ಅಂಕಣ

ಭಾರತದ ಅನ್ಯನ್ಯ ಕಲಾಕೃತಿ ಮತ್ತು ಬೆಲೆಬಾಳುವ ಮೂರ್ತಿಗಳನ್ನು ಕದ್ದು ಇಟಲಿಗೆ ಸಾಗಿಸಿ ತನ್ನ ಪರಿವಾರ ಮಾತ್ರವಲ್ಲ ಇಡಿಯ ಇಟಲಿಯನ್ನೆ ಶ್ರೀಮಂತವಾಗಿಸಿದರು ಮೇಡಮ್ ಜಿ!!

 

ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹರಿದಾಡಿತ್ತು. ಯೂಪಿಎ ಅಡಳಿತದ ಹತ್ತು ವರ್ಷದ ಅವಧಿಯಲ್ಲಿ ಇಟಲಿಯ ಆರ್ಥಿಕತೆ 1.79 ಟ್ರಿಲಿಯನ್ ಡಾಲರ್ ಗಳಿಂದ 2.13 ಟ್ರಿಲಿಯನ್ ಡಾಲರ್ ಏರಿಕೆಯಾಗಿತ್ತಂತೆ. ಅಂದರೆ ಇಟಲಿಯ ಆರ್ಥಿಕತೆಯಲ್ಲಿ ಬರೋಬ್ಬರಿ 16% ಹೆಚ್ಚಳವಾಗಿತ್ತು! ಅದೆ 2014 ರ ನಂತರ, ಅದೆ ಮೋದಿ ಸರಕಾರ ಬಂದ ಮೇಲೆ ಇಟಲಿಯ ಆರ್ಥಿಕತೆ 2.13 ಟ್ರಿಲಿಯನ್ ಡಾಲರಿನಿಂದ ಸೀದಾ 1.81 ಟ್ರಿಲಿಯನ್ ಡಾಲರಿಗೆ ಕೆಳಮುಖವಾಗಿ ಡೈವ್ ಹೊಡೆದಿದೆ. ಅಂದರೆ ಇಟಲಿಯ ಆರ್ಥಿಕತೆಯಲ್ಲಿ 15% ಇಳಿಕೆ ಕಂಡು ಬಂದಿದೆ!! ಇದು ಕಾಕತಾಳೀಯ ಆಗಿರಬಹುದೆ ಅಥವಾ ನಿಜವಾಗಿಯೂ ಯೂಪಿಎ ಕಾಲದಲ್ಲಿ ಇಟಲಿಯ ಆದಾಯದಲ್ಲಿ ಹೆಚ್ಚಳ ದಾಖಲಾಗಿದ್ದಿರಬಹುದೆ?

ಇದು ಸತ್ಯವಾಗಿರಲು ಸಾಧ್ಯ. ಇಟಲಿ ಕಾಂಗ್ರೆಸಿನ ಮೇಡಮ್ ಜಿಯವರ ತವರು ಮನೆ. ಒಬ್ಬ ಹೆಣ್ಣು ತವರು ಮನೆಯ ಪ್ರೀತಿ ಯಾವತ್ತಿಗೂ ತೊರೆಯುವುದಿಲ್ಲ. ಹಾಗೆ ಮೇಡಮ್ ಜಿ ಕೂಡಾ ತನ್ನ ತವರು ಮನೆಯ ನಂಟನ್ನು ಬಿಟ್ಟಿಲ್ಲ. ಈಗಿನಿಂದಲ್ಲ ಮೋಡಮ್ ಜಿ ಗಾಂಧಿ ಪರಿವಾರದ ಸೊಸೆಯಾಗಿ ಬಂದ ಮರುಘಳಿಗೆಯಿಂದಲೂ ಮೇಡಮ್ ಜಿ ಭಾರತವನ್ನು ಕೊಳ್ಳೆ ಹೊಡೆದು ಇಟಲಿಯ ತನ್ನ ತಾಯಿ-ತಂಗಿಯರನ್ನು ಕೋಟ್ಯಾಧಿಪತಿಯನ್ನಾಗಿಸಿದ್ದಾರೆ. ಯಕಶ್ಚಿತ್ ಬಡಗಿಯ ಮಗಳು ಹೊಟ್ಟೆಪಾಡಿಗಾಗಿ ಬಾರಿನಲ್ಲಿ ನರ್ತಿಸುತ್ತಿದ್ದಾಕೆ ಇವತ್ತು ಶ್ರೀಮಂತಿಕೆಯಲ್ಲಿ ಬ್ರಿಟನಿನ ರಾಣಿಯನ್ನೂ ಹಿಂದಿಕ್ಕಿದ್ದಾರೆಂದರೆ ಯಾವ ಮಟ್ಟದಲ್ಲಿ ಆಕೆ ಭಾರತವನ್ನು ಕೊಳ್ಳೆ ಹೊಡೆದಿರಬಹುದು ಊಹಿಸಿ.

ತನ್ನ ಅತ್ತೆ ಪ್ರಧಾನಮಂತ್ರಿಯಾಗಿದ್ದ ಕಾಲದಲ್ಲೆ ಮೇಡಮ್ ಜಿ ಭಾರತದ ಬೆಲೆಬಾಳುವ ಕಲಾಕೃತಿ ಮತ್ತು ದೇವರ ಮೂರ್ತಿಗಳನ್ನು ಇಟಲಿಗೆ ಕದ್ದು ಸಾಗಿಸುತ್ತಿದ್ದರೆನ್ನುವುದನ್ನು CBI ದಾಖಲೆಗಳು ಸಾರಿ ಸಾರಿ ಹೇಳುತ್ತವೆ. ಆ ಕಾಲದಲ್ಲೆ ದೆಹಲಿ ಮತ್ತು ಚೆನ್ನೈನ ವಿಮಾನ ನಿಲ್ದಾಣಗಳಿಂದ ಏರ್ ಇಂಡಿಯಾ ಮತ್ತು ಅಲಿತಾಲಿಯಾ ವಿಮಾನಗಳಲ್ಲಿ ಈ ಕಲಾಕೃತಿಗಳನ್ನು ಯವುದೆ ತಪಾಸಣೆಯಿಲ್ಲದೆ ನೇರವಾಗಿ ಇಟಲಿಗೆ ಸಾಗಿಸಲಾಗುತ್ತಿತ್ತು. ಈ ಕಾರ್ಯದಲ್ಲಿ ಮೇಡಮ್ ಜಿಗೆ ಸಹಾಯ ಮಾಡುತ್ತಿದ್ದುದು ಸರಕಾರದಲ್ಲಿ ಸಾಂಸ್ಕೃತಿಕ ಮಂತ್ರಿಯಾಗಿದ್ದ ಅರ್ಜುನ್ ಸಿಂಗ್.

ವಿಮಾನಗಳಲ್ಲಿ ಸಾಗಿಸುತ್ತಿದ್ದ ಈ ಕಲಾಕೃತಿ ಮತ್ತು ಮೂರ್ತಿಗಳನ್ನು ಮೇಡಮ್ ಜಿ ಯ ತಂಗಿ ಅಲೆಸ್ಸಾಂಡ್ರಾ ಮಾಯಿನೋ ವಿನ್ಸಿಯ ಬಳಿ ತಲುಪಿಸಲಾಗುತ್ತಿತ್ತು. ನಂತರ ಇಟಲಿಯ ರಿವೋಲ್ಟಾದಲ್ಲಿರುವ ‘ಎಥೆನಿಕಾ’ ಮತ್ತು ಓರ್ಬಸಾನೊ ಎಂಬಲ್ಲಿರುವ ‘ಗಣಪತಿ’ ಎಂಬ ಪುರಾತನ ವಸ್ತುಗಳನ್ನು ಮಾರುವ ಅಂಗಡಿಗಳಲ್ಲಿ ಇಡಲಾಗುತ್ತಿತ್ತು. ಅಲ್ಲಿಂದ ಸುಳ್ಳು ರಶೀತಿ ತಯಾರಿಸಿ ಲಂಡನಿನ ‘ಸೋಥಬೇಯ್ಸ್ ಅಂಡ್ ಕ್ರಿಸ್ಟೀಸ್’ ಎಂಬ ಅಂಗಡಿಗೆ ಸಾಗಿಸಿ ಅಲ್ಲಿ ಈ ಕಲಾಕೃತಿಗಳನ್ನು ಹರಾಜು ಮಾಡಲಾಗುತ್ತಿತ್ತು. ಹರಾಜಿನಿಂದ ಬಂದ ಹಣವನ್ನು ನೇರವಾಗಿ ರಾಹುಲ್ ಗಾಂಧಿಯ ಲಂಡನಿನ ವೆಸ್ಟ್ ಮಿನಿಸ್ಟರ್ ಬ್ಯಾಂಕ್, ಹಾಂಕಾಂಗ್ ಮತ್ತು ಶಾಂಘಾಯಿಯಲ್ಲಿರುವ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತಿತ್ತು. ಅತ್ಯಾಧಿಕ ಹಣವನ್ನು ಅಮೆರಿಕಾದಲ್ಲಿರುವ ಸೈಮನ್ ಐಸಲ್ಯಾಂಡ್ ಬ್ಯಾಂಕಿಗೆ ವರ್ಗಾಯಿಸಲಾಗಿತ್ತು. ಇದೆ ಬ್ಯಾಂಕಿನಿಂದ ರಾಹುಲನ ಹಾರ್ವರ್ಡ್ ವಿಶ್ವವಿದ್ಯಾಲಯದ ಶುಲ್ಕ ತುಂಬಲಾಗಿತ್ತು!!

ಮೂರನೆ ಕ್ಲಾಸ್ ಪಾಸ್ ಕೂಡಾ ಆಗಿರದ ಮೇಡಮ್ ಜಿ ಬಳಿ ಯಾವುದೆ ವಿಶೇಷ ಪ್ರತಿಭೆ ಇರಲಿಲ್ಲ ಅದಕ್ಕಾಗಿಯೆ ಆಕೆ ತನ್ನನ್ನು ತಾನು ಸ್ವಯಂಭೂ ವಾಸ್ತುಕಲಾ ನಿಪುಣೆ ಎಂದು ಘೋಷಿಸಿಕೊಂಡು ಭಾರತದ ಸಾಂಸ್ಕೃತಿಕ ಇಲಾಖೆಯಲ್ಲಿ ನುಗ್ಗಿದ್ದರು. ಇವರ ಕಳ್ಳ ಕೆಲಸಗಳಲ್ಲಿ ಇವರಿಗೆ ಬೆನ್ನುಲುಬಾಗಿ ನಿಂತಿದ್ದು ಆಗಿನ ಚುನಾವಣಾ ಆಯೋಗದ ಅಧ್ಯಕ್ಷ ನವೀನ್ ಚಾವ್ಲಾ ಅವರ ಹೆಂಡತಿ ರೂಪಿಕಾ ಚಾವ್ಲಾ ಅವರು. ಅತ್ತ ಇಟಲಿಯ ಸರಕಾರದ ಸಾಂಸ್ಕೃತಿಕ ಪದಾಧಿಕಾರಿಯೊಬ್ಬರು ಮೇಡಮ್ ಜಿಗೆ ಶ್ಯಾಣೆ “ದೋಸ್ತು” ಆಗಿದ್ದರು. ಅವರು ಮೆಡಮ್ ಜಿ ಯ ಈ ಘನ ಕಾರ್ಯದಲ್ಲಿ ಸಹಾಯ ನೀಡುತ್ತಿದ್ದರು. CBI ಈ ವಿಷಯದ ಬಗ್ಗೆ ತನಿಖೆ ನಡೆಸಿದ ಮೇಲೆ ಅವರನ್ನು ಪದಚ್ಯುತಗೊಳಿಸಲಾಯಿತು. ತನ್ನ ಈ ಎಲ್ಲಾ ಕೆಲಸಗಳಿಗೆ ತಮಿಳುನಾಡಿನ LTTE ಸಂಘಟನೆಯ ಸಹಾಯವನ್ನೂ ಪಡೆಯುತ್ತಿದ್ದರು ಮೇಡಮ್ ಜಿ. ಈ ಎಲ್ಲಾ ವಿಚಾರಗಳನ್ನು ಕ್ರಮವಾಗಿ ಜೋಡಿಸಿ ನೋಡಿ ಎಲ್ಲಾ ರಹಸ್ಯಗಳ ಪರದೆ ತನ್ನಿಂದ ತಾನೆ ಹರಿಯುವುದು.

ನೆಹರೂ ಕಾಲದಿಂದಲೂ ಕಾಂಗ್ರೆಸ್ ನ ನಾಮಧಾರಿ ಪರಿವಾರ ಭಾರತವನ್ನು ಕೊಳ್ಳೆಹೊಡೆಯುತ್ತಾ ಬಂದಿದೆ. ಭಾರತವನ್ನು ಲೂಟಿ ಹೊಡೆದ ಹಣ ವಿದೇಶದ ಬ್ಯಾಂಕುಗಳಲ್ಲಿ ಜಮೆಯಾಗಿದೆ. ರಾಜ ಪರಿವಾರದ ಏಕೈಕ ಹಕ್ಕುದಾರಿಣಿ ಮೇಡಮ್ ಜಿ! ತನ್ನ ಅತ್ತೆಯ ತಂದೆಯ ಕಾಲದಿಂದಲೂ ಕೊಳ್ಳೆ ಹೊಡೆದ ಹಣ ಆಕೆಯ ಒಬ್ಬಳ ಸುಪರ್ದಿಯಲ್ಲೆ ಇದೆ. ಮೇಡಮ್ ಜಿ ಪ್ರಪಂಚದಲ್ಲೆ ಅತ್ಯಂತ ಶ್ರೀಮಂತ ವ್ಯಕ್ತಿ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಕಡು ಬಡ ಪರಿವಾರದಿಂದ ಬಂದ ಅನಕ್ಷರಸ್ಥೆ ಮೇಡಮ್ ಜಿ ಪ್ರಪಂಚದಲ್ಲೆ ಅತ್ಯಂತ ಶ್ರೀಮಂತ ವ್ಯಕ್ತಿ! ಕಣ್ಣು ತೆರೆಯಿರಿ ಭಾರತೀಯರೆ… ಇನ್ನೊಂದು ಅವಧಿಗೆ ಕಾಂಗ್ರೆಸಿಗೆ ರಾಷ್ಟ್ರದ ಆಡಳಿತ ಕೊಟ್ಟರೆ ಭಾರತವನ್ನೆ ಮಾರಿ ಬಿಡುವರು ಈಕೆ. ಇಂಥ ಕಳ್ಳ-ಸುಳ್ಳ-ಮಳ್ಳರಿಗೆ ಓಟು ಕೊಡುವ ಮುನ್ನ ನೂರು ಬಾರಿ ಯೋಚಿಸಿ……

-ಶಾರ್ವರಿ

Source
gandhiheritage
Tags

Related Articles

FOR DAILY ALERTS
 
FOR DAILY ALERTS
 
Close