪ್ಪಿಕೊಂಡಿದ್ದಾರೆ.

‘ರಾಜಕೀಯ ಪ್ರವೇಶಿಸಿದ ಮೇಲೆ ನಮ್ಮ ಪ್ರಾಮಾಣಿಕತೆ ಬಿಟ್ಟುಬಿಡಬೇಕು. ಸ್ಪರ್ಧಿಸಿದ ಮೇಲೆ ಗೆಲ್ಲಲೇಬೇಕು. ಚುನಾವಣೆಗೆ ನಿಂತಮೇಲೆ ಗೆಲ್ಲುವುದು ಮಾತ್ರ ನನಗೆ ಅನಿವಾರ್ಯ, ಅದಕ್ಕಾಗಿ ಯಾವ ರೀತಿಯ ಕೆಲಸಕ್ಕೂ ನಾನು ಸಿದ್ದ’ ಎಂದು ಹೇಳಿಕೊಂಡಿದ್ದಾರೆ.

ಆರ್ ಎಸ್ ಎಸ್ ಹಿನ್ನೆಲೆಯುಳ್ಳ ವ್ಯಕ್ತಿ..!

ಎ ಕೆ ಸುಬ್ಬಯ್ಯ ಒಬ್ಬ ಪ್ರಾಮಾಣಿಕ ರಾಜಕಾರಣಿ. ಐದು ಬಾರಿ ಸ್ಪರ್ಧಿಸಿ ಗೆದ್ದವರು. ಆರ್ ಎಸ್ ಎಸ್ ಹಿನ್ನೆಲೆಯುಳ್ಳ ವ್ಯಕ್ತಿಯಾದ್ದರಿಂದ ರಾಜಕೀಯ ದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದರು ಎಂದ ಸಿದ್ದರಾಮಯ್ಯನವರು , ಈವರೆಗೆ ಆರ್ ಎಸ್ ಎಸ್ ಮತ್ತು ಸಂಘಪರಿವಾರವನ್ನು ದೂರುತ್ತಲೇ ಬಂದಿದ್ದರು. ಆದರೆ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಹಿಂದೂಗಳ ಓಲೈಕೆಗಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ.

ಈವರೆಗೆ ಮಾಡಿರುವ ಎಲ್ಲಾ ಆರೋಪಗಳನ್ನು ತಳ್ಳಿಹಾಕಿಕೊಂಡು ಬಂದಿದ್ದ ಸಿದ್ದರಾಮಯ್ಯನವರು ಇದೀಗ ತಾನೊಬ್ಬ ಪ್ರಾಮಾಣಿಕ ವ್ಯಕ್ತಿ ಅಲ್ಲವೇ ಅಲ್ಲ ಎಂದು ಹೇಳಿಕೊಂಡಿದ್ದಾರೆ..!

–ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close