ಪ್ರಚಲಿತ

ಸ್ಪೋಟಕ ಸುದ್ಧಿ: ಮತ್ತೆ ಮಾಂಸ ತಿಂದು ದೇವಸ್ಥಾನಕ್ಕೆ ತೆರಳಿದ ಸಿದ್ದರಾಮಯ್ಯ!! ಜನಿವಾರಧಾರಿ ಬ್ರಾಹ್ಮಣ ರಾಹುಲ್ ಗಾಂಧಿಯಿಂದಲೂ ಭಾರೀ ಅಪಚಾರ..!!

“ಯಥಾ ರಾಜ ತಥಾ ಪ್ರಜಾ” ಎಂಬ ಮಾತು ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಹೇಳಿ ಮಾಡಿಸಿದಂತಿದೆ. ಈ ಪಕ್ಷದಲ್ಲಿ ರಾಜ ಹೇಗಿರುತ್ತಾನೋ ಅದೇ ರೀತಿ ಪ್ರಜೆಗಳೂ ಇರುತ್ತಾರೆ. ಈ ಪಕ್ಷದಲ್ಲಿ ನೆಹರೂ ಹುಟ್ಟು ಹಾಕಿದ್ದ ಸೋಗಲಾಡಿ ಸಿದ್ದಾಂತ ಹೇಗೆ ಇತ್ತೋ, ಅದೇ ರೀತಿ ಈಗಿನ ಕಾಂಗ್ರೆಸ್ ಕಾರ್ಯಕರ್ತರೂ ಇದ್ದಾರೆ. ಅಂದು ಇಂದಿರಾ ಗಾಂಧಿ ಸೃಷ್ಟಿಸಿದ ಅಹಂಕಾರದ ಆಡಳಿತ ಹೇಗೆ ಇತ್ತೋ ಅದೇ ರೀತಿ ಈಗಲೂ ಕಾಂಗ್ರೆಸ್ ಜನಪ್ರತಿನಿದಿಗಳು ತನ್ನ ಆಡಳಿತವನ್ನು ಅಹಂಕಾರದಿಂದಲೇ ಮೆರೆಯುತ್ತಿದ್ದಾರೆ. ಆದರೆ ಈಗ ರಾಜನಿಂದ ಪ್ರಜೆಗೆ ಹೋಗದೆ, ಮಂತ್ರಿಯ ರಾಜನಿಗೆ ಬುದ್ಧಿ ಹೋಗಿದೆ!!!

ಮಾಂಸಾಹಾರ ಸೇವಿಸಿ ದೇವರ ದರ್ಶನ ಪಡೆದಿದ್ದ ಸಿದ್ದರಾಮಯ್ಯ!

ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಳಿ, ಮೀನು ತಿಂದು ವಿಶ್ವ ವಿಖ್ಯಾತ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಮಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರ್ಜರಿಯಾಗಿ ಕೋಳಿ ಹಾಗೂ ಮೀನು ತಿಂದು ಅಲ್ಲಿಂದ ನೇರವಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನವನ್ನು ಪಡೆದಿದ್ದಾರೆ. ಈ ವಿಚಾರ ಯಾವಾಗ ಬಯಲಿಗೆ ಬಂತೋ ಅಂದಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಬಲಪಂಥೀಯರು ಹಾಗೂ ಭಕ್ತಾದಿಗಳು ಭಾರೀ ಆಕ್ರೋಷವನ್ನು ವ್ಯಕ್ತಪಡಿಸಿದ್ದರು.

ಮುಖ್ಯಮಂತ್ರಿಗಳ ವಿರುದ್ಧ ಮಾಧ್ಯಮಗಳ ಸಹಿತ ಸಾರ್ವಜನಿಕರು ಟೀಕಾಪ್ರಹಾರವನ್ನೇ ನಡೆಸಿದ್ದರು. ನಾಡಿನ ಓರ್ವ ಹಿಂದೂ ಮುಖ್ಯಮಂತ್ರಿಯಾಗಿ ಈ ರೀತಿ ಮಾಡಿದ್ದು ಎಷ್ಟು ಸರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಶ್ನೆಗಳ ಸುರಿಮಳೆಯೇ ಗೈಯಲಾಗಿತ್ತು. ಆದರೆ ಈ ಎಲ್ಲಾ ಪ್ರಶ್ನೆಗಳಿಗೂ ಮುಖ್ಯಮಂತ್ರಿಗಳು ಸಹನೆಯಿಂದ ಕ್ಷಮೆ ಕೇಳುವುದನ್ನು ಬಿಟ್ಟು ಬೇರೆನೇ ಕಥೆ ಕಟ್ಟಲು ಆರಂಭಿಸುತ್ತಾರೆ. “ನಾನು ಮೀನು ಮಾತ್ರವಲ್ಲ, ಕೋಳಿನೂ ತಿಂದಿದ್ದೇನೆ ಏನೀವಾಗ? ಮಾಂಸ ತಿಂದು ದೇವಸ್ಥಾನಕ್ಕೆ ಹೋಗಬಾರದು ಅಂತ ದೇವರು ಹೇಳಿದ್ದಾನಾ? ನಾನು ಮಾಂಸ ತಿಂದು ಹೋಗಿದ್ದೇನೆ, ಇನ್ನೂ ಮಾಂಸ ತಿಂದು ಹೋಗುತ್ತೇನೆ” ಎಂದು ಭಾರೀ ಅಹಂಕಾರದಿಂದಲೇ ಉತ್ತರಿಸುತ್ತಾರೆ ನಮ್ಮ ಘನತೆತೆತ್ತ ಮುಖ್ಯಮಂತ್ರಿಗಳು.

ಮತ್ತೆ ಮಾಂಸಾಹಾರ ಸೇವಿಸಿ ನರಸಿಂಹ ಸ್ವಾಮಿಯ ದರ್ಶನ ಪಡೆದ ಸಿದ್ದು..!

ಧರ್ಮಸ್ಥಳದ ಮಾಂಸಾಹಾರ ಸೇವನೆಯ ಟೀಕೆಯಿಂದ ಪಾಠ ಕಲಿಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗ ಮತ್ತೆ ಅದೇ ದಾರಿಯನ್ನು ಹಿಡಿದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನಕಗಿರಿಯಲ್ಲಿರುವ ಶ್ರೀ ನರಸಿಂಹ ಸ್ವಾಮಿ ದೇವಾಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಕನಕಗಿರಿಯಲ್ಲಿ ನಡೆಯಲಿದ್ದ ರಾಜ್ಯ ಕಾಂಗ್ರೆಸ್‍ನ ಪ್ರಚಾರದ ಜನಾಶಿರ್ವಾದ ಯಾತ್ರೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲ್ಲಿಂದ ದೇವಾಲಯಕ್ಕೆ ತೆರಳಿದ್ದಾರೆ. ಕನಕಗಿರಿಯಲ್ಲಿರುವ ಶ್ರೀ ನರಸಿಂಹ ಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಹೀಗೆ ದೇವಾಲಯಕ್ಕೆ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕನಕಗಿರಿಯಲ್ಲಿದ್ದ ಪ್ರವಾಸಿ ಮಂದಿರದಲ್ಲಿ ಭರ್ಜರಿಯಾಗಿ ಮಾಂಸಾಹಾರಿ ಊಟ ಮಾಡಿ ಅಲ್ಲಿಂದ ದೇವಸ್ಥಾಕ್ಕೆ ಭೇಟಿ ನೀಡಿದ್ದಾರೆ.

ಜನಿವಾರ ಧಾರಿ ಬ್ರಾಹ್ಮಣನಿಂದಲೂ ಭರ್ಜರಿ ಮಾಂಸ ಸೇವನೆ..!!!

ರಾಹುಲ್ ಗಾಂಧಿ ಇತ್ತೀಚೆಗೆ ಗುಜರಾತ್‍ನಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ತಾನೊಬ್ಬ ಬ್ರಾಹ್ಮಣ. ಅದರಲ್ಲೂ ಜನಿವಾರ ಧಾರಿ ಬ್ರಾಹ್ಮಣ ಎಂದೆಲ್ಲಾ ಹೇಳಿದ್ದರು. ಆದರೆ ಈಗ ಕರ್ನಾಟಕದಲ್ಲಿ ಭರ್ಜರಿಯಾಗಿ ಮಾಂಸಾಹಾರಿ ಸೇವಿಸಿ ದೇವಾಲಯಕ್ಕೆ ತೆರಳಿದ್ದಾರೆ. ಈ ಮೂಲಕ ಯಥಾ ಪ್ರಜಾ ತಥಾ ರಾಜ ಎಂಬ ಸಂದೇಶವನ್ನೂ ಸಾರಿದ್ದಾರೆ.

ಕಳೆದ ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಟೆಂಪಲ್ ರನ್ ಶುರುವಿಟ್ಟುಕೊಂಡಿದ್ದರು. ಈ ವೇಳೆ ಗುಜರಾತಿನ ಪ್ರಸಿದ್ಧ ದೇವಾಲಯದ ಶ್ರೀ ಸೋಮನಾಥ ದೇವಾಲಯವನ್ನು ಭೇಟಿ ಮಾಡಿದ್ದರು. ಈ ವೇಳೆ ದೇವಸ್ಥಾನದ ಗಣ್ಯರ ಭೇಟಿಯ ಸಹಿ ನಮೂದಿಸುವ ಪುಸ್ತಕದಲ್ಲಿ ಸಹಿ ಹಾಕುವ ವಿಚಾರದಲ್ಲಿ ಭಾರೀ ವಿವಾದವೇ ಏರ್ಪಟ್ಟಿತ್ತು. ಗುಜರಾತಿನ ಸೋಮನಾಥ ದೇವಾಲಯದಲ್ಲಿ ಸಹಿ ಪುಸ್ತಕದಲ್ಲಿ ಹಿಂದೂಯೇತರ ಪುಟಕ್ಕೆ ಸಹಿ ಹಾಕಿದ್ದರು. ಹೀಗಾಗಿ ರಾಹುಲ್ ಗಾಂಧಿ ಹಿಂದೂನೆ ಅಲ್ಲ ಎಂಬ ವಾದಕ್ಕೆ ಮತ್ತೆ ಬಲ ಸಿಕ್ಕಿತ್ತು.

ವಿವಾದ ಭಾರೀ ಸದ್ದು ಮಾಡುತ್ತಿದ್ದಂತೆಯೇ ಎಚ್ಚೆತ್ತುಕೊಂಡ ರಾಹುಲ್ ಗಾಂಧಿ ತನ್ನ ಜನಿವಾರವನ್ನು ಹೊರಗೆಳೆದು ತೋರಿಸಿ, “ನಾನೊಬ್ಬ ಅಪ್ಪಟ ಬ್ರಾಹ್ಮಣ, ಅದರಲ್ಲೂ ಜನಿವಾರ ಧಾರಿ ಬ್ರಾಹ್ಮಣ” ಎಂದೆಲ್ಲಾ ಹೇಳತೊಡಗಿದರು. ಇದು ಮತ್ತಷ್ಟು ವಿವಾದಕ್ಕೆ ಕಾರಣವಾಗಿತ್ತು. ಮಾತ್ರವಲ್ಲದೆ ಮಾಂಸ ತಿಂದ ಅನೇಕ ಉದಾಹರಣೆಗಳು ರಾಹುಲ್ ಗಾಂಧಿಯವರನ್ನು ಅವಲಂಭಿಸಿವೆ. ಹೀಗಿರುವಾಗ ಬ್ರಾಹ್ಮಣ ಆಗಲು ಅದೇಗೆ ಸಾಧ್ಯ ಎಂದು ವಾದಗಳು ನಡೆಯುತ್ತಿತ್ತು.

ಈವಾಗ ರಾಹುಲ್ ಗಾಂಧಿಯ ಮತ್ತೊಂದು ಮುಖ ಅನಾವರಣವಾಗಿದ್ದು ಭರ್ಜರಿ ಮಾಂಸಾಹಾರ ಸೇವಿಸಿ ನರಸಿಂಹ ಸ್ವಾಮಿಯ ದೇವಾಲಯಕ್ಕೆ ತೆರಳಿ ದೇವರ ದರ್ಶನವನ್ನು ಪಡೆದಿದ್ದಾರೆ.

ಖರ್ಗೆ, ಪರಂ ಸಹಿತ ಎಲ್ಲರೂ ಧರ್ಮದ್ರೋಹಿಗಳೇ..!!!

ಕನಕಾಚಲ ಶ್ರೀ ನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿಯ ತಂಡದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಲೋಕಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಪವರ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಸಹಿತ ಇತರೆ ಗಣ್ಯರೆಲ್ಲರೂ ಸರಿಯಾಗಿಯೇ ಮಾಂಸಾಹಾರ ತಿಂದು ತೇಗಿ ನಂತರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಮೆನು ಏನು ಗೊತ್ತಾ..?

ಕನಕಗಿರಿಯಲ್ಲಿ ನಡೆಯುತ್ತಿದ್ದ ರಾಹುಲ್ ಗಾಂಧಿಯ ಜನಾಶಿರ್ವಾದ ಯಾತ್ರೆಯನ್ನು ಮುಗಿಸಿ ಅಲ್ಲಿಂದ ನೇರವಾಗಿ ಕನಕಗಿರಿಯ ಪ್ರವಾಸಿ ಮಂದಿರಕ್ಕೆ ತೆರಳಿದ್ದ ಕಾಂಗ್ರೆಸ್ ಟೀಂ ಅಲ್ಲಿಯೇ ಊಟವನ್ನು ಮಾಡಿತ್ತು. ಈ ವೇಳೆ ಊಟಕ್ಕಾಗಿ ಜವಾರಿ ಕೋಳಿ ಬಿರಿಯಾನಿ, ಶಾವಿಗೆ ಪಾಯಸ, ಪಜ್ಜಾ, ಪಾವ್ ಬಾಜಿ, ಅನ್ನ ರಸಂ ತಯಾರಾಗಿತ್ತು. ರಾಹುಲ್ ಹಾಗೂ ತಂಡಕ್ಕೆ ಊಟದ ತಯಾರಿಯನ್ನು ಹೊಸಪೇಟೆಯ ಮಲ್ಲಿಗೆ ಹೊಟೇಲ್‍ನಿಂದ ಮಾಡಲಾಗಿತ್ತು.

ಒಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಪ್ರಚಾರದ ನೆಪದಲ್ಲಿ ಕಾಂಗ್ರೆಸ್ ಮಾಡುತ್ತಿರುವ ಟೆಂಪಲ್ ರನ್ ಮುಖವಾಡದಲ್ಲಿ ಭಾರೀ ಅವಾಂತರವನ್ನೇ ನಡೆಸಿದೆ. ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಅನೇಕ ಕಾಂಗ್ರೆಸ್‍ನ ನಾಯಕರು ಮಾಂಸಾಹಾರ ಸೇವಿಸಿ ದೇವಾಲಯಕ್ಕೆ ಭೇಟಿ ನೀಡಿ ಹಿಂದೂ ಧರ್ಮಕ್ಕೆ ಕಳಂಕ ತಂದಿಟ್ಟಿದ್ದಾರೆ. ಇದು ಮುಂದಿನ ಚುನಾವಣೆಯಲ್ಲಿ ಶಾಪವಾಗಿ ಪರಿಣಮಿಸುವುದರಲ್ಲಿ ಯಾವುದೇ ಅಚ್ಚರಿ ಇಲ್ಲ.

-ಸುನಿಲ್ ಪಣಪಿಲ

Tags

Related Articles

Close