ಅಂಕಣಪ್ರಚಲಿತ

ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂದು ಮತ್ತೊಮ್ಮೆ ಸಾಬೀತು! ಸಮರ್ಥ ನಾಯಕನ ಆಡಳಿತದಲ್ಲಿ ಭಾರತ ಸೇಫ್!

ನಿಜಕ್ಕೂ ನರೇಂದ್ರ ಮೋದಿ ಎಂಬ ಒಬ್ಬ ವ್ಯಕ್ತಿ ನಮ್ಮ ದೇಶಕ್ಕಾಗಿ ಇಷ್ಟೊಂದು ಶ್ರಮಿಸುತ್ತಾನೆ ಎಂದರೆ ಆತನಿಗೆ ಈ ದೇಶದ ಮೇಲೆ ಇರುವ ಪ್ರೀತಿ, ಗೌರವ ದೇಶಾಭಿಮಾನ ಎಂತದ್ದು ಎಂಬುದು ತಿಳಿಯುತ್ತದೆ. ಕಳೆದ ಐದು ವರ್ಷಗಳ ಹಿಂದೆ ದೇಶದ ಗದ್ದುಗೆ ಹಿಡಿದ ಮೋದಿ ಒಂದೇ ಒಂದು ದಿನ ಕೂಡ ತನ್ನ ವೈಯಕ್ತಿಕ ವಿಚಾರಕ್ಕಾಗಿ ವಿರಮಿಸಿದ ವ್ಯಕ್ತಿ ಅಲ್ಲ. ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ದೇಶದಲ್ಲೇ ಮಾದರಿ ರಾಜ್ಯವನ್ನಾಗಿಸಿದ ಕೀರ್ತಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಮಾತ್ರವಲ್ಲದೆ ಕೇವಲ ೫ ವರ್ಷದಲ್ಲಿ ಭಾರತವನ್ನು ಜಗದ್ಗುರು ಮಾಡಿದ ಕೀರ್ತಿ ಕೂಡ ಪ್ರಧಾನಿ ಮೋದಿಗೆ ಸಲ್ಲುತ್ತದೆ. ಇವೆಲ್ಲಾ ಪ್ರತಿಯೊಬ್ಬ ಭಾರತೀಯನಿಗೂ ಗೊತ್ತಿರುವ ವಿಚಾರವಾದರೆ, ಇತ್ತ ಮೋದಿ ಎಂಬ ಚೌಕಿದಾರನ ಆಡಳಿತದಲ್ಲಿ ಭಾರತ ಮತ್ತಷ್ಟು ಬಲಿಷ್ಠವಾಗಿದೆ ಎಂಬುದು ಸತ್ಯ. ಯಾಕೆಂದರೆ ಒಂದು ಕಾಲದಲ್ಲಿ ಜಗತ್ತಿನ ಇತರ ರಾಷ್ಟ್ರಗಳು ಹೇಳಿದ ಮಾತು ಭಾರತ ಕೇಳಬೇಕಿತ್ತು, ಆದರೆ ಈಗ ಭಾರತ ಒಂದು ಮಾತು ಹೇಳುತ್ತದೆ ಎಂದರೆ ಅದನ್ನು ಜಗತ್ತು ಕೇಳುತ್ತದೆ ಮತ್ತು ಅನಿವಾರ್ಯವಾಗಿ ಒಪ್ಪಿಕೊಳ್ಳುತ್ತದೆ. ಭಾರತ ಯಾವತ್ತೂ ಯಾವ ರಾಷ್ಟ್ರಕ್ಕೂ ಕೇಡು ಬಯಸಿದ ದೇಶವಲ್ಲ.‌ ಅದನ್ನು ಮತ್ತೊಮ್ಮೆ ಸಾಬೀತು ಮಾಡುತ್ತಾ ಬಂದಿದ್ದಾರೆ ಪ್ರಧಾನಿ ಮೋದಿ.!

ಹೌದು, ಭಾರತ ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ, ಜಗತ್ತಿನ ಯಾವ ರಾಷ್ಟ್ರಕ್ಕೂ ಸದ್ಯ ಭಾರತ ಹೆದರಬೇಕಾಗಿಲ್ಲ. ಯಾಕೆಂದರೆ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಒಳಿತಿಗಾಗಿ ಇಡೀ ಜಗತ್ತನ್ನು ತಮ್ಮ ಕಾಲಬುಡದಲ್ಲಿ ಬೀಳುವಂತೆ ಮಾಡಿದ್ದಾರೆ. ಯಾವ ರಾಷ್ಟ್ರ ಮೋದಿಗೆ ವಿಸಾ ನಿರಾಕರಿಸಿತ್ತೋ ಇಂದು ಅದೇ ರಾಷ್ಟ್ರ ಮೋದಿ ಮಾತಿಗೆ ತಲೆ ಅಲ್ಲಾಡಿಸುತ್ತಿದೆ. ಒಬ್ಬ ವ್ಯಕ್ತಿ ಹೇಳಿದ ಮಾತಿಗೆ ಜಗತ್ತು ತಲೆ ಬಾಗುತ್ತದೆ ಎಂದರೆ ಮೋದಿಗಿರುವ ತಾಕತ್ತು ಏನೆಂಬುದನ್ನು ನಾವು ಅರಿತುಕೊಳ್ಳಬೇಕು. ಈಗ ಈ ಮಾತು ಏಕೆ ಬಂದಿದೆ ಎಂದರೆ ಜಗತ್ತಿಗೆ ಬೆದರಿಕೆ ಹಾಕುತ್ತಿದ್ದ ಮೋಸ್ಟ್ ವಾಂಟೆಡ್‌ ಭಯೋತ್ಪಾದಕ ಮಸೂದ್ ಅಜಾರ್ ಇನ್ನು ಮುಂದೆ ಜಾಗತಿಕ ಉಗ್ರ ಪಟ್ಟಿಗೆ ಸೇರಿದ್ದಾನೆ. ಭಾರತದ ಈವರೆಗೆ ಯಾವ ಪ್ರಧಾನಿಗೂ ಆಗದ ಕೆಲಸವನ್ನು, ಜಗತ್ತಿನ ಯಾವ ನಾಯಕರಿಗೂ ಆಗದ ಕೆಲಸವನ್ನು ಸದ್ಯ ನರೇಂದ್ರ ಮೋದಿ ಮಾಡಿ ತೋರಿಸಿದ್ದಾರೆ.!

ಕೇವಲ ಮಸೂದ್ ಅಜಾರ್ ವಿಚಾರದಲ್ಲಿ ಮಾತ್ರವಲ್ಲದೆ ಭಾರತದ ಹಿತದೃಷ್ಟಿಯಿಂದ ಎಲ್ಲಾ ದಿಕ್ಕಿನಲ್ಲೂ ಮೋದಿ ಭಾರತವನ್ನು ಬಲಿಷ್ಠಗೊಳಿಸಿದ್ದಾರೆ. ಪಾಕಿಸ್ತಾನದಂತ ಹಿಂದುಳಿದ ರಾಷ್ಟ್ರ ಕೂಡ ಭಾರತವನ್ನು ಬೆದರಿಸುತ್ತಿತ್ತು ಮತ್ತು ಭಾರತ ಪಾಕಿಸ್ತಾನಕ್ಕೂ ಹೆದರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇಂದು ಅದೇ ಪಾಕಿಸ್ತಾನ ಜಗತ್ತಿನ ಮುಂದೆ ಬೆತ್ತಲಾಗಿ ಮೂಲೆಗುಂಪಾಗಿದೆ. ಭಾರತದ ತಂಟೆಗೆ ಬಂದರೆ ಭಾರತ ಇನ್ನು ಮುಂದೆ ಸುಮ್ಮನೆ ಕೂರುವುದಿಲ್ಲ ಎಂಬುದು ಪಾಕಿಸ್ತಾನಕ್ಕೂ ಅರಿವಾಗಿದೆ. ಭಾರತದ ಸೈನಿಕರ ವಿಚಾರದಲ್ಲಿ ಆಟ ಆಡುತ್ತಿದ್ದ ಪಾಕಿಸ್ತಾನ ಇದೀಗ ಭಿಕ್ಷೆ ಬೇಡುವ ಸ್ಥಿತಿಗೆ ಬಂದು ತಲುಪಿದೆ. ಇದು ಕೇವಲ ಒಬ್ಬ ಮೋದಿಯಿಂದ ಮಾತ್ರ ಸಾಧ್ಯವಾಗಿದೆ ಎಂಬುದು ವಿಶೇಷ.!

ಗಡಿಯಲ್ಲಿ ಸೈನಿಕರು ಸುರಕ್ಷಿತವಾಗಿರುವಂತೆ ಮಾಡಿದರು, ಬಾಹ್ಯಾಕಾಶದಲ್ಲೂ ಭಾರತಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ತಡೆದರು, ಸಮುದ್ರದಲ್ಲೂ ಭಾರತೀಯ ನೌಕಾಪಡೆ ಮತ್ತಷ್ಟು ಬಲಿಷ್ಠವಾಗುವಂತೆ ಮಾಡಿದರು…. ಹೀಗೆ ಭಾರತವನ್ನು ಜಗತ್ತಿನ ಯಾವ ರಾಷ್ಟ್ರ ಕೂಡ ಮುಟ್ಟಲು ಸಾಧ್ಯವಾಗದಂತೆ ತಡೆದರು ಮೋದಿ. ಅಷ್ಟೇ ಅಲ್ಲದೆ ನಮ್ಮ ನೆರೆ ರಾಷ್ಟ್ರದ ಮೇಲೆ ಯಾವುದೇ ರೀತಿಯ ದಾಳಿ ಆಗಬಹುದು ಎಂಬ ಮುನ್ನೆಚ್ಚರಿಕೆಯನ್ನು ಕೂಡ ಭಾರತ ನೀಡುವ ಮಟ್ಟಕ್ಕೆ ಬಂದು ತಲುಪಿದೆ ಎಂದರೆ ಭಾರತೀಯರಾದ ನಾವು ಅರ್ಥಮಾಡಿಕೊಳ್ಳಬೇಕು, ಭಾರತ ಯಾವ ರೀತಿ ಬಲಿಷ್ಠವಾಗಿದೆ ಎಂದು. “ಮೋದಿ ಇರುವಾಗ ಭಯವಿಲ್ಲ” ಎಂಬ ಹೊಸ ಅಭಿಯಾನ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರಂಭವಾಗಿದ್ದು ಎಲ್ಲೆಡೆ ವ್ಯಾಪಕ ಸುದ್ಧಿಯಾಗಿದೆ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close