ಪ್ರಚಲಿತರಾಜ್ಯ

ಸ್ಪೋಟಕ ಸುದ್ಧಿ: ಮುಖ್ಯಮಂತ್ರಿಯ ರುಂಡ ಕಡಿಯುತ್ತೇನೆ ಎಂದ ಭೂಪ! ಮುಖ್ಯಮಂತ್ರಿಗೆ ಈ ರೀತಿಯ ಬೆದರಿಕೆ ಹಾಕಿದ್ದು ಯಾರು ಗೊತ್ತಾ..?

ಬಹುಷಃ ಈ ರಾಜ್ಯದ ಸ್ಥಿತಿಯನ್ನು ನೋಡುತ್ತಿರುವಂತಹಾ ಯಾವೊಬ್ಬ ನಾಗರೀಕನೂ ಮುಖ್ಯಮಂತ್ರಿಯನ್ನು ಹೊಗಳುವ ಪರಿಸ್ಥಿತಿಯಲ್ಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಅದ್ಯಾವ ರೀತಿಯಲ್ಲಿ ಈ ರಾಜ್ಯವನ್ನು ಆಡಳಿತ ಮಾಡುತ್ತಿದೆ ಎಂದರೆ ಒಂದರ ಮೇಲೊಂದು ಪ್ರಕರಣಗಳು ಹೊರಗೆ ಬರುತ್ತಲೇ ಇದೆ. ಈವರೆಗೂ ಸಾಮಾನ್ಯ ಪುಡಿ ರೌಡಿಗಳು ರಾಜ್ಯದಲ್ಲಿ ಅಟ್ಟಹಾಸ ನಡೆಸುತ್ತಿದ್ದರೆ, ಸರ್ಕಾರದ ಅವಧಿ ಮುಗಿಯುವ ಹಂತದಲ್ಲಿ ಸ್ವತಃ ಕಾಂಗ್ರೆಸ್ ನಾಯಕರೇ ಗೂಂಡಾಗಿರಿಯ ಫೀಲ್ಡಿಗಿಳಿದು ಹೋರಾಟ ನಡೆಸುತ್ತಿರುವುದು ರಾಜ್ಯದಲ್ಲಿ ಭಾರೀ ಆಕ್ರೋಷವನ್ನೇ ಹುಟ್ಟುಹಾಕಿದೆ.

ತಲೆ ಕಡಿಯಬೇಕು ಎಂದ ಭೂಪ..!!!

“ಕರ್ನಾಟಕ ಗೂಂಡಾ ರಾಜ್ಯವಾಗಿದೆ. ರಾಜ್ಯದಲ್ಲಿ ಅದೆಷ್ಟೋ ಬಡಪಾಯಿಗಳ ಜೀವವೇ ನರಕದ ಸ್ಥಿತಿಯಾಗಿ ಹೋಗಿದೆ. ಪಾಪದ ಜೀವಗಳ ತಲೆ ಕಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನ ರುಂಡ ಕಡಿಯಬೇಕು”… ಹೀಗೆಂದು ಮುಖ್ಯಮಂತ್ರಿಗಳಿಗೆ ಪರೋಕ್ಷವಾಗಿ ಬೆದರಿಕೆ ಹಾಕಿದ್ದು ಓರ್ವ ಫೇಸ್ ಬುಕ್ ಶೂರ. ಅನೇಕ ಮಂದಿ ಜನ ಸಾಮಾನ್ಯರೂ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಷವನ್ನು ವ್ಯಕ್ತಪಡಿಸಿದ್ದರು. ಮೇಲಿಂದ ಮೇಲೆ ನಡೆಯುವ ಪ್ರಕರಣಗಳನ್ನು ನೋಡುತ್ತಾ ಮುಖ್ಯಮಂತ್ರಿಗೆ ತಮ್ಮ ಆಕ್ರೋಶದಿಂದ ಫೇಸ್‍ಬುಕ್‍ನಲ್ಲಿ ಪೋಸ್ಟರ್‍ಗಳನ್ನು ಹಾಕಿದ್ದಾರೆ.!!

ಮುಖ್ಯಮಂತ್ರಿಗಳ ಗೂಂಡಾಗಿರಿಯ ಧೋರಣೆ ರಾಜ್ಯ ಮತ್ರವಲ್ಲದೆ ರಾಷ್ಟ್ರದಲ್ಲೇ ಮಾರ್ದನಿಸಿತ್ತು. ತನ್ನ ಪಕ್ಷದ ಶಾಸಕರಿಂದಲೇ ಗೂಂಡಾಗಿರಿ ನಡೆಯುತ್ತಿದೆ ಎಂಬ ವಿಚಾರ ಸ್ವತಃ ಕಾಂಗ್ರೆಸ್ ಪಕ್ಷದ ನಾಯಕರಿಗೇ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ಒಂದರ ಮೇಲೆ ಒಂದರಂತೆ ಈ ಕಾಂಗ್ರೆಸ್ ಸರಕಾರದ ಗೂಂಡಾಗಳು ಅವಾಂತರವನ್ನು ಮಾಡುತ್ತನೇ ಬರುತ್ತಿದ್ದಾರೆ.. ಬರೋಬ್ಬರಿ ಇಂದಿಗೆ 7 ಗೂಂಡಾಗಳು ಒಂದೇ ವಾರದಲ್ಲಿ ಗೂಂಡಾಗಿರಿಯನ್ನು ಪ್ರದರ್ಶನ ಮಾಡಿದ್ದಾರೆ… ಸಚಿವ ಹ್ಯಾರಿಸ್ ನಲಪಾಡ್‍ನ ಗೂಂಡಾ ಪುತ್ರ ಮೊಹಮ್ಮದ್ ನಲಪಾಡ್ ವಿದ್ವತ್ ಎಂಬ ಅಮಾಯಕನ ಮೇಲೆ ಗೂಂಡಾಗಿರಿ ಮೆರೆದ ಪರಿಣಾಮ ವಿದ್ವತ್ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿಯಲ್ಲಿದ್ದಾರೆ.. ಇಂತಹ ಗೂಂಡಾಗಿರಿ ಪ್ರದರ್ಶನ ಮಾಡಿರುವಂತಹದ್ದು ಯಾರು? ಸಿದ್ದರಾಮಯ್ಯ ಸರಕಾರದ ಗೂಂಡಾಗಳೇ!!..

ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಶಾಸಕ ಹ್ಯಾರಿಸ್ ನಲಪಾಡ್ ಅವರ ಪುತ್ರ ಮಹಮ್ಮದ್ ನಲಪಾಡ್ ಎಂಬಾತನ ಗೂಂಡಾಗಿರಿ ರಾಜ್ಯ ಮಾತ್ರವಲ್ಲದೆ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿತ್ತು. ರೆಸ್ಟೋರೆಂಟ್‍ನಲ್ಲಿದ್ದ ಓರ್ವ ಅಮಾಯಕ ಯುವಕನನ್ನು ಮನಬಂದಂತೆ ಥಳಿಸಿ, ರಕ್ತ ಬರುವ ಹಾಗೆ ಅಮಾನವೀಯತೆ ಮೆರೆದಿರುವ ಈತನ ಗೂಂಡಾಗಿರಿ ರಾಷ್ಟ್ರಮಟ್ಟದಲ್ಲಿಯೇ ಚರ್ಚೆಯಾಗಿತ್ತು. ಅತ್ತ ನಲಪಾಡ್ ಗೂಂಡಾಗಿರಿ ಮುಗಿಲು ಮುಟ್ಟುತ್ತಿದ್ದಂತೆಯೇ ಇತ್ತ ರಾಜ್ಯ ಕಾಂಗ್ರೆಸ್‍ನ ಕೃಷಿ ಸಚಿವ ಕೃಷ್ಣ ಬೈರೇ ಗೌಡರ ಪುಡಾರಿ ಗೂಂಡಾಗಳ ಅಟ್ಟಹಾಸವೂ ತಾರಕ್ಕೇರಿತ್ತು. ಕೃಷ್ಣ ಬೈರೇಗೌಡರ ದರ್ಪ ಅಹಂಕಾರಕ್ಕೆ ಅಮಾಯಕರು ಸೋತು ಸುಣ್ಣವಾಗಿ ಪ್ರತಿಭಟನೆಗೆ ಇಳಿದಿದ್ದರು. ಆದರೆ ಕಾಂಗ್ರೆಸ್ ಮಾತ್ರ ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳಲೇ ಇಲ್ಲ.

ಬಹುಷಃ ಈ ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷದ ಪಾಪದ ಕೊಡ ತುಂಬಿರಬೇಕು. ಒಂದಲ್ಲಾ ಒಂದು ಪ್ರಕರಣಗಳು ಬಯಲಾಗುತ್ತಲೇ ಇದೆ. ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತನೋ ಅಥವಾ ಕಾಂಗ್ರೆಸ್ ನಾಯಕರೊಂದಿಗೆ ಫೆÇೀಟೋ ಕ್ಲಿಕ್ಕಿಸಿಕೊಂಡ ಸಾಮಾನ್ಯ ಅಭಿಮಾನಿಯೂ ಅಲ್ಲ. ಈತ ಕೆ.ಆರ್.ಪುರಂನ ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷ ನಾರಾಯಣ ಸ್ವಾಮಿ. ಈತನ ಅವಾಂತರ ನೋಡಿಯೂ ಜನ ಇಡೀ ಕಾಂಗ್ರೆಸ್‍ಗೆ ಹಿಡಿ ಶಾಪ ಹಾಕುತ್ತಿದ್ದಾರೆ..

ಒಂದರ ಮೇಲೆ ಒಂದರಂತೆ ಗೂಂಡಾಗಿರಿ ಮಾಡುತ್ತಾ ತಾವೇನೂ ಕಮ್ಮಿ ಇಲ್ಲ ಎಂಬಂತೆ ಬೆಂಗಳೂರಿನ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಪುಂಡಾಟಿಕೆ ಮೆರೆದ ಮತ್ತೊಬ್ಬ ಕಾಂಗ್ರೆಸ್ ಶಾಸಕ. ಬೆಂಗಳೂರಿನ ಯಶವಂತಪುರದ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ಅವರ ಆಪ್ತ ಗೂಂಡಾಗಳು ತಮ್ಮ ಗೂಂಡಾ ಮನಸ್ಥಿತಿಯನ್ನು ಹೊರಹಾಕಿದ್ದು. ಒಂದರ ಬೆನ್ನಲ್ಲಿ ಮತ್ತೊಂದು ಪ್ರಕರಣ ಬಯಲಾಗುತ್ತಾ ಕಾಂಗ್ರೆಸ್ ಸರ್ಕಾರದ ನೀಚ ಮುಖ ಅನಾವರಣವಾಗುತ್ತಾ ಬಂತು!!

ಮೊನ್ನೆ ತಾನೇ ಬೆಂಗಳೂರಿನ ಹೆಬ್ಬಾಳದ ಫ್ಲೈ ಓವರ್ ಪಕ್ಕದಲ್ಲಿರುವ ಎಚ್ ಬಿ ಶಿವರಾಮ್ ಸಹೋದರಿಗೆ ಸೇರಿದ ಭೂಮಿಯನ್ನು ಸಿಎಂ ಮಗನ ಬಂಟರು ಧಮ್ಕಿ ಹಾಕಿ ಬೇಲಿ ತೆಗೆದು ದಬ್ಬಾಳಿಕೆ ನಡೆಸಿದ್ದರು.. ನಾವು ಸಿಎಂ ಕಡೆಯವರು ಎಂದು ಸಿಎಂ ಹೆಸರು ಹೇಳಿಯೇ ಯತೀಂದ್ರ ಸ್ನೇಹಿತ ಶಾಂತಲಾ ಇಂಡಸ್ಟ್ರೀಸ್ ಮಾಲೀಕ ರಾಜೇಶ್ ಗೌಡ, ಬ್ರೋಕರ್ ಸೂರಿಯಿಂದ ದಬ್ಬಾಳಿಕೆ ನಡೆಸಿ ಅಲ್ಲಿಯೂ ನಾವು ಕಾಂಗ್ರೆಸ್ ಸರಕಾರದವರು ಎಂಬ ಮದವನ್ನು ಹಿಡಿದು ಗೂಂಡಾಗಿರಿಯನ್ನು ಪ್ರದರ್ಶನ ಮಾಡಿದರು….ತಾವು ಏನೂ ಮಾಡಿದರೂ ಸಿದ್ದರಾಮಯ್ಯ ಸರಕಾರ ನಮ್ಮನ್ನು ಕೈ ಬಿಡಲ್ಲ ಎನ್ನುವ ಉದ್ಧೇಶವನ್ನಿಟ್ಟುಕೊಂಡು ಈ ರೀತಿಯಾಗಿ ಧಮ್ಕಿ ಹಾಕುತ್ತಿದ್ದಾರೆ…

ಈ ಭೂಮಿಯು ಬೆಂಗಳೂರಿನ ಫ್ಲೈ ಓವರ್ ಪಕ್ಕದಲ್ಲಿರುವ ಎಚ್‍ಬಿ ಶಿವರಾಂ ಮತ್ತು ಸಹೋದರರಿಗೆ ಸೇರಿದ ಭೂಮಿಯಾಗಿದ್ದು ಸುಮಾರು 50 ಕೋಟಿ ರೂ ಮೌಲ್ಯದ ಭೂಮಿಗೆನುಗ್ಗಿ ಸಿಎಂ ಹೆಸರು ಹೇಳಿ ಜಮೀನು ಮಾಲೀಕನಿಗೆ ಧಮ್ಕಿ ಹಾಕಿದ್ದರು.. ಇವರಿಗೆ ಸಂಬಂಧ ಪಟ್ಟ ಭೂಮಿಯಲ್ಲದಿದ್ದರೂ ಸಹ ಜೆಸಿಬಿ ನುಗ್ಗಿಸಿ ಬೇಲಿ ಕಿತ್ತೆಸೆದು ಅತಿಕ್ರಮವಾಗಿ ಪ್ರವೇಶ ಮಾಡಿದ್ದರು. ಈ ಜಮೀನಿಗೆ ಇದಕ್ಕಿಂತ ಮುಂಚೆಯೇ ಕೇಸು ದಾಖಲಾಗಿದ್ದು ಜಮೀನು ಬಗ್ಗೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಿತ್ತು ಕೋರ್ಟ್!! ಅದನ್ನೂ ಮೀರಿಯೂ ದರ್ಪ ತೊರಿಸಿರುವುದು ನಿಜವಾಗಿಯೂ ಕಾಂಗ್ರೆಸ್‍ನ ಒಂದೊಂದೇ ಮುಖ ಅನಾವರಣಗೊಳ್ಳುತ್ತಿದೆ…

ಕಾಂಗ್ರೆಸ್ ನಾಯಕರ ಅಧಿಕಾರದ ಮದ ನೆತ್ತಿಗೇರಿದಂತೆ ಕಾಣುತ್ತಿದೆ.. ಅದಲ್ಲದೆ ದಾರವಾಡ ಜಿಲ್ಲೆಯಲ್ಲಿ ಡಿಕೆಶಿ ವಿರುದ್ಧ ಕೇಸು ದಾಖಲಿಸಿದ್ದಕ್ಕಾಗಿ ಕುಂದಗೊಡ ತಾಲೂಕಿನಲ್ಲಿ ಪ್ರತಿಭಟನೆಯನ್ನು ಮಾಡುತ್ತಿದ್ದರು.. ಅದೇ ಸಮಯದಲ್ಲಿ ಓರ್ವ ಅಡ್ಡ ಬಂದ ಎಂಬ ಉದ್ಧೇಶವನ್ನಿಟ್ಟುಕೊಂಡೇ ಆತನನ್ನು ಬೇಕಾ ಬಿಟ್ಟಿ ಹೊಡೆದಿದ್ದಾನೆ.. ಕಾಂಗ್ರೆಸ್ ಶಾಸಕ ಅಡಿವೆಪ್ಪ ಶಿವಳ್ಳಿ ಸಹೋದರ ಗೂಂಡಾಗಿರಿಯನ್ನು ಪ್ರದರ್ಶನ ಮಾಡಿದ್ದು ಅದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಿಡೀಯೋ ವೈರಲ್ ಆಗಿದೆ… ಸಾಮಾನ್ಯ ಜನರಿಗೆ ಈ ಕಾಂಗ್ರೆಸ್ಸಿಗರ ಮುಂದೆ ಬದುಕುವುದೇ ಕಷ್ಟವಾಗುತ್ತಿದೆ…

ಕಾಂಗ್ರೆಸ್‍ಗೆ ಈ ಬಾರಿ ಏನಾಗಿದೆ ಅಂತಾ ತಿಳಿಯುತ್ತಿಲ್ಲ.. ಒಂದಲ್ಲ ಒಂದು ವಿಷಯದಲ್ಲಿ ಎಡವಟ್ಟು ಮಾಡಿಕೊಂಡೇ ಬರುತ್ತಿದ್ದಾರೆ.. ವಿನಾಶ ಕಾಲೇ ವಿಪರೀತ ಬುದ್ದಿ ಎನ್ನುವಂತೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಒಂದೊಂದೇ ಅವಾಂತರಗಳನ್ನು ಮಾಡುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.. ಇಷ್ಟೆಲ್ಲಾ ನೋಡಿಯೂ ಈ ಸಿದ್ದರಾಮಯ್ಯನವರು ತನ್ನ ಪಕ್ಷಕ್ಕೇ ಕುಮ್ಮಕ್ಕು ನೀಡಿ ತಾನು ಮಾತ್ರ ರಾಜ್ಯದ ಜನತೆಯ ಬಗ್ಗೆ ಚಿಂತೆ ಮಾಡದೆ ಆರಾಮವಾಗಿ ನಿದ್ದೆ ಮಾಡುತ್ತಿದ್ದಾರೆ…

ಇಂತಹ ಗೂಂಡಾಗಿರಿ ಮಾಡುವ ಸರಕಾರದ ವಿರುದ್ಧ ಈಗಾಗಲೇ ಎಲ್ಲಾ ರಾಜ್ಯದ ಜನ ಸಿಡಿದೆದ್ದಿದ್ದಾರೆ… ಇಂತಹ ಸರಕಾರವನ್ನು ಇನ್ನೂ ಬೆಳೆಯಲು ಬಿಟ್ಟರೆ ಇಡೀ ರಾಜ್ಯವನ್ನು ದಿನಕ್ಕೊಬ್ಬರಂತೆ ಗೂಂಡಾಗಿರಿ ಮಾಡಿ ದೇಶವನ್ನು ಯಾವ ರೀತಿ ಮಾಡುತ್ತಾರೆ ಎಂದು ಊಹಿಸಲೂ ಸಾಧ್ಯವಿಲ್ಲ…

ಪವಿತ್ರ

Tags

Related Articles

Close