ಪ್ರಚಲಿತರಾಜ್ಯ

ಪಾಕ್ ವಿರುದ್ಧ ಸಿಡಿದೇಳುತ್ತಾ ವಿಶ್ವ ಸಮುದಾಯ?! ವಿಶ್ವಕ್ಕೆ ಮೋಸ ಮಾಡಿದ ಪಾಕ್ ಮುಖ ಅನಾವರಣ!!

ಪಾಕ್ ಉಗ್ರರ ತಾಣವಾಗಿದ್ದು ಈಡೀ ವಿಶ್ವಕ್ಕೆ ತಿಳಿದಿರುವ ವಿಚಾರ!! ಆದರೆ ಅಮೆರಿಕಾ ಸೇರಿದಂತೆ ಹಲವಾರು ದೇಶಗಳ ಒತ್ತಡಕ್ಕೆ ಮಣಿದ ಪಾಕಿಸ್ತಾನ ಕೊನೆಗೂ 26/11 ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನೇತೃತ್ವದ ಜಮಾತ್ ಉದ್ ದಾವಾ ಸಂಘಟನೆಯನ್ನು ನಿಷೇಧಿತ ಪಟ್ಟಿಯಲ್ಲಿ ಸೇರಿಸಲು ಆದೇಶ ಹೊರಡಿಸಿತ್ತು. ಅಷ್ಟೇ ಅಲ್ಲದೇ, ಪಾಕಿಸ್ತಾನದ ರಾಷ್ಟ್ರಪತಿ ಮಮ್ ನೂನ್ ಹುಸೈನ್ ‘ಭಯೋತ್ಪಾದನಾ ನಿಗ್ರಹ ಕಾಯ್ದೆ’ಗೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕಿ ನಾಟಕವಾಡಿದ ನಿಜ ಸ್ವರೂಪ ಇದೀಗ ಬಯಲಾಗಿದೆ.

ಹೌದು… ಈ ಹಿಂದೆಯಷ್ಟೇ ಪಾಕಿಸ್ತಾನದ ಎಆರ್’ಐ ಸುದ್ದಿ ಸಂಸ್ಥೆ ಜೊತೆ ಸಂದರ್ಶನವೊಂದರಲ್ಲಿ ಮಾತಾನಾಡಿದ ಮುಷರಪ್, ಕಾಶ್ಮೀರದಲ್ಲಿ ಜಿಹಾದ್ ನಡೆಸುವ, ಎಲ್’ಇಟಿಯನ್ನು ನಾನು ಇಷ್ಟಪಡುತ್ತೇನೆ ಹಾಗೂ ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ 168 ಜನರ ಸಾವಿಗೆ ಕಾರಣವಾಗಿದ್ದ 26/11ರ ಮುಂಬಯಿ ದಾಳಿಯಲ್ಲಿ ಹಫೀಜ್ ಸಯೀದ್ ಪಾತ್ರವನ್ನು ಇಲ್ಲ ಎಂದು ಹೇಳಿರುವ ಮುಷರಫ್, ಹಫೀಜ್ ನನ್ನು ಉಗ್ರ ಎಂದು ಕರೆಯುವುದು ತಪ್ಪು ಎಂದು ಹೇಳಿ ಬಹಿರಂಗವಾಗಿಯೇ ಭಯೋತ್ಪಾದನೆಗೆ ಮುಷರಫ್ ಬೆಂಬಲ ಸೂಚಿಸಿದ್ದರು.

ಆದರೆ ವಿಶ್ವಸಮುದಾಯದ ಒತ್ತಾಯ, ಭಾರತದ ನಿರಂತರ ಬೆದರಿಕೆಗೆ ಬಗ್ಗಿದ ಪಾಕಿಸ್ತಾನ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನೇತೃತ್ವದ ಭಯೋತ್ಪಾದಕ ಸಂಘಟನೆ ಜಮಾತ್ ಉದ್ ದಾವಾ ನಿಷೇಧಿಸಲಾಗಿದೆ ಎಂದು ಘೋಷಿಸಿತ್ತು. ಆದರೆ ಪಾಕಿಸ್ತಾನ ತನ್ನ ಕಳ್ಳಾಟ ಮುಂದುವರಿಸಿದ್ದು, ನಿಷೇಧಿತ ಉಗ್ರ ಸಂಘಟನೆ ಜಮಾತ್ ಉದ್ ದಾವಾ ಕಚೇರಿಗಳು, ಕಾರ್ಯ ಚಟುವಟಿಕೆಗಳು ಬಹಿರಂಗವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ತಿಳಿದು ಬಂದಿದೆಯಲ್ಲದೇ ಈ ಬಗ್ಗೆ ಮಾಜಿ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಪಾಕಿಸ್ತಾನಕ್ಕೆ ಖಡಕ್ ಉತ್ತರ ನೀಡಿದ್ದಾರೆ.

ಪರೋಕ್ಷವಾಗಿ ಸಹಕಾರ ನೀಡುತ್ತಿರುವ ಪಾಕಿಸ್ತಾನ ಸರ್ಕಾರದ ವಿಡಿಯೋ ವೈರಲ್!!

ಭಯೋತ್ಪಾದನಾ ತಡೆ ಕಾಯ್ದೆ ತಿದ್ದುಪಡಿ ತರುವ ಸುಗ್ರಿವಾಜ್ಞೆಯನ್ನು ಪಾಕ್ ಸರ್ಕಾರ ಹೊರಡಿಸಿದ್ದು, ಇದರನ್ವಯ ಹಫೀಜ್ ಸಂಘಟನೆ ನಿಷೇಧಕ್ಕೊಳಪಡಿಸಿತ್ತು. ಅಲ್ಲದೇ ವಿಶ್ವಸಂಸ್ಥೆಯ ನಿಷೇಧಿತ ಉಗ್ರ ಸಂಘಟನೆಯ ಪಟ್ಟಿಯನ್ನು ತಾನೂ ಅಳವಡಿಸಿಕೊಳ್ಳಲು ಮುಂದಾಗಿದ್ದ ಪಾಕ್‍ನ ಈ ಕ್ರಮ ಫಲಾಹ್ ಇನ್ಸಾನಿಯತ್ ಫೌಂಡೇಶನ್, ಲಷ್ಕರ್ ಇ ತೋಯ್ಬಾ, ಹರ್ಕತ್ ಉಲ್ ಮುಜಾಹಿದ್ದೀನ್‍ನಂತಹ ಸಂಘಟನೆಗಳಿಗೆ ದೊಡ್ಡ ಆಘಾತಕಾರಿಯನ್ನುಂಟು ಮಾಡಿತ್ತು!! ವಿಶ್ವಸಂಸ್ಥೆ ನಿಷೇಧಿಸಿದ 27 ಸಂಘಟನೆಗಳ ಪೈಕಿ ಇವುಗಳೂ ಸೇರಿದ್ದರೂ ಕೂಡ ಪಾಕ್ ತನ್ನ ಕಳ್ಳಾಟವನ್ನು ಮುಂದುವರೆಸಿದ್ದಲ್ಲದೇ ಪ್ರಸ್ತುತ ಪಾಕ್‍ನಲ್ಲಿ ರಾಜಾರೋಷವಾಗಿ ಕಾರ್ಯಾಚರಿಸುತ್ತಿವೆ.

ಭಯೋತ್ಪಾದಕ ಸಂಘಟನೆಗಳಾದ ಜಮಾತ್ ಉದ್ ದಾವಾ ಮತ್ತು ಎಫ್ ಐಎಫ್ ಸಂಘಟನೆಗಳನ್ನು ಪಾಕಿಸ್ತಾನ ನಿಷೇಧಿಸಲಾಗಿದೆ ಎಂದು ಘೋಷಿಸಿತ್ತು. ಆದರೆ ಉಗ್ರ ಸಂಘಟನೆಗಳ ನೂರಾರು ಆಸ್ಪತ್ರೆಗಳು, ಕಚೇರಿಗಳು, ಸೆಮಿನರಿ ಹಾಲ್ ಗಳು ಮತ್ತು ಆ್ಯಂಬ್ಯುಲೆನ್ಸ್ ಗಳು ಸೇವೆ ಹೆಸರಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದನೆ ಬಿತ್ತುತ್ತಿವೆ. ಇದೀಗ ಪಾಕಿಸ್ತಾನ ಸರ್ಕಾರ ಉಗ್ರ ಸಂಘಟನೆಗಳನ್ನು ನಿಷೇಧಿಸಿದರೂ ಅವರುಗಳ ಸೇವಾ ಕಾರ್ಯಕ್ಕೆ ಅವಕಾಶ ನೀಡುವ ಮೂಲಕ ಭಯೋತ್ಪಾದಕ ಸಂಘಟನೆಗಳಿಗೆ ಪರೋಕ್ಷವಾಗಿ ಸಹಕಾರ ನೀಡುತ್ತಿರುವುದು ವಿಡಿಯೋ, ಚಿತ್ರದ ದಾಖಲೆ ಮೂಲಕ ಸಾಬೀತಾಗಿದೆ.

ಪಾಕಿಸ್ತಾನದ ಭವಾಲ್ಪುರ, ರಾವಲ್ಪಿಂಡಿ, ಲಾಹೋರೆ, ಶೇಖಪುರ್, ಮುಲ್ತಾನ್, ಪೇಶಾವರ, ಹೈದರಾಬಾದ್, ಸುಕ್ಕೂರ್, ಮುಜಾಫರ್ ಬಾದ್ ಸೇರಿ ನಾನಾ ಕಡೆ ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಜೆ ಯು ಡಿ ಮತ್ತು ಎಫ್ ಐ ಎಫ್ ಸಂಘಟನೆಗಳ ಕಚೇರಿಗಳು ಸ್ವಾಂತ್ರ್ಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಪಾಕಿಸ್ತಾನದ ಉಗ್ರ ವಿರೋಧಿ ನೀತಿ ಡೋಂಗಿತನದ್ದು ಎಂಬ ಮಾಹಿತಿ ಹೊರಬಿದ್ದಿದೆ.

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ನಿಷೇಧಿಸಿರುವ ಉಗ್ರ ಸಂಘಟನೆಗಳ ಪಟ್ಟಿಯಲ್ಲಿ ಅಲ್-ಕೈದಾ, ತಹ್ರೀಕ್-ಎ-ತಾಲಿಬಾನ್-ಪಾಕಿಸ್ತಾನ್, ಲಷ್ಕರ್-ಎ-ಜಾಂಗ್ವಿ, ಜಮಾತ್-ಉದ್-ದಾವಾ, ಫಲಾಹ್-ಎ-ಇನ್ಸಾನಿಯತ್-ಫೌಂಡೇಶನ್, ಲಷ್ಕರ್-ಎ-ತೊಯ್ಬಾ ಸೇರಿದಂತೆ ಇನ್ನಿತರ ಸಂಘಟನೆಗಳಿವೆ. ಪಾಕ್ ಜಾರಿಗೊಳಿಸಲಿರುವ ನೂತನ ಕಾನೂನಿನ ಬಳಿಕ ಈ ಸಂಘಟನೆಗಳ ಹಣ ವಹಿವಾಟಿನ ಮೇಲೆ ಪ್ರಭಾವ ಬೀಳಲಿದೆಯಲ್ಲದೇ ಈಡೀ ವಿಶ್ವಕ್ಕೆ ಮಾರಕವೂ ಆಗಲಿದೆ.

ಪಾಕಿಸ್ತಾನ ಸರ್ಕಾರವೇ ಜವಾಬ್ದಾರಿ ಎಂದ  ಪ್ರಣಬ್ ಮುಖರ್ಜಿ!!

ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿರುವ, ವಿಶ್ವಸಂಸ್ಥೆಯ ನಿಷೇಧ ಭೀತಿಯಲ್ಲಿರುವ ಉಗ್ರಗಾಮಿ ಸಂಘಟನೆ ಜಮಾದ್-ಉದ್-ದಾವಾ ಹೊಸ ಹೆಸರಿನಿಂದ ಕಾರ್ಯಾಚರಿಸಲು ಮುಂದಾಗುತ್ತಿರುವುದರ ಹಿನ್ನೆಲೆಯಲ್ಲಿ, ಅದು ಯಾವುದೇ ಹೆಸರಿನಲ್ಲೇ ಕಾರ್ಯಾಚರಿಸಿದರೂ ಅದರ ವಿರುದ್ಧ ಕ್ರಮಕೈಗೊಳ್ಳುವುದು ಪಾಕಿಸ್ತಾನ ಸರ್ಕಾರದ ಜವಾಬ್ದಾರಿ ಮಾಜಿ
ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಅಷ್ಟೇ ಅಲ್ಲದೇ, ಅಂತಾರಾಷ್ಟ್ರೀಯ ಬದ್ಥತೆ ಮತ್ತು ಸಮನ್ವಯತೆಗಳಿಗೆ ಅನುವರ್ತಿಸಲು ಪಾಕಿಸ್ತಾನ ವಿಫಲವಾದಲ್ಲಿ ವಿಶ್ವ ಸಮುದಾಯವು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. “ಲಷ್ಕರೆ-ಇ-ತೋಯ್ಬಾವನ್ನು ನಿಷೇಧಿಸಿದಾಗ ಅದು ಜಮಾತ್ ಉದ್ ದಾವಾ ಎಂಬ ಹೆಸರು ಇರಿಸಿಕೊಂಡಿತು. ಇದೀಗ ಈ ಸಂಘಟನೆಯನ್ನೂ ನಿಷೇಧಿಸಲಾಗಿದೆ. ಅದೀಗ ಇನ್ನೊಂದು ಹೆಸರಿನಲ್ಲಿ ಕಾರ್ಯಾಚರಿಸಬಹುದಾಗಿದೆ. ಇದು ನಾವು ಗಮನಿಸಿದಂತೆ ಪಾಕಿಸ್ತಾನದಲ್ಲಿ ನಡೆಯುವ ಶೈಲಿಯಾಗಿದೆ” ಎಂದು ಪ್ರಣಬ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಅಷ್ಟೇ ಅಲ್ಲದೇ, ಈ ನಿಷೇಧಿತ ಸಂಘಟನೆಗಳು ಯಾವುದೇ ರೀತಿಯಲ್ಲಿ, ಯೂವುದೇ ರೂಪದಲ್ಲಿ, ಯಾವುದೇ ಹೆಸರಿನಲ್ಲಿ ಚಟುವಟಿಕೆ ನಡೆಸದಂತೆ ತಡೆಯುವುದು ಪಾಕಿಸ್ತಾನ ಸರ್ಕಾರದ ಜವಾಬ್ದಾರಿಯಾಗಿ ಎಂದವರು ಹೇಳಿದರು. ಅಲ್ಲದೇ, ಜಮಾತ್ ಉದ್ ದಾವಾ ತನ್ನ ಹೆಸರನ್ನು ‘ತೆಹ್ರೀಕ್-ಇ-ಹರ್ಮತ್-ಇ-ರಸೂಲ್'(ದೇವ ಮರ್ಯಾದೆಯ ರಕ್ಷಣೆಗಾಗಿ ಚಳುವಳಿ) ಎಂದು ಬದಲಿಸಿಕೊಂಡಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ದಿಗ್ಬಂಧನ ಹೇರಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನವು ನಿಯಂತ್ರಣಗಳನ್ನು ಹೇರಬಹುದು ಎಂಬ ಕಾರಣದ ಹಿನ್ನೆಲೆಯಲ್ಲಿ ಜಮಾತ್ ಈ ಕ್ರಮಕ್ಕೆ ಮುಂದಾಗಿದೆ.

ಅಂತೂ ಪಾಕಿಸ್ತಾನ ಪದೇ ಪದೇ ತನ್ನ ನರಿ ಬುದ್ದಿಯಿಂದ ಫೇಮಸ್ ಆಗುತ್ತಲೇ ಇದ್ದು, ‘ಭಯೋತ್ಪಾದನಾ ನಿಗ್ರಹ ಕಾಯ್ದೆ’ಗೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕಿದ್ದರೂ ಕೂಡ ವಿಶ್ವ ಸಮೂದಾಯಕ್ಕೆನೇ ಮೋಸ ಮಾಡುತ್ತಿರುವ ಪಾಕಿಸ್ತಾನವನ್ನು ಹೊಗಳುವ ಬುದ್ದಿಜೀವಿಗಳೇ ಭಾರತವನ್ನೇ ಅಸುರಕ್ಷತವಾದ ದೇಶ ಎಂದು ಕರೆದವರೆಲ್ಲ ಪಾಕಿಸ್ತಾನಕ್ಕೆ ದಾರಾಳವಾಗಿ ಹೋಗಬಹುದು!! ಯಾಕೆಂದರೆ ವಿಶ್ವ ಸಂಸ್ಥೆಯೇ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಕರೆಯುವಾಗ ನೀವು ಮಾತ್ರ ಪಾಕಿಸ್ತಾನವನ್ನು ಸ್ವರ್ಗ ಎನ್ನುತ್ತೀರಲ್ಲ ಈಗ ಏನು ಹೇಳುತ್ತೀರಿ??

– ಅಲೋಖಾ

Tags

Related Articles

FOR DAILY ALERTS
 
FOR DAILY ALERTS
 
Close