ಪ್ರಚಲಿತ

ಕಾಂಗ್ರೆಸ್ ನಾಯಕನಿಗೆ ಲಾಠಿ ಬೀಸಿದ ಪೊಲೀಸ್ ಅಧಿಕಾರಿಯ ಎತ್ತಂಗಡಿಗೆ ಯತ್ನಿಸಿದ ಕಾಂಗ್ರೆಸ್ ನಾಯಕರು.! ಪೊಲೀಸ್ ಅಧಿಕಾರಿಗಳಿಗೆ ಸ್ವಾತಂತ್ರ್ಯವಿಲ್ಲವೇ..?

ಈ ವಿಚಾರ ಹೊಸದೇನಲ್ಲ. ತನ್ನ ಕೆಲಸಕ್ಕೆ ಅಡ್ಡಿಯುಂಟಾಗುವ ಯಾವ ಅಧಿಕಾರಿಯೇ ಆಗಲಿ, ಅವರನ್ನು ಎತ್ತಂಗಡಿ ಮಾಡಿ ತನ್ನ ಬೇಳೆ ಬೇಯಿಸಿಕೊಳ್ಳುವ ಕಾಂಗ್ರೆಸ್ ಇದೀಗ ಮತ್ತೆ ತನ್ನ ವರಸೆಯನ್ನು ಮುಂದುವರೆಸಿದೆ. ಈ ಹಿಂದೆ ಜಿಲ್ಲಾಧಿಕಾರಿ ರಶ್ಮೀ ಮಹೇಶ್, ರೋಹಿನಿ ಸಿಂಧೂರಿ ಸಹಿತ ಅನೇಕ ಅಧಿಕಾರಿಗಳಿಗೆ ಮಾನಸಿಕ ಕಿರುಕುಳ ನೀಡಿದ್ದ ಕಾಂಗ್ರೆಸ್ ಪಕ್ಷದ ಒಳಸಂಚು ಇದೀಗ ಮತ್ತೊಮ್ಮೆ ಅನಾವರಣವಾಗಿದೆ.

ಭಾರತ್ ಬಂದ್ ವೇಳೆ ಕಾಂಗ್ರೆಸ್ ನಾಯಕನಿಗೆ ಲಾಠಿ ರುಚಿ.!

ಇತ್ತೀಚೆಗೆ ಪೆಟ್ರೋಲ್ ದರ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ಭಾರತ್ ಬಂದ್‍ಗೆ ಕರೆ ನೀಡಿತ್ತು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಬಲವಂತವಾಗಿ ಬಂದ್ ಮಾಡುವಂತೆ ನಡೆಸಿದ ಗಲಭೆಗಳು ರಾಷ್ಟ್ರದಾದ್ಯಂತ ಸುದ್ಧಿಯಾಗಿತ್ತು. ಕರ್ನಾಟಕದ ಉಡುಪಿಯಲ್ಲೂ ಕಾಂಗ್ರೆಸ್ ಪುಂಡಾಟಿಕೆ ಮುಗಿಲು ಮುಟ್ಟಿತ್ತು. ಕೆಲವೇ ದಿನಗಳ ಹಿಂದೆಯಷ್ಟೇ ನಡೆದಿದ್ದ ನಗರ ಸಭೆಯ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೆಸ್ ಬಾಲಿಶತನದಿಂದ ಸಾಮಾನ್ಯ ಜನರ ಮೇಲೆರೆಗಲು ಯತ್ನಿಸಿತ್ತು.

Related image

ಈ ವೇಳೆ ಶಾಂತಿಯುತವಾಗಿ ನಡೆಯಬೇಕಿದ್ದ ಬಂದ್ ಅಶಾಂತಿಗೆ ತಿರುಗಿತ್ತು. ಆ ಹಿಂದೆಯೇ ಉಡುಪಿ ಪೊಲೀಸ್ ಅಧಿಕಾರಿಗಳು ಖಡಕ್ ಪ್ರಕಟನೆಯನ್ನು ಪ್ರಕಟಿಸಿತ್ತು. ಯಾವುದೇ ಅಹಿತಕರ ಘಟನೆಗಳು ನಡೆದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿತ್ತು. ಆದರೆ ಕಾಂಗ್ರೆಸ್ ನಿಂದ ಇತ್ತೀಚೆಗೆ ಗೆಲುವು ಸಾಧಿಸಿದ್ದ ನಗರಸಭೆಯ ಸದಸ್ಯನೋರ್ವ ಪೊಲೀಸರ ವಿರುದ್ಧವೇ ಘೋಷಣೆ ಕೂಗಲು ಆರಂಭಿಸುತ್ತಾನೆ. ಆಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಣ್ ನಿಂಬರಗಿ ಕಾಂಗ್ರೆಸ್ ನಾಯಕನ ಮೇಲೆ ಲಾಠಿ ಬೀಸಿದ್ದಾರೆ.

ಬಾಸುಂಡೆ ಬರುವ ರೀತಿಯಲ್ಲಿ ಲಾಠಿ ಬೀಸಿದ್ದ ಪೊಲೀಸ್ ಅಧಿಕಾರಿ ಮೇಲೆ ಕಾಂಗ್ರೆಸ್ ಮುನಿಸಿಕೊಂಡಿದೆ. ತನ್ನ ಕಾರ್ಯಕರ್ತನ ಮೇಲೆ ಲಾಠಿ ಬೀಸಿ ಬಾಸುಂಡೆ ಬರುವ ರೀತಿಯಲ್ಲಿ ಬಾರಿಸಿದ್ದ ಪೊಲೀಸ್ ಅಧಿಕಾರಿಯನ್ನು ಎತ್ತಂಗಡಿ ಮಾಡಲು ಒತ್ತಡ ಹೆಚ್ಚಾಗುತ್ತಿದೆ. ಈ ಬಗ್ಗೆ ಅಂದೇ ಹೇಳಿಕೆ ನೀಡಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಈ ಬಗ್ಗೆ ಗೃಹ ಸಚಿವರಿಗೆ ದೂರು ನೀಡುತ್ತೇವೆ ಎಂದು ಹೇಳಿದ್ದರು. ಇದೀಗ ತೆರೆಮರೆಯಲ್ಲಿ ಪೊಲೀಸ್ ಅಧಿಕಾರಿಯನ್ನು ಎತ್ತಂಗಡಿ ನಡೆಸುವಂತೆ ಮಸಲತ್ತು ನಡೆಸುತ್ತಿದ್ದಾರೆ.

Image result for udupi bharath band

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಕೂಡಾ ಈ ಬಗ್ಗೆ ಮಾತನಾಡಿದ್ದು ನಮ್ಮ ಕಾರ್ಯಕರ್ತನಿಗೆ ಅನ್ಯಾಯವಾಗಿದೆ ಎಂದಿದ್ದಾರೆ. ಆದರೆ ಪೊಲೀಸ್ ಬಂದೋಬಸ್ತ್ ಗೆ ಅಡ್ಡಿಯುಂಟುಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಲಾಠಿ ಬೀಸಿ 144 ಸೆಕ್ಷನ್ ಜಾರಿಗೊಳಿಸಿದ್ದಾರೆ ಎನ್ನುವ ಕಾರಣಕ್ಕೆ ಪೊಲೀಸ್ ಅಧಿಕಾರಿಯನ್ನೇ ಎತ್ತಂಗಡಿ ಮಾಡಲು ಹೊರಟಿರುವ ಮೈತ್ರಿ ಸರಕಾರದ ನೀತಿಯನ್ನು ಜನತೆ ಖಂಡಿಸುತ್ತಿದ್ದಾರೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close