ಅಂಕಣಇತಿಹಾಸದೇಶ

ಯುದ್ಧದಲ್ಲಿ ಸೋತಿದ್ದೇವೆ ನನಗೆ ಮರಣದಂಡನೆ ನೀಡಿ ಎಂದು ಆ ವೀರರಾಣಿ ಕೇಳಿದಾಗ ಶಿವಾಜಿ ಮಹಾರಾಜರು ಮಾಡಿದ್ದೇನು ಗೊತ್ತೇ?!

ಪ್ರಜಾಹಿತ ರಕ್ಷಕ, ಹಿಂದುತ್ವ ರಕ್ಷಕ, ರಾಷ್ಟ್ರಪ್ರೇಮಿ ಎಂದೆಲ್ಲ ಹೆಸರುವಾಸಿಯಾಗಿರುವ, ಹಿಂದವೀ ಸ್ವರಾಜ್ಯದ ಸ್ಥಾಪನೆಗಾಗಿ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನು ಕೇಳಿದರೆ ಸಾಕು ಮೈಮನ ಒಂದು ಕ್ಷಣ ಚುಮ್ ಎನ್ನುತ್ತೇ!! ಹಿಂದೂ ರಾಷ್ಟ್ರವನ್ನು ಕಟ್ಟಿ ಬೆಳೆಸಿರುವ ವೀರ ಶಿವಾಜಿ ಕತ್ತಿಗೆ ಕತ್ತಿ ಎನ್ನುವ ಸೂತ್ರ ಹೊತ್ತುಕೊಂಡಿದ್ದ ಶಿವಾಜಿ ಯುದ್ಧದಲ್ಲಿ ಗೆದ್ದರೂ ಕೂಡ ಸೋತ ರಾಣಿಗೆ ನೀಡಿರುವ ಗೌರವ ನೋಡಿದರೆ ಶಿವಾಜಿಯವರ ಮೇಲಿದ್ದ ಗೌರವ ಇಮ್ಮಡಿಯಾಗುವುದಂತೂ ಖಂಡಿತಾ!!

ಯಾವ ಭವ್ಯ ಭಾರತ ಇಸ್ಲಾಮೀ ಭಯೋತ್ಪಾದಕರ ದಾಳಿ, ದೌರ್ಜನ್ಯದ ಆಡಳಿತದಡಿಯಲ್ಲಿ ನಲುಗುತ್ತಿತ್ತೋ, ಯಾವ ಹಿಂದೂಸ್ತಾನದ ಹಿಂದೂಗಳನ್ನು ಪಶುಗಳಿಗಿಂತ ಕಡೆಯಾಗಿ ನಡೆಸಿಕೊಳ್ಳಲಾಗುತ್ತಿತ್ತೋ ಅಂಥಾ ದೇಶದ ದಾಸ್ಯಮುಕ್ತಿಗಾಗಿ, ಸ್ವಾಭಿಮಾನಿ ಸ್ವತಂತ್ರ ಜೀವನಕ್ಕಾಗಿ ಹೋರಾಡಿದ ಶಿವಾಜಿ ನ್ಯಾಯವಂತ, ಸುಸಜ್ಜಿತ ನೌಕಾದಳ ಮತ್ತು ಕರ್ತವ್ಯ ದಕ್ಷ, ಧರ್ಮಶ್ರದ್ದೆ ಮತ್ತು ಭಾಷಾ ಶುದ್ದಿಯನ್ನು ಪುರಸ್ಕರಿಸುವ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ಧರ್ಮಕ್ಕೆ ರಾಜಸಿಂಹಾಸನ ದೊರಕಿಸಿಕೊಟ್ಟಿದ್ದು ಅವಿಸ್ಮರಣೀಯ.

ಭಾರತ ಕಂಡ ಅತ್ಯಂತ ಶ್ರೇಷ್ಠ ಪುರುಷ ಹಿಂದವೀ ಸ್ವರಾಜ್ಯದ ಮೂಲಕ ತಾಯಿಯನ್ನು ಜಗ್ಗದ್ಗುರುವನ್ನಾಗಿಸಲು ತನ್ನ ಸರ್ವಸ್ವವನ್ನೂ ಸಮರ್ಪಿಸಿದ ಛತ್ರಪತಿ ಶಿವಾಜಿ ಮಹಾರಾಜರಿಗೆ “ಸ್ವರಾಜ್ಯ ಸಂಸ್ಥಾಪನೆ”, “ಸ್ವರಾಜ್ಯ ಸಂಸ್ಥಾಪಕ” ಎನ್ನುವುದೇ ಎಲ್ಲಕ್ಕಿಂತ ಯಥಾರ್ಥವಾದ ಬಿರುದು. ಆದರೆ ಛತ್ರಪತಿ ಶಿವಾಜಿ ಮಹಾರಾಜರು ಜನಿಸುವ ಮೊದಲು ಹಿಂದೂ ಸ್ತ್ರೀಯರ ಶೀಲವು ಸುರಕ್ಷಿತವಿರಲಿಲ್ಲ, ಪ್ರತ್ಯಕ್ಷ ಜೀಜಾಮಾತೆಯ ಮೈದುನನ ಹೆಂಡತಿಯನ್ನೇ ಯವನ ಸರದಾರನು ಸ್ನಾನ ಘಟ್ಟದಿಂದ ಅಪಹರಿಸಿಕೊಂಡು ಹೋಗಿದ್ದನು. ಆ ಕಾಲದಲ್ಲಿಯೂ ದೇವಸ್ಥಾನಗಳನ್ನು ಧ್ವಂಸಗೊಳಿಸಲಾಗುತ್ತಿತ್ತು ಮತ್ತು ಗೋಮಾತೆಯ ಕುತ್ತಿಗೆಯ ಮೇಲೆ ಕಸಾಯಿಯ ಚೂರಿ ಯಾವಾಗ ಬೀಳುವುದು ಎಂಬುದನ್ನು ಹೇಳಲು ಸಾಧ್ಯವಿರಲಿಲ್ಲ.

ಮಹಾರಾಜರ “ಹಿಂದೂ ರಾಷ್ಟ್ರವು ಸ್ಥಾಪನೆಯಾದ ಕೂಡಲೆ ದೇವಸ್ಥಾನಗಳನ್ನು ಧ್ವಂಸಗೊಳಿಸುವುದು ನಿಂತಿತು, ಮಾತ್ರವಲ್ಲ ದೇವಸ್ಥಾನಗಳನ್ನು ಧ್ವಂಸಗೊಳಿಸಿ ಕಟ್ಟಲಾಗಿದ್ದ ಮಸೀದಿಗಳು ಪುನಃ ಹಿಂದಿನಂತೆ ದೇವಸ್ಥಾನಗಳಲ್ಲಿ ರೂಪಾಂತರಗೊಂಡವು. ಕಣ್ಣುಗಳಿಂದ ಕಣ್ಣೀರು ಸುರಿಸುವ ಗೋಮಾತೆಯು ಆನಂದದಿಂದ ಅಂಬಾ ಎನ್ನತೊಡಗಿದಳು. ಹಿಂದೂ ರಾಷ್ಟ್ರದ ಸ್ಥಾಪನೆಯು ಹಿಂದೂ ದ್ವೇಷಿಗಳ ಎದೆಯಲ್ಲಿ ನಡುಕ ಹುಟ್ಟಿಸಲು ಸಾಕಾಗುವಷ್ಟಾಗಿತ್ತು!! ಆದರೆ ಯುದ್ಧದಲ್ಲಿ ಗೆದ್ದರೂ ಸೋತ ರಾಣಿಯನ್ನು ಗೌರವಿಸಿದ ಪರಿಯನ್ನು ಕೇಳಿದರೆ ಶಿವಾಜಿಯೂ ಸ್ತ್ರೀಯರಿಗೆ ನೀಡುತ್ತಿದ್ದ ಗೌರವ ಏನೋ ಎಂಬುವುದು ತಿಳಿದು ಬರುತ್ತೆ!!

ಹೌದು… 1678ರಲ್ಲಿ ಛತ್ರಪತಿ ಶಿವಾಜಿ ಸೇನೆ ಬಳ್ಳಾರಿಯ ಒಂದು ಚಿಕ್ಕ ಸಂಸ್ಥಾನದ ಮೇಲೆ ದಾಳಿ ಮಾಡುತ್ತದೆ. ಆ ಸಂದರ್ಭದಲ್ಲಿ ಬಳ್ಳಾರಿಯ ಆ ಚಿಕ್ಕ ಸಂಸ್ಥಾನದ ಸೈನಿಕರು ವೀರಾವೇಷದಿಂದ ಹೋರಾಡುತ್ತಾರಲ್ಲದೇ ಶಿವಾಜಿ ಸೈನ್ಯದ ಸೈನಿಕರನ್ನು ಮಟ್ಟ ಹಾಕಲು ಪ್ರಯತ್ನಿಸುತ್ತಾರೆ. ಆದರೆ ಆ ಶಿವಾಜಿ ಯ ಸೈನ್ಯ ಬಲಿಷ್ಟವಾಗಿದ್ದರಿಂದ ಬಳ್ಳಾರಿ ಸಂಸ್ಥಾನಕ್ಕೆ ಸೋಲುಂಟಾಗುತ್ತದೆ!! ತದನಂತರದಲ್ಲಿ ಯುದ್ಧದಲ್ಲಿ ಸೋತ ರಾಜನನ್ನು ಕರೆತರುವಂತೆ ಶಿವಾಜಿಯು ಸೈನಿಕರಿಗೆ ಸೂಚಿಸುತ್ತಾನೆ.

ಆದರೆ ರಾಜನನ್ನು ಹುಡುಕುತ್ತಾ ಹೋದ ಸೈನಿಕರಿಗೆ ಆಶ್ಚರ್ಯಕರವಾದ ಸಂಗತಿಯೊಂದು ಕಂಡು ಬರುತ್ತದೆ!! ಅದೇನೆಂದರೆ, ಬಳ್ಳಾರಿಯ ಚಿಕ್ಕ ಸಂಸ್ಥಾನದ ಶಾಸನ ಮಾಡುತ್ತಿದ್ದದ್ದು ರಾಜನಲ್ಲ!! ಬದಲಾಗಿ ರಾಣಿ!! ಆಕೆಯ ಹೆಸರೇ ರಾಣಿ ಮಾಲಾಬಾಯಿ. ಶಿವಾಜಿಯ ಸೈನಿಕರು ಸಂಸ್ಥಾನವನ್ನು ಆಳುತ್ತಿದ್ದ ರಾಣಿಯನ್ನು ಕಂಡು ದಿಗ್ಭ್ರಮೆಗೊಂಡರಲ್ಲದೇ ಸೈನಿಕರು ಆದರ ಪೂರ್ವಕವಾಗಿ ಆ ರಾಣಿಯನ್ನು ಶಿವಾಜಿಯ ಹತ್ತಿರ ಕರೆದುಕೊಂಡು ಬರುತ್ತಾರೆ. ರಾಣಿ ಬಂದು ಸಿಂಹಾಸನದಲ್ಲಿ ಕುಳಿತಿದ್ದ ಶಿವಾಜಿಗೆ ನಮಸ್ಕರಿಸಿ “ಯುದ್ಧದಲ್ಲಿ ಸೋತಿದ್ದೇವೆ, ಮರಣವನ್ನು ನೀಡಿ” ಎಂದು ಕೇಳುತ್ತಾಳೆ.

ಆದರೆ ಅಲ್ಲಿ ನಡೆದಿದ್ದು ಮಾತ್ರ ಮನ ಕಲಕುವ ದೃಶ್ಯ!! ಆಕೆಯ ಮಾತುಗಳನ್ನು ಆಲಿಸಿ ಸಿಂಹಾಸನದಿಂದೆದ್ದ ಶಿವಾಜಿ ನೇರವಾಗಿ ರಾಣಿಯಲ್ಲಿಗೆ ಬಂದು ಆಕೆಯ ಪಾದಗಳಿಗೆ ನಮಸ್ಕರಿಸಿ “ಅಮ್ಮಾ ನೀವು ಬೇರೆಯಲ್ಲ, ನನ್ನಮ್ಮ ಜೀಜಾಬಾಯಿ ಬೇರೆಯಲ್ಲ!! ನಿಮ್ಮಂತಹ ಶೂರ ನಾರಿಗೆ ಅವಮಾನ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಅಮ್ಮಾ ಕ್ಷಮಿಸಮ್ಮಾ” ಎಂದು ಅಂಗಲಾಚುತ್ತಾನೆ.

ಆಗ ರಾಣಿ ಮಾಲಾದೇವಿಯು ಶಿವಾಜಿಯ ಮಾತನ್ನು ಕೇಳಿ ಆಕೆಯ ಕಣ್ಣಿಂದ ಕಣ್ಣೀರು ಆಕೆಗೆ ಗೊತ್ತಿಲ್ಲದಂತೆಯೇ ಜಾರಿ ಹೋಗುತ್ತದೆ!! ಶಿವಾಜಿಗೆ ಪ್ರತ್ಯುತ್ತರವಾಗಿ, “ನಿನ್ನ ಆದರ್ಶ ಗುಣಗಳ ಬಗ್ಗೆ ಕೇಳಿದ್ದೆ. ಇಂದು ಸಾಕ್ಷಾತ್ ಅನುಭವವಾಯಿತು. ನಿಜವಾಗಲೂ.. ನೀನೊಬ್ಬ ಆದರ್ಶ ವೀರ!! ನಿನ್ನ ಶೌರ್ಯ, ಸಾಹಸ ದೇಶದ ತುಂಬೆಲ್ಲಾ ಖ್ಯಾತಿಗಳಿಸಲಿ” ಎಂದು ಕಣ್ಣೀರು ಸುರಿಸುತ್ತಾ ರಾಣಿ ಶಿವಾಜಿಯನ್ನು ಹರಸುತ್ತಾಳೆ.

ಒಂದು ವೇಳೆ ಶಿವಾಜಿಯ ಸ್ಥಾನದಲ್ಲಿ ಬೇರೆಯಾವನೋ ಪರಕೀಯನಾಗಿದ್ದರೆ ಆ ರಾಣಿಯ ಸ್ಥಿತಿಯನ್ನು ಊಹಿಸಲೂ ಆಗುತ್ತಿರಲಿಲ್ಲ!! ಯಾಕೆಂದರೆ ಹಿಂದೂ ದೇವಾಲಯಗಳನ್ನು, ಹಿಂದುಗಳನ್ನು ನಿರ್ನಾಮ ಮಾಡಲು ತುದಿಗಾಲಿನಲ್ಲಿ ನಿಂತಿದ್ದ ಮೊಘಲರಿಗೆ ಹುಲಿಯ ಬಾಯಿಗೆ ಸಿಲುಕಿದ ಮೂಕ ಪ್ರಾಣಿಯಾಗುತ್ತಿದ್ದಳೋ ಏನೋ ಗೊತ್ತಿಲ್ಲ!! ಆದರೆ ಹಿಂದವೀ ಸ್ವರಾಜ್ಯಕ್ಕಾಗಿ ತನ್ನ ಸರ್ವಸ್ವವನ್ನೂ ಸಮರ್ಪಿಸಿದ ಛತ್ರಪತಿ ಶಿವಾಜಿಯ ಮಾತು ಎಂಥವರ ಗಟ್ಟಿ ಮನಸ್ಸನ್ನು ಕೂಡ ಒಂದು ಕ್ಷಣ ನೀರು ಮಾಡುವುದಂತೂ ಖಂಡಿತಾ….

ಭಾರತದಂತಹ ಪುಣ್ಯಭೂಮಿಯಲ್ಲಿ ಸ್ತ್ರೀ ಅಂದರೆ ಒಂದು ವಿಶೇಷ ಸ್ಥಾನ, ಗೌರವ, ಪೂಜ್ಯನೀಯ ಭಾವ ಮನದಲಿ. “ಯತ್ರ ನಾರ್ಯಸ್ತು ಪೂಜ್ಯಂತೆ, ರಮಂತೆ ತತ್ರ ದೇವತಾ, ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾ.” ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ ಎನ್ನುವುದು ಅಕ್ಷರಶಃ ನಿಜ!! ಆದರೆ ಇದು ನಮ್ಮ ದೇಶದ ಮಣ್ಣಿನ ಗುಣಾರೀ.. ಶೂರನಿಗೆ ಕ್ಷಮಾಗುಣವೇ ಪ್ರಧಾನ.

Related image

ವೀರ ಶಿವಾಜಿಯು ಸೋತ ಸಂಸ್ಥಾನದ ರಾಣಿಯನ್ನು ತನ್ನ ತಾಯಿ ಸಮಾನಲೇಂದು ಆಕೆಯ ಚರಣಗಳಿಗೆ ವಂದಿಸಿರುವುದನ್ನು ಕಂಡರೇ ಶಿವಾಜಿಯ ಬಗ್ಗೆ, ಶಿವಾಜಿ ಪರಾಕ್ರಮದ ಬಗ್ಗೆ, ಸ್ತ್ರೀಯರ ಮೇಲೆ ತೋರಿರುವ ಗೌರವವನ್ನು ಕಂಡರೆ ಶಿವಾಜಿಯ ಗುಣಗಾನ ಮಾಡಲು ಪದಗಳೇ ಸಿಗುತ್ತಿಲ್ಲ!! ಒಂದು ವೇಳೆ ಶಿವಾಜಿಯ ಸ್ಥಾನದಲ್ಲಿ ಒಬ್ಬ ಪರಕಿಯನಿದ್ದಿದ್ದರೆ ಆಕೆ ಏನಾಗುತ್ತಿದ್ದಳೋ ಗೊತ್ತಿಲ್ಲ!! ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಪಣತೊಟ್ಟಂತಹ ವೀರ ಶಿವಾಜಿಗೆ ಆ ರಾಣಿಯಲ್ಲಿ ತನ್ನ ತಾಯಿಯನ್ನು ಕಂಡ ಎಂದರೆ ಆತನನ್ನು ನಾ… ಏನೆಂದು ಬಣ್ಣಿಸಲಿ!!

ನೀವೇ ಹೇಳಿ………….

– ಅಲೋಖಾ

Tags

Related Articles

Close