ಪ್ರಚಲಿತ

ಮೋದಿ ಏನು ಮಾಡಿದ್ದಾರೆ ಎಂದವರಿಗೆ ಉತ್ತರ ನೀಡಿತು ಫನಿ ಚಂಡಮಾರುತ! ಸಾವಿರಾರು ಜನರ ಪ್ರಾಣ ಉಳಿಸಿತು ಮೋದಿಯ ಯೋಜನೆಗಳು!

ಅಬ್ಬಬ್ಬಾ ನಿಜಕ್ಕೂ ಒಬ್ಬ ವ್ಯಕ್ತಿ ಈ ರೀತಿ ಯೋಚಿಸಬಹುದಾ, ನಾಳೆ‌ ಎದುರಾಗುವ ಸಮಸ್ಯೆಯನ್ನು ಇಂದೇ ಅರಿತುಕೊಂಡು ಮುಂಜಾಗ್ರತಾ ಕ್ರಮ‌ ಕೈಗೊಳ್ಳುತ್ತಾರಾ, ಸಾವಿರಾರು ಜನರ ಪ್ರಾಣ ಕಣ್ಣ ಮುಂದೆಯೇ ಹೋಗುವುದನ್ನು ತಡೆಯಲು ಈ ರೀತಿಯ ಯೋಜನೆಗಳನ್ನು ರೂಪಿಸುತ್ತಾರಾ ಎಂಬ ಆಶ್ಚರ್ಯ ಮಾತ್ರವಲ್ಲದೆ ಪ್ರತಿಯೊಬ್ಬರೂ ನಿಬ್ಬೆರಗಾಗಿ ನೋಡುವಂತಾಗಿದೆ ಭಾರತದ ಪರಿಸ್ಥಿತಿ. ಹೌದು ಇದು ಯಾರೂ ಊಹಿಸದ ಒಂದು ಕೆಲಸ, ಅಧಿಕಾರ ವಹಿಸಿಕೊಂಡ ನಾಯಕರು ತಮ್ಮ ಕೈಲಾದ ಕೆಲಸ ಮಾಡುತ್ತಾರೆ ಯಾವಾಗ ಎಂದರೆ ಜನರಿಗೆ ತೊಂದರೆ ಆದಾಗ ಮತ್ತು ಅದಕ್ಕೆ ಪರಿಹಾರ ನೀಡಿ ತಮ್ಮ ಕೆಲಸ ಆಯ್ತು ಎಂದು ಸುಮ್ಮನಾಗುತ್ತಾರೆ.‌ ಆದರೆ ನಾನು ಈ ದೇಶದ ಪ್ರಧಾನಸೇವಕ ಎಂದು ಹೇಳಿ ಪ್ರಧಾನಮಂತ್ರಿ ಪಟ್ಟ ಅಲಂಕರಿಸಿದ ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡ ಯೋಜನೆಗಳಿಗೆ ಇಂದು ಭಾರತ ಭಾರೀ ಆಪತ್ತಿನಿಂದ‌ ಪಾರಾಗಿದೆ ಮತ್ತು ಇಡೀ ವಿಶ್ವದ ಗಮನ ಸೆಳೆದಿದೆ. ಹೌದು ಕೆಲ ದಿನಗಳ ಹಿಂದೆ ಭಾರತದ ಪುರಿ ಭಾಗಕ್ಕೆ ಅಪ್ಪಳಿಸಿದ ಫನಿ ಚಂಡಮಾರುತ ಯಾವ ರೀತಿಯ ಹಾನಿ ಉಂಟು ಮಾಡಬಹುದು ಎಂದು ಇಡೀ ದೇಶವೇ ಆತಂಕಕ್ಕೆ ಒಳಗಾಗಿತ್ತು. ಯಾಕೆಂದರೆ ಫನಿ ಚಂಡಮಾರುತ ಗಂಟೆಗೆ ೭೦-೮೦ ಕಿಮೀ ವೇಗದಲ್ಲಿ ಆರ್ಭಟಿಸುತ್ತಿತ್ತು. ಗಾಳಿಯ ರಭಸಕ್ಕೆ ಮನೆ ಮರಗಳು ನೆಲಸಮವಾಗಲಿದೆ ಎಂದು ವಿಜ್ಞಾನಿಗಳು ಕೆಲ ದಿನಗಳ ಹಿಂದೆಯೇ ಹೇಳಿಕೊಂಡಿದ್ದರು ಮತ್ತು ಮುಂಜಾಗ್ರತಾ ಕ್ರಮ‌ ಕೈಗೊಳ್ಳಬೇಕು ಎಂದು ಮುನ್ಸೂಚನೆ ಕೂಡ ನೀಡಿದ್ದರು. ವಿಜ್ನಾನಿಗಳ ಸೂಚನೆಯಂತೆ ಮೋದಿ ಸರಕಾರ ಕೂಡ ತಕ್ಷಣ ಕಾರ್ಯೋನ್ಮುಖರಾಗಿದ್ದು ಭಾರತದಲ್ಲಿ ಉಂಟಾಗಬೇಕಿದ್ದ ಭಾರೀ ಆಪತ್ತಿನಿಂದ‌ ಸಾವಿರಾರು ಜನರನ್ನು ರಕ್ಷಿಸಿದೆ.!

ಹೌದು, ಮೋದಿ ಏನು ಮಾಡಿದ್ದಾರೆ ಎಂದು ವಿಪಕ್ಷಗಳು ಮತ್ತು ವಿರೋಧಿಗಳು ಪ್ರತಿದಿನ ಬೆಳಗಾದರೆ ಪ್ರಶ್ನಿಸುತ್ತಲೇ ಇರುತ್ತಾರೆ. ಆದರೆ ಮೋದಿ ಏನು ಮಾಡಿದ್ದಾರೆ ಎಂಬುದು ಪದೇ ಪದೇ ಇಡೀ ದೇಶಕ್ಕೆ ಪ್ರದರ್ಶನವಾಗುತ್ತಿದೆ ಮತ್ತು ಇದೀಗ ಫನಿ ಚಂಡಮಾರುತದ ಮೂಲಕ ಮತ್ತೊಮ್ಮೆ ಮೋದಿ ಏನು ಮಾಡಿದ್ದಾರೆ ಎಂಬುದು ಅರಿವಾಗಿದೆ. ಮೋದಿ ಬಂದ ನಂತರ ದೇಶದಲ್ಲಿ ಬಡತನ ಕಡಿಮೆ ಆಗಲಿಲ್ಲ, ಉದ್ಯೋಗ ಸೃಷ್ಟಿ ಮಾಡಿಲ್ಲ, ಆರ್ಥಿಕ ವ್ಯವಸ್ಥೆ ಉತ್ತಮವಾಗಿಲ್ಲ, ಜಗತ್ತಿನ ಮುಂದೆ ಭಾರತದ ಗೌರವ ಕಡಿಮೆಯಾಗುತ್ತಿದೆ… ಹೀಗೆ ಒಂದಲ್ಲ ಎರಡಲ್ಲ, ವಿರೋಧಿಗಳು ಮೋದಿಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಮೋದಿ ಏನೇ ಮಾಡಿದರು ಅದನ್ನು ವಿರೋಧಿಸುವ ವಿರೋಧಿಗಳು ಮುಟ್ಟಿ ನೋಡುವಂತಹ ಉತ್ತರ ನೀಡಿದೆ ವಿಶ್ವಸಂಸ್ಥೆ. ಫನಿ ಚಂಡಮಾರುತದಿಂದ ಎದುರಿಸಬೇಕಾಗಿದ್ದ ಅಪಾಯವನ್ನು ಭಾರತ ಸರಕಾರ ಉತ್ತಮವಾಗಿ ನಿಭಾಯಿಸಿದೆ ಎಂಬುದರ ಕುರಿತು ವಿಶ್ವಸಂಸ್ಥೆ ಮೋದಿ‌ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದ್ದು ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ.!

ಅಂದು ಸಾವಿರಾರು ಹೆಣ ಬಿದ್ದಿತ್ತು, ಆದರೆ ಇಂದು ಅಲ್ಪ ಪ್ರಮಾಣದ ಹಾನಿ!

ಸರಕಾರ ಎಚ್ಚರಿಕೆಯಿಂದ ಇದ್ದರೆ ಎಲ್ಲವನ್ನೂ ಸರಿ ಮಾಡಬಹುದು ಎಂಬುದನ್ನು ಮೋದಿ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಯಾಕೆಂದರೆ ಮೋದಿ ಪ್ರಧಾನಿಯಾದ ನಂತರ ದೇಶದಲ್ಲಿ ಇಸ್ರೋ ಸಂಸ್ಥೆಯ ಮೂಲಕ ಅದೆಷ್ಟೋ ಸ್ಯಾಟಲೈಟ್ ಗಳು ಉಡಾವಣೆಗೊಂಡಿದೆ.‌ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಹಿಂದಿಗಿಂತ ಹೆಚ್ಚು ಬಲಿಷ್ಠವಾಗಿದೆ ಎಂಬುದನ್ನು ಜಗತ್ತು ಒಪ್ಪಿಕೊಂಡಿದೆ. ಯಾಕೆಂದರೆ ಏಕಕಾಲಕ್ಕೆ ನೂರಾರು ಉಪಗ್ರಹಗಳನ್ನು ಉಡಾವಣೆ ಮಾಡಿದ ಕೀರ್ತಿ ಇದೀಗ ಭಾರತಕ್ಕೆ ಸಲ್ಲಬೇಕು. ಮೋದಿ‌ ಬಡವರಿಗೆ ಏನೂ ಮಾಡಿಲ್ಲ, ಕೇವಲ ಉಪಗ್ರಹ ಉಡಾವಣೆ ಮಾಡಿದರೆ ಹೊಟ್ಟೆ ತುಂಬುತ್ತದೆಯೇ ಎಂದು ಕಾಂಗ್ರೆಸ್ ನಾಯಕರು ಪ್ರಚಾರದ ವೇಳೆ ಕೂಡ ಟೀಕಿಸಿದ್ದರು. ಆದರೆ ಇದೀಗ ಅವೆಲ್ಲದಕ್ಕೂ ಉತ್ತರ ಸಿಕ್ಕಿದೆ, ಯಾಕೆಂದರೆ 1999ರಲ್ಲೂ ಇಂತಹುದೇ ಒಂದು ಚಂಡಮಾರುತ ಒಡಿಸ್ಸಾಕ್ಕೆ ಬಂದು ಅಪ್ಪಳಿಸಿತ್ತು. ಅಂದು ಉಂಟಾದ ಹಾನಿ ಕಂಡು ಇಡೀ ದೇಶವೇ ಆತಂಕಕ್ಕೆ ಒಳಗಾಗಿತ್ತು.‌ ಯಾಕೆಂದರೆ ಚಂಡಮಾರುತದಲ್ಲಿ ೧೦,೦೦೦ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. ಅಂದಿನ ಸರಕಾರ ಯಾವ ಕ್ರಮ ಕೈಗೊಳ್ಳಲು ಕೂಡ ಸಾಧ್ಯವಾಗದೆ ಸುಮ್ಮನಾಗಿತ್ತು. ನೋಡ ನೋಡುತ್ತದ್ದಂತೆ ಪ್ರಾಣಿಗಳು ಮನುಷ್ಯರು ಜೀವ ಕಳೆದುಕೊಂಡರು. ಸಾವಿರಾರು ಹೆಣಗಳನ್ನು ಒಟ್ಟಿಗೆ ಸಮಾಧಿ ಮಾಡಲಾಯಿತು. ಅದಾದ ನಂತರ ಇದೀಗ ಅಂದರೆ ಎರಡು ದಶಕಗಳ ನಂತರ ಅದೇ ರೀತಿಯ ಚಂಡಮಾರುತ ಮತ್ತೆ ಕಾಣಿಸಿಕೊಂಡಿದೆ, ಆದರೆ ಅದರಿಂದ ಹಾನಿ ಹೆಚ್ಚಿನ ಪ್ರಮಾಣದಲ್ಲಿ ಆಗದಂತೆ ತಡೆಯುವಲ್ಲಿ ಮೋದಿ ಸರಕಾರ ಯಶಸ್ವಿಯಾಗಿದೆ. ಯಾಕೆಂದರೆ ಮೋದಿ ಸರಕಾರ ಬಂದ ನಂತರ ಒಂದಲ್ಲ ಒಂದು ಸ್ಯಾಟಲೈಟ್ ಉಡಾವಣೆ ಮಾಡುತ್ತಲೇ ಇದ್ದು ಭಾರತಕ್ಕೆ ಯಾವುದೇ ರೀತಿಯ ಆಪತ್ತು ಬರುವ ಹಾಗಿದ್ದರೆ ಇಸ್ರೋ ಸಂಸ್ಥೆಯು ಮೊದಲೇ ಮುನ್ಸೂಚನೆ ನೀಡುತ್ತಿದೆ. ಫನಿ ಚಂಡಮಾರುತದ ಬಗ್ಗೆ ಕೂಡ ಇಸ್ರೋ ನೀಡಿದ ಮುನ್ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿದ ಮೋದಿ ಸರಕಾರ ಇದೀಗ ಜನರ ಪ್ರಾಣ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇತ್ತ ಮೋದಿ ಸರಕಾರದ ಈ ಕಾರ್ಯ ಕಂಡು ಸ್ವತಃ ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.!

ವಿಜ್ಞಾನಿಗಳು ನೀಡಿದ ಮುನ್ಸೂಚನೆಯ ಪ್ರಕಾರ ಸರಕಾರ ಅಪಾಯದ ಪ್ರದೇಶದಲ್ಲಿ ಇರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿತ್ತು. ಅದೇ ರೀತಿ ಭಾರತೀಯ ಸೇನಾ ವಿಭಾಗದ ಎಲ್ಲಾ ಮೂರು ಭದ್ರತಾ ಪಡೆಗಳನ್ನು ಕರಾವಳಿ ಪ್ರದೇಶಗಳಲ್ಲಿ ನಿಯೋಜಿಸಿತ್ತು. ಜನರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ನೋಡಿಕೊಳ್ಳಲು ಮೋದಿ ಸರಕಾರ ಕೈಗೊಂಡ ಕ್ರಮ ಇದೀಗ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲದೆ ಮೋದಿ ಇರುವಾಗ ಭಾರತಕ್ಕೆ ಅಪಾಯವಿಲ್ಲ ಎಂಬ ಮಾತು ಕೂಡ ಜೋರಾಗಿ ಕೇಳತೊಡಗಿದೆ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close