ಪ್ರಚಲಿತ

ಮೀಸಲಾತಿ ಬಗ್ಗೆ ಸುಳ್ಳು ಹೇಳುತ್ತಿರುವ ಕಾಂಗ್ರೆಸ್ಸಿಗರಿಗೆ ಇಲ್ಲಿದೆ ನೋಡಿ ಉತ್ತರ.! ಎಲ್ಲಾ ಜಾತಿ ಬಡವರೂ ಒಂದೇ ಎಂದು ಸಾರಿದ ಮೋದಿಗೆ ಐತಿಹಾಸಿಕ ಜಯ.!

ಪ್ರಧಾನಿ ಮೋದಿಜೀಯವರು ಸಂವಿಧಾನಕ್ಕೆ 124ನೆಯ ತಿದ್ದುಪಡಿ ತರುವ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ 10% ಮೀಸಲಾತಿ ಕಲ್ಪಿಸುವ ಐತಿಹಾಸಿಕ ಮಸೂದೆಯನ್ನು ಜಾರಿಗೆ ತಂದಿದ್ದಾರೆ. ಈ ಮಸೂದೆ ಮೊನ್ನೆ (ತಾ. 8/01/2019 ರಂದು) ಲೋಕಸಭೆಯಲ್ಲಿ ಮತ್ತು ನಿನ್ನೆ (ತಾ. 9/01/2019 ರಂದು) ರಾಜ್ಯಸಭೆಯಲ್ಲಿ ಮತಕ್ಕೆ ಹಾಕಲಾಗಿತ್ತು ಮತ್ತು ನಿರೀಕ್ಷೆಯಂತೆ ಅಂಗೀಕಾರ ಕೂಡ ದೊರೆಯಿತು. ಮುಂದೆ ಮಾನ್ಯ ರಾಷ್ಟ್ರಪತಿಗಳು ಅಂಕಿತವೊಂದನ್ನು ಹಾಕಿಬಿಟ್ಟರೆ ಮಸೂದೆ ಅನುಷ್ಠಾನಕ್ಕೆ ಬರಲಿದೆ.
ಇನ್ನು ಈ ಮಸೂದೆಯನ್ನು ಕೆಲವೊಂದು ರಾಜಕೀಯ ಪಕ್ಷಗಳು ಸೇರಿದಂತೆ ಹಲವರು ವಿರೋಧಿಸಿದ್ದಾರೆ! ಮಾತ್ರವಲ್ಲದೆ ಈ ಮಸೂದೆಯ ಕುರಿತಾಗಿ ಅನೇಕ ಸುಳ್ಳನ್ನು ಹಬ್ಬಿಸುತ್ತಿದ್ದಾರೆ.

‘ಮೀಸಲಾತಿ’ ಎಂಬುವುದು ಅತ್ಯಂತ ಸೂಕ್ಷ್ಮ ವಿಷಯವಾಗಿರುತ್ತದೆ ಮಾತ್ರವಲ್ಲ ಇದರ ಬಗೆಗಿನ ಸುಳ್ಳಿನಿಂದ ದೇಶಕ್ಕೆ ದೇಶವೇ ಹೊತ್ತಿ ಉರಿದು ಒಂದು ರೀತಿಯ ಅಶಾಂತಿಯ ವಾತಾವರಣ ನಿರ್ಮಾಣವಾಗಬಹುದಾಗಿದೆ.

ಆರ್ಥಿಕವಾಗಿ ಹಿಂದುಳಿದವರಿಗೆ ಕಲ್ಪಿಸಲಾಗಿರುವ 10% ಮೀಸಲಾತಿಯ ಬಗ್ಗೆ ಹಬ್ಬಿರುವ 4 ಸುಳ್ಳುಗಳ ಸತ್ಯಾಸತ್ಯತೆ ಪರಿಶೀಲಿಸುವುದಾದರೆ,

ಸುಳ್ಳು 1: “ಮೀಸಲಾತಿ ಕೇವಲ ಮೇಲ್ವರ್ಗ ಮತ್ತು ಸವರ್ಣೀಯರಿಗೆ ಮಾತ್ರ”

ಅಸಲೀಯತ್ತು: ಬಹುಶಃ ಈ ಸುಳ್ಳಿಗೆ ಪ್ರಮುಖ ಕಾರಣ ಮುಖ್ಯ ವಾಹಿನಿಯ ಮಾಧ್ಯಮಗಳು ಎನ್ನಬಹುದು. ಅನೇಕ ಜನ ಈ ಮಸೂದೆಯ ಅನುಕೂಲ ಕೇವಲ ಮೇಲ್ವರ್ಗ ಅಥವಾ ಸಾಮಾನ್ಯ ವರ್ಗಗಳ ಜಾತಿಗೆ ಮಾತ್ರ ಸೀಮಿತ ಎಂದು ಭಾವಿಸಿದ್ದಾರೆ. ಈ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಿ ಅನುಮೋದನೆ ದೊರೆತ ಬಳಿಕವೂ ಅದರ ಬಗ್ಗೆ ಗೊಂದಲ ಮೂಡಿಸುತ್ತಿದ್ದಾರೆ.

ಇನ್ನು ಇದರ ಬಗ್ಗೆ ಹೇಳಬೇಕಾದರೆ, ‘ದ ಹಿಂದೂ’ ಪತ್ರಿಕೆಯ ಹಿರಿಯ ಪತ್ರಕರ್ತೆ ನಿಸ್ತುಲಾ ಹೆಬ್ಬಾರ್ ಎನ್ನುವವರು ಆರ್ಥಿಕವಾಗಿ ಹಿಂದುಳಿದ “ಮೇಲ್ವರ್ಗಗಳಿಗೆ” ಮೀಸಲಾತಿ ಎಂದು ಉಲ್ಲೇಖಿಸಿ, ಮೂಲ ಮಸೂದೆಯ ನಕಲಿ ಪ್ರತಿಯನ್ನು ಟ್ವೀಟ್ ಮಾಡುತ್ತಾರೆ
ಮಾತ್ರವಲ್ಲ ಅನೇಕ ಮುಖ್ಯ ವಾಹಿನಿಯ ಮಾಧ್ಯಮಗಳು ಸೇರಿದಂತೆ ಅನೇಕ ಪತ್ರಕರ್ತರು ಈ ಸುಳ್ಳನ್ನೇ ಹರಡಿದ್ದಾರೆ.

https://www.financialexpress.com/india-news/upper-caste-reservation-constitutional-amendment-and-road-ahead-simplified/1438124/

ಅಸಲಿಗೆ, ಆ ಮಸೂದೆಯಲ್ಲಿ ಎಲ್ಲೂ ಕೂಡ “ಮೇಲ್ವರ್ಗ” ಎಂಬುವುದು ಎಲ್ಲಿಯೂ ನಮೂದಿಸಿಲ್ಲ. ಆರ್ಥಿಕವಾಗಿ ಹಿಂದುಳಿದವರಿಗೆ ಕಲ್ಪಿಸಲಾಗಿರುವ 10% ಮೀಸಲಾತಿಯನ್ನು ಸದ್ಯ ಯಾರು ಜಾತಿ ಆಧಾರಿತ ಮೀಸಲಾತಿ ಸೌಲಭ್ಯದಿಂದ ವಂಚಿತರಾಗಿದ್ದಾರೆಯೋ ಅವರುಗಳು ಮಾತ್ರ ಈ ಸೌಲಭ್ಯ ಪಡೆಯಬಹುದಾಗಿದೆ ಮತ್ತು ಇದು ಯಾವುದೇ ನಿರ್ದಿಷ್ಟವಾದ ಒಂದು ಜಾತಿ, ಮತ ಅಥವಾ ಧರ್ಮಕ್ಕೆ ನೀಡಿದ್ದಲ್ಲ.
ಇನ್ನು ಈ ಬಗ್ಗೆ ಯಾಕೆ ಸುಳ್ಳು ಪ್ರಚಾರ ಎಂದು ಕಾರಣ ಹುಡುಕ್ಕುತ್ತಾ ಹೋದರೆ, ಈ ಮಸೂದೆ ಅಂಗೀಕಾರವಾದ್ದರಿಂದ ಜಾತಿ ಆಧಾರಿತ ಮತ್ತು ಪ್ರತ್ಯೇಕ ಮುಸ್ಲಿಂ ಮೀಸಲಾತಿಗಳಿಗೆ ಯಾವುದೇ ರೀತಿಯ ಬೆಲೆ ಅಥವಾ ಕಾನೂನು ಅನುಮೋದನೆ ದೊರೆಯುವುದಿಲ್ಲ. SC, ST ಮತ್ತು ಇತರೇ ಹಿಂದುಳಿದ ಜಾತಿ/ ವರ್ಗ(ಒಬಿಸಿ)ಗಳಿಗೆ ಹೊರತುಪಡಿಸಿ, ಮಿಕ್ಕವರು ಈ ಮಸೂದೆಯ ಪ್ರಯೋಜನ ಪಡೆಯಬಹುದಾಗಿದೆ.

ಸುಳ್ಳು 2: ಮೋದಿ ಸರಕಾರದಿಂದ SC, ST ಮತ್ತು ಇತರೇ ಹಿಂದುಳಿದ ಜಾತಿ/ ವರ್ಗ(ಒಬಿಸಿ)ಗಳಿಗಿರುವ ಮೀಸಲಾತಿ ರದ್ದಾಗಲಿದೆ!”

ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ಪಕ್ಷದ ಜಿಗ್ನೇಶ್ ಮೇವಾನಿ ಸೇರಿದಂತೆ ಹಲವಾರು ರಾಜಕೀಯ ಮುಖಂಡರು, ತಾವು RSS ನ ಅನೇಕ ಮುಖಂಡರನ್ನು ಭೇಟಿ ಮಾತುಕತೆ ನಡೆಸಿದ್ದಾಗಿಯೂ, ಅವರು ಈ ಆರ್ಥಿಕವಾಗಿ ಹಿಂದುಳಿದವರಿಗೆ 10% ಮೀಸಲಾತಿ ಕೇವಲ ಆರಂಭಿಕ ಅಂಶ ಮುಂಬರುವ ದಿನಗಳಲ್ಲಿ SC, ST ಮತ್ತು ಒಬಿಸಿಗಳಿಗೆ ಕಲ್ಪಿಸಲಾಗಿರುವ ಮೀಸಲಾತಿಯನ್ನು ರದ್ದು ಮಾಡಲಿದ್ದಾರೆ ಎಂಬುವುದನ್ನು ಹೇಳಿದ್ದಾರೆ. ಆದರೆ ಇದೊಂದು ಸುಳ್ಳು ಎನ್ನುವುದು ಸ್ಪಷ್ಟ.

ಈಗಾಗಲೇ ಭಾರತೀಯ ಜನತಾ ಪಕ್ಷ (ಬಿಜೆಪಿ) ಈಗ ಜಾರಿಯಲ್ಲಿರುವ 49.5% ಜಾತಿ ಆಧಾರಿತ ಮೀಸಲಾತಿಯನ್ನು ರದ್ದು ಮಾಡುವ ಪ್ರಶ್ನೆಯೇ ಇಲ್ಲ ಎಂಬುವುದಾಗಿ ಹಲವು ಬಾರಿ ಸ್ಪಷ್ಟಪಡಿಸಿದೆ.

ಸುಳ್ಳು 3: “10% ಮೀಸಲಾತಿ ಮಸೂದೆ 50% ಮೀಸಲಾತಿಯ ಮಿತಿಯನ್ನು ಉಲ್ಲಂಘಿಸಿದೆ”

ಆರ್ಥಿಕವಾಗಿ ಹಿಂದುಳಿದವರಿಗೆ 10% ಮೀಸಲಾತಿ ನೀಡುವ ಮಸೂದೆ ಸಂವಿಧಾನದ ಆರ್ಟಿಕಲ್ 15(6) ಮತ್ತು 16(6) ಕ್ಕೆ ತಿದ್ದುಪಡಿ ತರಲಾಗಿದೆ.
ಇನ್ನು ಜಾರಿಗೆ ಬರಲಿರುವ 10% ಮೀಸಲಾತಿ ಕೇವಲ ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ಅನ್ವಯವಾಗಲಿದ್ದು 50% ಮೀಸಲಾತಿ ಕೇವಲ ಜಾತಿ ಆಧಾರಿತವಾಗಿರುತ್ತದೆ ಮತ್ತು ಅದಕ್ಕೂ ಇದಕ್ಕೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ಇದು ‘ಇಂದ್ರ ಸಾಹ್ನಿ’ ತೀರ್ಪಿನ ಪ್ರಕಾರ ಸ್ಪಷ್ಟವಾಗಿದೆ.

ಸುಳ್ಳು 4: “10% ಮೀಸಲಾತಿ ಸೌಲಭ್ಯ ಪಡೆಯಲು ವಾರ್ಷಿಕ ಆದಾಯ ‘ವೈಯುಕ್ತಿಕ’ವಾಗಿ 8 ಲಕ್ಷ ಮೀರಿರಬಾರದು”

ಇದು ಮತ್ತೊಂದು ಸುಳ್ಳು. ಈ ಮೀಸಲಾತಿ ಸೌಲಭ್ಯ ಪಡೆಯಲು ವಾರ್ಷಿಕ ಆದಾಯ 8 ಲಕ್ಷ ಮೀರಬಾರದು ಎಂಬುದು ನಿಜವೇ ಆಗಿದ್ದರೂ, ಅದು ಒಟ್ಟು ಕುಟುಂಬದ ಆರ್ಥಿಕ ಆದಾಯವೇ ಹೊರತು ‘ವೈಯುಕ್ತಿಕ’ವಾಗಿ ಅಲ್ಲ. ಇನ್ನು ಈ ಪದ್ಧತಿ ಸದ್ಯ ಜಾರಿಯಲ್ಲಿರುವ 50% ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯಲ್ಲಿ ಕೂಡ ‘ಕ್ರಿಮಿ ಲೇಯರ್’ ಅನ್ವಯವಾಗುತ್ತಿದೆ.

ಇನ್ನು ‘ಕ್ರಿಮಿ ಲೇಯರ್’ ಅನ್ನು ವಿವರಿಸುವುದಾದರೆ ಒಂದು ಕುಟುಂಬಕ್ಕೆ ಎಲ್ಲಾ ಮೂಲಗಳಿಂದ ಬರುವ ಆದಾಯ 8 ಲಕ್ಷಕ್ಕೆ ಮೀರಿರಬಾರದು. ಈ ಮಿತಿಯು 1971ರ ವರೆಗೆ ₹ 1,00,000 ಇದ್ದರೆ
1993ರ ವರೆಗೆ ₹ 2,50,000,
2004ರ ವರೆಗೆ ₹ 4,50,000,
2013ರ ವರೆಗೆ ₹ 6,00,000,
2017 ರಲ್ಲಿ ಈ ಮಿತಿಯನ್ನು ₹ 8,00,000 ಕ್ಕೆ ಏರಿಸಲಾಗಿದೆ.

ಮೋದಿ ಸರಕಾರದ 10% ಮೀಸಲಾತಿ ಸೌಲಭ್ಯ ಪಡೆಯಬೇಕಾದರೆ ಇದಕ್ಕೆ ಅರ್ಹರಾದವರು ‘ಕ್ರಿಮಿ ಲೇಯರ್’ಗೆ
ಒಳಪಡುತ್ತದೆ ಮತ್ತು ಒಂದು ಕುಟುಂಬದ ಆರ್ಥಿಕ ಆದಾಯವೇ ಹೊರತು ವೈಯುಕ್ತಕವಾಗಿ ಇರುವುದಲ್ಲ.

ಸದ್ಯ ಈಗಿನ ಜೀವನ ವ್ಯವಸ್ಥೆಯಲ್ಲಿ ನಿರ್ದಿಷ್ಟ ಕಡಿತದ ನಂತರ ಒಂದು ಕುಟುಂಬದ ಆರ್ಥಿಕ ಆದಾಯ ₹ 8 ಲಕ್ಷಕ್ಕೆ ತೆರಿಗೆ ಬೀಳಲಿದೆ. ಆದರೆ ಒಬ್ಬ ತೆರಿಗೆದಾರರ ಎನ್ನುವವನು ಆರ್ಥಿಕವಾಗಿ ಬಲಿಷ್ಟ ಎನ್ನುವ ವಾದಕ್ಕೆ ಯಾವುದೇ ಅರ್ಥ ಇರುವುದಿಲ್ಲ.

ಹಣದುಬ್ಬರ ಮತ್ತು ಜೀವನ ವೆಚ್ಚವನ್ನು ಗಣನೆಗೆ ತೆಗೆದುಕೊಂಡು ಬರಬೇಕು ಎಂದು ಸಹ ತಿಳಿದಿರಬೇಕು. ಈ ಯೋಜನೆಯನ್ನು ಪ್ರಚೋದಿಸಲು ಸರ್ಕಾರವು ಹೇಗೆ ಯೋಜಿಸುತ್ತಿದೆ ಎನ್ನುವುದನ್ನು ಇನ್ನೂ ಸ್ಪಷ್ಟವಾದ ಪದಗಳಲ್ಲಿ ಉಚ್ಚರಿಸಲಾಗಿಲ್ಲ, ಆದರೆ ಸಮಾಜದಲ್ಲಿ ಅಪಶ್ರುತಿ ಮೂಡಿಸುವ ಸಲುವಾಗಿ ರಾಜಕೀಯವಾಗಿ ಪ್ರೇರೇಪಿಸಲ್ಪಟ್ಟ ಸುಳ್ಳುಗಳನ್ನು ಹರಡುವುದು ಸಮಾಜದ ದುರಂತವೇ ಸರಿ.

-ಶ್ರೀಮುನ್ನಾ

Tags

Related Articles

FOR DAILY ALERTS
 
FOR DAILY ALERTS
 
Close