ಪ್ರಚಲಿತ

ಕಮಲ್ ಹಾಸನ್ ಗೆ ಬಿಸಿ ಮುಟ್ಟಿಸಿದ ಚುನಾವಣಾ ಆಯೋಗ.!ಹಿಂದೂ ಉಗ್ರ ಎಂದು ಪ್ರಚಾರ ಗಿಟ್ಟಿಸಲು ಹೋಗಿ ಪೇಚಿಗೆ ಸಿಲುಕಿದ ನಟ.!

ಸದಾ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುತ್ತಲೇ ಬರುತ್ತಿದ್ದ ಬಹುಭಾಷಾ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ವಿರುದ್ಧ ಚುನಾವಣಾ ಆಯೋಗ ಗರಂ ಆಗಿದೆ. ಪದೇ ಪದೇ ವಿವಾದಾತ್ಮಕ ಹಾಗೂ ಜನವಿರೋಧಿ ಹೇಳಿಕೆಗಳ ಮೊರೆ ಹೋಗುತ್ತಿದ್ದ ಕಮಲ್ ಹಾಸನ್ ಈಗ ಅನಿವಾರ್ಯವಾಗಿ ಚುನಾವಣಾ ಆಯೋಗದ ಮೆಟ್ಟಿಲು ಹತ್ತುವ ಪ್ರಮೇಯ ಎದುರಾಗಿದೆ.

ಇತ್ತೀಚೆಗೆ ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನಟ ಕನಲ್ ಹಾಸನ್ ಹಿಂದೂ ಉಗ್ರ ಎಂಬ ಪದ ಬಳಸಿ ಪೇಚಿಗೆ ಸಿಲುಕಿದ್ದಾರೆ. “ಸ್ವತಂತ್ರ ಭಾರತದ ಮೊದಲ ಹಿಂದೂ ಉಗ್ರ ಗೋಡ್ಸೆ” ಎಂದು ಹೇಳಿದ್ದರು. ಈ ಹೇಳಿಕೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇಂತಹಾ ಹೇಳಿಕೆ ನೀಡಿರುವ ಕಮಲ್ ಹಸನ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿತ್ತು. ಈ ಮಧ್ಯೆ ಕಮಲ್ ಹಾಸನ್ ವಿರುದ್ದ ಚುನಾವಣಾ ಆಯೋಗ ವರದಿ ಕೇಳಿದೆ. ಕಮಲ್ ಹಾಸನ್ ನೀಡಿರುವ ಹಿಂದೂ ಉಗ್ರ ಎಂಬ ಹೇಳಿಕೆಯ ಬಗ್ಗೆ ವರದಿ ನೀಡುವಂತೆ ನೋಟೀಸ್ ಜಾರಿಗೊಳಿಸಿದೆ.

ಒಟ್ಟಾರೆ ಪ್ರಚಾರದ ಆಸೆಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಮಾಧ್ಯಮಗಳಲ್ಲಿ ಹೀರೋ ಆಗಬೇಕೆಂದು ಹೊರಟಿರುವ ಕಮಲ್ ಹಾಸನ್ ಗೆ ಚುನಾವಣಾ ಆಯೋಗ ಬಿಸಿ ಮುಟ್ಟಿಸಿದೆ. ಕಮಲ್ ಹಾಸನ್ ಕ್ಷಮೆ ಕೇಳುತ್ತಾರಾ ಅಥವಾ ತಮ್ಮ ಮಾತಿಗೆ ಸಬೂಬು ನೀಡುತ್ತಾರಾ ಅನ್ನೋದನ್ನು ಕಾದುನೋಡಬೇಕಾಗಿದೆ.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close