ಅಂಕಣಇತಿಹಾಸ

ದೇಹದೊಳಕ್ಕೆ ಹದಿನೈದು ಬುಲೆಟ್ ಸೇರಿದರೂ ಪಾಕಿಸ್ತಾನದ ಸೇನೆಯನ್ನು ಬಗ್ಗುಬಡಿದು ಗುಡ್ಡ ವಶಪಡಿಸಿಕೊಂಡ ವೀರನ ರೋಚಕ ಕಥೆ! ಭಾರತೀಯ ಸೇನೆಗೆ ನಮ್ಮದೊಂದು ಸೆಲ್ಯೂಟ್!

ವಾಹ್, ನಿಜಕ್ಕೂ ಕಣ್ಣಂಚು ಒದ್ದೆಯಾಗುವ ಕಥೆ. ಪ್ರತಿಯೊಬ್ಬ ಭಾರತೀಯನೂ ಎದೆತಟ್ಟಿ ಹೆಮ್ಮೆಯಿಂದ ಹೇಳಿಕೊಳ್ಳುವ ಕಥೆ. ದೇಶದ್ರೋಹಿಗಳಿಗೂ ದೇಶದ ಮೇಲೆ ಅಭಿಮಾನ ಮೂಡುವಂತೆ ಮಾಡುವ ಕಥೆ. ಕೂತಲ್ಲೇ ಕಣ್ಣೀರು ಜಾರುವಂತೆ ಮಾಡಿದ ಕಥೆ.

ಹೌದು ಭಾರತೀಯ ಸೇನೆಗೆ ಸರಿಸಾಟಿಯಾಗಿ ನಿಲ್ಲುವ ಸೇನೆ ಇಡೀ ಜಗತ್ತಿನಲ್ಲಿ ಇಲ್ಲ ಎಂಬುದು ಎಷ್ಟು ಸತ್ಯವೋ, ಅದೇ ರೀತಿ ಪರಾಕ್ರಮ ಮೆರೆಯುವುದರಲ್ಲಿ ನಮ್ಮ ದೇಶದ ಸೈನಿಕರಿಗೆ ಸರಿಸಮನಾದ ಸೈನಿಕರು ಯಾರೂ ಇಲ್ಲ. ಅಂತಹ ಸೇನೆಯನ್ನು ಈ ದೇಶ ಹೊಂದಿದೆ ಎಂದರೆ ನಿಜಕ್ಕೂ ನಮಗೆ ಹೆಮ್ಮೆ ಆಗಲೇಬೇಕು ಅಲ್ವೇ. ಒಬ್ಬೊಬ್ಬ ಸೈನಿಕನ ಕಥೆಯೂ ನಮಗೆ ಆದರ್ಶವಾದರೆ, ಪ್ರತಿಯೊಂದು ಕಥೆಯೂ ನಮ್ಮ ಕಣ್ಣಂಚು ಒದ್ದೆ ಮಾಡುತ್ತದೆ. ಅಂತಹ ಸೈನಿಕರಲ್ಲಿ ಒಬ್ಬರಾದ ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಅವರ ಕಥೆಯೇ ಒಂದು ರೋಮಾಂಚನ. ಯಾಕೆಂದರೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿಕೊಂಡು ಸೇನೆಗೆ ಸೇರುವ ಯುವಕರು ಯಾವ ರೀತಿ ದೇಶಪ್ರೇಮ ಮೆರೆಯುತ್ತಾರೆ ಎಂಬುದಕ್ಕೆ ಯೋಗೇಂದ್ರ ಸಿಂಗ್ ಯಾದವ್ ಸಾಕ್ಷಿ. ಇವರೊಬ್ಬರೇ ಅಲ್ಲ, ಇವರ ಜೊತೆಗೆ ಸಾವಿರಾರು ಸೈನಿಕರ ಕಥೆ ನಾವು ಓದಲೇಬೇಕು. ಆದರೆ ಯೋಗೇಂದ್ರ ಸಿಂಗ್ ಯಾದವ್ ಅವರ ಕಥೆ ನೋಡೋಣ.

ಭಾರತದ ಇತಿಹಾಸದಲ್ಲಿ ಕಾರ್ಗಿಲ್ ಯುದ್ಧ ಅಂದರೆ ಅದೊಂದು ಮರೆಯಲಾಗದ ದಿನ.‌ ಪದೇ ಪದೇ ಭಾರತದ ವಿರುದ್ಧ ಕತ್ತಿಮಸಿಯುತ್ತಿದ್ದ ಪಾಕಿಸ್ತಾನವನ್ನು ಬಗ್ಗುಬಡಿದ ದಿನ. ಇಡೀ ದೇಶವೇ ಸಂಭ್ರಮಾಚರಣೆ ಮಾಡಿದ ದಿನ. ಈ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಸೈನಿಕರೆಷ್ಟೋ, ಶತ್ರುಗಳ ಜೊತೆ ಕಾದಾಡಿ ದೇಶಕ್ಕಾಗಿ ಸೆಲ್ಯೂಟ್ ಹೊಡೆದವರೆಷ್ಟೋ. ಅಂತಹ ವೀರ ಯೋಧರ ಪೈಕಿ ಬದುಕುಳಿದ ಸೈನಿಕನೇ ಈ ಯೋಗೇಂದ್ರ ಸಿಂಗ್ ಯಾದವ್. ‌ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ಪಾಕಿಸ್ತಾನದ ಸೈನಿಕರ ರುಂಡಾ ಚೆಂಡಾಡಿದ ಸೈನಿಕರಿಗೆ ಪರಮವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಆದರೆ ಈ ಪ್ರಶಸ್ತಿ ಪಡೆದ ನಾಲ್ವರಲ್ಲಿ ಮೂವರು ಸೈನಿಕರು ಮರಣೋತ್ತರ ಪ್ರಶಸ್ತಿ ಪಡೆದರೆ, ಜೀವಂತವಾಗಿ ಪ್ರಶಸ್ತಿ ಪಡೆದ ವೀರನೇ ಈ ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್. ಈ ಸೈನಿಕನ ಕಾಳಗದ ಕಥೆ ಓದಿದಾಗ ಪ್ರತಿಯೊಬ್ಬ ದೇಶಭಕ್ತನ ರಕ್ತ ಕುದಿಯದೇ ಇರದು. ಯಾಕೆಂದರೆ ತನ್ನ ಮೈಯೊಳಗೆ ಶತ್ರುಗಳು ನಡೆಸಿದ ಗುಂಡಿನ ದಾಳಿಯಲ್ಲಿ ಬರೋಬ್ಬರಿ ಹದಿನೈದಕ್ಕೂ ಹೆಚ್ಚು ಗುಂಡುಗಳು ಹೊಕ್ಕರೂ ಕೂಡ ಪಾಕ್ ಸೇನೆಯನ್ನು ಛಿಂದಿ ಛಿಂದಿ ಮಾಡಿದ ಪರಾಕ್ರಮಿ ಈ ಯೋಗೇಂದ್ರ ಸಿಂಗ್ ಯಾದವ್.

ಹೌದು ಕಾರ್ಗಿಲ್ ಯುದ್ಧದ ಸಮಯದಲ್ಲಿ ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಅವರ ನೇತೃತ್ವದಲ್ಲಿ ನಡೆದ ಈ ಸಾಹಸ ಕಥೆ ನಿಜಕ್ಕೂ ನಮಗೆ ರೋಮಾಂಚನ ಆಗದೇ ಇರದು. ಯಾಕೆಂದರೆ ಒಂದೆಡೆ ಪಾಕ್ ಸೈನಿಕರು ಸಾಲು ಸಾಲಾಗಿ ನಿಂತು ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದರು. ಇದರ ನಡುವೆ ಅತ್ಯಂತ ಕಿರಿದಾದ ಜಾಗದಲ್ಲಿ ಅತೀ ಎತ್ತರದ ಪರ್ವತ ಹತ್ತಿ ಹೋಗಬೇಕಾದ ಚಾಲೆಂಜ್ ನಮ್ಮ ದೇಶದ ಸೈನಿಕರಿಗೆ. ಯೋಗೇಂದ್ರ ಸಿಂಗ್ ಯಾಧವ್ ಮತ್ತು ಇತರ ಆರು ಜನ ಸೈನಿಕರು ಕಷ್ಟಪಟ್ಟು ಈ ಬೆಟ್ಟ ಏರುವ ಸಂದರ್ಭದಲ್ಲಿ ಭಾರತೀಯ ಸೇನೆ ಬೆಟ್ಟ ಏರುತ್ತಿದೆ ಎಂಬ ಸುದ್ಧಿ ಪಾಕ್ ಸೈನಿಕರಿಗೆ ಸಿಗುತ್ತದೆ. ಅದಾಗಲೇ ಅತ್ತ ಕಡೆಯಿಂದ ದಾಳಿ ಪ್ರಾರಂಭವಾಗುತ್ತದೆ, ಪಾಕಿಸ್ತಾನದ ಬಂಕರ್ ಗಳಿಂದ ಗುಂಡಿನ ದಾಳಿ ನಡೆಯುತ್ತಲೇ ಇದ್ದರೂ ಕೇವಲ ಏಳು ಜನ ಭಾರತೀಯ ಸೈನಿಕರು ಪಾಕಿಸ್ತಾನ ಸೇನೆಯನ್ನು ಹಿಂದಕ್ಕೆ ಓಡಿಸುತ್ತಾರೆ ಎಂದರೆ‌ ಈ ಯೋಧರ ಕಾಳಗ ಯಾವ ರೀತಿ ಇರಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ಪಾಕಿಸ್ತಾನ ಸೇನೆಯ ಬಂಕರ್‌ ತಮ್ಮ ವಶಕ್ಕೆ ತೆಗೆದುಕೊಂಡ ಈ ಏಳು ಜನರ ತಂಡ, ಅದೇ ಬಂಕರ್‌ನಿಂದ ಪಾಕ್ ಸೈನಿಕರನ್ನು ಹತ್ಯೆ ಮಾಡುತ್ತಾರೆ. ಇದನ್ನು ಕಂಡ ಪಾಕ್ ಸೈನಿಕರು, ಎಷ್ಟು ಸೈನಿಕರು ಇದ್ದಾರೆ ಎಂಬುದರ ಅರಿವಿಲ್ಲದೆ, ಭಾರತೀಯ ಸೇನೆ ನಮ್ಮತ್ತ ದಾಳಿ ನಡೆಸುತ್ತಿದೆ ಎಂದು ತಮ್ಮ ಸೇನೆಗೆ ಮಾಹಿತಿ ನೀಡುತ್ತಾರೆ. ಇದಾದ ನಂತರ ಸೃಷ್ಟಿಯಾಗಿದ್ದೇ ಇತಿಹಾಸ. ಯಾಕೆಂದರೆ ಮತ್ತೆ ದಾಳಿಗೆ ಸಿದ್ಧರಾದ ಪಾಕ್ ಸೇನೆ, ನೂರಕ್ಕೂ ಅಧಿಕ ಸೈನಿಕರು ಯೋಗೇಂದ್ರ ಸಿಂಗ್ ಯಾದವ್ ಅವರ ತಂಡದತ್ತ ನುಗ್ಗಿ ಬರುತ್ತದೆ, ಪರಸ್ಪರ ಗುಂಡಿನ ದಾಳಿ ನಡೆಯುತ್ತದೆ.‌ ಈ ದಾಳಿಯಲ್ಲಿ ಯೋಗೇಂದ್ರ ಸಿಂಗ್ ಯಾದವ್ ಅವರ ಜೊತೆಗಿದ್ದ ಉಳಿದ ಆರು ಜನ ಸೈನಿಕರು ಕೂಡ ಹುತಾತ್ಮರಾಗುತ್ತಾರೆ.‌ ಉಳಿದಿರುವುದು ತಾನೊಬ್ಬನೇ ಎಂದು ಅರಿತ ಯೋಗೇಂದ್ರ ಸಿಂಗ್ ಯಾದವ್, ಪಾಕ್ ಸೇನೆಯನ್ನು ಕಂಡು ಇತ್ತ ಶವವಾಗಿ ಬಿದ್ದಿದ್ದ ತಮ್ಮ ತಂಡದ ಸೈನಿಕರ ಜೊತೆ ತಾನೂ ಸತ್ತವರಂತೆ ಮಲಗುತ್ತಾರೆ. ಯಾಕೆಂದರೆ ಪಾಕಿಸ್ತಾನದ ಕಡೆಯಿಂದ ನೂರಾರು ಶಸ್ತ್ರಾಸ್ತ್ರ ಸಜ್ಜಿತ ಸೈನಿಕರ ಜೊತೆ ಒಬ್ಬನೇ ಒಬ್ಬ ಹೋರಾಡಲು ಅಸಾಧ್ಯ ಎಂದು ಇವರಿಗೆ ತಿಳಿದಿತ್ತು. ಸತ್ತು ಬಿದ್ದಿದ್ದ ಭಾರತೀಯ ಸೈನಿಕರನ್ನು ಕಂಡ ಪಾಕ್ ಸೈನಿಕರು ಏನೂ ಮಾಡಲು ತೋಚದೆ ಮತ್ತೊಂದು ಸುತ್ತಿನ ಗುಂಡಿನ ದಾಳಿ ನಡೆಸುತ್ತಾರೆ. ಈ ಸಂದರ್ಭದಲ್ಲಿ ಅಲ್ಲೇ ಮಲಗಿದ್ದ ಯೋಗೇಂದ್ರ ಸಿಂಗ್ ಯಾದವ್ ಅವರ ದೇಹದೊಳಕ್ಕೆ ಸುಮಾರು ೧೫ಕ್ಕೂ ಹೆಚ್ಚು ಗುಂಡುಗಳು ಸೇರುತ್ತವೆ. ಸತ್ತವರ ದೇಹವನ್ನು ಅಲ್ಲೇ ಬಿಟ್ಟು ಹೋದ ಪಾಕ್ ಸೇನೆ ಸಂಭ್ರಮಾಚರಣೆ ಮಾಡುತ್ತಾ ಹಿಂತಿರುಗುತ್ತಿತ್ತು. ಆದರೆ ಅಲ್ಲಿ ನಡೆದ ಘಟನೆ ಇಡೀ ದೇಶವೇ ಸಂಭ್ರಮಾಚರಣೆ ಮಾಡುವಂತೆ ಮಾಡಿತ್ತು. ಯಾಕೆಂದರೆ ಅಷ್ಟೊಂದು ಗುಂಡು ತನ್ನ ದೇಹದೊಳಗೆ ಸೇರಿದ್ದರೂ ಕೂಡ ಕಷ್ಟಪಟ್ಟು ಎದ್ದು ನಿಂತ ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್, ತನ್ನ ಜೇಬಿನಲ್ಲಿ ಇದ್ದ ಒಂದು ಗ್ರೆನೇಡ್‌ನ ಲಾಕ್ ಬಿಚ್ಚಿ ಸಂತೋಷದಿಂದ ಹೋಗುತ್ತಿದ್ದ ಪಾಕಿಸ್ತಾನ ಸೈನಿಕರ ಮೇಲೆ ಎಸೆಯುತ್ತಾರೆ. ಈ ಗ್ರೆನೇಡ್ ದಾಳಿಗೆ ಅಷ್ಟೂ ಪಾಕ್ ಸೈನಿಕರ ದೇಹ ಛಿದ್ರ ಛಿದ್ರವಾಗಿ ಹೋಗುತ್ತದೆ. ತಾವು ಬಂದ ಕೆಲಸ ಮುಗಿಸಿದ ಖುಷಿ ಈ ನಮ್ಮ ವೀರ ಯೋಧನಲ್ಲಿತ್ತು. ಯಾಕೆಂದರೆ ಪಾಕಿಸ್ತಾನದ ವಶದಲ್ಲಿದ್ದ ಗುಡ್ಡವನ್ನು ಗ್ರೇನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಹೋರಾಡಿ ಭಾರತದ ವಶಕ್ಕೆ ಪಡೆದುಕೊಂಡಿದ್ದರು.!

ಇದು ಒಬ್ಬ ವೀರ ಯೋಧನ ರೋಚಕ ಕಥೆಯಾದರೆ, ಇವರುಗಳು ಗುಡ್ಡ ಹತ್ತಿದ ರೀತಿಯೇ ಮತ್ತೊಂದು ಅಚ್ಚರಿ. ಯಾಕೆಂದರೆ ಅಷ್ಟೊಂದು ಎತ್ತರದ ಗುಡ್ಡ ಹತ್ತಬೇಕಾದರೆ ತಮ್ಮ ಬೆನ್ನಿಗೆ ಕಟ್ಟಿಕೊಂಡ ಚೀಲದಲ್ಲಿ ೨೫ ಕೆಜಿ ತೂಕದ ಮದ್ದು ಗುಂಡು ಹಾಗೂ ತಮಗೆ ಬೇಕಾದ ಆಹಾರವನ್ನು ಇಟ್ಟುಕೊಂಡು ಹೋಗಬೇಕಾಗುತ್ತದೆ. ಆದರೆ ಈ ಏಳು ಜನ ಸೈನಿಕರು ತಮಗೆ ಆಹಾರ ಇಲ್ಲದೇ ಹೋದರೂ ಪರವಾಗಿಲ್ಲ, ಆದರೆ ಯುದ್ಧದ ಸಮಯದಲ್ಲಿ ಮದ್ದು ಗುಂಡು ಕಡಿಮೆ ಆಗಬಾರದು ಎಂಬ ಕಾರಣಕ್ಕೆ ಆಹಾರದ ಬದಲಿಗೆ ಮದ್ದು ಗುಂಡುಗಳನ್ನೇ ತೆಗೆದುಕೊಂಡು ಹೋಗಿದ್ದರು ಎಂದರೆ ನಿಜಕ್ಕೂ ನಮ್ಮ ದೇಶದ ಸೈನಿಕರ ದೇಶಪ್ರೇಮ ಮೆಚ್ಚಲೇಬೇಕು. ಇಂತಹ ಅನೇಕ ಸೈನಿಕರು ನಮ್ಮ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ, ಅಂತಹ ಸೈನಿಕರಲ್ಲಿ ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ನಮಗೆ ಬಹಳ ವಿಶೇಷವಾಗಿ ಕಾಣಿಸುತ್ತಾರೆ.!

ಅದೇನೇ ಇರಲಿ ಈ ದೇಶದ ಸೈನಿಕರ ನಿಸ್ವಾರ್ಥ ಸೇವೆ, ತ್ಯಾಗದ ಪರಿಣಾಮವಾಗಿ ಇಂದು ನಾವೆಲ್ಲರೂ ಆರಾಮವಾಗಿ ಜೀವಿಸುತ್ತಿದ್ದೇವೆ ಎಂಬುದನ್ನು ಪ್ರತಿದಿನ ಪ್ರತಿಕ್ಷಣ ನಾವು ನೆನಪಿಸಿಕೊಂಡರೆ ಜೀವನವೇ ಸಾರ್ಥಕ.!

 

Tags

Related Articles

FOR DAILY ALERTS
 
FOR DAILY ALERTS
 
Close