ಇತಿಹಾಸ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಬೋಸರಿಂದಲೇ ಹೊರತು ಗಾಂಧಿಯಿಂದಲ್ಲ!!! ಅಂಬೇಡ್ಕರ್ ತನ್ನ ಅಪರೂಪದ ಸಂದರ್ಶನದಲ್ಲಿ ಬಿಚ್ಚಿಟ್ಟ ರಹಸ್ಯವೇನು?!

ಒಮ್ಮೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆ ಮಲ್ಲಿಖಾರ್ಜುನ ಖರ್ಗೆಯವರ ಜೊತೆ ಭಾರತದ ಸ್ವತಂತ್ರ್ಯ ಹೋರಾಟದ ಬಗ್ಗೆ ಬಹಳ ಮಾರ್ಮಿಕವಾಗಿ ಮಾತಾಡಿದ್ದರು. ಇಂದು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿರುವುದು ಕೇವಲ ಒಂದೇ ಒಂದು ಕುಟುಂಬ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ದೇಶದ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿಗಳ ಪಾತ್ರ ತುಂಬಾ ಮಹತ್ವದ್ದು. ಚಂದ್ರಶೇಖರ್ ಅಜಾದ್, ಭಗತ್ ಸಿಂಗ್‍ನಂಥಾ ಕ್ರಾಂತಿಕಾರಿಗಳು ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ್ದರು. ಆದ್ದರಿಂದ ಭಾರತಕ್ಕೆ ಅಹಿಂಸೆಯಿಂದಷ್ಟೇ ಸ್ವಾತಂತ್ರ್ಯ ಸಿಕ್ಕಿದೆ ಎಂದಷ್ಟೇ ಭಾವಿಸಬಾರದು ಎಂದು ಹೇಳಿದ್ದರು.

ಭಾರತದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಕೂಡಾ ಕೇವಲ ಮಹಾತ್ಮಾ ಗಾಂಧಿಯವರಿಂದಷ್ಟೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ, ಇದಕ್ಕೆ ಕ್ರಾಂತಿಕಾರಿಗಳ ಪಾತ್ರವೂ ಹಿರಿದು ಎಂದು 1955ರಲ್ಲಿ ಬಿಬಿಸಿಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಅವರ ಪ್ರಕಾರ ಬ್ರಿಟಿಷರು 1947ರಲ್ಲಿ ಭಾರತದಿಂದ ತೊಲಗಲು ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಅವರ ಐಎನ್‍ಎ ಯೇ ಕಾರಣ. ಇವರಿಂದ ಬ್ರಿಟಿಷರಿಗೆ ಸಾಕಷ್ಟು ಹಾನಿಯಾಗಿತ್ತು ಎಂದು ಹೇಳಿದ್ದರು. ಬ್ರಿಟನ್ ಪ್ರಧಾನಿ ಕ್ಲೆಮೆಂಟ್ ಅಟ್ಲೀ ಅವರು ಕೂಡಾ ಒಮ್ಮೆ ಸುಭಾಷ್ ಚಂದ್ರ ಬೋಸ್ ನಮಗೆ ದೊಡ್ಡ ಸವಾಲಾಗಿದ್ದರು ಎಂದು ಒಪ್ಪಿಕೊಂಡಿದ್ದರು. ಹಲವಾರು ಗುಪ್ತಚರ ಸಂಸ್ಥೆಗಳು, ರಕ್ಷಣಾ ತಜ್ಷರು ಕೂಡಾ ಸುಭಾಷ್ ಚಂದ್ರ ಬೋಸ್ ಅವರಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಒಪ್ಪಿಕೊಂಡಿದೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ನಿಗೂಢವಾಗಿ ಕಣ್ಮರೆಯಾಗಿರುವ ಬಗ್ಗೆ ಸಾಕಷ್ಟು ಕುತೂಹಲ, ಜಿಜ್ಞಾಸೆಗಳು ಹುಟ್ಟಿಕೊಂಡಿದೆ. ಇವರು ಭಾರತದ ರಾಷ್ಟ್ರೀಯ ಸೇನೆಯನ್ನು ಸ್ಫಾಪಿಸಿ ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಲು ಕ್ರಾಂತಿಕಾರಿ ಹೋರಾಟ ನಡೆಸಿದರು. ಆದರೆ ಇಂಥಾ ಬೋಸರು ಎಲ್ಲಿಗೆ ಹೋದರು ಎಂಬ ಬಗ್ಗೆ ಉತ್ತರಿಸಲಾಗದ ಅನೇಕ ಪ್ರಶ್ನೆಗಳಿವೆ. ಬೋಸ್ ಮೃತಪಟ್ಟಿದ್ದು ಹೇಗೆ? ಅವರು ಕಾಂಗ್ರೆಸ್ ತೊರೆದಿದ್ದು ಯಾಕೆ? ಹೀಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿದೆ. ನರೇಂದ್ರ ಮೋದಿ ಸರಕಾರ ಸುಭಾಷ್ ಚಂದ್ರ ಬೋಸ್ ಕುರಿತ ದಾಖಲೆಗಳನ್ನು ಬಿಡುಗಡೆ ಮಾಡಲು ಮುಂದಾದಾಗ ಕಾಂಗ್ರೆಸಿಗರು ವಿರೋಧಿಸಿ ಅಶಾಂತಿ ಸೃಷ್ಟಿಸಿದ್ದು ಯಾಕೆ?

ರಾಜಕೀಯವನ್ನು ಕಲ್ಪಿಸಲು ಸಾಧ್ಯವೇ ಇಲ್ಲ. ಅದು ನ್ಯಾಯಪರವೂ ಇರುತ್ತದೆ ಅನ್ಯಾಯದ ಪರವೂ ಇರುತ್ತದೆ. ಇಂಥದೊಂದು ವ್ಯವಸ್ಥಿತ ಪಿತೂರಿಯನ್ನು ಸ್ವತಃ ಸುಭಾಷ್ ಚಂದ್ರರೂ ಅರ್ಥ ಮಾಡಿಕೊಳ್ಳಲು ಸಾಧ್ಯವಿರಲಿಲ್ಲ. ಬ್ರಿಟಿಷರೊಂದಿಗೆ ಒಮ್ಮೆ ವಿರೋಧಕಟ್ಟಿಕೊಳ್ಳುವುದು, ಮತ್ತೊಮ್ಮೆ ಅವರನ್ನೇ ಬೆಂಬಲಿಸುವುದು
ಇವೆಲ್ಲವನ್ನೂ ಭೋಸ್ ಖಂಡಿಸುತ್ತಿದ್ದರು. ಕಾಂಗ್ರೆಸ್ ಮಾಡುತ್ತಿದ್ದ ಹೋರಾಟವನ್ನು ಬ್ರಿಟಿಷರು ಸುಲಭವಾಗಿ ಹತ್ತಿಕ್ಕುತ್ತಿದ್ದರು. ಆದರೆ ಭೋಸ್ ಅವರ ಸೈನಿಕ ಕಾರ್ಯಾಚರಣೆಗೆ ಹೆದರಿ 1947ರಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಿದರು. ಆದರೆ ಗಾಂಧೀಜಿ ಮತ್ತು ನೆಹರೂ ಇದು ತಮ್ಮದೇ ಸಾಧನೆ ಎಂದು ಭಾಷಣ
ಬಿಗಿದರು. ನೆಹರೂ ಅಂತು ಅದರ ಕ್ರೆಡಿಟ್ ತಾನೇ ಪಡೆದುಕೊಂಡು ದೇಶವನ್ನೇ ಆಳ್ವಿಕೆ ನಡೆಸಿದ.

1939ರಲ್ಲಿ ಎರಡನೇ ಜಾಗತಿಕ ಯುದ್ಧ ಆರಂಭವಾಯಿತು. ಈ ವೇಳೆ ಭೋಸ್ ಕಾಂಗ್ರೆಸ್ ಸೇರಿದ್ದರು. ಭೋಸ್ ನೇತೃತ್ವದಲ್ಲಿ ಹೋರಾಟ ನಡೆಸಲಾಯಿತು. ಇನ್ನಾರು ತಿಂಗಳಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟುಬಿಡುವುದಾಗಿ ಹೇಳಿದ್ದರು. ಆದರೆ ಈ ನಡುವೆ ಹೋರಾಟವನ್ನು ಮೃದುಗೊಳಿಸಲಾಯಿತು. ಇದನ್ನು ನೋಡಿದ ಭೋಸ್ ಗಾಂಧಿ ಮತ್ತು ನೆಹರೂನಲ್ಲಿ ಸ್ವಾತಂತ್ರ್ಯವನ್ನು ತೀವ್ರಗೊಳಿಸುವಂತೆ ಕೋರಿದರು. ಆದರೆ ಅವರೇನೂ ಮಾಡದೆ ಸುಮ್ಮನೆ ಕುಳಿತರು. ಸ್ವಾತಂತ್ರ್ಯ ಹೋರಾಟದ ಹೆಸರಲ್ಲಿ ತನ್ನ ಅಸ್ತಿತ್ವವನ್ನು ಜೀವಂತವಾಗಿ ಉಳಿಸಿಕೊಳ್ಳಲು ಯತ್ನಿಸುತ್ತಿದ್ದರೇ ಎಂಬ ಕುತೂಹಲವೂ ಹುಟ್ಟುತ್ತದೆ.

ಭೋಸರು ಭಾರತದ ರಾಷ್ಟ್ರೀಯ ಸೇನೆಯನ್ನು ಕಟ್ಟಿದರು. ಗಾಂಧೀಜಿ 1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಆರಂಭಿಸಿದರು.. ಇದು 1939ನಡೆದ ಚಳುವಳಿಯಂತೆ ಇದೂ ಕೂಡಾ ತೀವ್ರವಾಗಿತ್ತು. ಆದರೆ ಕೆಲವು ತಿಂಗಳ ನಂತರ ಈ ಹೋರಾಟವನ್ನೂ ನಿಲ್ಲಿಸಲಾಯಿತು.

ಅಂಬೇಡ್ಕರ್ 1956ಲ್ಲಿ ಮೃತಪಡುವ ಎರಡು ತಿಂಗಳ ಮುಂಚೆ ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಅಟ್ಲೀ ಜೊತೆ ಖಾಸಗಿ ಮಾತುಕತೆ ನಡೆಸಿದ್ದರು. ಅವರು 20 ವರ್ಷಗಳ ಕಾಲ ಮುಚ್ಚಿಟ್ಟಿದ್ದ ಕೆಲವೊಂದು ಪ್ರಮುಖವಾದ ಮಾಹಿತಿಗಳನ್ನು ಬಹಿರಂಗಪಡಿಸಿದ್ದರು. ಈ ಎಲ್ಲಾ ಮಾಹಿತಿಗಳು ಅಂಬೇಡ್ಕರ್‍ಗೆ ಅಚ್ಚರಿ ತರಲಿಲ್ಲ ಯಾಕೆಂದರೆ ಅವರಿಗೆ ಈ ವಿಷಯವನ್ನು ಮೊದಲೇ ಅರಿತಿದ್ದರು. ಬ್ರಿಟಿಟಷರು ಭಾರತವನ್ನು ತೊರೆಯಲು ಕಾರಣವೇನೆಂಬ ಎರಡು ವಿಷಯಗಳನ್ನು ಅಟ್ಲೀ ಅಂಬೇಡ್ಕರ್‍ಗೆ ತಿಳಿಸಿದ್ದರು. ಬ್ರಿಟಿಷ್ ಅಧಿಕಾರಿಗಳಿಗೆ ಭಾರತದಲ್ಲಿ ಆಡಳಿತನ ನಡೆಸುವ ಬಗ್ಗೆ ಕಾಳಜಿಯೇ ಇರಲಿಲ್ಲ. ಯಾಕೆಂದರೆ ಜಾಗತಿಕ ಯುದ್ಧ ಅವರನ್ನು ಹೈರಾಣಾಗಿಸಿತ್ತು. ಯುದ್ಧಕ್ಕಾಗಿ ಅವರು ಸಂಪೂರ್ಣವಾಗಿ ಭಾರತದ ಸೈನ್ಯವನ್ನೇ ನೆಚ್ಚಿಕೊಂಡಿದ್ದರು. ಭಾರತೀಯರನ್ನು ತನ್ನ ಸೈನ್ಯದಲ್ಲಿ ಬಳಸಿಕೊಂಡು ಬೇರೆ ಬೇರೆ ಕಡೆಗಳಿಗೆ ಯುದ್ಧಕ್ಕೆ ಕಳುಹಿಸುತ್ತಿದ್ದರು. ಸೈನಿಕರ ನಿಷ್ಠೆಯ ಮೇಲೆ ಇಡೀ ದೇಶದಲ್ಲಿ ಸಂಪೂರ್ಣ ಹಿಡಿತ ಹೊಂದಿದ್ದೇವೆಂದು ಬ್ರಿಟಿಷರು ಭಾವಿಸಿದ್ದರು. ಆದರೆ ಭಾರತೀಯ ಸೈನಿಕರು ಬ್ರಿಟಿಷರ ವಿರುದ್ಧ ಕೆಂಡವಾಗಿದ್ದು, ಒಟ್ಟಾಗಿದ್ದರು. ಸೂಕ್ತ ಸಂದರ್ಭ ನೋಡಿಕೊಂಡು ಬ್ರಿಟಿಷರ ವಿರುದ್ಧ ಸಿಡಿದೇಳಲು ಸಿದ್ಧವಾಗಿ ನಿಂತಿದ್ದರು.

ಇನ್ನೊಂದು ಕಡೆ ಸುಭಾಷ್ ಚಂದ್ರ ಬೋಸರ ಐಎನ್‍ಎ ಕೂಡಾ ಬ್ರಿಟಿಷರಿಗೆ ಇನ್ನಿಲ್ಲದ ಕಾಟ ಕೊಡುತ್ತಿತ್ತು. ಭಾರತೀಯ ಬ್ರಿಟಿಷ್ ಸೈನಿಕರು ದಂಗೆ ನಡೆಸಲು
ಮುಂದಾಗಿದ್ದರು. ಬೋಸರ ಐಎನ್‍ಎ ಇವರಿಗೆ ಸ್ಫೂರ್ತಿಯನ್ನು ನೀಡಿತ್ತು. ಈ ಸೈನಿಕರು ಸಿಡಿದೇಳಲು ಸೂಕ್ತ ಸಮಯ, ಸಂದರ್ಭಕ್ಕಾಗಿ ಕಾಯುತ್ತಿದ್ದರು. ಇದರಿಂದ ಭಯಗೊಂಡಿದ್ದ ಬ್ರಿಟಿಷರು ಭಾರತವನ್ನು ತೊರೆಯಲು ಮೊದಲೇ ನಿರ್ಧರಿಸಿದ್ದರು. ಇದೆಲ್ಲಾ ಸ್ವತಃ ಅಟ್ಲಿ ಬಹಿರಂಗಪಡಿಸಿದ ಸತ್ಯವಾಗಿತ್ತು.
ಇಂದು ಸ್ವಾತಂತ್ರ್ಯ ಅಂದಾಗ, ಗಾಂಧೀಜಿ, ನೆಹರೂ ಎಂದು ಹೇಳುತ್ತೇವೆ. ಆದರೆ ಬ್ರಿಟಿಷರು ಭಾರತವನ್ನು ಬಿಟ್ಟುಹೋಗುವಂತೆ ಮಾಡಿದ ನಿಜವಾದ ವ್ಯಕ್ತಿಯ ಬಗ್ಗೆ ಎಲ್ಲಿಯೂ ಪ್ರಸ್ತಾಪವಾಗುವುದಿಲ್ಲ. ವಿಪರ್ಯಾಸ ಅಂದರೆ ಇದೇ ಅಲ್ಲವೇ…?

ಅಂಬೇಡ್ಕರ್ ಬಿಬಿಸಿಗೆ ನೀಡಿದ್ದ ಸಂದರ್ಶನವನ್ನು ವೀಕ್ಷಿಸಿ!!

-ಚೇಕಿತಾನ

 

Tags

Related Articles

FOR DAILY ALERTS
 
FOR DAILY ALERTS
 
Close