ಅಂಕಣಇತಿಹಾಸದೇಶ

ದುರಂತವೆಂದರೆ ಅದೇ! ಇ-ಮೈಲ್ ಕಂಡುಹಿಡಿದ 14 ವರ್ಷದ ಭಾರತೀಯ ಬಾಲಕನ ನೆನಪು ಯಾರಿಗೂ ಇಲ್ಲ…!

ಇ-ಮೈಲ್… ಇದು ಇಂದು ಅಂತರ್ಜಾಲದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಎಷ್ಟೋ ಮಂದಿಗೆ ಇದನ್ನು ಕಂಡುಹಿಡಿದವರ್ಯಾರು ಎಂದು ಗೊತ್ತಿರಲು ಸಾಧ್ಯವಿರಲಿಕ್ಕಿಲ್ಲ. ಇದನ್ನು ಮೊತ್ತಮೊದಲು ಬಳಕೆ ಮಾಡಿದ್ದು ಯಾರು? ಯಾವ ಸಂದರ್ಭದಲ್ಲಿ ಇದನ್ನು ಕಂಡುಹಿಡಿಯಲಾಯಿತು? ಅದಕ್ಕಿಂತಲೂ ಮುಖ್ಯವಾಗಿ ಭಾರತಕ್ಕೂ ಇಮೈಲ್‍ಗೂ ಇರುವ ಸಂಬಂಧವೇನು?
 
ಹಾಗಾದರೆ ಸರಿ, ಇಮೈಲನ್ನು ಕಂಡುಹಿಡಿದಿರುವುದು ಒಬ್ಬ 7 ವರ್ಷದ ಬಾಲಕ ಎಂದರೆ ನಂಬಲೇಬೇಕು. ಅದಕ್ಕಿಂತಲೂ ಮುಖ್ಯವಾಗಿ ಆತ ಭಾರತದ ಹುಡುಗ ಎಂದಾಗ ಇನ್ನೂ ಅಚ್ಚರಿಯಾಗುತ್ತದಲ್ಲ? ಆ ಬಾಲಕನಿಗೆ 7 ವರ್ಷವಿದ್ದಾಗ ಆತನ ಪೋಷಕರು ಅಮೇರಿಕಾಕ್ಕೆ ವಲಸೆ ಹೋಗಿ ಅಲ್ಲೇ ಉಳಿದುಬಿಡುತ್ತಾರೆ. ಅಲ್ಲಿ  ಆತನಿಗೆ ಬರೇ 14 ವರ್ಷವಾದಾಗಲೇ ಇಂದಿನ ಬಹು ಉಪಯೋಗಿ ತಂತ್ರಾಂಶ(ಸಾಫ್ಟ್‍ವೇರ್)ವಾದ ಇಮೈಲ್ ಅನ್ನು ಆವಿಷ್ಕರಿಸುತ್ತಾನೆ. ಇಂದು ಇಡೀ ಜಗತ್ತಲ್ಲಿ ಮನೆಮಾತಾದ ಇಮೈಲ್‍ನ ಹಿಂದಿನ ಮಹಾನ್ ಮೆದುಳು ಭಾರತೀಯ ಹುಡುಗ ಶಿವನದ್ದು ಎಂದಾಗ ಭಾರತೀಯರಾದ ನಾವೆಲ್ಲ ಹೆಮ್ಮೆ ಪಡುವಂಥಾ ವಿಷಯ. ಹೌದು, ಈ ಬಾಲಕ ಇನ್ಯಾರೂ ಅಲ್ಲ… ಶಿವ ಅಯ್ಯಾದುರೈ.
ಅದು 1978ರ ಸಮಯ. ಬಾಲಕ ಶಿವ ಇಮೈಲ್ ಆವಿಷ್ಕರಿಸಿದ ನಿಜ. ಆದರೆ ಆತನಾಗಲೀ, ಆತನ ಪೋಷಕರಾಗಲೀ ಇಮೈಲ್‍ಗೆ ಕಾಪಿರೈಟ್ ಹಕ್ಕು ಮಾಡಿಸಿರಲಿಲ್ಲ. ಇದಾದ ಎರಡು ವರ್ಷದ ನಂತರ ಅಂದರೆ 1980ರಲ್ಲಿ ಅಮೇರಿಕಾದ ಸರಕಾರ ಸಾಫ್ಟ್‍ವೇರ್ ಸೇರಿ ಕಾಪಿರೈಟ್ ಕಾಯಿದೆಗೆ ತಿದ್ದುಪಡಿ ತಂದಿತು. ಈ ತಿದ್ದುಪಡಿಯ ಪ್ರಕಾರ ಶಿವ ಕೂಡಾ 1981ರಲ್ಲಿ ಕಾಪಿರೈಟ್‍ಗಾಗಿ ಅರ್ಜಿ ಸಲ್ಲಿಸಿ, 1982ರಲ್ಲಿ ಅದನ್ನು ಪಡೆದುಕೊಳ್ಳುವಲ್ಲಿ ಸಫಲನಾದ.
ಬಾಲಕ ಶಿವನ ಬಗ್ಗೆ ತಿಳಿಯುವುದರ ಜೊತೆಗೆ ಆತ ಕಲಿತ ಶಿಕ್ಷಣ ಸಂಸ್ಥೆ ಮತ್ತದರ ಸ್ಥಿತಿಗತಿಯ ಬಗ್ಗೆಯೂ ತಿಳಿಯಬೇಕು. ಆ ಶಿಕ್ಷಣ ಸಂಸ್ಥೆಯ ಹೆಸರು ಯುನಿವರ್ಸಿಟಿ ಆಫ್ ಮೆಡಿಸಿನ್ ಆಂಡ್ ಡೆಂಟಿಸ್ಟ್ರಿ ಆಫ್ ನ್ಯೂಜೆರ್ಸಿ(ಯುಎಂಡಿಎನ್‍ಜೆ). ಇದು ನ್ಯೂಜೆರ್ಸಿಯಲ್ಲಿದೆ. ಈ ಶಿಕ್ಷಣ ಸಂಸ್ಥೆ ಚಿಕ್ಕ ಸಂಸ್ಥೆಯೇನೂ ಅಲ್ಲ. ಆದರೆ ಶಿವ ಅಯ್ಯಾದುರೈ ಆರಂಭಿಸಿದ ಯೋಜನೆಗೆ ಹಣ ಹೂಡುವರು ಯಾರೂ ಇರಲಿಲ್ಲ ಅಥವಾ ಚಿಕ್ಕ ಮೊತ್ತದಲ್ಲಿ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಬೇಕಿತ್ತು. ಆದರೆ ಆತನ ಉದ್ದೇಶವನ್ನು ಪೂರ್ತಿಗೊಳಿಸುವ ಸಲುವಾಗಿ ಆತನ ಕುಟುಂಬಿಕರ ಹಾಗೂ ಆತನ ಶಿಕ್ಷಕರ ಬೆಂಬಲ ಸಿಕ್ಕಿತು. ಇದರಿಂದಾಗಿ ಆತ ತನ್ನ ಯೋಜನೆಯನ್ನು ಯಶಸ್ವಿಯಾಗಿ ಪೂರೈಸುವಂತಾಯಿತು.
ಶಿವ ತನ್ನ ವಿಶೇಷ ಕಂಪ್ಯೂಟರ್ ಪ್ರೋಗ್ರಾಂ ಅನ್ನು ನ್ಯೂಯಾರ್ಕ್ ಯುನಿವರ್ಸಿಟಿಯಲ್ಲಿ ಅಳವಡಿಸುವ ಮುನ್ನ ತನ್ನ ಕುಂಟುಂಬದ ಗೆಳೆಯ ಮಾರ್ಟಿನ್ ಫ್ಯೂರ್‍ಮನ್ ಎಂಬವರು ಡಾ. ಲೆಸ್ಲೀ ಎಂಬವರನ್ನು ಪರಿಚಯಿಸಿದರು. ಡಾ. ಲೆಸ್ಲಿ ಅವರು ಯುಎಂಡಿಎನ್‍ಜೆಯ ಲ್ಯಾಬೊರೇಟರಿ ಕಂಪ್ಯೂಟರ್ ನೆಟ್‍ವರ್ಕ್‍ನ ನಿರ್ದೇಶಕರಾಗಿದ್ದವರು. ಡಾ. ಲೆಸ್ಲೀ ಶಿವನ ಅಗಾಧ ಬುದ್ಧಿಮತ್ತೆ ಹಾಗೂ ಸಮರ್ಪಣಾ ಭಾವವನ್ನು ಕಂಡು ಅಷ್ಟು ಚಿಕ್ಕ ಹುಡುಗನಿಗೆ ಯುಎಂಡಿಎನ್‍ಜೆಯಲ್ಲಿ ಸಂಶೋಧಕ ವಿದ್ವಾಂಸನ ಹುದ್ದೆ ನೀಡಿದರು. ಅಲ್ಲಿ ಶಿವ ತನ್ನ ಸಂಶೋಧನೆಯನ್ನು ಮುಂದುವರಿಸಲು ಸಹಕಾರಿಯಾಯಿತು. 
ಇದರ ನಡುವೆ ಶಿವನಿಗೆ ತನ್ನ ಹೈಸ್ಕೂಲ್ ವಿದ್ಯಾಭ್ಯಾಸವನ್ನೂ ಪೂರೈಸಬೇಕಿತ್ತಲ್ಲದೆ ತನ್ನ ಸಂಶೋಧನೆಯನ್ನು ಮುಂದುವರಿಸಲು ಸಮಯದ ಜೊತೆಗೆ ಆತನ ಪ್ರೌಢಶಾಲೆಯ ಸಮ್ಮತಿಯೂ ಬೇಕಿತ್ತು. ಅದಕ್ಕಾಗಿ ಆತನ ಶಿಕ್ಷಕರಾದ ಸ್ಟೆಲ್ಲಾ ಒಲೆಕ್ಸಿಯಾಕ್ ಎಂಬವರು ಸಹಾಯ ಮಾಡಿದರು. ಶಾಲಾ ಅವಧಿಯಲ್ಲಿ ಯುಎಂಡಿಎನ್‍ಜೆಗೆ ಭೇಟಿ ನೀಡಿ ಶಿವನಿಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು.
ಅಲ್ಲಿ ಶಿವ ವಿಶ್ವವಿದ್ಯಾಲಯದ ಇಂದಿನ ಇಂಟರ್ ಆಫೀಸ್ ಕಮ್ಯುನಿಕೇಷನ್ ಸಿಸ್ಟಮ್ ಅನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ. ಅಲ್ಲಿ ಫಾರ್‍ಟ್ರಾನ್ ಎಂಬ ಸಿಸ್ಟಮನ್ನು ಬಳಸುತ್ತಿದ್ದರು. ಫಾರ್‍ಟ್ರಾನ್‍ನಲ್ಲಿ ಎಲ್ಲಾ ಹೆಸರುಗಳು ಅಪ್ಪರ್‍ಕೇಸ್‍ನಲ್ಲಿರುವುದರಿಂದ ಕೆಲವೊಂದು ತೊಡಕುಗಳಿದ್ದವು. ಜೊತೆಗೆ ಆ ಸಿಸ್ಟಮ್ ಅಷ್ಟೊಂದು ಪರಿಪೂರ್ಣವಾಗಿರಲಿಲ್ಲ. ಇದೇ ಸಂದರ್ಭದಲ್ಲಿ ಶಿವ ತನ್ನ ಸಂಶೋಧನೆಯನ್ನು ಅಳವಡಿಸನ್ನಲ್ಲದೆ ಅದಕ್ಕೆ ಇಮೈಲ್ ಎಂದು ಹೆಸರು ನೀಡಿದ. ಇದರಿಂದ ಶಿಕ್ಷಣ ಸಂಸ್ಥೆಗೆ ಬಹಳ ಸಹಕಾರಿಯಾಯಿತಲ್ಲದೆ ಕೆಲಸದ ಅವಧಿಯನ್ನು ಕಡಿಮೆಗೊಳಿಸಿತು. ಪತ್ರಗಳನ್ನು ಬರೆದು ಕಳಿಸಬೇಕಿರುವುದೆಲ್ಲಾ ಇಮೈಲ್‍ನಲ್ಲಿ ಕಳಿಸುವಂತಾಯ್ತು. 
ಮೊದಲೆಲ್ಲಾ ಟೈಪಿಂಗ್ ಮಾಡಿ ಅದನ್ನು ಪತ್ರದ ಮೂಲಕ ಕಳುಹಿಸಿ ಅದನ್ನು ಮತ್ತೆ ಟೈಪಿಂಗ್ ಮಾಡಬೇಕಿತ್ತು. ಇದರಿಂದ ತುಂಬಾ ಸಮಯ ವ್ಯರ್ಥವಾಗುತ್ತಿತ್ತು. ಆದರೆ ಇಮೈಲ್ ಬಂದ ಬಳಿಕ ಟೈಪ್ ಮಾಡಿದ್ದನ್ನೇ ನೇರವಾಗಿ ಅಕ್ಷರ ರೂಪದಲ್ಲಿ ಕಳುಹಿಸುವುದರಿಂದ ಸಮಯವೂ ಸಾಕಷ್ಟು ಉಳಿದುಕೊಂಡಿತು. ಶಿವನ ಸಂಶೋಧನೆಗೆ ವಾಷಿಂಗ್‍ಟನ್‍ಹೌಸ್ ಸೈನ್ಸ್ ಟಾಲೆಂಟ್ ಸರ್ಚ್ ಆನರ್ಸ್ ಎಂಬ ಅವಾರ್ಡ್ ಸಿಕ್ಕಿತು. ಇದನ್ನು ಬೇಬಿ ನೊಬೆಲ್ ಎಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ಇದನ್ನು ನೊಬೆಲ್ ಪ್ರಶಸ್ತಿಗೆ ಸಮಾನ ಎಂದು ಬಣ್ಣಿಸಲಾಗುತ್ತದೆ.
ಇಂದು ಇಮೈಲ್‍ನಿಂದ ಚಾಟಿಂಗ್, ಸಂದೇಶಗಳನ್ನು ಕಳುಹಿಸುವುದು ಸೇರಿ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಂಡಿದ್ದೇವೆ. ಆದರೆ ಇದನ್ನು ಕಂಡುಹಿಡಿದಿರುವುದು ಭಾರತ ಮೂಲದ 14 ವರ್ಷದ ಬಾಲಕ ಶಿವ ಎಂಬುವುದನ್ನು ಮರೆಯಬಾರದು. ಇಂದಿನ ತಂತ್ರಜ್ಞಾನ ಯುಗದಲ್ಲಿ ಇಮೈಲ್ ಸಾಮಾನ್ಯವಾಗಿ ಬಿಟ್ಟಿದೆ. ಅದರ ಹಿಂದಿನ ಮಹಾನ್ ಶಕ್ತಿ ಮಿಸ್ಟರ್ ಶಿವ ಅಯ್ಯಾದುರೈ. ಈತನ ಸಂಶೋಧನೆಗೆ ಭಾರತೀಯರಾದ ನಾವೆಲ್ಲಾ ಹೆಮ್ಮೆಪಡಲೇಬೇಕು.
-ಚೇಕಿತಾನ್
Tags

Related Articles

FOR DAILY ALERTS
 
FOR DAILY ALERTS
 
Close