ಪ್ರಚಲಿತ

ಬಿಗ್ ಬ್ರೇಕಿಂಗ್.! ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ರೈತ ಆತ್ಮಹತ್ಯೆಗೆ ಶರಣು.! ಸಿಎಂ ಕುಮಾರಸ್ವಾಮಿ ಅವರ ರೈತ ವಿರೋಧಿ ನೀತಿಗೆ ಯಾರು ಹೊಣೆ.?

301 Shares

ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ಅಧಿಕಾರ ವಹಿಸಿಕೊಂಡ ದಿನದಿಂದಲೇ ರಾಜ್ಯದ ಜನರ ವಿರೋಧಕ್ಕೆ ಒಳಗಾಗಿದ್ದರು. ಆದರೂ ಕಸರತ್ತು ನಡೆಸಿ ಜನರ ಮನವೊಲಿಸುವ ಸಲುವಾಗಿ ತಮ್ಮ ಸರಕಾರದ ಮೊದಲ ಬಜೆಟ್ ಮಂಡನೆ ಮಾಡಿದ್ದರು, ಆದರೆ ಬಜೆಟ್ ಮಂಡನೆ ಆಗುತ್ತಿದ್ದಂತೆ ರಾಜ್ಯದಲ್ಲಿ ಮೈತ್ರಿ ಸರಕಾರದ ವಿರುದ್ಧದ ಹೋರಾಟ ಮತ್ತಷ್ಟು ತೀವ್ರವಾಗಿದೆ. ಯಾಕೆಂದರೆ ಅಧಿಕಾರ ಸಿಗುವುದಕ್ಕೂ ಮೊದಲು ರೈತರ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದ ಕುಮಾರಣ್ಣ, ತಾವು ಮುಖ್ಯಮಂತ್ರಿಯಾಗುತ್ತಲೇ ಅವೆಲ್ಲವನ್ನೂ ಮರೆತಿದ್ದಾರೆ. ಯಾಕೆಂದರೆ ಸರಕಾರದ ಬಳಿ ರೈತರ ಸಾಲಮನ್ನಾ ಮಾಡುವಷ್ಟು ಹಣ ಇಲ್ಲ ಎಂಬ ಸತ್ಯಾಂಶವನ್ನು ಸ್ವತಃ ತಾವೇ ಒಪ್ಪಿಕೊಂಡಿರುವುದರಿಂದ ಸರಕಾರದ ಮೇಲೆ ನಂಬಿಕೆ ಇಟ್ಟಿದ್ದ ರೈತರು ಇದೀಗ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.!

ರಾಜ್ಯ ಸರಕಾರ ಮೊದಲ ಬಜೆಟ್‌ನಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡಬಹುದೆಂಬ ನಿರೀಕ್ಷೆ ಇಟ್ಟಿದ್ದ ರೈತರಿಗೆ ನಿರಾಸೆ ಉಂಟಾಗಿತ್ತು. ಯಾಕೆಂದರೆ ಕೃಷಿಗೆ ಬೇಕಾದ ಸಾಲ ಪಡೆದ ರೈತರಿಗೂ ರಾಜ್ಯ ಸರಕಾರ ಹಲವಾರು ಷರತ್ತುಗಳನ್ನು ವಿಧಿಸಿ ಸ್ವಲ್ಪ ಮಟ್ಟಿನ ಸಾಲಮನ್ನಾ ಮಾಡುವುದಾಗಿ ಹೇಳಿಕೊಂಡಿದೆ. ಆದರೆ ಇದರಿಂದ ನೊಂದ ರೈತರು ಮತ್ತೆ ಸಾಲು ಸಾಲು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.!

ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಳ್ವಿಕೆ ನಡೆಸುತ್ತಿದ್ದಾಗ ೫ ವರ್ಷಗಳಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡರು. ಆದರೂ ರಾಜ್ಯ ಸರಕಾರ ಮಾತ್ರ ನಿರ್ಲಕ್ಷ್ಯ ಮಾಡಿಯೇ ಕಾಲಹರಣ ಮಾಡಿತು. ಇಷ್ಟಾದರೂ ಇನ್ನೂ ಬುದ್ಧಿ ಬಾರದ ಕುಮಾರಸ್ವಾಮಿ ಸರಕಾರ ರೈತರ ವಿಚಾರದಲ್ಲಿ ಉಡಾಫೆಯಿಂದ ನಡೆದುಕೊಳ್ಳುತ್ತಿದೆ. ಆದ್ದರಿಂದಲೇ ಇದೀಗ ಮತ್ತೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ..!

ರೇಷ್ಮೆ ಬೆಲೆ ಕುಸಿತದ ಕಾರಣಕ್ಕೆ ರೈತ ಆತ್ಮಹತ್ಯೆ..!

ರಾಜ್ಯ ಸರಕಾರ ರೈತರ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಇದು. ರೈತರ ಸಾಲಮನ್ನಾ ಮಾಡಲಾಗದ ಸರಕಾರ ರೈತರು ಬೆಳೆದ ಬೆಳೆಗಳಿಗೂ ಸರಿಯಾದ ಮಾರುಕಟ್ಟೆ ಬೆಲೆ ನೀಡದೆ ಆಡಿಸುತ್ತಿರುವ ರಾಜ್ಯ ಸರಕಾರದ ನೀತಿಗೆ ರಾಜ್ಯದ ಅನ್ನದಾತರು ಬಲಿಯಾಗುತ್ತಿದ್ದಾರೆ. ಕೋಲಾರ ತಾಲೂಕಿನ ಮಟ್ನಹಳ್ಳಿಯ ರೈತರೊಬ್ಬರು ರೇಷ್ಮೆ ಬೆಳೆಗೆ ಏಕಾಏಕಿ ಬೆಲೆ ಕುಸಿದಿರುವುರಿಂದ ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ದಿನಗಳ ಹಿಂದಷ್ಟೇ ಮಾರುಕಟ್ಟೆಗೆ ಬಂದಿದ್ದ ೫೫ ವರ್ಷದ ವೆಂಕಟಪ್ಪ ಎಂಬ ರೈತ ಉತ್ತಮ ಬೆಲೆಗೆ ಮಾರಾಟ ಮಾಡಲು ತಯಾರಿ ನಡೆಸುತ್ತಿದ್ದರು. ಆದರೆ ಬೆಲೆ ಏಕಾಏಕಿ ಇಳಿದಿರುವುದರಿಂದ ವೆಂಕಟಪ್ಪ ಏನೂ ಮಾಡಲಾಗದ ಪರಿಸ್ಥಿತಿಗೆ ತಲುಪಿದ್ದರು. ಕೃಷಿಗೆ ಸಾಲ ಮಾಡಿರುವುದರಿಂದ ಇತ್ತ ಬೆಲೆಯೂ ಸಿಗದೇ ಹೋದಾಗ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.!

ಸುಮಾರು ೪ ಎಕರೆ ಜಮೀನು ಹೊಂದಿದ್ದ ರೈತ ಸುಮಾರು ೨೦ ಲಕ್ಷ ಸಾಲ ಮಾಡಿಕೊಂಡಿದ್ದರು. ಸಾಲ ಮರು ಪಾವತಿ ಮಾಡಲು ಬೇರೆ ಯಾವುದೇ ದಾರಿ ತೋಚದೆ ವೆಂಕಟಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯ ಸರಕಾರದ ರೈತ ವಿರೋಧಿ ನೀತಿಯಿಂದಾಗಿ ಇಂದು ಒಂದೇ ದಿನ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.!

ಒಂದೆಡೆ ರಾಜ್ಯ ಸರಕಾರ ತನ್ನ ಸಚಿವರ ಜಂಜಾಟದಲ್ಲಿ ತತ್ತರಿಸಿದರೆ, ಇತ್ತ ಮತ್ತೊಂದೆಡೆ ರೈತರ ಆತ್ಮಹತ್ಯೆ ಕೂಡ ನಿಲ್ಲುತ್ತಿಲ್ಲ. ರೈತರ ವಿಚಾರದಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂಬುದಕ್ಕೆ ನಿಲ್ಲದ ರೈತರ ಆತ್ಮಹತ್ಯೆಯೇ ಪ್ರತ್ಯಕ್ಷ ಸಾಕ್ಷಿ..!

–ಅರ್ಜುನ್

301 Shares
Tags

Related Articles

FOR DAILY ALERTS
Close