ಪ್ರಚಲಿತ

ಸ್ಫೋಟಕ ಸುದ್ದಿ!! ಬಿಜೆಪಿ ಕಾರ್ಯಕರ್ತ ಕದಿರೇಶ್ ಹತ್ಯೆಯ ಹಿಂದೆ ಕಾಂಗ್ರೆಸ್ ನಾಯಕ..!! ಅನಾವರಣವಾಯಿತು ಕಾಂಗ್ರೆಸ್‍ನ ಇನ್ನೊಂದು ಮುಖ!!

ಕರ್ನಾಟಕದಲ್ಲಿ ಕಾಂಗ್ರೆಸ್ ನ ಹಿಂದೂ ವಿರೋಧಿ ನೀತಿಯಿಂದಾಗಿ ಸಾಲು ಸಾಲು ಹಿಂದೂ ಕಾರ್ಯಕರ್ತರ ಕೊಲೆಗಳು ನಡೆಯುತ್ತಲೇ ಇದೆ. ಮುಖ್ಯಮಂತ್ರಿ ಯಾಗಿ ಪಟ್ಟ ಏರುತ್ತಲೇ ಹಿಂದೂಪರ ಸಂಘಟನೆಗಳ ವಿರುದ್ಧ ಗುಡುಗಿದ್ದ ಸಿದ್ದರಾಮಯ್ಯನವರು , ಹಿಂದೂ ಸಂಘಟನೆಗಳ ವಿರುದ್ಧ ನಾವೆಲ್ಲಾ ಒಗ್ಗಟ್ಟಾಗಿ ಹೋರಾಡಬೇಕು ಎಂದು ಕರೆ ಕೊಟ್ಟಿದ್ದರು. ಇದರಿಂದಾಗಿಯೇ ರಾಜ್ಯದಲ್ಲಿ ಹಿಂದೂ ಯುವಕರ ಮೇಲೆ ಹಲ್ಲೆ ಕೊಲೆಗಳು ನಡೆಯುತ್ತಿದೆ..!

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ವಿಫಲವಾಗಿರುದರಿಂಲೇ ಇಂತಹ ಘಟನೆ ನಡೆಯುತ್ತಿದೆ. ಆದ್ದರಿಂದಲೇ ಪದೇ ಪದೇ ರಾಜ್ಯದಲ್ಲಿ ಶಾಂತಿ ಕದಡುತ್ತಿದೆ. ಸಿದ್ದರಾಮಯ್ಯನವರು ಕೇವಲ ಅಲ್ಪಸಂಖ್ಯಾತರ ಓಲೈಕೆಯಲ್ಲೇ ನಿರತರಾಗಿರುವುದರಿಂದ ಹಿಂದೂ ವಿರೋಧಿ ಚಟುವಟಿಕೆಗಳು ತೀವ್ರ ಸ್ವರೂಪ ಒಡೆಯುತ್ತಿವೆ.

ಸಿದ್ದರಾಮಯ್ಯನವರು ಅಧಿಕಾರಕ್ಕೆ ಬರುತ್ತಲೇ , ಕೊಲೆ – ಗಲಭೆಗಳಲ್ಲಿ ಭಾಗಿಯಾಗಿದ್ದ ಮುಸ್ಲಿಮರನ್ನು ಆರೋಪಿಗಳ ಕೇಸ್ ವಾಪಾಸ್ ಪಡೆದು ಪರೋಕ್ಷವಾಗಿ ದುಷ್ಕ್ರತ್ಯ ನಡೆಸಲು ಕುಮ್ಮಕ್ಕು ನೀಡಿದರು. ಸಾವಿರಾರು ಅಲ್ಪಸಂಖ್ಯಾತರ ಕೇಸ್ ಗಳನ್ನು ವಾಪಾಸ್ ಪಡೆಯುವ ಮೂಲಕ ತಾನು ಹಿಂದೂ ವಿರೋಧಿ ಎಂಬೂದನ್ನು ಮತ್ತೆ ಸಾಬೀತುಪಡಿಸಿದರು.

ದಕ್ಷ , ಪ್ರಾಮಾಣಿಕ ಸರಕಾರಿ ಅಧಿಕಾರಿಗಳಿಗೆ ಸರಿಯಾಗಿ ಕಾರ್ಯ ನಿರ್ವಹಿಸಲು ಬಿಡದ ರಾಜ್ಯ ಸರಕಾರದ ಸಚಿವರುಗಳು ಕಿರುಕಳ ನೀಡಿ ಆತ್ಮಹತ್ಯೆ ಮಾಡುವಂತೆ ಮಾಡಿದ್ದರು. ಅದೆಷ್ಟೋ ಅಧಿಕಾರಿಗಳು ಸಚಿವರ ಕಿರುಕಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂತಹ ಘಟನೆಯಲ್ಲೂ ಸಚಿವರ ನೇರ ಕೈವಾಡ ಕಂಡು ಬಂದಿತ್ತಾದರೂ ಸಿದ್ದರಾಮಯ್ಯನವರು ಮಾತ್ರ ತಮ್ಮ ಸಂಪುಟದ ಸಚಿವರ ಪರವಾಗಿಯೇ ಬ್ಯಾಟಿಂಗ್ ನಡೆಸುವ ಮೂಲಕ ಅಪರಾಧಿಗಾಳನ್ನು ರಕ್ಷಿಸತೊಡಗಿದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕದಿರೇಶ್ ಹತ್ಯೆಯಲ್ಲೂ ಕಾಂಗ್ರೆಸ್ ನ ಕೈವಾಡವಿರುವ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಬಿಬಿಎಂಪಿ ಬಿಜೆಪಿ ಸದಸ್ಯೆಯ ಪತಿ , ಪಕ್ಷದ ಕಾರ್ಯಕರ್ತ ಇತ್ತೀಚೆಗೆ ಕೊಲೆಯಾಗಿದ್ದರು. ಆದರೆ ಈ ಕೊಲೆಯಲ್ಲಿ ಚಾಮರಾಜಪೇಟೆಯ ಶಾಸಕ ಜಮೀರ್ ಅಹಮ್ಮದ್ ಶಾಮೀಲಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕದಿರೇಶ್ ಹತ್ಯೆ ಖಂಡಿಸಿ ಮಂಗಳವಾರ ಗೂಡ್ ಶೆಡ್ ರಸ್ತೆಯ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರವಿಕುಮಾರ್ , ‘ರಾಜ್ಯದಲ್ಲಿರುವ ಹಿಂದೂ ಯುವಕರನ್ನೇ ಟಾರ್ಗೆಟ್ ಮಾಡಿ ಕೊಲೆ ಮಾಡಲಾಗುತ್ತಿದೆ. ಆರೆಸ್ಸೆಸ್ , ಬಿಜೆಪಿ ಅಥವಾ ಇನ್ನಿತರ ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡವರನ್ನೇ ಗುರಿಮಾಡಿ ಸಾಯಿಸಲಾಗುತ್ತಿದೆ’ ಎಂದು ಸಿದ್ದರಾಮಯ್ಯನವರ ಸರಕಾರದ ವಿರುದ್ಧ ಆರೋಪಿಸಿದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಸಂತೋಷ್ ಎಂಬ ಯುವಕನ ಕೊಲೆಯಾಗಿತ್ತು. ಈ ಕೊಲೆಯ ಹಿಂದೆ ಸಚುವ ರೋಷನ್ ಬೇಗ್ ಅವರ ಹೆಸರು ಕೇಳಿ ಬಂದಿತ್ತು. ಆದರೆ ಸರಿಯಾದ ತನಿಖೆ ನಡೆಸಲು ಹಿಂದೆ – ಮುಂದೆ ನೋಡುತ್ತಿರುವ ರಾಜ್ಯ ಸರಕಾರ ಅಪರಾಧಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ದಕ್ಷ ಅಧಿಕಾರಿಯಾಗಿದ್ದ ಡಿವೈಎಸ್ ಪಿ ಗಣಪತಿ ಅವರ ಹತ್ಯೆಯಲ್ಲಿ ಸಚಿವ ಕೆಜೆ ಜಾರ್ಜ್ ಕೈವಾಡದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.

ಆದರೆ ಸಿದ್ದರಾಮಯ್ಯನವರು ಮಾತ್ರ ಸಚಿವರ ಪರವಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭ್ರಷ್ಟ ಅಧಿಕಾರಿಗಳನ್ನು ಮತ್ತು ಸಚಿವರನ್ನೇ ನೇಮಿಸಿಕೊಂಡ ಸಿದ್ದರಾಮಯ್ಯನವರು ರಾಜ್ಯದ ಸ್ಥಿತಿಯನ್ನು ಪಾತಾಳಕ್ಕೆ ಕೊಂಡೊಯುತ್ತಿದ್ದಾರೆ..!

ಸದ್ಯ ರಾಜ್ಯ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಹಿಂದೂಗಳ ಮತಗಳಿಸಲು ಓಲೈಕೆಯಲ್ಲಿ ತೊಡಗಿದ್ದಾರೆ. ಕರ್ನಾಟಕದ ದೇವಾಲಯಗಳಿಗೆ ಭೇಟಿ ನೀಡಿ ತನಗೂ ಹಿಂದುತ್ವದ ಬಗ್ಗೆ ಗೌರವವಿದೆ ಎಂದು ತೋರ್ಪಡಿಸುತ್ತಿದ್ದಾರೆ. ಸಿದ್ದರಾಮಯ್ಯನವರ ಹಿಂದೂ ವಿರೋಧಿ ಆಡಳಿತಕ್ಕೆ ಬೇಸತ್ತ ರಾಜ್ಯದ ಜನತೆ ಈಗಾಗಲೇ ನರೇಂದ್ರ ಮೋದಿಯವರ ನೇತ್ರತ್ವದ ಬಿಜೆಪಿಯತ್ತ ಮುಖಮಾಡಿದ್ದು , ಕಾಂಗ್ರೆಸ್ ತಲೆ ನೋವಾಗಿದೆ.

ರಾಜ್ಯದಲ್ಲಿ ಸಾಲು ಸಾಲು ಹಿಂದೂ ಕಾರ್ಯಕರ್ತರ ಕೊಲೆ ನಡೆಯುತ್ತಿದೆ . ಆದರೂ ಈ ಬಗ್ಗೆ ಏನೂ ಮಾತನಾಡದ ರಾಹುಲ್ ಗಾಂಧಿ ಕೇವಲ ತೋರ್ಪಡಿಕೆಗಾಗಿ ಹಿಂದೂ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್ ಆರೋಪಿಸಿದರು. ರಾಜ್ಯದಲ್ಲಿ ಹಿಂದೂಗಳ ಸ್ಥಿತಿ ಶೋಚನೀಯವಾಗಿದೆ. ಕೇವಲ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿರುವ ಸಿದ್ದರಾಮಯ್ಯನವರು ಈ ಬಗ್ಗೆ ಸರಿಯಾದ ಉತ್ತರ ನೀಡಬೇಕೆಂದು ಆಗ್ರಹಿಸಿದರು.

ಬಿಜೆಪಿ ಕಾರ್ಯಕರ್ತ ಕದಿರೇಶ್ ಹತ್ಯೆಯಲ್ಲೂ ಶಾಸಕ ಜಮೀರ್ ಅಹ್ಮದ್ ಪಾತ್ರವಿದೆ ಎಂದು ಎನ್ ರವಿಕುಮಾರ್ ಆರೋಪಿಸಿದ್ದಾರೆ.ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆಯಾದಾಗ ಗ್ರಹ ಸಚಿವ ರಾಮಲಿಂಗ ರೆಡ್ಡಿ ಈ ಹತ್ಯೆ ಉದ್ದೇಶಪೂರ್ವಕವಾಗಿ ನಡೆದಿದ್ದಲ್ಲ , ಸ್ಕ್ರೂ ಡ್ರೈವರ್ ನಿಂದ ಚುಚ್ಚಿ ಕೊಲೆ ಮಾಡಲಾಗಿದೆ ಎಂದು ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದರು. ಆದರೆ ಪೋಲಿಸ್ ತನಿಖೆಯಿಂದ ಚಾಕುವಿನಿಂದ ಇರಿದು ಉದ್ದೇಶಪೂರ್ವಕವಾಗಿಯೇ ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ಬಹಿರಂಗಗೊಂಡಿತ್ತು. ಆದರೆ ತನಿಖೆ ನಡೆಯುವ ಮೊದಲೇ ರಾಜ್ಯದ ಗ್ರಹ ಸಚಿವರೊಬ್ಬರು ಈ ರೀತಿ ಹೇಳಿಕೆ ನೀಡುತ್ತಿರುವುದು ಸರಕಾರದ ಧೋರಣೆಯನ್ನು ತೋರಿಸುತ್ತದೆ.

ಇದೇ ರೀತಿ ಕದಿರೇಶ್ ಹತ್ಯೆಯನ್ನೂ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪ ಮಾಡಿದ ಎನ್ ರವಿಕುಮಾರ್ ರಾಜ್ಯದ ಸ್ಥಿತಿ ಸಂಪೂರ್ಣವಾಗಿ ಕುಸಿದಿದೆ. ರಾಜ್ಯ ಸರಕಾರ ಕೇವಲ ಒಂದು ವರ್ಗದ ಜನರ ಓಲೈಕೆಯಲ್ಲಿ ತೊಡಗಿದೆ. ಇಂತಹ ಸ್ಥಿತಿ ಕರ್ನಾಟಕದಲ್ಲಿ ಹಿಂದೆಂದೂ ನಡೆದಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಿದ್ದರಾಮಯ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಸಾಲು ಸಾಲು ಹಿಂದೂ ಯುವಕರ ಕೊಲೆ ನಡೆಯುತ್ತಿದೆ. ರಾಜ್ಯದ ಜನರ ಸ್ಥಿತಿ ಹದಕೆಟ್ಟಿದೆ. ಕಾನೂನು ಕಾಪಾಡಬೇಕಿದ್ದ ಸರಕಾರವೇ ಹಗರಣ , ಕೊಲೆಗಳಲ್ಲಿ ಭಾಗಿಯಾಗುತ್ತಿದ್ದು ಕರ್ನಾಟಕದ ವಿಪರ್ಯಾಸವೇ ಸರಿ..!

–ಅರ್ಜುನ್

 

Tags

Related Articles

Close