ಅಂಕಣಇತಿಹಾಸಪ್ರಚಲಿತ

ಸತ್ಯ ಶೋಧನೆ! ಪ್ರಧಾನಿ ಮೋದಿಯವರು ರಾಜೀವ್ ಗಾಂಧಿ ಬಗ್ಗೆ ಮಾಡಿದ ಆರೋಪ ಸುಳ್ಳಾ? ನೌಕಾಪಡೆಯ ಹಡಗನ್ನು ರಾಜೀವ್ ಗಾಂಧಿ ಮೋಜು ಮಸ್ತಿಗೆ ಬಳಸಿಕೊಂಡಿದ್ದರಾ?

ದೇಶದ ಇತಿಹಾಸದಲ್ಲಿ ಇಂತಹ ಒಂದು ಆರೋಪ ಕೇಳಿ ಬರಲಿಲ್ಲ, ದೇಶವನ್ನಾಳಲು ಬಂದ ಪ್ರಧಾನಿಯೊಬ್ಬರು ಈ ದೇಶದ ಸೌಲಭ್ಯಗಳನ್ನು ಅನುಭವಿಸಿದ್ದು ಮಾತ್ರವಲ್ಲದೆ ದೇಶದ ರಕ್ಷಣಾ ಪಡೆಯನ್ನು ಕೂಡ ತಮ್ಮ ಸ್ವಂತಕ್ಕಾಗಿ ಬಳಸಿಕೊಂಡಿದ್ದರು ಎಂಬ ಸುದ್ಧಿ ನಿಜಕ್ಕೂ ನಂಬಲಾರದ ವಿಷಯ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ದೇಶದ ಬಗ್ಗೆ ಕಾಳಜಿ ವಹಿಸುವ ಬದಲು ಕೇವಲ ತಮ್ಮ ಸ್ವಂತ ಲಾಭವನ್ನೇ ನೋಡಿಕೊಂಡಿದ್ದರು ಎಂದು ಇತ್ತೀಚಿಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಆರೋಪ ಮಾಡಿದ್ದರು. ರಾಹುಲ್ ಗಾಂಧಿಯವರು ನರೇಂದ್ರ ಮೋದಿಯವರಿಗೆ ಚೌಕಿದಾರ್ ಚೋರ್ ಹೈ ಎಂದು ಟೀಕೆ ಮಾಡುತ್ತಿದ್ದು ಈವರೆಗೆ ಸುಮ್ಮನಿದ್ದ ಮೋದಿ ಇತ್ತೀಚಿಗೆ ರಾಹುಲ್‌ಗೆ ತಿರುಗೇಟು ನೀಡುವ ಭರದಲ್ಲಿ ರಾಜೀವ್ ಗಾಂಧಿ ಸಾಯುವಾಗ ನಂ೧ ಭ್ರಷ್ಟನಾಗಿ ಸತ್ತರು ಎಂದು ಹೇಳುವ ಮೂಲಕ ಭಾರತದ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದರು.

ಪ್ರಧಾನಿ ಮೋದಿ ಈ ರೀತಿಯ ಹೇಳಿಕೆ ನೀಡುತ್ತಾರೆ ಎಂದು ಸ್ವತಃ ರಾಹುಲ್ ಗಾಂಧಿ ಕೂಡ ಭಾವಿಸಿರಲಿಲ್ಲ. ಬೋಫೋರ್ಸ್ ಹಗರಣದಲ್ಲಿ ರಾಜೀವ್ ಗಾಂಧಿ ಭಾಗಿಯಾಗಿದ್ದರು ಎಂಬ ಆರೋಪ ಮಾಡಿದ ಮೋದಿ ನಂತರದ ಚುನಾವಣಾ ಪ್ರಚಾರದಲ್ಲಿ ಮತ್ತೊಂದು ಬಾಂಬ್ ಸಿಡಿಸಿದರು. ರಾಜೀವ್ ಗಾಂಧಿ ತಮ್ಮ ಸ್ವಂತಕ್ಕಾಗಿ ಈ ದೇಶದ ರಕ್ಷಣಾ ಪಡೆಯಾದ ನೌಕಾದಳದ ಯುದ್ಧದ ಹಡಗನ್ನು ಬಳಸಿಕೊಂಡಿದ್ದರು, ಇದು ಕಾಂಗ್ರೆಸ್‌ನ ಅಸಲಿಯತ್ತು ಏನೆಂಬುದನ್ನು ತೋರಿಸುತ್ತದೆ ಎಂದು ಮೋದಿ ಕಿಡಿಕಾರಿದ್ದರು. ಮೋದಿ ಮಾಡಿದ ಈ ಆರೋಪದ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿತ್ತು, ಮೋದಿ ತಮ್ಮ ರಾಜಕೀಯ ಲಾಭಕ್ಕಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು.!

ಕಾಂಗ್ರೆಸಿಗರು ಹೇಳುವ ಪ್ರಕಾರ ರಾಜೀವ್ ಗಾಂಧಿ ಯಾವುದೇ ಯುದ್ಧದ ಹಡಗನ್ನು ತಮ್ಮ ಸ್ವಂತಕ್ಕಾಗಿ ಬಳಸಿಕೊಂಡಿಲ್ಲ, ಮೋದಿ ಈ ಬಗ್ಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳುತ್ತಿದೆ. ಆದರೆ ಮೋದಿ ಹೇಳಿಕೆಯನ್ನು ಕೆದಕುತ್ತಾ ಹೋದರೆ ಬಯಲಾಗುವ ಸತ್ಯಾಂಶ ನಿಜಕ್ಕೂ ಪ್ರತಿಯೊಬ್ಬ ಭಾರತೀಯರ ರಕ್ತ ಕುದಿಯುವಂತೆ ಮಾಡುತ್ತದೆ. ಯಾಕೆಂದರೆ ಕಾಂಗ್ರೆಸ್ ಯಾವ ರೀತಿ ಈ ದೇಶವನ್ನು ಬಳಸಿಕೊಂಡಿತ್ತು ಎಂಬುದು ಇದೀಗ ಪ್ರಧಾನಿ ಮೋದಿಯವರ ಒಂದು ಹೇಳಿಕೆಯಿಂದ ಬಯಲಾಗಿದೆ. ಮೋದಿ ಚುನಾವಣಾ ಪ್ರಚಾರದಲ್ಲಿ ಈ ಹೇಳಿಕೆ ನೀಡಿರಬಹುದು ಎಂದು ಕೆಲವರು ಸುಮ್ಮನಾಗಿದ್ದರು. ಆದರೆ ಇದರ ಹಿನ್ನಲೆ ಏನು ಎಂಬುದನ್ನು ಪತ್ತೆ ಹೆಚ್ಚುವಂತೆ ಮಾಡಿದ್ದು ಸ್ವತಃ ಕಾಂಗ್ರೆಸ್. ಮೋದಿ ಮಾಡಿದ ಆರೋಪ ಸುಳ್ಳು ಎಂದು ಕಾಂಗ್ರೆಸ್ ಹೇಳಿಕೊಂಡ‌ ನಂತರ ಇದರ ಬಗ್ಗೆ ಗಾಢವಾಗಿ ಸತ್ಯಾಂಶ ಹುಡುಕುವ ಕೆಲಸ ನಡೆಯಲಾರಂಭಿಸಿದವು. ರಾಜೀವ್ ಗಾಂಧಿ ನಿಜಕ್ಕೂ ಭಾರತೀಯ ನೌಕಾಪಡೆಯ ಹಡಗುಗಳನ್ನು ಉಪಯೋಗಿಸಿದ್ದಾರಾ ಎಂಬ ಚರ್ಚೆ ಜೋರಾಗಿ ನಡೆಯಲಾರಂಭಿಸಿತು.‌ ಇದೀಗ ಸತ್ಯಾಂಶ ಬಯಲು ಮಾಡುವ ಸಮಯ, ರಿಪೋರ್ಟ್‌ಗಳು ಹೇಳುವ ಪ್ರಕಾರ ರಾಜೀವ್ ಗಾಂಧಿ ಯುದ್ಧ ಹಡಗನ್ನು ತಮ್ಮ ಸ್ವಂತಕ್ಕಾಗಿ ಬಳಸಿಕೊಂಡಿದ್ದರು ಎಂಬುದು ನಿಜ.!


ಐಎನ್‌ಎಸ್ ವಿರಾಟ್ ಯುದ್ಧ ನೌಕೆಯನ್ನು ಬಳಸಿಕೊಂಡಿದ್ದರು ರಾಜೀವ್ ಗಾಂಧಿ!

ಭಾರತೀಯ ರಕ್ಷಣಾ ಪಡೆಯ ಒಂದು ವಿಭಾಗವಾದ ನೌಕಾದಳದ ಯುದ್ಧ ನೌಕೆಗಳಲ್ಲಿ ಹೆಚ್ಚು ಬಲಿಷ್ಠವಾದ ನೌಕೆ ಐಎನ್‌ಎಸ್ ವಿರಾಟ್ ನೌಕೆಯನ್ನು ಕೂಡ ರಾಜೀವ್ ಗಾಂಧಿ ತಮ್ಮ ಇಷ್ಟ ಬಂದಂತೆ ಬಳಸಿಕೊಂಡಿದ್ದರು. ಲಕ್ಷದ್ವೀಪಕ್ಕೆ ಕುಟುಂಬದ ಸದಸ್ಯರ‌ ಜೊತೆ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ರಾಜೀವ್ ಗಾಂಧಿ ಅವರು ಈ‌ ನೌಕೆಯನ್ನೇ ಬಳಸಿಕೊಂಡಿದ್ದರು, ಅಷ್ಟೇ ಅಲ್ಲದೆ ತಮ್ಮ ಸುತ್ತಮುತ್ತ ಯಾರೂ ಸೋಕದಂತೆ ಬಿಗಿ ಬಂದೋಬಸ್ತ್ ಕೂಡ ಏರ್ಪಡಿಸಿದ್ದರು. ಸುಮಾರು 2000ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನೇಮಿಸಿಕೊಂಡಿದ್ದು ನೂರಾರು ಸೈನಿಕರು ಕೂಡ ಹಡಗಿನಲ್ಲಿ ಇದ್ದರು ಎಂದು ವರದಿಯಾಗಿದೆ. ಯುದ್ದ ನೌಕೆಗಳಲ್ಲಿ ಪ್ರವಾಸಕ್ಕೆ ತೆರಳುತ್ತಾರಾ? ಎಂಬ ಚರ್ಚೆ ಆಗಲೇ ಮೂಡಿತ್ತು, ಆದರೆ ತಮ್ಮ ಅಧಿಕಾರದ ಬಲ ಉಪಯೋಗಿಸಿಕೊಂಡು ಎಲ್ಲರ ಧ್ವನಿ ಅಡಗಿಸಿದ್ದರು ಕಾಂಗ್ರೆಸಿಗರು.

ಆದರೆ ಅದರ ನಡುವೆಯೂ ಆರ್ ಕೆ ಲಕ್ಷ್ಮಣ್ ಎಂಬ ಚಿತ್ರಕಾರ ಒಬ್ಬರು ರಾಜೀವ್ ಗಾಂಧಿ ಅವರ ಲಕ್ಷದ್ವೀಪ ಪ್ರವಾಸದ ಬಗ್ಗೆ ವ್ಯಂಗ್ಯವಾಗಿ ಚಿತ್ರಿಸಿದ್ದರು. ಈ ಚಿತ್ರದಲ್ಲಿ ಸೋನಿಯಾ ಗಾಂಧಿ ಅವರು ರಾಜೀವ್ ಗಾಂಧಿ ಬಳಿ ಮಾತನಾಡುವಂತೆ ಚಿತ್ರಣ ಮಾಡಿದ್ದು, ದೇಶದಲ್ಲಿ ಇಷ್ಟೆಲ್ಲಾ ಹಗರಣಗಳನ್ನು ನಡೆಸಿದರೂ ಕೂಡ ನೀವು ಆರಾಮವಾಗಿ ಲಕ್ಷದ್ವೀಪದಲ್ಲಿ ವಿಶ್ರಾಂತಿ ಪಡೆಯುತ್ತಿದ್ದೀರಿ, ಇನ್ನು ಮುಂದೆ ಎಲ್ಲಿ ವಿಶ್ರಾಂತಿ? ಎಂದು ಪ್ರಶ್ನಿಸುವಂತೆ ಚಿತ್ರಣದ ಮೂಲಕ ಟೀಕೆ ಮಾಡಿದ್ದರು.

ಅದೇ ರೀತಿ ಇದೀಗ ಸ್ವತಃ ನಿವೃತ್ತಿ ಹೊಂದಿದ ನೌಕಾದಳದ ಅಧಿಕಾರಿಗಳಿಬ್ಬರು ಹೇಳುವಂತೆ, ರಾಜೀವ್ ಗಾಂಧಿ ಕಾಲದಲ್ಲಿ ನಾವು ನೌಕಾಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆವು. ಪ್ರಧಾನಿಯಾದ ರಾಜೀವ್ ಗಾಂಧಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡುವುದರಲ್ಲಿ ತಪ್ಪಿಲ್ಲ, ಆದರೆ ಅವರ ಪತ್ನಿ ಸೋನಿಯಾ ಗಾಂಧಿ ವಿದೇಶಿ ಮಹಿಳೆ ಆಗಿರುವುದರಿಂದ ನೌಕಾದಳದ ಹಡಗಿನಲ್ಲಿ ಹೋಗುವುದು ಭದ್ರತೆಯ ದೃಷ್ಟಿಯಿಂದ ಸರಿಯಲ್ಲ ಎಂದು ತಮ್ಮ ಕೆಲ ಅಧಿಕಾರಿ ವರ್ಗದವರಿಗೆ ಹೇಳಿಕೊಂಡಿದ್ದೆವು. ಆದರೆ ಈ ಬಗ್ಗೆ ಬಹಿರಂಗವಾಗಿ ಹೇಳದಂತೆ ನಮಗೂ ಒತ್ತಡ ಇತ್ತು ಮತ್ತು ನಮ್ಮ ಕೆಲಸಕ್ಕೂ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ನಾವೇ ಸುಮ್ಮನಾಗಿದ್ದೆವು ಎಂದು ನಿವೃತ್ತಿ ಹೊಂದಿದ ಅಧಿಕಾರಿಗಳು ಹೇಳಿಕೊಳ್ಳುತ್ತಾರೆ.!

ಇವೆಲ್ಲವೂ ರಾಜೀವ್ ಗಾಂಧಿ ನೌಕಾದಳದ ಹಡಗನ್ನು ಬಳಸಿಕೊಂಡಿದ್ದರು ಎಂಬುದಕ್ಕೆ ಸಾಕ್ಷಿ. ಆದರೆ ಕಾಂಗ್ರೆಸ್ ಮಾತ್ರ ರಾಜೀವ್ ಗಾಂಧಿ ನೌಕಾದಳದ ಹಡಗು ಬಳಸಿಯೇ ಇಲ್ಲ ಎಂಬಂತೆ ವಾದಿಸುತ್ತಿದೆ. ಅಷ್ಟೇ ಅಲ್ಲದೆ ಹಡಗಿನಲ್ಲಿ ಖ್ಯಾತ ನಟ ಅಮಿತಾಭ್ ಬಚ್ಚನ್ ಹಾಗೂ ಅವರ ಕುಟುಂಬಸ್ಥರು ಕೂಡ ಇದ್ದಿದ್ದು ಅನೇಕ ವಿದೇಶಿಗರು ಕೂಡ ಜೊತೆಗಿದ್ದರು. ಇದು ಭಾರತದ ಭದ್ರತಾ ದೃಷ್ಟಿಯಿಂದ ಅಪಾಯಕಾರಿಯಾಗಿದ್ದರೂ ಕೂಡ ರಾಜೀವ್ ಗಾಂಧಿ ಅವರ ಹಸ್ತಕ್ಷೇಪದಿಂದ ಇದು ನಡೆದು ಹೋಗಿತ್ತು. ಯಾವ ಅಧಿಕಾರಿಗಳು ಕೂಡ ಇದರ ವಿರುದ್ಧ ಮಾತನಾಡುವಂತಿರಲಿಲ್ಲ. ಆದ್ದರಿಂದ ರಾಜೀವ್ ಗಾಂಧಿ ಅವರ ಆಟಗಳೆಲ್ಲಾ ಮರೆಮಾಚಿತ್ತು. ಆದರೆ ಈಗ ಪ್ರಧಾನಿ ನರೇಂದ್ರ ಮೋದಿಯವರು ಈ ಎಲ್ಲಾ ಸತ್ಯಾಂಶವನ್ನು ಬಯಲಿಗೆಳೆದಿದ್ದು ಇಡೀ ದೇಶಾದ್ಯಂತ ರಾಜೀವ್ ಗಾಂಧಿ ಮಾಡಿದ ಹಗರಣಗಳ ಬಗ್ಗೆ ಮತ್ತು ಅಕ್ರಮಗಳ ಬಗ್ಗೆ ಜನರಿಗೆ ತಿಳಿಯುವಂತಾಗಿದೆ.!

-P.R.Shetty

Tags

Related Articles

FOR DAILY ALERTS
 
FOR DAILY ALERTS
 
Close