ಪ್ರಚಲಿತರಾಜ್ಯ

ಸ್ಪೋಟಕ ಸುದ್ದಿ: ಗೂಂಡಾ ನಲಪಾಡ್ ನ ರೌಡಿಸಂ ಗೆ ಕಾರಣ ಈ ಹುಡುಗಿಯರಾ.? ಹಲ್ಲೆ ಮಾಡಲು ಉಪಯೋಗಿಸಿದ ಅಸ್ತ್ರ ಯಾವುದು ಗೊತ್ತಾ.?!

ಕಾಂಗ್ರೆಸ್ ನ ಪಾಪದ ಕೊಡ ತುಂಬಿದೆ, ಅಧಿಕಾರದ ಅವಧಿಯಲ್ಲಿ ಮಾಡಿದ ಅನಾಚರಗಳೆಲ್ಲವೂ ಚುನಾವಣೆ ಸಮೀಪಿಸುತ್ತಿದ್ದಂತೆ ಹೊರಬೀಳುತ್ತಿದೆ. ಕಾಂಗ್ರೆಸ್ ನಾಯಕರು ಮಾಡಿದ ಭ್ರಷ್ಟಾಚಾರ, ಕೊಲೆ, ಹಲ್ಲೆ , ದಬ್ಬಾಳಿಕೆ ಹೀಗೆ ಒಂದಲ್ಲಾ ಎರಡಲ್ಲ, ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಕಾಂಗ್ರೆಸ್ ನಿಂದ ಇಡೀ ರಾಜ್ಯವೇ ಇಂದು ಅಶಾಂತಿಯಿಂದ ಬದುಕಬೇಕಾದ ಪರಿಸ್ಥಿತಿಯಲ್ಲಿದೆ.

ಕಳೆದೆರಡು ದಿನಗಳ ಹಿಂದೆ ಬೆಂಗಳೂರಿನ ಯುಬಿ ಸಿಟಿಯಲ್ಲಿ ಇರುವಂತಹ ಫರ್ಜಿ ಎಂಬ ರೆಸ್ಟೋರೆಂಟ್ ನಲ್ಲಿ ಅಮಾಯಕ ಯುವಕನ ಮೇಲೆ ಕಾಂಗ್ರೆಸ್ ಶಾಸಕನನೊಬ್ಬನ ಮಗ ನಡೆಸಿದ ಹಲ್ಲೆಯಿಂದ ಇಡೀ ರಾಜ್ಯವೇ ಕಾಂಗ್ರೆಸ್ ನ ಕರಾಳ ಮುಖ ಕಾಣುವಂತಾಗಿದೆ. ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಲ್ಲದೇ ತಂದೆ ಶಾಸಕ ಎಂಬ ಅಧಿಕಾರದ ಅಹಂಕಾರದಿಂದ ಉಡಾಫೆಯಿಂದ ವರ್ತಿಸುತ್ತಿದ್ದಾನೆ.

ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ನಲಪಾಡ್ ರ ಪುತ್ರ ಮಹಮ್ಮದ್ ನಲಪಾಡ್ ತನ್ನ ತಂದೆ ಕಾಂಗ್ರೆಸ್ ಶಾಸಕ ಎಂಬ ಅಹಂಕಾರದಿಂದಲೇ ವರ್ತಿಸುತ್ತಿದ್ದ. ರಾತ್ರಿ ಗೆಳೆಯರ ಜೊತೆ ರೆಸ್ಟೋರೆಂಟ್ ಒಂದರಲ್ಲಿ ಮಜಾ ಮಾಡುತ್ತಿದ್ದ ಮಹಮ್ಮದ್ ನಲಪಾಡ್ , ಅಲ್ಲೇ ಇದ್ದ ವಿದ್ವತ್ ಎಂಬ ಯುವಕನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಯಾವುದೋ ಸಣ್ಣ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿತ್ತು, ಆದರೆ ನಲಪಾಡ್ ಕುಡಿದ ಮತ್ತಿನಲ್ಲಿ ಏಕಾಏಕಿ ವಿದ್ವತ್ ಗೆ ಹೊಡೆಯಲು ಆರಂಭಿಸಿದ್ದಾರೆ.

ನಾನು MLA ಮಗ , ನನಗೆ ಎದುರು ಮಾತನಾಡುತ್ತೀಯಾ..!

ನಲಪಾಡ್ ತನ್ನ ತಂದೆಯ ಅಧಿಕಾರವನ್ನು ಬಳಸಿ ಈ ಹಿಂದೆಯೂ ಅನೇಕ ಗೂಂಡಾಗಿರಿ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಆದರೆ ಯಾವುದೇ ಶಿಕ್ಷೆ ಅನುಭವಿಸಿರಲಿಲ್ಲ. ಕಾರಣ ನಲಪಾಡ್ ನ ತಂದೆ ಹ್ಯಾರಿಸ್ ನಲಪಾಡ್ ಕಾಂಗ್ರೆಸ್ ನ ಪ್ರಭಾವಿ ಶಾಸಕ. ಆದ್ದರಿಂದಲೇ ಏನೇ ಮಾಡಿದರು ನಡೆಯುತ್ತದೆ ಎಂಬ ಅಹಂಕಾರದಿಂದ ವರ್ತಿಸುತ್ತಿದ್ದ ಗೂಂಡಾ ಮಹಮ್ಮದ್ ನಲಪಾಡ್. ರೆಸ್ಟೋರೆಂಟ್ ನಲ್ಲಿ ವಿದ್ವತ್ ನ ಕಾಲು ನಲಪಾಡ್ ಗೆ ತಾಗಿದೆ ಎಂಬ ಕಾರಣಕ್ಕೆ ಜಗಳಕ್ಕಿಳಿದ ನಲಪಾಡ್ ಕ್ಷಮೆ ಕೇಳುವಂತೆ ಬೆದರಿಸಿದ್ದಾನೆ. ಆದರೆ ವಿದ್ವತ್ ಯಾವುದೇ ತಪ್ಪು ಮಾಡಿಲ್ಲ ಎಂದು ವಾಗ್ವಾದಕ್ಕೆ ಇಳಿದಿದ್ದಾರೆ. ಈ ವೇಳೆ ನಲಪಾಡ್ , ‘ನಾನು ಯಾರೆಂದು ಗೊತ್ತಾ, ನನ್ನ ಅಪ್ಪ ಕಾಂಗ್ರೆಸ್ MLA’ ಎಂದು ಹೇಳಿ ವಿದ್ವತ್ ಗೆ ಧಮ್ಕಿ ಹಾಕಿದ್ದಾನೆ. ತಂದೆಯ ಅಧಿಕಾರದ ಬಲದಿಂದಲೇ ಮಜಾ ಮಾಡುತ್ತಿದ್ದ ನಲಪಾಡ್ ಊರಲ್ಲೆಲ್ಲಾ ಗೂಂಡಾಗಿರಿ ನಡೆಸುತ್ತಲೇ ಇದ್ದ.

ಗೂಳಿಗಳಂತೆ ಆಸ್ಪತ್ರೆಗೆ ನುಗ್ಗಿ ದಾಂಧಲೆ..!

ಈ ಬಗ್ಗೆ ದೂರು ನೀಡಿದ ವಿದ್ವತ್, ನಲಪಾಡ್ ತನ್ನ ಕೊಲೆ ಯತ್ನ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಗಂಭೀರವಾಗಿ ಗಾಯಗೊಂಡ ವಿದ್ವತ್ ನನ್ನು ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿದ್ವತ್ ಗೆ ರೆಸ್ಟೋರೆಂಟ್ ನಲ್ಲಿಯೇ ಹಿಗ್ಗಾ ಮುಗ್ಗ ಥಳಿಸಿದ ಮಹಮ್ಮದ್ ನಲಪಾಡ್ ನಂತರದಲ್ಲಿ ತನ್ನ ಚೇಳಾಗಳನ್ನು ಒಟ್ಟುಗೂಡಿಸಿ ಮಲ್ಯ ಆಸ್ಪತ್ರೆಗೂ ನುಗ್ಗಿದ್ದಾರೆ. ಎರಡು ಕಾರ್ ಗಳಲ್ಲಿ ಬಂದ ನಲಪಾಡ್ ಮತ್ತು ಆತನ ಸಂಗಡಿಗರು ಆಸ್ಪತ್ರೆಯ ಬಾಗಿಲನ್ನು ಒದ್ದುಕೊಂಡೇ ಒಳ ನುಗ್ಗಿದ್ದಾರೆ. ತನ್ನ ತಂದೆ ಕಾಂಗ್ರೆಸ್ ಶಾಸಕ ಎಂಬ ಅಹಂಕಾರ ನಲಪಾಡ್ ಗೆ ಇದ್ದಿದ್ದರಿಂದ ಏನು ಬೇಕಾದರೂ ಮಾಡಬಹುದು ಎಂಬ ಮನಸ್ಥಿತಿಯನ್ನು ಹೊಂದಿದ್ದ.

ಕ್ಷಮೆ ಕೇಳುವಂತೆ ಒತ್ತಾಯ…!

ಕೇವಲ ಕಾಲು ಚಾಚಿ ಕೂತಿದ್ದ ವಿದ್ವತ್ ಗೆ ಅವಾಚ್ಯ ಶಬ್ದಗಳಿಂದ ಬೈದ ನಲಪಾಡ್, ನಾನು MLA ಹ್ಯಾರಿಸ್ ನಲಪಾಡ್ ರ ಮಗ, ನನ್ನ ಮುಂದೆಯೇ ಕಾಲು ಚಾಚಿ ಕೂರುವಷ್ಟು ಧೈರ್ಯವೇ ನಿನಗೆ , ಎಂದು ಗದರಿಸಿದ ನಲಪಾಡ್ ಕ್ಷಮೆ ಯಾಚಿಸುವಂತೆ ಒತ್ತಾಯಿಸಿದ್ದಾನೆ. ವಿದ್ವತ್ ತನ್ನ ಯಾವುದೇ ತಪ್ಪಿಲ್ಲ , ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದಾನೆ. ಈ ವೇಳೆ ನಲಪಾಡ್ ಮತ್ತು ಆತನ ಸ್ನೇಹಿತರು ಕ್ಷಮೆ ಕೇಳಲೇಬೇಕೆಂದು ವಿದ್ವತ್ ಗೆ ಗದರಿಸಿದ್ದಾರೆ. ಈ ವೇಳೆ ಒಲ್ಲೆ ಎಂದ ವಿದ್ವತ್ ಗೆ ಏಕಾಏಕಿ ದಾಳಿ ನಡೆಸಿದ್ದಾರೆ.

ಕುರ್ಚಿ ಮತ್ತು ಬಿಯರ್ ಬಾಟಲಿಗಳಿಂದ ಹಲ್ಲೆ..!

ಕ್ಷಮೆ ಕೇಳುವಂತೆ ಒತ್ತಾಯಿಸಿದ ನಲಪಾಡ್ ಮತ್ತು ಆತನ ಸ್ನೇಹಿತರು ವಿದ್ವತ್ ನ ಮೇಲೆ ಏಕಾಏಕಿ ಬಿಯರ್ ಬಾಟಲಿ ಮತ್ತು ಪಕ್ಕದಲ್ಲೇ ಇದ್ದ ಕುರ್ಚಿಗಳಿಂದ ಹಲ್ಲೆ ನಡೆಸಿದ್ದಾರೆ‌‌. ಈ ವೇಳೆ ವಿದ್ವತ್ ಸಾರಿ‌‌…ಸಾರಿ…ಸಾರಿ… ಎಂದು ಎಷ್ಟೇ ಕೇಳಿಕೊಂಡರೂ ಬಿಡದ ನಲಪಾಡ್ ಮತ್ತು ಆತನ ಸ್ನೇಹಿತರು ವಿದ್ವತ್ ಗೆ ಥಳಿಸಿದ್ದಾರೆ. ಈ ವೇಳೆ ವಿದ್ವತ್ ಪ್ರತಿರೋಧ ತೋರಿಸಿದರೂ ಪ್ರಯೋಜನವಾಗಲಿಲ್ಲ. ಯಾಕೆಂದರೆ ಅದಾಗಲೇ ವಿದ್ವತ್ ಗೆ ಹಿಗ್ಗಾ ಮುಗ್ಗ ಮುಖ-ಎದೆ ಭಾಗ ಮತ್ತು ಹೊಟ್ಟೆಗೆ ಏಟು ನೀಡಿದ್ದ ನಲಪಾಡ್ ವಿದ್ವತ್ ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ನಲಪಾಡ್ ಮತ್ತು ಆತನ ಸ್ನೇಹಿತರು ನಡೆಸಿದ ಹಲ್ಲೆ ಗೆ ವಿದ್ವತ್ ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ.

ಕಾಲಿಗೆ ಕಿಸ್ ಕೊಡುವಂತೆ ಬೆದರಿಕೆ..!

ತನ್ನೆದುರು ಕಾಲು ಚಾಚಿ ಕೂತಿದ್ದ ಎಂಬ ಕಾರಣಕ್ಕೆ ಅಮಾಯಕ ಯುವಕ ವಿದ್ವತ್ ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಲ್ಲದೆ , ತನ್ನ ಕಾಲಿಗೆ ಮುತ್ತಿಕ್ಕುವಂತೆ ಬೆದರಿಕೆಯೊಡ್ಡಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆಸಿದ ನಲಪಾಡ್ ವಿದ್ವತ್ ಗೆ ಬೆದರಿಕೆಯೊಡ್ಡಿರುವ ಘಟನೆಯೂ ನಡೆದಿದೆ. ನಲಪಾಡ್ ನ ಸ್ನೇಹಿತರು ಸೇರಿ ವಿದ್ವತ್ ಗೆ ನಲಪಾಡ್ ನ ಕಾಲುಗಳಿಗೆ ಮುತ್ತಿಕ್ಕುವಂತೆ ಒತ್ತಾಯ ಮಾಡಿದ್ದಾರೆ. ಆದರೆ ಈ ಬಗ್ಗೆಯೂ ನಿರಾಕರಿಸಿದ ವಿದ್ವತ್ ಗೆ ಹಿಗ್ಗಾ ಮುಗ್ಗ ಥಳಿಸಿದ್ದಾರೆ.  ಈ ಬಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿಯುವ ವಿದ್ವತ್ ಮತ್ತು ಆತನ ಸಹೋದರ ಸಾತ್ವಿಕ್ ಸತ್ಯಾಂಶ ಬಿಚ್ಚಿಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ವಿದ್ವತ್ ಶನಿವಾರದಿಂದ ಸರಿಯಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ.

ಗುರುರಾಜ್ ಕುಮಾರ್ ಬಾರದೇ ಇದ್ದರೆ ಕೊಲೆ ಮಾಡುತ್ತಿದ್ದರು..!

ರೆಸ್ಟೋರೆಂಟ್ ನಲ್ಲಿ ಮನಸ್ಸೋ ಇಚ್ಛೆ ಬಂದಂತೆ ಥಳಿಸಿದ್ದ ನಲಪಾಡ್ ಮತ್ತು ಆತನ ಸ್ನೇಹಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ವತ್ ಗೆ ಮತ್ತೆ ಹಲ್ಲೆ ನಡೆಸಲು ಮುಂದಾಗಿದ್ದರು. ಆದರೆ ಈ ವೇಳೆ ಆಸ್ಪತ್ರೆಯಲ್ಲೇ ಇದ್ದ ಗುರು ರಾಜ್ ಕುಮಾರ್ ರವರನ್ನು ಕಂಡ ನಲಪಾಡ್ ಮತ್ತು ಆತನ ಗ್ಯಾಂಗ್ ಆಸ್ಪತ್ರೆಯಿಂದ ಕಾಲ್ಕಿತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ವಿದ್ವತ್ ಸಹೋದರ ಸಾತ್ವಿಕ್ ‘ಗುರು ರಾಜ್ ಕುಮಾರ್ ರವರು ನಮ್ಮ ಜೊತೆ ಇರದಿರುತ್ತಿದ್ದರೆ ನಮ್ಮನ್ನು ಆಸ್ಪತ್ರೆಯಲ್ಲೇ ಸಾಯಿಸುತ್ತಿದ್ದರು ನಲಪಾಡ್’ ಎಂದು ದೂರಿದ್ದಾರೆ. ಗಂಭೀರವಾಗಿ ಗಾಯಗೊಂಡ ವಿದ್ವತ್ ನನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ಹುಡುಗಿಯರ ಮುಂದೆ ಶೋಕಿಗಾಗಿ ನಡೀತಾ ಹಲ್ಲೆ..?

ಹೌದು, ನಲಪಾಡ್ ಗೆ ಹುಡುಗಿರ ಹುಚ್ಚು ಹೆಚ್ಚಾಗೇ ಇತ್ತು. ರಾತ್ರಿ ಪಾರ್ಟಿಗಳಿಗೆ ಹೋಗಿ ಮಜಾ ಮಾಡುತ್ತಿದ್ದ ನಲಪಾಡ್ ಮತ್ತು ಆತನ ಗ್ಯಾಂಗ್ ನಲ್ಲಿ ಹುಡುಗಿಯರ ಶೋಕಿಯೂ ಹೆಚ್ಚಾಗಿ ಇತ್ತು. ರೆಸ್ಟೋರೆಂಟ್ ನಲ್ಲಿ ಕೂಡಾ ಪಾರ್ಟಿ ಮಾಡಲು ಬಂದ ಹುಡುಗಿಯರ ಜೊತೆ ಸರಸವಾಡುತ್ತಿದ್ದ ನಲಪಾಡ್ ವಿದ್ವತ್ ನ ಜೊತೆ ವಾಗ್ವಾದಕ್ಕೆ ಇಳಿಯುವ ಸಂದರ್ಭದಲ್ಲೂ ಆತನ ಸ್ನೇಹಿತರು ‘ಪ್ರಿನ್ಸ್ ಪ್ರಿನ್ಸ್’ ಎಂದು ಕರೆಯುತ್ತಿದ್ದರು. ಪಕ್ಕದಲ್ಲೇ ನಿಂತಿದ್ದ ಹುಡುಗಿಯರು ತನ್ನನ್ನು ನೋಡುತ್ತಿದ್ದಾರೆ ಎಂದು ತಿಳಿದ ನಲಪಾಡ್ ಸ್ವಲ್ಪ ಜೋರಾಗೇ ತನ್ನ ಗೂಂಡಾಗಿರಿ ತೋರಿಸಿದ್ದಾನೆ.

ಮಾಡಿದ ತಪ್ಪಿಗೆ ಪಶ್ಚಾತ್ತಾಪನೇ ಇಲ್ಲ..!

ಅಮಾಯಕ ಯುವಕನ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ ನಲಪಾಡ್ ಗೆ ತಾನು ಮಾಡಿರುವ ತಪ್ಪಿನ ಬಗ್ಗೆ ಚೂರು ಪಶ್ಚಾತ್ತಾಪ ಇಲ್ಲ. ಯಾಕೆಂದರೆ ತನ್ನ ತಂದೆ ಕಾಂಗ್ರೆಸ್ ಶಾಸಕ, ರಾಜ್ಯದಲ್ಲಿ ಆಡಳಿತ ಇರುವುದು ಕಾಂಗ್ರೆಸ್ ಸರಕಾರ. ಇದೇ ಕಾರಣದಿಂದ ನನ್ನನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಅಹಂಕಾರದಿಂದ ವರ್ತಿಸುತ್ತಿರುವ ನಲಪಾಡ್ ಪೋಲೀಸರ ಮುಂದೆಯೂ ಬಹಳ ದರ್ಪದಿಂದಲೇ ವರ್ತಿಸುತ್ತಿದ್ದ. ತನ್ನ ತಂದೆ ಕಾಂಗ್ರೆಸ್ ಶಾಸಕ ಹ್ಯಾರಿಸ್ ನಲಪಾಡ್ ರವರ ಅಧಿಕಾರದ ಬಲದಿಂದ ತಾನು ಯಾವುದೇ ಶಿಕ್ಷೆ ಅನುಭವಿಸದೆ ಬೇಲ್ ಪಡೆದು ಹೊರಬರುತ್ತೇನೆ ಎಂಬ ಅಹಂಕಾರದಿಂದಲೇ ನಡೆದುಕೊಳ್ಳುತ್ತಿದ್ದ.

ಕಾಂಗ್ರೆಸ್ ನ ನಾಯಕರ ಅಧಿಕಾರದ ಅಟ್ಟಹಾಸಕ್ಕೆ ರಾಜ್ಯದ ಜನ ಬಲಿಯಾಗುತ್ತಿದ್ದಾರೆ. ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವ ಕಾಂಗ್ರೆಸ್ ನಾಯಕರು ತಮ್ಮ ಕುಟುಂಬದವರಿಗೂ ರಕ್ಷಣೆ ನೀಡುತ್ತಿದ್ದಾರೆ. ನಲಪಾಡ್ ನಂತಹ ಗೂಂಡಾಗಳಿಗೆ ಶಿಕ್ಷೆಯಾಗಲೇಬೇಕು. ಆದರೆ ಅಧಿಕಾರದಲ್ಲಿ ಇರುವುದು ಅವರದೇ ಕಾಂಗ್ರೆಸ್ ಸರಕಾರ ಆಗಿರುವುದರಿಂದ ಶಿಕ್ಷೆ ಆಗುತ್ತೋ , ರಕ್ಷೆ ಆಗುತ್ತೋ ಎಂಬೂದು ಕಾದು ನೋಡಬೇಕು..!

–ಅರ್ಜುನ್

 

Tags

Related Articles

FOR DAILY ALERTS
 
FOR DAILY ALERTS
 
Close