ಪ್ರಚಲಿತ

ಮಳೆಯನ್ನೂ ಲೆಕ್ಕಿಸದೆ ಧ್ಯಾನಕ್ಕೆ ತೆರಳಿದ ನಮೋ! ಕೇದಾರನಾಥನ ಸನ್ನಿಧಿಯಲ್ಲಿ ನಮೋ ನಮಃ!

ಪ್ರಧಾನಿ ನರೇಂದ್ರ ಮೋದಿ ದೈವ ಭಕ್ತ ಎಂಬುದನ್ನು ಮತ್ತೊಮ್ಮೆ ನೆನಪಿಸಬೇಕಾದ ಅವಶ್ಯಕತೆ ಇಲ್ಲ, ಯಾಕೆಂದರೆ ಇಡೀ ದೇಶಕ್ಕೆ ಮೋದಿಯವರ ದೈವ ಭಕ್ತಿ ಏನೆಂಬುದು ಗೊತ್ತಿದೆ. ನವರಾತ್ರಿ ಸಂದರ್ಭದಲ್ಲಿ ಉಪವಾಸ ಕುಳಿತು ಪೂಜೆ ಸಲ್ಲಿಸಿ ವೃತ ಆಚರಣೆ ಮಾಡುವ ಮೋದಿ ಎಲ್ಲಾ ರಾಜಕಾರಣಿಗಳ ಪೈಕಿ ವಿಶೇಷವಾಗಿ ಕಾಣಿಸಿಕೊಳ್ಳುತ್ತಾರೆ. ಹಿಂದೂ ಹಬ್ಬಗಳನ್ನು ಕೂಡ ತಪ್ಪದೆ ಆಚರಿಸುವ ಮೋದಿ ಇದೀಗ ಹಿಂದೂಗಳ ಪವಿತ್ರ ಕ್ಷೇತ್ರವಾದ ಕೇದಾರನಾಥಕ್ಕೆ ಭೇಟಿ ನೀಡಿದ್ದಾರೆ ಮತ್ತು ವಿಶೇಷ ಪೂಜೆ ಸಲ್ಲಿಸಿ ಧ್ಯಾನಕ್ಕೆ ಕುಳಿತುಕೊಂಡಿದ್ದಾರೆ. ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಪ್ರಧಾನಿ ಮೋದಿ ನಿನ್ನೆಯಷ್ಟೇ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಿದ್ದಂತೆ ಇಂದು ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಮೋದಿಯವರು ಚುನಾವಣೆಯ ನಂತರ ಎರಡು ದಿನಗಳ ಕಾಲ ಧ್ಯಾನಕ್ಕೆ ಹೋಗುತ್ತಾರೆ ಎಂದು ಕೆಲ ದಿನಗಳ ಹಿಂದೆ ಮಾಧ್ಯಮಗಳು ಪ್ರಸಾರ ಮಾಡಿದ್ದವು. ಆದರೆ ಯಾವ ಸ್ಥಳ ಎಂಬುದು ತಿಳಿಸಿರಲಿಲ್ಲ, ಇದೀಗ ಮೋದಿಯವರು ಕೇದರನಾಥನ‌ ಸನ್ನಿಧಿಗೆ ಭೇಟಿ ನೀಡಿದ್ದು ಮಳೆಯನ್ನೂ ಲೆಕ್ಕಿಸದೆ ಧ್ಯಾನಕ್ಕೆ ಕೂರುವ ಜಾಗಕ್ಕೆ ನಡೆದುಕೊಂಡೇ ಹೋಗಿದ್ದಾರೆ.!

ಹೌದು ಪ್ರಧಾನಿ ಮೋದಿಯವರು ಕೇದಾರನಾಥ ದೇವಾಲಯಕ್ಕೆ ಇದು ನಾಲ್ಕನೇ ಬಾರಿಗೆ ಭೇಟಿ ನೀಡುತ್ತಿದ್ದು ಇಂದು ವಿಶೇಷ ಪೂಜೆಯ ಜೊತೆಗೆ ಇನ್ನೆರಡು ದಿನ ಅಲ್ಲಿಯೇ ಧ್ಯಾನಕ್ಕೆ ಕೂರಲಿದ್ದಾರೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ ಇತ್ತೀಚೆಗೆ ಉಂಟಾದ ಪ್ರವಾಹದ ಸಂದರ್ಭದಲ್ಲಿ ಕೇದಾರನಾಥ ದೇವಾಲಯಕ್ಕೆ ಅಪಾರ ಪ್ರಮಾಣದ ಹಾನಿ ಉಂಟಾಗಿತ್ತು, ಇಂದು ಇದರ ಬಗ್ಗೆ ಕೂಡ ಪರಿಶೀಲನೆ ನಡೆಸಿದ ಮೋದಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಿದರು. ಇತ್ತ ಕೇದಾರನಾಥ ದೇವಾಲಯ ಹಾಗೂ ಮೋದಿ ಉಗ್ರರ ಹಿಟ್ ಲಿಸ್ಟ್‌ನಲ್ಲಿ ಇದ್ದು ಕೆಲ ದಿನಗಳ ಹಿಂದೆಯೇ ಕೇದಾರನಾಥ ದೇವಾಲಯಕ್ಕೆ ಭದ್ರತಾ ಪಡೆಗಳು ಹೋಗಿ ಭದ್ರತೆಯ ಬಗ್ಗೆ ಪರಿಶೀಲನೆ ನಡೆಸಿದ್ದು ಅವೆಲ್ಲವೂ ಮುಗಿದ ನಂತರ ಮೋದಿಯವರಿಗೆ ಹೋಗಲು ಅವಕಾಶ ನೀಡಲಾಗಿದೆ.!

ಕೇದಾರನಾಥ ಸನ್ನಿಧಿಗೆ ಭೇಟಿ ನೀಡಿದ ನರೇಂದ್ರ ಮೋದಿಯವರು ಪೂಜೆ ಸಲ್ಲಿಸಿ ನಂತರ ಅಲ್ಲೇ ಸಮೀಪ ಇರುವ ಒಂದು ಗುಹೆಯಲ್ಲಿ ಧ್ಯಾನಕ್ಕೆ ಕುಳಿತಿದ್ದಾರೆ. ಎರಡು ದಿನಗಳ ಕಾಲ ಧ್ಯಾನದಲ್ಲಿ ಕೂರುವ ಮೋದಿ ಉಪವಾಸವಿದ್ದು ಧ್ಯಾನ ನಡೆಸಲಿದ್ದಾರೆ. ಸದ್ಯ ಕೇದರನಾಥದಲ್ಲಿ ಮಳೆ ಬೀಳುತ್ತಿದ್ದು ಧ್ಯಾನದ ಸ್ಥಳಕ್ಕೆ ಮೋದಿ ನಡೆದುಕೊಂಡೇ ಹೋಗಿದ್ದಾರೆ. ಮೋದಿಯವರು ಎಲ್ಲಾ ರೀತಿಯಲ್ಲೂ ವಿಶೇಷವಾಗಿ ಕಾಣಿಸಿಕೊಳ್ಳುವುದು ಇದೇ ಕಾರಣಕ್ಕೆ. ಯಾಕೆಂದರೆ ಇಲ್ಲಿನ ಕೆಲ ರಾಜಕಾರಣಿಗಳು ಚುನಾವಣಾ ಪ್ರಚಾರ ಮುಗಿಯುತ್ತಿದ್ದಂತೆ ಅಥವಾ ಎರಡು ದಿನ ಸುತ್ತಾಡಿದರೆ ಮೂರನೇ ದಿನ ರೆಸಾರ್ಟ್ ಅಥವಾ ವಿದೇಶಕ್ಕೆ ಹೋಗಿ ವಿಶ್ರಾಂತಿ ಪಡೆಯುತ್ತಾರೆ. ಆದರೆ ಮೋದಿಯವರು ಕೈಗೊಂಡ ಚುನಾವಣಾ ಪ್ರಚಾರ ಸಮಾವೇಶಗಳ ಸಂಖ್ಯೆ 142 ಹಾಗೂ ರೋಡ್ ಶೋ’ಗಳು, ಇದರ ಜೊತೆಗೆ ಅದೆಷ್ಟೋ ಕಾರ್ಯಕ್ರಮಗಳಲ್ಲಿ ಭಾಗಿ. ಇಷ್ಟಾದರೂ ಕೂಡ ಮೋದಿ ಒಂದೇ ದಿನ‌ ವಿಶ್ರಾಂತಿ ಪಡೆದವರಲ್ಲ, ದೇಶಕ್ಕಾಗಿ ಶ್ರಮಿಸುತ್ತೇನೆ ಎಂದು ಪ್ರಮಾಣವಚನ ಸ್ವೀಕರಿಸಿದ ಮೋದಿ ತಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಇದೀಗ ಚುನಾವಣೆಯು ಕೊನೆಯ ಹಂತಕ್ಕೆ ತಲುಪಿದ್ದು ಮೋದಿ ನೇರವಾಗಿ ಹೋಗಿದ್ದು ಕೇದಾರನಾಥನ ಸನ್ನಿಧಿಗೆ.‌ ಮೋದಿಯವರ ಈ ಭೇಟಿ ಒಂದರ್ಥದಲ್ಲಿ ಹೇಳುವುದಾದರೆ ಐತಿಹಾಸಿಕ ಕ್ಷಣ ಎಂದೇ ಹೇಳಬಹುದು. ಯಾಕೆಂದರೆ ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣಾ ಫಲಿತಾಂಶ ಹೊರ ಬೀಳಲಿದೆ, ಇತ್ತ ಸಮೀಕ್ಷೆಗಳು ನಡೆಯುತ್ತಿದೆ, ಆದರೆ ಮೋದಿ ಮಾತ್ರ ಧ್ಯಾನದಲ್ಲಿ ಮಗ್ನರಾಗಿದ್ದಾರೆ ಎಂಬುದು ವಿಶೇಷ. ಅದೇನೇ ಇರಲಿ ಮೋದಿ ಒಬ್ಬ ದೈವ ಭಕ್ತ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close