ಅಂಕಣ

ಪ್ರಧಾನಿ ಮೋದಿಯೊಡನೆ ಹಿಂದೂ ಧರ್ಮವನ್ನು ಹಾಡಿ ಹೊಗಳಿದ ಕಮ್ಯೂನಿಸ್ಟ್ ರಾಷ್ಟ್ರದ ಅಧ್ಯಕ್ಷ!! ಹಿಂದೂಗಳೊಂದಿಗೆ ವ್ಯವಹರಿಸುವುದು ಸುಲಭವಲ್ಲವೆಂದಿದ್ಯಾಕೆ?!

ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಷಮತೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು. ಯಾಕೆಂದರೆ ನರೇಂದ್ರ ಮೋದಿ ಒಬ್ಬ ಮಹಾನ್ ಕನಸುಗಾರ. ಕನಸನ್ನು ನನಸಾಗಿ ಪರಿವರ್ತಿಸುವ ಸಾಮಥ್ರ್ಯವುಳ್ಳ ಧೀಮಂತ!! ಇಡೀ ಭಾರತವನ್ನಲ್ಲದೆ ಇಡೀ ಜಗತ್ತನ್ನೆ ಬದಲಾಯಿಸಿದ ಮಹಾನ್ ವೀರ!! ಅವರೋರ್ವ ವಿಶ್ವನಾಯಕ, ವಿಶ್ವವನ್ನೇ ಭಾರತದತ್ತ ಮುಖ ಮಾಡಿ ನೋಡುವಂತೆ ಮಾಡಿದ ಅಭಿನವ ಸ್ವಾಮಿ ವಿವೇಕಾನಂದ ನಮ್ಮ ಪ್ರಧಾನಿ ನರೇಂದ್ರ ಮೋದಿ!! ಮೋದೀಜೀ ಯಾವಾಗ ಅಧಿಕಾರ ಸ್ವೀಕರಿಸಿಕೊಂಡರೋ ಅಂದಿನಿಂದ ಇಡೀ ವಿಶ್ವವೇ ಮೋದೀಜೀಯನ್ನು ಗೌರವದಿಂದ ಕಾಣುತ್ತಿದೆ!! ಮೋದಿಜೀಯನ್ನು ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಮೋದಿಜಿಯ ಆಡಳಿತ ವೈಖರಿಯನ್ನು ಕಂಡು ಹಾಡಿ ಕೊಂಡಾಡುತ್ತಿದ್ದಾರೆ…

Image result for modi

ಭಾರತೀಯರನ್ನು ಕಂಡರೆ ಎಲ್ಲಾ ರಾಷ್ಟ್ರಗಳೂ ಗೌರವಿಸುತ್ತದೆ….. ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಕೀರ್ತಿ ನಮ್ಮ ಮೋದೀಜೀಗೆ ಸಲ್ಲುತ್ತದೆ… ಯಾಕೆಂದರೆ ಸ್ವಾತಂತ್ರ್ಯ ಸಿಕ್ಕಿ ಇಷ್ಟು ವರ್ಷಗಳು ಕಳೆದರು ಸಹ ಯುಪಿಎ ಸರಕಾರ ಅಧಿಕಾರದಿಂದ ಭಾರತದ ಸ್ಥಿತಿಯನ್ನೇ ಹೀನಾಯ ಸ್ಥಿತಿಗೆ ತಳ್ಳಿದ್ದರು!! ಆದರೆ ಮೋದಿಜೀ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಭಾರತವನ್ನು ಉನ್ನತ ಮಟ್ಟಕ್ಕೇರಿಸಿದ್ದರು!!

ಅದಲ್ಲದೆ ಇಲ್ಲಿಯ ಸಂಸ್ಕøತಿ ಆಚಾರ ವಿಚಾರವನ್ನು ಕಂಡು ಇಡೀ ಜಗತ್ತಿನ ವಿದ್ವಾಂಸರೆಲ್ಲಾ ಹಿಂದೂ ತತ್ವಜ್ಞಾನವನ್ನು ಕಂಡು ಬೆರಗಾಗುವುದಷ್ಟೇ ಅಲ್ಲದೆ, ಹಿಂದೂ ತತ್ವಜ್ಞಾನವನ್ನು ಎರಡು ಮಾತಿಲ್ಲದೆ ಒಪ್ಪಿಕೊಳ್ಳುತ್ತಿದ್ದಾರೆ. ವಿಶ್ವವು ಭಾರತೀಯ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳಲಾರಂಭಿಸಿದ್ದು, ಇದರಿಂದ ಹಿಂದೂ ಧರ್ಮದ ಮೇಲೆ ವಿದೇಶಿಗರ ಒಲವು ಕೂಡಾ ಹೆಚ್ಚುತ್ತಿದೆ. ಆದರೆ ಇಲ್ಲಿ ಭಾರತೀಯರ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ…. ಭಾರತದಲ್ಲಿ ಹಿಂದೂ ಧರ್ಮದ ಬಗ್ಗೆ ಮಾತಾಡುವುದು ಕೋಮುವಾದ ಎಂದು ಹೀಯಾಳಿಸಲಾಗುತ್ತದೆ. ಭಾರತದಲ್ಲೇ ಜೀವಿಸಿ ಇದೇ ಮಣ್ಣಲ್ಲಿ ಬೆಳೆದು ಹಿಂದೂ ಧರ್ಮವನ್ನೇ ಹೀಯಾಳಿಸುವವರೇ ಅದೆಷ್ಟೋ… ಆದರೆ ವಿದೇಶಿಯರಿಗೆ ಹಿಂದೂ ಧರ್ಮದ ಬಗ್ಗೆ ವಿಶೇಷ ಆಸಕ್ತಿ ಹೆಚ್ಚಿದೆ. ಅವರೂ ಕೂಡಾ ಹಿಂದೂ ಧರ್ಮವೆಂದರೆ ಬರೇ ಗೋಮಾತೆಯನ್ನು ಪೂಜಿಸುವುದು, ಜೈಶ್ರೀರಾಮ್ ಅನ್ನುವುದಷ್ಟೇ ಅಲ್ಲ, ಅದೊಂದು ಸಂತೋಷದಿಂದ ಬದುಕುವುದು ಹೇಗೆ ಎಂದು ಕಲಿಸುತ್ತದೆ ಎಂದು ಅರ್ಥೈಸಿದ್ದಾರೆ. ಇದರ ಕ್ರೆಡಿಟ್ ಶ್ರೀಯುತ ನರೇಂದ್ರ ಮೋದಿಯವರಿಗೆ ಸಲ್ಲಬಹುದು. ಇದೀಗ ಹಿಂದೂ ಸಂಸ್ಕøತಿ ಮತ್ತು ಆಚಾರ ವಿಚಾರಗಳಿಗೆ ತಲೆ ಬಾಗಿ ಅದೆಷ್ಟೋ ಜನ ಹಿಂದೂ ಧರ್ಮಕ್ಕೆ ಮತಾಂತರ ಕೂಡಾ ಆಗುತ್ತಿದ್ದಾರೆ ಎಂದರೆ ಹಿಂದೂ ಧರ್ಮ ಎಷ್ಟರ ಮಟ್ಟಿಗೆ ಪ್ರಭಾವ ಬೀರಿರಬಹುದು!!

Image result for modi

ಜಗತ್ತು ಹಿಂದೂಸ್ಥಾನವನ್ನು ಗೌರವಿಸಿತಲ್ಲದೆ, ಭಾರತದ ಸಂಸ್ಕøತಿಯನ್ನು ಅನುಸರಣೆ ಮಾಡಲಾರಂಭಿಸಿದರು. ಜೊತೆಗೆ ಸರಳವಾಗಿ ಬದುಕಿದರಷ್ಟೇ ಅಲ್ಲದೆ ಇತರ ಧರ್ಮಗಳತ್ತ ಗೌರವನ್ನೂ ನೀಡಿದರು. ಪತ್ರಕರ್ತರು ಮೋದಿಯವರಲ್ಲಿ ಕೇಳಿದ್ದರಂತೆ ರಷ್ಯಾದ ಅಧ್ಯಕ್ಷರಾದ ಪುಟಿನ್ ಅವರು ರಷ್ಯಾ ಬೇರೆ ದೇಶದ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳುತ್ತಾರೆ. ನೀವಿದನ್ನು ನಿಜವಾಗಿಯೂ ನಂಬ್ತೀರಾ?’ ಎಂಬ ಪ್ರಶ್ನೆಯನ್ನು ಕೇಳಿದ್ದರಂತೆ… ಅದಕ್ಕೆ ಉತ್ತರಿಸಿದ್ದ ಮೋದಿ `ನೀವು ಅಮೆರಿಕಾ, ರಷ್ಯಾ, ಜರ್ಮನಿ, ರಷ್ಯಾ,, ಟ್ರಂಪ್, ಹಿಲರಿ, ಛಾನ್ಸೆಲರ್ ಆಂಜೆಲಾ ಮಾರ್ಕೆಲ್ ಮತ್ತು ಪುಟಿನ್ ಬಗ್ಗೆ ಯೋಚಿಸುತ್ತೀರಿ, ನೀವೆಲ್ಲಾ ದೊಡ್ಡ ದೊಡ್ಡ ವ್ಯಕ್ತಿಗಳ ಬಗ್ಗೆ ಮಾತಾಡುತ್ತೀರಿ. ಇವರೆಲ್ಲರ ಮಧ್ಯೆ ನಾನು ವಕೀಲನಾಗಬೇಕಾ? ಎಂದಿದ್ದರು….

Image result for russia president with modi

ತದನಂತರ ರಷ್ಯಾ ಅಧ್ಯಕ್ಷ ನಗುತ್ತಾ ಮಾರ್ಮಿಕವಾಗಿ ಹೇಳಿದ್ದು ಹೀಗೆ, ‘ಮೋದಿ ಒಬ್ಬ ಹಿಂದೂ. ಹಿಂದೂಗಳೊಂದಿಗೆ ವ್ಯವಹರಿಸುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಅವರ ತತ್ವಜ್ಞಾನ ತುಂಬಾ ಪ್ರಾಚೀನಕಾಲದ್ದು. ನಾವೆಲ್ಲಾ ಅವರ ಮುಂದೆ ಸಾಮಾನ್ಯ ಜನರು. ಆದ್ದರಿಂದ ಅವರ ಜೊತೆ ಮಾತಾಡುವಾಗ ತುಂಬಾ ಆಲೋಚಿಸಿ ಮಾತಾಡಬೇಕು…’ ಎಂದು ಹೇಳಿದ್ದಾರೆ.!! ಮೋದೀಜಿಯಿಂದಾಗಿ ಭಾರತದ ಕೀರ್ತಿ ಪತಾಕೆ  ಎಲ್ಲೆಲ್ಲು ಹಬ್ಬುತ್ತಿದೆ….

ಇದೀಗ  ಅಮೆರಿಕಾದಲ್ಲಿ ಕೂಡಾ ಹಿಂದೂಗಳು ಪೂಜಿಸುವ ರಾಮಾಯಣ ಮಹಾಭಾರತವನ್ನು ತನ್ನ ಹಾವರ್ಡ್ ಯೂನಿವರ್ಸಿಟಿಯಲ್ಲಿ ಅಧ್ಯಯನಕ್ಕೆ ಮುಂದಾಗಿದ್ದಾರೆ! ಬರೀ ಇಷ್ಟೇ ಅಲ್ಲ!! ಇದರ ಜೊತೆಗೆ ದಕ್ಷಿಣ ಏಷ್ಯಾದ ಧಾರ್ಮಿಕ ಸಂಪ್ರದಾಯಗಳು ಮತ್ತು ಸಮುದಾಯಗಳು ಕುರಿತ ಕೋರ್ಸ್‍ಗಳನ್ನು ಆರಂಭಿಸುತ್ತಿವೆ!! ಇಲ್ಲಿನ ನೃತ್ಯ ಪ್ರಕಾರಗಳು, ತೊಗಲು ಗೊಂಬೆ, ಬೀದಿ ನಾಟಕ, ಆಧುನಿಕ ಕಾಲಘಟ್ಟದಲ್ಲಿ ಮಹಾಕಾವ್ಯಗಳ ಬಳಕೆ ಕುರಿತಾದ ವಿಷಯಗಳನ್ನು ಇತಿಹಾಸ ಮತ್ತು ವಾಸ್ತವದ ನೆಲೆಗಟ್ಟಿನಲ್ಲಿ ವಿದ್ಯಾರ್ಥಿಗಳು ಕಲಿಯಲಿದ್ದಾರೆ. ಭಾರತೀಯ ಮಹಾಕಾವ್ಯಗಳು ದೀರ್ಘ ಮತ್ತು ಸಂಕೀರ್ಣ ನಿರೂಪಣೆಯನ್ನು ಹೊಂದಿವೆ. ಇದರಲ್ಲಿ ಬರುವ ಪ್ರತಿಯೊಂದು ಅಂಶವೂ ಮಾನವನ ಅನುಭವಕ್ಕೆ ತಲುಪುವಂತಹುವೇ ಆಗಿವೆ. ಈ ಮೂಲಕ ಮಹಾಕಾವ್ಯಗಳ ಅಧ್ಯಯನ ಮತ್ತು ಹಿಂದೂ ಧರ್ಮದ ವಿವಿಧ ಆಯಾಮಗಳನ್ನು, ಸಂಪ್ರದಾಯಗಳನ್ನು ಅಮೆರಿಕಾದ ವಿದ್ಯಾರ್ಥಿಗಳು ಅಭ್ಯಸಿಸಲಿದ್ದಾರೆ ಎಂದರೆ ಹಿಂದುತ್ವ ಎಷ್ಟರ ಮಟ್ಟಿಗೆ ಬೆಳೆದಿದೆ ಎಂದು ಬೇರೆ ನಿದರ್ಶನಗಳು ಬೇಕೇ?….

  • ಪವಿತ್ರ
Tags

Related Articles

FOR DAILY ALERTS
 
FOR DAILY ALERTS
 
Close