ಪ್ರಚಲಿತ

ಸರಕಾರಕ್ಕೆ ಸೆಡ್ಡು ಹೊಡೆದು ಯಶಸ್ವಿಯಾದ ಉಡುಪಿ ಶಾಸಕರು.! ಕುಮಾರಸ್ವಾಮಿ ಬೆದರಿಕೆಗೂ ಡೋಂಟ್ ಕೇರ್.! ಕೊನೆಗೂ ತಲೆಬಾಗಿದ ಸರಕಾರ…

 

ಕರಾವಳಿಗರ ಪ್ರಮುಖ ಉದ್ದಿಮೆಯಾಗಿರುವ ಮರಳು ಗಣಿಕಾರಿಕೆಯ ವಿಚಾರವಾಗಿ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಧಿಕಾರಿಗಳ ವಿರುದ್ಧ ಉಡುಪಿ ಶಾಸಕ ಕೆ ರಘುಪತಿ ಭಟ್ ಇವರು ಇತ್ತೀಚೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಅಹೋರಾತ್ರಿ ಅನಿರ್ದಿಷ್ಟಾವದಿ ಧರಣಿ ಕುಳಿತಿರುವ ಬಗ್ಗೆ ಗೊತ್ತೇ ಇದೆ. ಬಡಜನರಿಗೆ ಕಡಿಮೆ ಕಡಿಮೆ ದರದಲ್ಲಿ ಸಿಗುತ್ತಿದ್ದ ಮರಳಿನ ದರ ಗಗನಕ್ಕೇರುವಂತೆ ಮಾಡಿದ್ದ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ಕುಟಿಲ ನೀತಿಯ ವಿರುದ್ದ ಉಡುಪಿ ಶಾಸಕರು ೮ ದಿನಗಳವರೆಗೆ ಧರಣಿ ಕುಳಿತಿದ್ದರು.

ಮರಳು ಸಮಸ್ಯೆ ಎಂಬುವುದು ಕರಾವಳಿ ಜನತೆಯನ್ನು ಆತಂಕಕ್ಕೆ ಒಳಗಾಗುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತ್ತು.ಬಡ ಜನತೆಗೆ ಮನೆ ಕಟ್ಟಬೇಕಾದರೆ ಒಂದು ಯೂನಿಟ್ ಗೆ ೧೫೦೦೦ಕ್ಕಿಂತಲೂ ಅಧಿಕ ಹಣವನ್ನು ನೀಡಿ ಖರೀದಿಸಬೇಕಾಗಿತ್ತು. ಅದೆಷ್ಟೇ ಆಗ್ರಹಿಸಿದರೂ ಸರಕಾರದ ಕಣ್ಣು ತೆರೆದಿರಲಿಲ್ಲ. ಆದರೆ ಉಡುಪಿ ಶಾಸಕ ಕೆ ರಘುಪತಿ ಭಟ್ ಇವರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವದಿ ಅಹೋರಾತ್ರಿ ಧರಣಿ ಕುಂತೇ ಬಿಟ್ಟರು.

ಕುಮಾರಸ್ವಾಮಿ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದರೂ ಶಾಸಕರು ತಾಕತ್ತಿದ್ದರೆ ಮುಟ್ಟಿ ನೋಡಿ ಎಂದು ಸವಾಲೆಸೆದರು. ಪರಿಣಾಮ ೮ನೇ ದಿನದ ಹೋರಾಟದ ದಿನ ಸ್ವತಃ ಗಣಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೇ ಶಾಸಕರ ಬಳಿ ಆಗಮಿಸಿ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದ್ದು ಮಾತ್ರವಲ್ಲದೆ ಶಾಸಕರೊಂದಿಗೆ ದೆಹಲಿಗೂ ಬರುತ್ತೇನೆ ಎಂದು ತಲೆಬಾಗಿದರು. ಗಣಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದ್ದರು.

ಕೂಡಲೇ ಕಾರ್ಯಪ್ರವೃತ್ತರಾಗಿರುವ ಶಾಸಕರು ದೆಹಲಿಯಲ್ಲಿ ಪರಿಸರ ಮತ್ತು ಅರಣ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರನ್ನು ಭೇಟಿಯಾಗಿ ಮರಳು ದಿಬ್ಬ ತೆರವುಗೊಳಿಸುವ ಬಗ್ಗೆ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಕಳುಹಿಸಿದ ಪತ್ರದ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ಅದೇ ರೀತಿ ಮುಂದೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವರಾದ ಡಾ‌.ಹರ್ಷವರ್ಧನ್ ಅವರನ್ನು ಜಿಲ್ಲೆಯ ಎಲ್ಲಾ ಶಾಸಕರ ಜೊತೆ ಭೇಟಿ ಮಾಡಿ ಈ ಸಮಸ್ಯೆಗೆ ಅವರ ಮೂಲಕ ಪರಿಹಾರ ಕಲ್ಪಿಸಿಕೊಡುವ ಬಗ್ಗೆಯೂ ಚರ್ಚಿಸಿದರು.

ಉಡುಪಿ ಶಾಸಕರ ಅಹೋರಾತ್ರಿ ಧರಣಿಗೆ ಭರ್ಜರಿ ಯಶಸ್ಸು ಲಭಿಸಿತು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಉಡುಪಿ ಮಾದರಿಯ ಧರಣಿ ನಡೆಸಲು ಬಿಜೆಪಿ ಶಾಸಕರು ಮುಂದಾಗಿದ್ದಾರೆ. ಮೂಲ್ಕಿ ಸೇರಿದಂತೆ ಇತೆ ಕಡೆಗಳಲ್ಲಿ ಧರಣಿ ನಡೆಸಿ ಸರಕಾರದ ಕಣ್ಣು ತೆರೆಸಲು ಸಿದ್ದತೆ ನಡೆಯುತ್ತಿದೆ. ಆದರೆ ಸರಕಾರದ ಬೆದರಿಕೆಯನ್ನೂ ಲೆಕ್ಕಿಸದೆ ಸರಕಾರ ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ಆರ್ಭಟಿಸಿ ಯಶಸ್ವಿಯಾದ ಉಡುಪಿ ಶಾಸಕ ಕೆ ರಘುಪತಿ ಭಟ್ ರವರ ಹೋರಾಟವನ್ನು ಜನತೆ ಕೊಂಡಾಡುತ್ತಿದ್ದಾರೆ.

ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close