ಪ್ರಚಲಿತ

ರಾಹುಲ್ ವಿರುದ್ಧ ದೇವೇಗೌಡರು ಗರಂ.! ಇನ್ನೂ ಆರಿಲ್ಲವಂತೆ ದೊಡ್ಡಗೌಡರ ಕೋಪ.! ಇದಕ್ಕೆಲ್ಲ ಕಾರಣ ರಾಜ್ಯ ಕಾಂಗ್ರೆಸ್ಸಿಗರಂತೆ.!

ಕಳೆದ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿರುವ ಆ ಭಾಷಣ ಇದೀಗ ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ನಡೆಸುತ್ತಿದ್ದರೂ ಇಂದಿಗೂ ಮಾಜಿ ಪ್ರಧಾನಿ ದೇವೇಗೌಡರಿಗೆ ಸಿಟ್ಟು ನೆತ್ತಿಗೇರುವಂತೆ ಮಾಡುತ್ತಿದೆ. ಇದೀಗ ಮತ್ತೊಮ್ಮೆ ಕಾಂಗ್ರೆಸ್ ವಿರುದ್ಧ ದೇವೇಗೌಡರು ಮಾತಿನ ವಾಗ್ದಾಳಿ ನಡೆಸಿದ್ದು ದೋಸ್ತಿ ವಿರುದ್ಧ ಗರಂ ಆಗಿದ್ದಾರೆ.

ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜನತಾ ದಳ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದರು. “ಜನತಾದಳ ಭಾರತೀಯ ಜನತಾ ಪಕ್ಷದ ಬಿ ಟೀಂ ಇದ್ದಂತೆ. ಆ ಪಕ್ಷವನ್ನು ಎಂದಿಗೂ ನಂಬಬೇಡಿ” ಎಂದು ಭಾಷಣ ಮಾಡಿದ್ದರು. ಈ ಭಾಷಣಕ್ಕೆ ದೊಡ್ಡಗೌಡರು ಕೆಂಡ ಕಾರಿದ್ದರು. ಕುಮಾರಸ್ವಾಮಿಯವರೂ ರಾಹುಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ನಂತರ ನಡೆದ ದೋಸ್ತಿ ಸರ್ಕಸ್ ಈ ಎಲ್ಲವನ್ನೂ ಮರೆತು ಒಂದಾಗಿ ಬಾಳೋಣ ಎಂಬ ಸಂದೇಶವನ್ನು ರವಾನಿಸಿದ್ದರು.

ಆದರೆ ದೇವೇಗೌಡರ ಕಾಂಗ್ರೆಸ್ ಮೇಲಿನ ಸಿಟ್ಟು ಮಾತ್ರ ಇಂದಿಗೂ ಕಡಿಮೆ ಆಗಿಯೇ ಇಲ್ಲ ನೋಡಿ. ಇದೀಗ ಕರ್ನಾಟಕದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಸರ್ಕಾರ ನಡೆಸಿ ಕಾಂಗ್ರೆಸ್ಸಿನ ಶಾಸಕರ ಬೆಂಬಲದಲ್ಲಿ ತನ್ನ ಮಗ ಮುಖ್ಯಮಂತ್ರಿ ಹುದ್ದೆಗೆ ಏರಿದ್ದರೂ ದೇವೇಗೌಡರು ಕಾಂಗ್ರೆಸ್ ಮಾಡಿರುವ ಆರೋಪಗಳನ್ನು ಮರೆತಿಲ್ಲ. ಇದೀಗ ಮತ್ತೆ ಕಾಂಗ್ರೆಸ್ ವಿರುದ್ಧ ಆರೋಪಿಸಿದ ದೇವೇಗೌಡರು, “ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ನಮ್ಮನ್ನು ಬಿಜೆಪಿಯ ಬಿ ಟೀಂ ಎಂದಿದ್ದರು. ಇದು ನನಗೆ ಇಂದಿಗೂ ಕಾಡುತ್ತಿದೆ. ಜಾತ್ಯಾತೀತ ತತ್ವಗಳನ್ನು ಪಾಲಿಸಿಕೊಂಡು ಬಂದ ಪಕ್ಷ ನಮ್ಮದು. ಈ ರೀತಿ ಆರೋಪ ಬೇಸರವಾಗಿದೆ. ಇದು ರಾಹುಲ್ ಗಾಂಧಿ ಆಡಿದ ಮಾತುಗಳಲ್ಲ. ಬದಲಾಗಿ ಅವರಿಗೆ ಚೀಟಿ ನೀಡಿ ಈ ರೀತಿ ಮಾತನಾಡಿಸಲಾಗಿದೆ” ಎಂದು ನೇರವಾಗಿ ಕರ್ನಾಟಕ ಕಾಂಗ್ರೆಸ್ ನಾಯಕರನ್ನು ಟಾರ್ಗೇಟ್ ಮಾಡಿದ್ದಾರೆ.

ಒಟ್ಟಾರೆ ದೇವೇಗೌಡರಿಗೆ ಕಾಂಗ್ರೆಸ್ ಮೇಲಿನ ಸಿಟ್ಟು ಇದೀಗ ಮತ್ತೆ ಕೆಣಕುತ್ತಿದ್ದು ಇತ್ತ ಕಾಂಗ್ರೆಸ್ಸಿನ ಕೆಲ ಶಾಸಕರೂ ದೋಸ್ತಿಯಿಂದ ದೂರವಾಗುವ ಸಂದೇಶವನ್ನು ಸಾರುತ್ತಿದ್ದಾರೆ. ಇದು ಸರ್ಕಾರ ಪತನದ ಮುನ್ಸೂಚನೆಯಾ? ಈ ಕಾರಣಕ್ಕಾಗಿಯೇ ಗೌಡರು ಈ ಮಾತುಗಳನ್ನು ಆಡಲಾಗಿದೆಯಾ ಎಂಬ ಅನುಮಾನ ದಟ್ಟವಾಗಿದೆ.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close