ಪ್ರಚಲಿತರಾಜ್ಯ

ಮತಕ್ಕಾಗಿ ಕಾಂಗ್ರೆಸ್ ನ‌ ಈ ಮುಸ್ಲಿಂ ಶಾಸಕ ಹಿಂದೂಗಳ ಓಲೈಕೆಗೆ ಮಾಡಿದ್ದೇನು ಗೊತ್ತಾ.? ಹಿಂದುತ್ವದ ಮೊರೆ ಹೋದರೇ ಈ ಶಾಸಕ?!

ರಾಜಕೀಯ ಲಾಭಕ್ಕಾಗಿ ಯಾವುದೇ ರೀತಿಯ ನಾಟಕವಾಡಲು ಸಿದ್ದರಿರುವ ಕಾಂಗ್ರೆಸ್ ಗೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಾಮಾನ್ಯ ಜನರ ನೆನಪಾಗತ್ತಿದೆ. ಬಡವರ ಪರ ಎಂದು ಹೇಳಿಕೊಂಡು ಅಧಿಕಾರ ಹಿಡಿದ ರಾಜ್ಯ ಕಾಂಗ್ರೆಸ್ ಸರಕಾರ , ತಮ್ಮ ಕೈಗೆ ಅಧಿಕಾರ ಸಿಗುತ್ತಿದ್ದಂತೆ ರಾಜ್ಯದ ಜನತೆಯನ್ನು ಮರೆತು ತಮ್ಮ ಲಾಭ ನೋಡಿಕೊಳ್ಳುತ್ತಿದ್ದಾರೆ.

ಇದೀಗ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಗೆ ದಿನ ಎಣಿಕೆ ಶುರುವಾಗುತ್ತಿದ್ದಂತೆ ಕಾಂಗ್ರೆಸ್ಸಿಗರ ಕಳ್ಳಾಟವೂ ಬಹಳ ಜೋರಾಗಿಯೇ ನಡೆಯುತ್ತಿದೆ. ಮತದಾರರನ್ನು ಸೆಳೆಯಲು ಈ ಕಾಂಗ್ರೆಸ್ ನಾಯಕರು ಪಡುತ್ತಿರುವ ಪಾಡು ಅಂತಿಂತಾದ್ದಲ್ಲ.

ಕರಾವಳಿಯಲ್ಲಿ ನಡೆಯುತ್ತಿದೆ ಕಾಂಗ್ರೆಸ್ಸಿಗರ ಹರಸಾಹಸ..!

ಕರಾವಳಿ ಹಿಂದೂಗಳ ಭದ್ರಕೋಟೆಯಾಗಿದ್ದರೂ ಸಹ ಕಳೆದ ಬಾರಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ತಮ್ಮ ಪ್ರಾಬಲ್ಯ ಸಾಧಿಸಿದ್ದರು. ಗೆದ್ದ ದಿನದಿಂದಲೇ ತಮ್ಮ ಅಟ್ಟಹಾಸ ಮೆರೆದಿದ್ದ ಕಾಂಗ್ರೆಸ್ಸಿಗರು, ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಹಲ್ಲೆ ಕೊಲೆಗಳಂತಹ ದುಷ್ಕೃತ್ಯಗಳನ್ನು ಮಾಡುವ ಮೂಲಕ ಕರಾವಳಿಯನ್ನು ಕೋಮು ಗಲಭೆಗೆ ಕುಖ್ಯಾತಿ ಪಡೆಯುವಂತೆ ಮಾಡಿದ್ದರು. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಜಾತಿ ಧರ್ಮಗಳ ನಡುವೆ ಕಿಚ್ಚು ಹಚ್ಚಿ ತಾವು ಮಾತ್ರ ರಾಜಕೀಯ ಲಾಭ ಗಿಟ್ಟಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಹಿಂದೂಗಳ ಓಲೈಕೆಗಾಗಿ ಹರಸಾಹಸ ಪಡುತ್ತಿರುವ ಕಾಂಗ್ರೆಸ್ ಕೆಲವೊಂದು ತಂತ್ರಗಳನ್ನು ಬಳಸಿ ಮತದಾರರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ.

ಕಾಂಗ್ರೆಸ್ ಶಾಸಕನಿಂದ ಮನೆ ಮನೆಗೆ ಸೀರೆ..!

ಅಧಿಕಾರದಲ್ಲಿ ಇರುವ ಪಕ್ಷವೇ ಇಂದು ತನ್ನ ಉಳಿವಿಗಾಗಿ ಈ ರೀತಿ ಹೋರಾಟ ಮಾಡುತ್ತಿದೆ ಎಂದರೆ , ಈ ಸರಕಾರದ ವೈಫಲ್ಯ ಯಾವ ರೀತಿಯಲ್ಲಿದೆ ಎಂಬೂದು ತಿಳಿಯುತ್ತದೆ.ಕರಾವಳಿಯ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವಂತಹ ಬಿ ಎ ಮೊಯಿದ್ದೀನ್ ಬಾವಾ ತನ್ನ ಕ್ಷೇತ್ರದಲ್ಲಿ ಮನೆ ಮನೆಗೆ ಸೀರೆ ಹಂಚಿ ಮತದಾರರನ್ನು ಸೆಳೆಯುವ ಪ್ರಯತ್ನಕ್ಕೆ ಕೈ ಹಾಕಿದ್ದರು.

ಮಂಗಳೂರಿನ ಉತ್ತರ ವಲಯದ ಸುರತ್ಕಲ್ ನಲ್ಲಿ ಇತ್ತೀಚೆಗೆ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಕೊಲೆಯಾಗಿತ್ತು. ರಸ್ತೆಯಲ್ಲೇ ಬರ್ಬರವಾಗಿ ಹತ್ಯೆ ಯಾಗಿದ್ದ ದೀಪಕ್ ರಾವ್ ಕೊಲೆಗಾರರಿಗೂ ಶಾಸಕ ಮೊಯಿದ್ದೀನ್ ಬಾವಾರಿಗೂ ಬಹಳ ಹತ್ತಿರದ ಸಂಪರ್ಕ ಇತ್ತೂ ಎಂಬೂದು ತನಿಖೆಯ ವೇಳೆ ಬಯಲಾಗಿತ್ತು. ಇದರಿಂದಾಗಿ ತನ್ನ ಇಮೇಜ್ ಗೆ ಧಕ್ಕೆ ಉಂಟಾದ ಪರಿಣಾಮವಾಗಿ ಮುಂದಿನ ಚುನಾವಣೆಯಲ್ಲಿ ಸೋಲು ಖಚಿತ ಎಂದು ಅರಿತ ಶಾಸಕ  ಮನೆ ಮನೆಗೆ ಸೀರೆ ಹಂಚಿ ಮತದಾರರನ್ನು ಸೆಳೆಯಲು ಪ್ರಯತ್ನಿಸಿದ್ದರು.

ಕೊಂದ ಪಾಪ ರಾಜಿಯಿಂದ ಪರಿಹಾರ..!?

ಮಂಗಳೂರಿನ ಉತ್ತರ ವಲಯದ ಕಾಂಗ್ರೆಸ್ ಶಾಸಕ ಮೊಯಿದ್ದೀನ್ ಬಾವಾ ರ ಕೃಪಾಕಟಾಕ್ಷತೆಯಿಂದ ಸುರತ್ಕಲ್ ನ ಹಿಂದೂ ಕಾರ್ಯಕರ್ತನೊಬ್ಬನ ಹತ್ಯೆಯಾಗಿತ್ತು. ಆರೋಪಿಗಳಿಗೆ ಶಾಸಕರ ನೇರ ಸಂಪರ್ಕ ಇರುವುದು ತನಿಖೆಯ ವೇಳೆ ಬಹಿರಂಗವಾಗಿತ್ತು. ದೀಪಕ್ ರಾವ್ ಕೊಲೆಯಾಗಿ ಇನ್ನೂ ಸರಿಯಾಗಿ ಎರಡು ತಿಂಗಳು ಕಳೆದಿಲ್ಲ, ಆದರೂ ಶಾಸಕ ಮೊಯಿದ್ದೀನ್ ಬಾವಾ ಹಿಂದೂಗಳ ಓಲೈಕೆಗಾಗಿ ಡ್ರಾಮಾ ಆರಂಭಿಸಿದ್ದು ಸದ್ಯ ಸಾರ್ವಜನಿಕ ವಲಯದಲ್ಲೂ ಬಹಳ ಕುತೂಹಲ ಕೆರಳಿಸಿದೆ.

ಇದೀಗ ಚುನಾವಣೆ ಹತ್ತಿರವಾಗಿರುವವುದನ್ನು ಗಮನಿಸಿಕೊಂಡು ಹಿಂದೂಗಳ ಓಲೈಕೆಗಾಗಿ ಸಂಘಪರಿವಾರದ ಕಾರ್ಯಕ್ರಮಗಳಲ್ಲಿ ಸ್ವತಃ ಕೇಸರಿ ಶಾಲು ಧರಿಸಿಕೊಂಡು ಭಾಗಿಯಾಗುತ್ತಿದ್ದಾರೆ. ಹಿಂದೂ ಕಾರ್ಯಕರ್ತ ದೀಪಕ್ ರಾವ್ ಕೊಲೆಯಾದ ಸಂದರ್ಭದಲ್ಲಿ ಶಾಸಕ ಮೊಯಿದ್ದೀನ್ ಬಾವಾರನ್ನು ರಾಜ್ಯಾದ್ಯಂತ ಹಿಂದೂಗಳು ವಿರೋಧಿಸಿ ಹೋರಾಟ, ಪ್ರತಿಭಟನೆ ನಡೆಸಿದ್ದರು. ಆದರೆ ಇದೀಗ ಎಲ್ಲವನ್ನೂ ಮುಚ್ಚಿಹಾಕಲು ಪ್ರಯತ್ನಿಸುತ್ತಿರುವ ಶಾಸಕರು ಹೆಚ್ಚಾಗಿ ಹಿಂದೂಪರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ದೇಶದ್ರೋಹಿಗಳ ಜೊತೆ ನೇರ ಸಂಪರ್ಕ ಹೊಂದಿದ್ದ ಶಾಸಕ..!

ಕಾಂಗ್ರೆಸ್ ಗೆ ದೇಶದ್ರೋಹಿಗಳ ಪಟ್ಟ ಬಂದಿದ್ದೇ ಕಾಂಗ್ರೆಸ್ ನಾಯಕರು ಮಾಡುತ್ತಿರುವ ದೇಶದ್ರೋಹಿ ಚಟುವಟಿಕೆಗಳಿಂದ. ಕಾಶ್ಮೀರವನ್ನು ಭಾರತ ಎಂದಿಗೂ ಪಾಕಿಸ್ತಾನಕ್ಕೆ ಬಿಟ್ಟುಕೊಡಲು ತಯಾರಿಲ್ಲ. ಆದರೆ ಓವೈಸಿ ಮತ್ತು ಝಾಕೀರ್ ನಾಯ್ಕ್ ನಂತಹ ಮುಸ್ಲಿಂ ನಾಯಕರು ಮಾತ್ರ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಬೇಕು ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತಲೇ ಇದ್ದಾರೆ.

ಆದರೆ ಮಂಗಳೂರಿನ ಈ ಕಾಂಗ್ರೆಸ್ ಶಾಸಕ ಇದೇ ಮುಸ್ಲಿಂ ನಾಯಕರ ಜೊತೆ ನೇರ ಸಂಪರ್ಕ ಹೊಂದಿದ್ದಾರೆ ಎಂದರೆ ಕರಾವಳಿಯಲ್ಲಿ ನಡೆಯುವ ಕೋಮುಗಲಭೆಯಲ್ಲೂ ಈ ಕಾಂಗ್ರೆಸ್ ಶಾಸಕರ ಕೈವಾಡ ಇರುವುದು ಸ್ಪಷ್ಟ. ಭಾರತ ಸರಕಾರವೇ ಝಾಕೀರ್ ನಾಯ್ಕ್ ನಂತಹ ದೇಶದ್ರೋಹಿಗಳನ್ನು ಭಾರತದಿಂದ ಗಡಿಪಾರು ಮಾಡಿದೆ, ಆದರೆ ಕಾಂಗ್ರೆಸ್ ಮಾತ್ರ ಇನ್ನೂ ಈ ನಾಯಕರ ಜೊತೆ ಸಂಪರ್ಕ ಹೊಂದಿದ್ದಾರೆ.

ಪಾಕಿಸ್ತಾನ ಜಿಂದಾಬಾದ್ ಎಂದವರಿಗೂ ಆಶ್ರಯ ಕೊಟ್ಟ ಮೊಹಿನುದ್ದೀನ್ ಬಾವಾ..!

ಹೌದು ಮಂಗಳೂರಿನ ಉತ್ತರದ ಸುರತ್ಕಲ್ ನಲ್ಲಿ ಕೆಲ ಜಿಹಾದಿ ಗುಂಪು ಪಾಕಿಸ್ತಾನದ ಪರ ಘೋಷಣೆ ಕೂಗಿ ತಮ್ಮ ಕ್ರೌರ್ಯ ಮೆರೆದಿದ್ದರು.‌ಈ ಬಗ್ಗೆ ಸ್ಥಳೀಯರು ದೂರು ನೀಡಿದ್ದರೂ ಕೂಡ ಶಾಸಕರ ಪ್ರಭಾವದಿಂದಾಗಿ ಈ ಜಿಹಾದಿ ಗುಂಪುಗಳು ತಪ್ಪಿಸಿಕೊಂಡಿದ್ದರು. ತಮ್ಮ ಅಧಿಕಾರದ ಪ್ರಭಾವದಿಂದ ದೇಶದ್ರೋಹಿಗಳ ಪರ ನಿಲ್ಲುತ್ತಿದ್ದ ಶಾಸಕ ಮೊಹಿನುದ್ದೀನ್ ಬಾವಾ ದೀಪಕ್ ರಾವ್ ಹತ್ಯೆಯಲ್ಲೂ ಶಾಮೀಲಾಗಿದ್ದರು ಎಂಬ ಸತ್ಯಾಂಶವೂ ಬಯಲಾಗಿತ್ತು.

ಏನೇ ಹೇಳಿ, ಚುನಾವಣೆಗಾಗಿ ಯಾವ ಮಟ್ಡಕ್ಕೂ ಇಳಿಯಲು ತಯಾರಾಗಿರುವ ಕಾಂಗ್ರೆಸಿಗರು ಹಣ, ಸೀರೆ, ಕುಕ್ಕರ್ ಇದೇ ರೀತಿ ಒಂದಲ್ಲಾ ಒಂದು ರೀತಿಯಲ್ಲಿ ಮತದಾರರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನ‌ ನೈಜ ಮುಖ ಈಗಾಗಲೇ ರಾಜ್ಯದ ಜನತೆಯ ಮುಂದೆ ಅನಾವರಣಗೊಂಡಿದ್ದು, ಮುಂದಿನ ಚುನಾವಣೆಯೇ ಸಾಕ್ಷಿಯಾಗಲಿದೆ..!

–ಅರ್ಜುನ್

Tags

Related Articles

Close