ದೇಶಪ್ರಚಲಿತ

ಯೋಗಿ ದಾರಿ ಹಿಡಿಯುತ್ತೇವೆ ಎಂದಿದಕ್ಕೆ ಬೆದರಿದ್ದೇಕೆ ಜಿಗ್ನೇಶ್.?! ಗುಜರಾತ್ ಬಿಜೆಪಿ ಸರಕಾರ ದಿಂದ ಜಿಗ್ನೇಶ್ ಮೇವಾನಿ ಎನ್ ಕೌಂಟರ್!?

ದೇಶಕ್ಕಾಗಿ ತಮ್ಮ ಜೀವ-ಜೀವನವನ್ನೇ ಪಣಕ್ಕಿಟ್ಟು ದೇಶ ಸೇವೆಯಲ್ಲಿ ನಿರತರಾಗಿರುವ ಸೈನಿಕರು ಒಂದೆಡೆಯಾದರೆ , ಭಾರತದ ಮಣ್ಣಲ್ಲೇ ಬೆಳೆದು , ಭಾರತದ ಅನ್ನವನ್ನೇ ತಿಂದು ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸುವ ದೇಶದ್ರೋಹಿಗಳು ಭಾರತದಲ್ಲಿ ಇದ್ದಾರೆ ಎಂಬೂದೇ ಆಶ್ಚರ್ಯ..!

ದೇಶವನ್ನು ಇಬ್ಬಾಗ ಮಾಡಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ತಯಾರಾಗಿರುವ ಕೆಲವೊಂದು ಬುದ್ಧಿಜೀವಿಗಳ ಸಾಲಿನಲ್ಲಿಯೇ ಸೇರ್ಪಡೆಗೊಂಡವರೇ ಗುಜರಾತ್ ನ ಜಿಗ್ನೇಶ್ ಮೇವಾನಿ. ತಾನೊಬ್ಬ ದಲತ ಪರ ಹೋರಾಟಗಾರ ಎಂದು ಸಮಾಜಕ್ಕೆ ತನ್ನನ್ನು ಪರಿಚಯಿಸಿದ ಮೇವಾನಿ ಗುಜರಾತ್ ಚುನಾವಣೆಯ ವೇಳೆಯಲ್ಲಿ ದಲಿತರನ್ನು ಒಗ್ಗೂಡಿಸಿ ಪ್ರತಿಭಟನೆಗೆ ಪ್ರೇರೆಪಿಸಿದನು. ಸದಾ ದೇಶ ವಿರೋಧಿ ಚಟುವಟಿಕೆಗಳಿಂದಲೇ ಹೆಸರುವಾಸಿಯಾಗಿದ್ದ ಮೇವಾನಿ ಗುಜರಾತ್ ನಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆಲುವು ಕೂಡಾ ಸಾಧಿಸಿದ್ದನು‌ ಇದರಿಂದಾಗಿಯೇ ಅಧಿಕಾರದ ಅಮಲಿನಲ್ಲಿ ದೇಶವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದನು.

ಆದರೆ ಇದೀಗ ಇದೇ ಜಿಗ್ನೇಶ್ ಮೇವಾನಿ ಗೆ ಎನ್ ಕೌಂಟರ್ ಭಯ ಶುರುವಾಗತೊಡಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಹಿಂದೂ ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ ಸದ್ಯ ಉತ್ತರ ಪ್ರದೇಶದಲ್ಲಿ ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರನ್ನು ಮುಲಾಜಿಲ್ಲದೆ ಎನ್ ಕೌಂಟರ್ ಮಾಡಿ ಹತ್ಯೆ ಮಾಡುತ್ತಿದ್ದಾರೆ. ಇದೇ ರೀತಿಯ ಭಯವೂ ಗುಜರಾತ್ ನಲ್ಲಿ ಇರುವ ಜಿಗ್ನೇಶ್ ಮೇವಾನಿ ಗೆ ಎದುರಾಗಿದೆ.

ಜಿಗ್ನೇಶ್ ಎನ್ಕೌಂಟರ್ ಗೆ ಸ್ಕೆಚ್..!

ಗುಜರಾತ್ ನಲ್ಲಿ ಹರಿದಾಡುತ್ತಿರುವ ವಾಟ್ಸಾಪ್ ಸಂದೇಶವೊಂದು ಈ ಅನುಮಾನವನ್ನು ಹುಟ್ಟುಹಾಕಿದೆ. ಗುಜರಾತಿನ ‘ಎಡಿಆರ್ ಪೋಲಿಸ್ ಮತ್ತು ಮೀಡಿಯಾ’ ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ ನಡೆದ ಚರ್ಚೆ ಯಿಂದ ಜಿಗ್ನೇಶ್ ಮೇವಾನಿ ಬೆಚ್ಚಿಬಿದ್ದಿದ್ದು ಸದ್ಯ ತಮ್ಮ ಸುರಕ್ಷೆ ಮತ್ತು ಭದ್ರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಕೇವಲ ಪೋಲೀಸರ ಹಾಗೂ ಮಾಧ್ಯಮ ಪ್ರತಿನಿಧಿಗಳನ್ನು ಒಳಗೊಂಡ ಈ ವಾಟ್ಸಾಪ್ ಗ್ರೂಪ್ ನಲ್ಲಿ ಜಿಗ್ನೇಶ್ ಮೇವಾನಿಯ ಎನ್ಕೌಂಟರ್ ಗೆ ಸಂಬಂಈಸಿದಂತೆ ಎರಡು ವಿಡಿಯೋಗಳು ಹರಿದಾಡುತ್ತಿದ್ದು ದೇಶದ್ರೋಹಿ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಜಿಗ್ನೇಶ್ ಮೇವಾನಿ ಸದ್ಯ ಕಂಗಾಲಾಗಿದ್ದಾರೆ.

ಈ ಒಂದು ವಿಡಿಯೋದಲ್ಲಿ ಒಬ್ಬ ವ್ಯಕ್ತಿ ರಾಜಕಾರಣಿಗಳ ರೀತಿ ವಸ್ತ್ರ ಧರಿಸಿದ್ದು, ಈ ವ್ಯಕ್ತಿ ಗೆ ಒಂದು ಗುಂಪು ಹಿಗ್ಗಾ ಮುಗ್ಗ ಥಳಿಸುತ್ತಿದ್ದು ಮತ್ತೊಂದು ವಿಡಿಯೋದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತ್ತೀಚೆಗೆ ತಮ್ಮ ರಾಜ್ಯದಲ್ಲಿ ನಡೆಸಿದ ಎನ್ ಕೌಂಟರ್ ನ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಿರುವ ವೀಡಿಯೊ ಗುಜರಾತ್ ನಾದ್ಯಂತ ಹರಿದಾಡುತ್ತಿದೆ.

ಈ ಬಗ್ಗೆ ಪೋಲಿಸ್ ಮತ್ತು ಮಾಧ್ಯಮ ಪ್ರತಿನಿಧಿಗಳನ್ನು ಒಳಗೊಂಡ ವಾಟ್ಸಾಪ್ ಗ್ರೂಪ್ ನಲ್ಲಿ ಚರ್ಚಿಸುತ್ತಿರುವ ವೇಳೆ , ಗುಜರಾತ್ ನಲ್ಲೂ ಸದ್ಯ ಇದೇ ರೀತಿ ಎನ್ ಕೌಂಟರ್ ನಡೆಸಬೇಕಾಗುತ್ತದೆ ಎಂಬ ಪೋಲಿಸರ ಒಂದು ಸಂದೇಶಕ್ಕೆ ಗ್ರೂಪ್ ನಲ್ಲಿ ಇದ್ದ ಹೆಚ್ಚಿನ ಸದಸ್ಯರು ಇದಕ್ಕೆ ಬೆಂಬಲ ನೀಡಿದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡಿದೆ.!

ಈ ಎರಡೂ ವಿಡಿಯೋ ಅಪ್ಲೋಡ್ ಆದ ಬಳಿಕ ಅಹಮದಾಬಾದ್ ಗ್ರಾಮೀಣ ಡಿ ವೈ ಎಸ್ ಪಿ , ‘ಪೋಲೀಸರ ಬಾಪ್ ಆಗಲು ಇಚ್ಛಿಸುವವರು ಮತ್ತು ಪೋಲಿಸರನ್ನು ಲಖೋಟಾ ಎಂದು ಕರೆದಿರುವ ವ್ಯಕ್ತಿಗಳು ಹಾಗೂ ಪೋಲೀಸರ ವಿಡಿಯೋ ಚಿತ್ರೀಕರಿಸುವ ವ್ಯಕ್ತಿಗಳು ನಿಮ್ಮೊಂದಿಗೆ ಪೋಲೀಸರು ಹೇಗಿರುತ್ತಾರೆ ಎಂದು ತಿಳಿದುಕೊಳ್ಳಬೇಕು. ಲೆಕ್ಕ ಚುಕ್ತಾ ಮಾಡಲಾಗುವುದು ಎಂದು ಗುಜರಾತ್ ಪೋಲಿಸ್ ಎಂಬ ಬರಹದಲ್ಲಿ ಸಂದೇಶ ಕಳುಹಿಸಿದ್ದಾರೆ.
ಈ ಸಂದೇಶಕ್ಕೆ ಅಹಮದಾಬಾದ್ ಗ್ರಾಮೀಣ ಪೋಲಿಸ್ ಅಧೀಕ್ಷಕ ಕೂಡಾ ಬೆಂಬಲ ವ್ಯಕ್ತಪಡಿಸುವ ಚಿಹ್ನೆ ಕಳುಹಿಸಿದ್ದಾರೆ.

ಯೋಗಿ ನೀತಿ ಅನುಸರಿಸುತ್ತಿರುವ ಗುಜರಾತ್ ಪೋಲಿಸ್..!

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆಗುತ್ತಲೇ ಅವರ ಖಡಕ್ ನಿರ್ಧಾರಕ್ಕೆ ಅಲ್ಲಿನ ರೌಡಿ ಗಳೆಲ್ಲಾ ಸ್ವತಃ ತಾವೇ ಪೋಲೀಸರ ಮುಂದೆ ಶರಣಾಗುತ್ತಿದ್ದಾರೆ. ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗವಹಿಸಿ ಸಿಕ್ಕಿಬಿದ್ದವರನ್ನು ಯೋಗಿ ಸರ್ಕಾರ ಹೊಡೆದುರುಳಿಸುತ್ತಿದೆ. ಜಾಮೀನು ಪಡೆದು ಮಜಾ ಮಾಡುತ್ತಿದ್ದ ರೌಡಿ ಶೀಟರ್ ಗಳೆಲ್ಲಾ ಇದೀಗ ನಮಗೆ ಜೈಲು ಶಿಕ್ಷೆಯೇ ಲೇಸು ಎಂದು ಪೋಲೀಸರ ಮುಂದೆ ಮಂಡಿಯೂರುತ್ತಿದ್ದಾರೆ.

ಯಾಕೆಂದರೆ ಯೋಗಿ ಸರಕಾರ ಯಾವುದೇ ಮುಲಾಜಿಲ್ಲದೆ ರೌಡಿಗಳ ವಿರುದ್ಧ ಸಿಡಿದೆದ್ದಿದೆ. ಸಿಕ್ಕಲ್ಲಿ ಎನ್ ಕೌಂಟರ್ ಮಾಡಿ ಬಿಸಾಕುತ್ತಿರುವ ಯೋಗಿ ತಮ್ಮ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ರೌಡಿಗಳನ್ನು ಮಟ್ಟ ಹಾಕುತ್ತಿದ್ದಾರೆ ಎಂಬುದು ವಿಶೇಷ.! ಇದೀಗ ಗುಜರಾತ್ ಪೋಲೀಸರು ಕೂಡಾ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರ ನೀತಿಯನ್ನೇ ಗುಜರಾತ್ ನಲ್ಲೂ ಅನುಸರಿಸಲು ತಂತ್ರ ರೂಪಿಸಿದ್ದಾರೆ ಎಂಬ ಸಂದೇಶವೂ ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ.

ಈ ವಾಟ್ಸಾಪ್ ಸಂವಾದಕ್ಕೆ ಪ್ರತಿಕ್ರಿಯಿಸಿದ ಜಿಗ್ನೇಶ್ ಮೇವಾನಿ, ‘ ಜಿಗ್ನೇಶ್ ಮೇವಾನಿ ಯ ಎನ್ ಕೌಂಟರ್!? ಉನ್ನತ ಪೋಲಿಸ್ ಅಧಿಕಾರಿಗಳು ನನ್ನನ್ನು ಹೇಗೆ ಎನ್ ಕೌಂಟರ್ ಮಾಡಿ ಕೊಲ್ಲಬಹುದು ಎಂಬ ಬಗ್ಗೆ ವಾಟ್ಸಾಪ್ ನಲ್ಲಿ ಚರ್ಚೆ ಮಾಡಿದ್ದಾರೆ. ಈ ಬಗ್ಗೆ ಮಾಡಿದ ಚರ್ಚೆಯನ್ನು ಬಹಿರಂಗಪಡಿಸಿದ ವೆಬ್ನೋರ್ಟೇಲ್ ನ ಲಿಂಕ್ ಕೂಡಾ ನನ್ನ ಬಳಿ ಇದೆ , ಇದನ್ನು ನೀವು ನಂಬುತ್ತೀರಾ? ಎಂದು ಟ್ವಿಟ್ ಮಾಡಿದ್ದಾರೆ.!

ಇದು ಗಂಭೀರ ವಿಚಾರ, ಈ ಚರ್ಚೆಯಲ್ಲಿ ಇಬ್ಬರು ಉನ್ನತ ಪೋಲಿಸ್ ಅಧಿಕಾರಿಗಳು ನನ್ನನ್ನು ಎನ್ ಕೌಂಟರ್ ನಲ್ಲಿ ಕೊಲ್ಲಬಹುದು ಎಂಬ ಸುಳಿವು ನೀಡಿದ್ದಾರೆ. ಈ ಬಗ್ಗೆ ಡಿಜಿಪಿಗೆ ಮತ್ತು ಗೃಹ ಸಚಿವರಿಗೆ ದೂರು ನೀಡುತ್ತೇನೆ ಎಂದು ಖಾಸಗಿ ಸುದ್ದಿವಾಹಿನಿಯೊಂದರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಇತ್ತೀಚೆಗೆ ಅಹಮದಾಬಾದ್ ಬಂದ್ ಆರಂಭಿಸುವ ಮುನ್ನ ಜಿಗ್ನೇಶ್ ಮೇವಾನಿ ಮತ್ತು ಪೋಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು‌. ಈ ಬಗ್ಗೆ ವೀಡಿಯೊ ಒಂದು ದೇಶಾದ್ಯಂತ ವೈರಲ್ ಆಗಿತ್ತು‌. ಇದೀಗ ವಾಟ್ಸಾಪ್ ಗ್ರೂಪ್ ನಲ್ಲಿ ಸ್ವತಃ ಪೋಲೀಸರೇ ಎನ್ ಕೌಂಟರ್ ಬಗ್ಗೆ ಪ್ರಸ್ತಾಪಿಸಿದ್ದು ಜಿಗ್ನೇಶ್ ಮೇವಾನಿ ಯ ಹತ್ಯೆಗೆ ಸರಕಾರವೇ ಸಜ್ಜಾಗಿದೇಯೇ ಎಂಬ ಅನುಮಾನವೂ ವ್ಯಕ್ತವಾಗಿದೆ.

source:https://m.dailyhunt.in/news/india/kannada/varthabharathi-epaper-varthabh/jignesh+mevaani+en+kountar+ge+gujaraat+polisarindha+sanchu-newsid-82445524

—ಅರ್ಜುನ್

 

Tags

Related Articles

FOR DAILY ALERTS
 
FOR DAILY ALERTS
 
Close