ಪ್ರಚಲಿತ

ಮತ್ತೊಮ್ಮೆ ದೇಶದ ಮುಂದೆ ಬೆತ್ತಲಾದ ಕಾಂಗ್ರೆಸ್! ಯುಪಿಎ ಅವಧಿಯಲ್ಲಿ ಯಾವುದೇ ಸರ್ಜಿಕಲ್ ಸ್ಟ್ರೈಕ್ ನಡೆದೇ ಇಲ್ಲ! ರಕ್ಷಣಾ ಸಚಿವಾಲಯದಿಂದಲೇ ಕಾಂಗ್ರೆಸ್‌‌ಗೆ ತಿರುಗೇಟು!

ತಮ್ಮ ರಾಜಕೀಯ ತೀಟೆ ತೀರಿಸಿಕೊಳ್ಳಲು ಯಾವ ಕೀಳು ಮಟ್ಟಕ್ಕೂ ಇಳಿಯಲು ತಯಾರಾಗಿರುವ ಕಾಂಗ್ರೆಸಿಗರು ದೇಶದ ರಕ್ಷಣಾ ವ್ಯವಸ್ಥೆಯನ್ನು ಕೂಡ ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಂಡವರು. ತಮ್ಮ ರಾಜಕೀಯ ಲಾಭಕ್ಕಾಗಿ ದೇಶವನ್ನೇ ಲೂಟಿ ಹೊಡೆದ ಕಾಂಗ್ರೆಸ್ ಇದೀಗ ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಬೇಕು ಎಂಬ ಉದ್ದೇಶದಿಂದ ಮತ್ತೊಮ್ಮೆ ಸೇನೆ ಹೆಸರನ್ನು ಬಳಸಿಕೊಳ್ಳಲು ಪ್ರಯತ್ನಿಸಿ ವಿಫಲವಾಗಿದೆ. ಭಾರತದ ಮೇಲೆ ಪದೇ ಪದೇ ದಾಳಿ ಮಾಡಲು ಪ್ರಯತ್ನಿಸುವ ಪಾಕಿಸ್ತಾನಕ್ಕೆ ಅದರದೇ ಆದ ರೀತಿಯಲ್ಲಿ ತಿರುಗೇಟು ನೀಡಿದ ಪ್ರಧಾನಿ ಮೋದಿ ಆದೇಶದಂತೆ ಸೈನಿಕರು ಸರ್ಜಿಕಲ್ ಸ್ಟ್ರೈಕ್ ನಡೆಸಿ ಪಾಕಿಸ್ತಾನದ ಸೊಕ್ಕು ಮುರಿದಿದ್ದರು. ಇದರಿಂದಾಗಿ ಭಾರತ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಭಾರತದ ಶಕ್ತಿ ಬಹಿರಂಗವಾಯಿತು, ಅಷ್ಟೇ ಅಲ್ಲದೆ ಪ್ರಧಾನಿ ಮೋದಿಯವರ ಜನಪ್ರಿಯತೆ ಕೂಡ ಮತ್ತಷ್ಟು ಹೆಚ್ಚಾಯಿತು. ಇದು ಕಾಂಗ್ರೆಸಿಗರ ನಿದ್ದೆಗೆಡುವಂತೆ ಮಾಡಿತ್ತು ಎಂಬುದರಲ್ಲಿ ಸಂಶಯವಿಲ್ಲ. ಅದೇ ಕಾರಣಕ್ಕೆ ಕಾಂಗ್ರೆಸ್ ಒಂದು ಸುಳ್ಳು ಕಥೆ ಸೃಷ್ಟಿಸಿತ್ತು. ಕೇವಲ ಮೋದಿ ಸರಕಾರ ಮಾತ್ರ ಸರ್ಜಿಕಲ್ ಸ್ಟ್ರೈಕ್ ನಡೆಸಿಲ್ಲ, ನಮ್ಮ ಯುಪಿಎ ಸರಕಾರದ ಸಂದರ್ಭದಲ್ಲೂ ಕೂಡ ಪಾಕ್ ಮೇಲೆ ದಾಳಿ ನಡೆಸಿದ್ದೇವೆ, ಅನೇಕ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದೇವೆ ಎಂದು ಹೇಳಿಕೊಂಡಿತ್ತು. ಆದರೆ ಕಾಂಗ್ರೆಸ್ ನಡೆಸಿದ ದಾಳಿಗೆ ಯಾವ ಸಾಕ್ಷಿಯೂ ಇಲ್ಲ, ಯಾವ ಪುರಾವೆಯೂ ಇಲ್ಲ. ಆದರೂ ಕಾಂಗ್ರೆಸ್‌‌ನ ಎಲ್ಲಾ ನಾಯಕರು ನಾವೂ ಕೂಡ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದೇವೆ ಎಂದು ಹೇಳಿಕೊಂಡಿದ್ದರು. ಆದರೆ ಇದೀಗ ಅದಕ್ಕೆಲ್ಲಾ ತೆರೆ ಬಿದ್ದಿದ್ದು, ಕಾಂಗ್ರೆಸ್ ಇಷ್ಟು ದಿನ ಸುಳ್ಳುತ್ತಾ ತಿರುಗಾಡಿದೆ ಎಂದು ಸ್ವತಃ ಭಾಯರಸ ರಕ್ಷಣಾ ಸಚಿವಾಲಯವೇ ಸ್ಪಷ್ಟನೆ ನೀಡಿದೆ.!

ಹೌದು ಮೋದಿಯವರನ್ನು ಸೋಲಿಸಬೇಕು ಎಂಬ ನಿಟ್ಟಿನಲ್ಲಿ ಸುಳ್ಳು ಹೇಳುತ್ತಲೇ ಬಂದಿರುವ ಕಾಂಗ್ರೆಸ್ ಈ ಬಾರಿ ತಮ್ಮ ತೀಟೆಗೆ ಸೇನೆಯನ್ನು ಬಳಸಿಕೊಂಡಿತ್ತು.‌ ಯುಪಿಎ ಅವಧಿಯಲ್ಲೂ ಕೂಡ ಪಾಕಿಸ್ತಾನದ ಮೇಲೆ ದಾಳಿ ನಡೆಸಲಾಗಿತ್ತು, ಆದರೆ ನಾವು ಎಲ್ಲೂ ಹೇಳಿಕೊಂಡು ತಿರುಗಾಡಲಿಲ್ಲ ಎಂದು ಮೋದಿಗೆ ತಿರುಗೇಟು ನೀಡಿತ್ತು. ಸೈನಿಕರು ಮಾಡಿದ ಸರ್ಜಿಕಲ್ ಸ್ಟ್ರೈಕ್ ಅನ್ನು ತಾನೇ ಮಾಡಿದ್ದೇನೆ ಎಂಬಂತೆ ಮೋದಿ ಬಿಂಬಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿತ್ತು. ಅದೇ ರೀತಿ ನಾವೂ ಕೂಡ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದೆವು ಎಂದು ಸುಳ್ಳು ಹೇಳಿದ ಕಾಂಗ್ರೆಸ್‌‌ನ ಅಸಲಿಯತ್ತು ಈಗ ಬಯಲಾಗಿದೆ.!

ಯುಪಿಎ ಅವಧಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು ಎಂಬ ಕಾಂಗ್ರೆಸ್ ಹೇಳಿಕೆಗೆ ದೇಶಾದ್ಯಂತ ಟೀಕೆ ವ್ಯಕ್ತವಾಗುತ್ತಿದ್ದಂತೆ ಸತ್ಯಾಂಶ ಬಯಲಿಗೆಳೆಯಲು ಆರ್‌ಟಿಐ ಗೆ ಅರ್ಜಿ‌ ಸಲ್ಲಿಸಲಾಗಿತ್ತು. ಇದೀಗ ಅರ್ಜಿಗೆ ಉತ್ತರ ನೀಡಿದ ಕೇಂದ್ರ ರಕ್ಷಣಾ ಸಚಿವಾಲಯ, ಯುಪಿಎ ಅವಧಿಯಲ್ಲಿ ಯಾವುದೇ ಸರ್ಜಿಕಲ್ ಸ್ಟ್ರೈಕ್ ನಡೆದಿರಲಿಲ್ಲ, ಸೇನೆ ಪಾಕಿಸ್ತಾನದ ಮೇಲೆ ದಾಳಿ ಮಾಡಲು ತಯಾರಾಗಿದ್ದರೂ ಕೂಡ ಯುಪಿಎ ಸರಕಾರ ಸೈನಿಕರಿಗೆ ಅನುಮತಿ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದೆ. ಕಾಂಗ್ರೆಸ್‌ ನಾಯಕರು ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದು, ಕೆಲವರು 6 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು ಎನ್ನುತ್ತಾರೆ ಇನ್ನೂ ಕೆಲವರು 12 ಬಾರಿ, 9 ಬಾರಿ ಹೀಗೆ ದ್ವಂದ್ವ ಹೇಳಿಕೆ ನೀಡುತ್ತಿದ್ದು ಕಾಂಗ್ರೆಸಿಗರಲ್ಲೇ ಗೊಂದಲವಿರುವುದು ಗೋಚರಿಸುತ್ತಿದೆ. ಆದ್ದರಿಂದ ಇದೀಗ ರಕ್ಷಣಾ ಸಚಿವಾಲಯವೇ ಸ್ಪಷ್ಟನೆ ನೀಡಿರುವುದರಿಂದ ಕಾಂಗ್ರೆಸ್ ಸುಳ್ಳು ಹೇಳಿದೆ ಎಂಬುದು ಬಯಲಾಗಿದೆ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close