ಪ್ರಚಲಿತರಾಜ್ಯ

ಸ್ಫೋಟಕ ಸುದ್ಧಿ: ಬಯಲಾಯ್ತು ಮತ್ತೊಬ್ಬ ಮಂತ್ರಿಯ ಐಷಾರಾಮಿ ಜೀವನ!! ಮುಖ್ಯಮಂತ್ರಿಯ ನಂತರ ದುಬಾರಿ ವಾಚ್ ಪ್ರಿಯ ಮಂತ್ರಿ ಯಾರು ಗೊತ್ತಾ?!

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಯಾವಾಗ ಅಧಿಕಾರಕ್ಕೆ ಬಂತೋ ಆ ದಿನದಿಂದಲೇ ರಾಜ್ಯದಲ್ಲಿ ಅಭಿವೃದ್ಧಿ ಎಂಬೂದು ಮರಿಚಿಕೆಯಾಗಿದೆ. ಯಾಕೆಂದರೆ ಸಿದ್ದರಾಮಯ್ಯನವರ ಆಡಳಿತದಲ್ಲಿ ಸಾಮಾನ್ಯ ಜನರು ತಲೆ ಎತ್ತಿ ನಡೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಾನು ಸಮಾಜವಾದಿ , ಬಡವರ ಪರ ಎಂದು ಹೇಳಿಕೊಂಡು ಅಧಿಕಾರ ವಹಿಸಿಕೊಂಡ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗುತ್ತಲೇ ಎಲ್ಲವನ್ನೂ ಮರೆತು ಐಶಾರಾಮಿ ಜೀವನದ ಕಡೆ ವಾಲಿಕೊಂಡರು.

ತನ್ನ ಸಂಪುಟದಲ್ಲಿ ಭ್ರಷ್ಟ ಅಧಿಕಾರಿಗಳನ್ನೇ ಇಟ್ಟುಕೊಂಡ ಸಿದ್ದರಾಮಯ್ಯನವರು ತಮಗೆ ಬೇಕಾದ ರೀತಿಯಲ್ಲಿ ಸರ್ವಾಧಿಕಾರದ ಆಡಳಿತ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಿಂದೆ ದುಬಾರಿ ವಾಚ್ ಕಟ್ಟಿಕೊಳ್ಳುವ ಮೂಲಕ ರಾಜಕೀಯ ವಲಯದಲ್ಲಿ ತೀವ್ರ ವಿವಾದಕ್ಕೀಡಾಗಿದ್ದರು.

ಅಧಿಕಾರದ ಅವಧಿಯಲ್ಲಿ ಈ ರೀತಿಯ ದುಬಾರಿ ವಾಚ್ ಕಟ್ಟಿಕೊಂಡು ಮೆರೆಯುತ್ತಿದ್ದ ಸಿದ್ದರಾಮಯ್ಯನವರು , ಈ ವಾಚ್ ನ್ನು ಉಡುಗೊರೆಯಾಗಿ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದರು. ಆದರೆ ಯಾವುದೇ ರೀತಿಯ ಸಂಬಂಧ ಇಲ್ಲದೇ ಸುಮಾರು ೭೦ ಲಕ್ಷ ರೂಪಾಯಿಯ ವಾಚ್ ಉಡುಗರೆಯಾಗಿ ನೀಡುತ್ತಾರೆ ಎಂದರೆ ಯಾರಿಗೂ ಕೂಡ ಸಂಶಯ ಬರದೇ ಇರುವುದಿಲ್ಲ.

ಈ ಬಗ್ಗೆ ದೇಶಾದ್ಯಂತ ಚರ್ಚೆಯಾಗಿತ್ತು. ದುಬಾರಿ ವಾಚ್ ಉಡುಗೊರೆಯಾಗಿ ಪಡೆದ ಸಿದ್ದರಾಮಯ್ಯನವರು ಅದಕ್ಕೆ ಪ್ರತಿಯಾಗಿ ಇನ್ನೂ ದುಬಾರಿ ಉಡುಗೊರೆಯನ್ನು ದುಬೈ ಉದ್ಯಮಿಗೆ ನೀಡಿದ್ದಾರೆ ಎಂದು ಸ್ವತಃ ಮಾಜಿ ಡಿ ವೈ ಎಸ್ ಪಿ ಅನುಪಮಾ ಶೆಣೈ ಆರೋಪಿಸಿದ್ದರು. ಸಿದ್ದರಾಮಯ್ಯನವರು ಯಾವುದೇ ಪ್ರತಿಫಲ ಇಲ್ಲದೆ ಈ ಉಡುಗೊರೆಯನ್ನು ಪಡೆಯಲಿಲ್ಲ.

ಬದಲಾಗಿ ದುಬೈ ನ ಉದ್ಯಮಿ ಒಬ್ಬರಿಗೆ ಉಡುಪಿಯ ಆಸ್ಪತ್ರೆಯ ಮತ್ತು ಜೋಗ್ ಫಾಲ್ಸ್ ನ ಅಭಿವೃದ್ಧಿಗೆ ಸಂಬಂಧಿಸಿದಂತೆ ಈ ಎರಡು ಯೋಜನೆಗಳ ಗುತ್ತಿಗೆಯನ್ನು ದುಬೈ ಮೂಲದ ಉದ್ಯಮಿಯ ಕಂಪನಿಗೆ ನೀಡಿದ್ದರು. ರಾಜ್ಯ ಸರಕಾರ ಈ ಎರಡು ಯೋಜನೆಗಳಿಗೆ ಕೈ ಹಾಕಿತ್ತು, ಈ ಅಭಿವೃದ್ಧಿ ಕಾರ್ಯಗಳ ಗುತ್ತಿಗೆಯನ್ನು ದುಬೈ ಮೂಲದ ಉದ್ಯಮಿಗೆ ನೀಡಿದ್ದರಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ೭೦ ಲಕ್ಷ ಬೆಲೆಬಾಳುವ ದುಬಾರಿ ವಾಚ್ ಉಡುಗೊರೆಯಾಗಿ ನೀಡಲಾಗಿದೆ ಎಂದು ಅನುಪಮಾ ಶೆಣೈ ಗಂಭೀರವಾಗಿ ಆರೋಪಿಸಿದ್ದರು.

ಸಿದ್ದರಾಮಯ್ಯನವರ ಮೇಲೆ ಈ ರೀತಿಯ ಗಂಭೀರ ಆರೋಪ ಕೇಳಿಬರುತ್ತಲೇ ಈ ಬಗ್ಗೆ ಸಿದ್ದರಾಮಯ್ಯನವರು ವಾಚ್ ನ್ನು ಸರಕಾರಕ್ಕೆ ಮರಳಿಸುವ ಮೂಲಕ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ನಡೆಸಿದ್ದರು. ಆದರೆ ಇದೀಗ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ರಾಯರೆಡ್ಡಿ ಯವರು ಕೂಡಾ ಲಕ್ಷ ಲಕ್ಷ ಬೆಲೆಬಾಳುವ ವಾಚ್ ಧರಿಸಿ ಮತ್ತೆ ವಿವಾದಕ್ಕೀಡಾಗಿದ್ದಾರೆ.

ಇತ್ತೀಚೆಗೆ ಎಪಿಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕ ಪ್ರವಾಸ ಕೈಗೊಂಡ ವೇಳೆ ಬಸವರಾಜ್ ರಾಯರೆಡ್ಡಿ ಸುಮಾರು ೩ ಲಕ್ಷ ರೂಪಾಯಿ ಬೆಲೆಯ ‘ಒಮೆಗಾ ಸಿ ಮಾಸ್ಟರ್’ ಕಂಪನಿಯ ವಾಚ್ ಧರಿಸಿದ್ದರು. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ.

ಜನಪರ ಯಾವುದೇ ಯೋಜನೆಗಳು ಜಾರಿಯಾಗುತ್ತಿಲ್ಲ. ಬಸವರಾಜ್ ರಾಯರೆಡ್ಡಿ ಯವರ ಕ್ಷೇತ್ರವಾದ ಯಲಬರ್ಗಾ ದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಜನರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ. ಆದರೆ ಸಚಿವರು , ಶಾಸಕರು ಮಾತ್ರ ಐಶಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದಾರೆ.

ಬಸವರಾಜ್ ರಾಯರೆಡ್ಡಿ ಯವರಿಗೆ ಈ ದುಬಾರಿ ಬೆಲೆಯ ವಾಚ್ ಯಾರಾದರೂ ಉಡುಗೊರೆಯಾಗಿ ನೀಡಿದ್ದಾರಾ ಅಥವಾ ಸ್ವತಃ ಅವರೇ ಖರೀದಿಸಿದ್ದಾರಾ ಎಂಬ ಸ್ಪಷ್ಟ ಮಾಹಿತಿ ಬಹಿರಂಗಗೊಂಡಿಲ್ಲ.

ಇಷ್ಟು ದುಬಾರಿ ಬೆಲೆಯ ವಾಚ್ ಕಟ್ಟುವುದು ನೋಡಿದ್ರೆ ಬಸವರಾಜ್ ರಾಯರೆಡ್ಡಿ ಅವರು ರಾಯಲ್ ಲೈಫ್ ನಡೆಸುತ್ತಿದ್ದಾರೆ ಅನ್ನೋದು ಮಾತ್ರ ಸ್ಪಷ್ಟವಾಗುತ್ತದೆ.

ಈ ಮೊದಲು ಸಿಎಂ ಸಿದ್ದರಾಮಯ್ಯ ಬೆಲೆ ಬಾಳುವ ಹುಬ್ಲೋಟ್ ವಾಚ್ ಧರಿಸಿದ್ದು, ಸಾಕಷ್ಟು ವಿವಾದವನ್ನು ಹುಟ್ಟಿ ಹಾಕಿತ್ತು. ಸಮಾಜವಾದಿ ಅಂತಾ ಹೇಳುತ್ತಾ ಮುಖ್ಯಮಂತ್ರಿಗಳು ದುಬಾರಿ ಬೆಲೆಯ ವಾಚ್ ಕಟ್ತಾರೆ ಅಂತಾ ವಿರೋಧ ಪಕ್ಷಗಳು ಟೀಕಿಸಿದ್ದವು. ವಾಚ್ ಪ್ರಕರಣ ರಾಜಕೀಯ ವಲಯದಲ್ಲಿ ತೀವ್ರ ವಿವಾದಕ್ಕೆ ಒಳಗಾಗುತ್ತಿದ್ದಂತೆ ಸಿಎಂ ವಾಚ್ ಸರ್ಕಾರದ ವಶಕ್ಕೆ ನೀಡುವ ಮೂಲಕ ಎಲ್ಲಾ ಗೊಂದಲಗಳಿಗೆ ಅಂತ್ಯ ಹಾಡಿದ್ದರು.

–ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close