ಅಂಕಣಇತಿಹಾಸ

ಕೋಟೆಯಲ್ಲಿ ಅವಿತಿದ್ದ ಟಿಪ್ಪುವಿನ ಹೆಣ ಉರುಳಿಸಲು ಒಡೆಯರಿಗೆ ಸಹಾಯ ಮಾಡಿದ ಆ ಒಕ್ಕಲಿಗ ಯಾರು ಗೊತ್ತೇ?!

ಮೈಸೂರು ಸಂಸ್ಥಾನದ ಅರಸ ಎರಡನೇ ಕೃಷ್ಣರಾಜ ಒಡೆಯರನ್ನು ಮೋಸದಿಂದ ಪಕ್ಕಕ್ಕೆ ಸರಿಸಿ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ರಾಜ್ಯವಾಳಿದ ಕ್ರೂರಿ ಹೈದರ್ ಅಲಿಯ ಪುತ್ರ ದುಷ್ಟ ಟಿಪ್ಪು ಸುಲ್ತಾನ್. ತನ್ನ ತಂದೆಗಿಂತಲೂ ಮತಾಂಧನಾಗಿ ಬೆಳೆದ ಟಿಪ್ಪು ಸುಲ್ತಾನ್‍ನನ್ನು ಹೇಗಾದರೂ  ವಾರಿಸಬೇಕೆಂದು ರಾಜಮಾತೆ ಲಕ್ಷ್ಮಿ ಅಮ್ಮಣ್ಣಿಯವರು ಪಣತೊಟ್ಟಿದ್ದರು. ಈ ವೇಳೆ ರಾಜಮಾತೆಗೆ ಸಾಥ್ ನೀಡಿದ್ದು ಮಂಡ್ಯದ ಗಂಡುಗಲಿಗಳಾದ ನಂಜೇಗೌಡರು ಮತ್ತು ಉರಿಗೌಡರು.

ನಂಜೇಗೌಡ ಮತ್ತ ಉರಿಗೌಡರೆಂಬ ಎರಡು ವೀರಕಲಿಗಳ ಬಗ್ಗೆ ರಾಜ್ಯಸರಕಾರವೇ ಮರೆತಿದ್ದರೂ ಕರ್ನಾಟಕದ ಪ್ರಬಲ ಸಮುದಾಯ ಒಕ್ಕಲಿಗರೂ ಕೂಡಾ
ಮರೆತಿರುವುದು ವಿಪರ್ಯಾಸ. ಇತಿಹಾಸದ ಪುಟಗಳಿಂದ ಸರಿದುಹೋದ ಅಪ್ರತಿಮ ವೀರರ ಬಗ್ಗೆ ಯಾವುದೇ ಇತಿಹಾಸಕಾರರಲಾಗಲೀ, ಸಂಶೋಧಕರಾಗಲೀ ಬೆಳಕು ಚೆಲ್ಲದೇ ಇರುವುದು ವಿಪರ್ಯಾಸ. ಟಿಪ್ಪು ಯುದ್ಧ ಮಾಡುತ್ತಾ ವೀರಮರಣವನ್ನಪ್ಪಿದ ಎಂಬ ಸುಳ್ಳು ಪ್ರಚಲಿತದಲ್ಲಿರುವಾಗಲೇ ಮತಾಂಧ ಟಿಪ್ಪು ಸತ್ತಿದ್ದು ಹೇಗೆ ಎಂಬ ವಿಷಯ ಇತಿಹಾಸದ ಕಾಲಗರ್ಭದಲ್ಲಿ ಹುದುಗಿ ಹೋಗಿದೆ. ರಣರಂಗದಿಂದ ಹೇಡಿಯಂತೆ ಓಡುತ್ತಿದ್ದ ಟಿಪ್ಪುವನ್ನು ಮುಗಿಸಿ ಟಿಪ್ಪುವಿನ ಕೈಯ್ಯಲ್ಲಿದ್ದ ಮೈಸೂರು ಸಂಸ್ಥಾನವನ್ನು ಮತ್ತೆ ಒಡೆಯರಿಗೊಪ್ಪಿಸಿ ಮೈಸೂರು ಸಂಸ್ಥಾನವನ್ನು ಕಾಪಾಡಿದವರೇ ನಂಜೇಗೌಡರು ಮತ್ತು ಉರಿಗೌಡರು.

ಮೈಸೂರು ಸಂಸ್ಥಾನದಲ್ಲಿ ಸೈನಿಕನಾಗಿ ಸೇರಿಕೊಂಡು ವೀರನಾಗಿ ಬೆಳೆದವ ಹೈದರ್ ಅಲಿ . ಕೊನೆಗೆ ಮೈಸೂರಿನ ಸೇನಾಧಿಪತಿಯಾಗಿ ಬೆಳೆದು 1761ರಲ್ಲಿ ಮೈಸೂರು ಅರಸ ಎರಡನೇ ಕೃಷ್ಣರಾಜ ಒಡೆಯರನ್ನು ಮೋಸದಿಂದ ಪಕ್ಕಕ್ಕೆ ಸರಿಸಿ, ಗೃಹಬಂಧನದಲ್ಲಿರಿಸಿಸ ಮೈಸೂರು ಸಂಸ್ಥಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ. ಮೂಲತಃ ಕ್ರೂರಿಯಾಗಿದ್ದ ಹೈದರ್ ಅಲಿ ಮತಾಂಧನಾಗಲು ಅವಕಾಶ ಸಿಗದಿದ್ದರೂ ತನ್ನ ಪುತ್ರ ಟಿಪ್ಪುವಿನ ಮನದಲ್ಲಿ ಮತಾಂಧತೆಯನ್ನೇ ತುಂಬಿದ್ದ. ಹೈದರ್ ಅಲಿಯ ನಂತರ ರಾಜಮಾತೆ ಲಕ್ಷ್ಮಿ ಅಮ್ಮಣ್ಣಿಯವರು ಸಂಸ್ಥಾನವನ್ನು ಮತ್ತೆ ವಾಪಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಬಯಸಿದ್ದರು. ಆದರೆ ಟಿಪ್ಪು ಸುಲ್ತಾನ್ ಇದಕ್ಕೆ ಅವಕಾಶ ಕೊಡದೆ ತನಗೆ ಅಡ್ಡಬಂದವರನ್ನು ಮುಗಿಸಿ ಹಾಕಿದ್ದ. ಟಿಪ್ಪುವಿನ ಅಟ್ಟಹಾಸಕ್ಕೆ ರಾಜಮಾತೆ ನಲುಗಿಹೋಗಿದ್ದರು.

ಈ ವೇಳೆ ರಾಜಮಾತೆ ಲಕ್ಷ್ಮಿ ಅಮ್ಮಣ್ಣಿಯವರ ಬೆಂಬಲಕ್ಕೆ ನಿಂತದ್ದೇ ದೊಡ್ಡನಂಜೇಗೌಡರು ಮತ್ತು ಉರಿಗೌಡರು. ಇವರಿಬ್ಬರ ಸಾಹಸವೇ ಅಮೋಘ.

ಹೈದರ್ ಅಲಿಯ ಮರಣಾನಂತರ ಮೈಸೂರು ಸಂಸ್ಥಾನ ಮತ್ತೆ ಒಡೆಯರ ಆಳ್ವಿಕೆಗೆ ಬರಬಹುದೆಂದು ಭಾವಿಸಲಾಗಿತ್ತು. ಆದರೆ ಎಲ್ಲರ ಆಶಯವನ್ನು ತಲೆಕೆಳಗಾಗಿಸಿ ಟಿಪ್ಪು ಸುಲ್ತಾನ್ ಪಟ್ಟಕ್ಕೆ ಏರಿದ. ಟಿಪ್ಪು ಮೊಘಲರಂತೆ ಮತಾಂಧ ಬುದ್ಧಿಯುಳ್ಳವನಾಗಿದ್ದು, ಕಾಫಿರ್‍ಗಳನ್ನು ನಿರ್ದಯವಾಗಿ ಮುಗಿಸಬೇಕೆಂದ ಮನೋಸ್ಥಿತಿ ಹೊಂದಿದ್ದ. ಮೈಸೂರನ್ನು ಇಸ್ಲಾಂಸ್ಟೇಟ್ ಮಾಡಬೇಕೆಂದು ಬಯಸಿದ್ದ ಆತ ಕನ್ನಡವನ್ನು ಬಿಟ್ಟು ಪರ್ಷಿಯನ್ ಭಾಷೆಯನ್ನು ರಾಜ್ಯಭಾಷೆಯನ್ನಾಗಿಸಿದ. ಹಿಂದೂ ಸಂಸ್ಕøತಿಯನ್ನು ಅಳಿಸಿ ಇಸ್ಲಾಂ ಸಂಸ್ಕøತಿಯನ್ನು ಹೇರಿದ. ಇದರಿಂದ ಹಿಂದೂ ಸಂಸ್ಕøತಿಗೆ ಹೊಡೆತ ಬಿದ್ದಿತ್ತು. ಜೊತೆಗೆ ಒಕ್ಕಲಿಗರ ಸಂಸ್ಕøತಿಗೂ ಧಕ್ಕೆ ತಂದಿತ್ತು. ಇದನ್ನು ಕಂಡು ಇಡೀ ರಾಜ್ಯವೇ ನಲುಗಿಹೋಗಿತ್ತು. ಅಲ್ಲಲ್ಲಿ ದಂಗೆ ಏಳುತ್ತಿತ್ತು. ಆದರೆ ಟಿಪ್ಪು ಅದನ್ನೆಲ್ಲಾ ಕ್ರೂರ ಶಾಸನಗಳಿಂದ ಹದ್ದುಬಸ್ತಿನಲ್ಲಿಡುತ್ತಿದ್ದ. ಆದರೂ ಕೆಲವೊಂದು ಸನ್ನಿವೇಶಗಳಲ್ಲಿ ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ತನ್ನ ಸಂಸ್ಥಾನದ ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ದತ್ತಿ ನೀಡಿ ಸಮಧಾನ ಪಡಿಸುತ್ತಿದ್ದ. ತನ್ನ ಪ್ರದೇಶದಲ್ಲಿ ಹಿಂದೂ ಪ್ರದೇಶವನ್ನು ಉಳಿಸಲು ಈ ರೀತಿ ಮಾಡುತ್ತಿದ್ದ. ಆದರೂ ಕೂಡಾ ತನ್ನ ಬುದ್ಧಿಯನ್ನು ಟಿಪ್ಪು ತೋರಿಸುತ್ತಲೇ ಇದ್ದ.

ಶ್ರೀರಂಗಪಟ್ಟಣದ ಆಂಜನೇಯ ದೇಗುಲ ಧ್ವಂಸ:

ಟಿಪ್ಪು ದೇಗುಲಕ್ಕೆ ದತ್ತಿ ನೀಡಿದ ಎಂದು ಹೇಳುವವರು ಯಾರೂ ಕೂಡಾ ಶ್ರೀರಂಗಪಟ್ಟಣದ ಆಂಜನೇಯ ದೇಗುಲವನ್ನು ಕೆಡವಿ ಮಸೀದಿ ಕಟ್ಟಿದ ಎಂದು ಹೇಳುವುದೇ ಇಲ್ಲ. ಆದರೆ ಅಲ್ಲಿನ ಪ್ರಮುಖ ದೇವರು ರಂಗನಾಥ ಸ್ವಾಮಿ ದೇಗುಲದ ತಂಟೆಗೆ ಹೋಗಲಿಲ್ಲ. ಯಾಕೆಂದರೆ ಶ್ರೀರಂಗಪಟ್ಟಣದ ಜನರನ್ನು ಎದುರಿಸುವುದು ಹೇಗೆಂದು ಟಿಪ್ಪು ಹೆದರಿದ್ದ. ಈತ ಕೊಡಗು, ಮಲಬಾರಿನಲ್ಲಿ ಮಾಡಿದ ಅನ್ಯಾಯ ಅಷ್ಟಿಷ್ಟಲ್ಲ. ಈತನ ಮತಾಂಧತೆಯನ್ನು ಕಂಡು ಮೈಸೂರು ಒಡೆಯರು ಎಷ್ಟು ಆತಂಕಪಟ್ಟಿರಬಹುದು ಯೋಚಿಸಿ.

ಮೈಸೂರು ಒಡೆಯರನ್ನು ಪದಚ್ಯುತಗೊಳಿಸಿ ಟಿಪ್ಪುವನ್ನು `ಸುಲ್ತಾನ್’ ಎಂದು ಕರೆಯಬೇಕೆಂದಾಗ, ರಾಜ್ಯದಲ್ಲಿ ಅರಬಿ ಸಂಸ್ಕøತಿಯನ್ನು ಹೇರಿದಾಗ ಮೈಸೂರಿನವರ ಸ್ವಾಭಿಮಾನವನ್ನು ಎಷ್ಟು ಕೆರಳಿಸಿರಬಹುದು ಯೋಚಿಸಿ… ಟಿಪ್ಪುವಿನ ವಿರುದ್ಧ ವೀರ ಒಕ್ಕಲಿಗರು ತಿರುಗಿ ಬಿದ್ದರು. ಶ್ರೀರಂಗಪಟ್ಟಣದ ಆಂಜನೇಯ ದೇಗುಲವನ್ನು ಧ್ವಂಸಗೊಳಿಸಿ, ಅದನ್ನು ಮಸೀದಿಯಾಗಿ ಪರಿವರ್ತಿಸಿದಾಗ ದಂಗೆಯೆದ್ದ ಒಕ್ಕಲಿಗರನ್ನು ನಿಯಂತ್ರಿಸುವುದೇ ಟಿಪ್ಪುವಿಗೆ ಸವಾಲಿನ ಕೆಲಸವಾಗಿತ್ತು. ಒಂದರ್ಥದಲ್ಲಿ ಟಿಪ್ಪು ದಂಗೆಯನ್ನು ನಿಯಂತ್ರಿಸಿದರೂ ಒಕ್ಕಲಿಗರ ಗೆರಿಲ್ಲಾ ಮಾದರಿಯ ಯುದ್ಧದಿಂದ ಟಿಪ್ಪು ಅಕ್ಷರಶಃ ತತ್ತರಿಸಿ ಹೋಗಿದ್ದ. ಈ ವೇಳೆ ರಾಜಮಾತೆ ಲಕ್ಷ್ಮಿ ಅಮ್ಮಣಿಯವರ ಸಲಹೆಯಂತೆ ದೊಡ್ಡನಂಜೇಗೌಡ ಮತ್ತು ಉರಿಗೌಡರು ಟಿಪ್ಪುವಿನ ವಿರುದ್ದ ಹೋರಾಟ ನಡೆಸಲು ಒಕ್ಕಲಿಗರ ಸೈನ್ಯವೊಂದನ್ನು ಗುಪ್ತವಾಗಿ ನಿರ್ಮಿಸಿ ಸುಲ್ತಾನ್ ದರ್ಬಾರ್ ನಿಲ್ಲಿಸಲು ಪಣತೊಟ್ಟರು..

ಒಕ್ಕಲಿಗರು ಕೆರಳಲು ಕಾರಣವೂ ಇದೆ!!

ಟಿಪ್ಪುವಿನ ಸುಲ್ತಾನ್‍ಗಿರಿ ಒಕ್ಕಲಿಗರ ಸ್ವಾಭಿಮಾನವನ್ನು ಕೆರಳಿಸಿತ್ತು. ಅಪ್ಪಟ ಕನ್ನಡಿಗರಾಗಿರುವ ಒಕ್ಕಲಿಗರಿಗೆ ಟಿಪ್ಪುವಿನ ಪರ್ಷಿಯನ್ ಭಾಷೆ ಅರಗಿಸಲಾಗಲಿಲ್ಲ. ಜೊತೆಗೆ ಅವರ ಸಂಸ್ಕøತಿಗೂ ಪೆಟ್ಟು ಬಿದ್ದಿತ್ತು. ಗ್ರಾಮೀಣ ಸೊಗಡು, ರೈತಾಪಿ ಜೀವನ ಶೈಲಿ, ಜನಪದ ಸಂಸ್ಕøತಿ, ಗ್ರಾಮದೇವರು, ಕುಲದೇವರು, ದಾಸಯ್ಯ, ಜಾಗಟೆ, ಜೋಗಯ್ಯ ಇವೆಲ್ಲಾ ಸಂಸ್ಕøತಿಗೆ ಪೆಟ್ಟುಬೀಳುತ್ತಿರುವುದು ಸಹಿಸಲಾಗಲಿಲ್ಲ. ಇದು ಸಹಜವಾಗಿಯೇ ರಾಜ್ಯದಲ್ಲಿ ಆಡಳಿತವಿರೋಧಿ ಅಲೆಯೊಂದು ಉಂಟಾಗಿತ್ತು. ಹೆಣ್ಣುಬಾಕನಾಗಿದ್ದ ಟಿಪ್ಪುವಿನಿಂದ ಜನರು ರೋಸಿಹೋಗಿದ್ದರು. ಮೈಸೂರು ಒಡೆಯರ್ ಮನೆತನಕ್ಕೆ ಸೇರಿದ ಮೂವರು ಹೆಣ್ಣು ಮಕ್ಕಳು ಟಿಪ್ಪುವಿನ ಅಂತಃಪುರಕ್ಕೆ ದೂಡಲ್ಪಟ್ಟಿದ್ದರು. ತಾನು ಗೆದ್ದ, ಹಾಳು ಮಾಡಿದ ಅಥವಾ ತನ್ನ ಅಧೀನದಲ್ಲಿದ್ದ ಊರುಗಳ ಪಾಳೇಗಾರರು, ಮಾಂಡಲೀಕರು, ಸರದಾರರ ಹೆಣ್ಣುಮಕ್ಕಳು ಸಹ ಆತನ ಜನಾನದಲ್ಲಿದ್ದರು. ಭಾರತದ ಅರ್ಕಾಟ್, ತಂಜಾವೂರು ಇತ್ಯಾದಿ ಪ್ರದೇಶಗಳ ಹೆಣ್ಣುಗಳ ಜೊತೆಗೆ ದೂರದ ಟರ್ಕಿ, ಪರ್ಶಿಯಾ, ಜಾರ್ಜಿಯಾದಂತಹ ದೇಶಗಳಿಂದ ಹೊತ್ತು ತಂದ ಅಥವಾ ಕೊಂಡು ತಂದ ಹೆಂಗಸರೂ ಇದ್ದರು ಎಂದು ಇತಿಹಾಸದಲ್ಲಿ ಉಲ್ಲೇಖಗೊಂಡಿದೆ.

ರಾಜ್ಯದಲ್ಲಿ ಮೈಸೂರು ಸಂಸ್ಥಾನವನ್ನು ಉಳಿಸಲು ಲಕ್ಷ್ಮಿ ಬ್ರಿಟಿಷರ ಸಹಾಯ ಕೋರುತ್ತಾರೆ. 1799 ಪ್ರೆಬ್ರವರಿಯಲ್ಲಿ ಲಾರ್ಡ್ ವೆಲ್ಲೆಸ್ಲಿ ಬ್ರಿಟಿಷ್ ಸೈನ್ಯವನ್ನು ಜನರಲ್ ಹ್ಯಾರಿಸ್ ನಾಯಕತ್ವದಲ್ಲಿ ಕಳುಹಿಸಲಾಗುತ್ತದೆ. ಇದರ ಜೊತೆಗೆ ಮಳ್ಳವಳ್ಳಿಯಲ್ಲಿಯ ದೊಡ್ಡನಂಜೇಗೌಡ ಮತ್ತು ಉರಿಗೌಡನ ನಾಯಕತ್ವದ ಒಕ್ಕಲಿಗ ಸೈನ್ಯವು ಬ್ರಿಟಿಷ್ ಸೈನ್ಯದ ಜೊತೆಗೆ ಸೇರಿ ಟಿಪ್ಪುವಿನ ವಿರುದ್ಧ ಯುದ್ಧ ಸಾರುತ್ತದೆ. ಮಾರ್ಚ್ 27 ರಂದು ದೊಡ್ಡನಂಜೇಗೌಡ ಮತ್ತು ಟಿಪ್ಪುವಿನ ನಡುವೆ ಮುಖಾಮುಖಿ ಯುದ್ದ ನಡೆದು ದೊಡ್ಡನಂಜೇಗೌಡನ ಪರಾಕ್ರಮವನ್ನು ಎದುರಿಸಲಾಗದೆ ಟಿಪ್ಪು ಸೋತು ಹೆದರಿ ಓಡಿ ಹೋಗುತ್ತಾನೆ. ಟಿಪ್ಪುವಿನ ಬೆನ್ನಟ್ಟಿ ಹೋದ ದೊಡ್ಡನಂಜೇಗೌಡ ಅಟಾಡಿಸಿಕೊಂಡು ಹೋಗುತ್ತಾರೆ. ಟಿಪ್ಪು ಶ್ರೀರಂಗಪಟ್ಟಣ್ಣದ ಕೋಟೆ ಸೇರಿಕೊಂಡು ಬಾಗಿಲು ಹಾಕಿಕೊಂಡು ಅವಿತುಕೊಳ್ಳುತ್ತಾನೆ. 1799 ಮೇ 4ರಂದು ಮದ್ಯಾಹ್ನ 1ಗಂಟೆಯ ಸಮಯದಲ್ಲಿ ಜನರಲ್ ಹ್ಯಾರಿಷ್‍ನ ಬ್ರಿಟಿಷ್ ಸೈನ್ಯದ ಸಹಾಯದೊಂದಿಗೆ ದೊಡ್ಡನಂಜೇಗೌಡ ಮತ್ತು ಉರಿಗೌಡರ ಒಕ್ಕಲಿಗ ಸೈನ್ಯ ಶ್ರೀರಂಗಪಟ್ಟಣದ ಕೋಟೆಯನ್ನು ಭೇಧಿಸಿ ಒಳ ನುಗ್ಗುತ್ತದೆ. ಆಗ ದೊಡ್ಡನಂಜೇಗೌಡ ಟಿಪ್ಪುವಿನ ಮೇಲೆ ಎರಗುತ್ತಾನೆ. ಟಿಪ್ಪು ಹೆದರಿ ಓಡಿ ಹೋಗುವ ಪ್ರಯತ್ನ ಮಾಡಿ ವಿಫಲನಾಗುತ್ತಾನೆ. ಕೊನೆಗೆ ಟಿಪ್ಪುವನ್ನು ಕೊಂದು ಹಾಕಲಾಗುತ್ತದೆ. ರಾಜ್ಯ ಮತ್ತೆ ಲಕ್ಷ್ಮಿ ಅವರ ಪಾಲಾಗಿ ಮತ್ತೆ ಒಡೆಯರು ಆಡಳಿತ ನಡೆಸುತ್ತಾರೆ.

ಟಿಪ್ಪು ರಣರಂಗದಲ್ಲಿ ಮೃತಪಟ್ಟ ಎಂದು ಹಲವರ ವಾದ. ಆದರೆ ಟಿಪ್ಪು ಕೋಟೆಯೊಳಗಡೆ ಮೃತಪಟ್ಟ ಎನ್ನುವ ಸತ್ಯವನ್ನು ಮುಚ್ಚಲಾಗುತ್ತದೆ. ಟಿಪ್ಪುವಿಗೆ ಗುಂಡು ಹೊಡೆದು ಕೊಲ್ಲಲಾಗುತ್ತದೆ ಎಂದು ಹೇಳುತ್ತಾರೆ. ಆದರೆ ಆ ಗುಂಡು ಹೊಡೆದದ್ದು ಯಾರು ಎಂಬ ಬಗ್ಗೆ ಇತಿಹಾಸಕಾರರು ಮುಚ್ಚಿಹಾಕುತ್ತಾರೆ. ಇಂದಿದೂ ಟಿಪ್ಪುವಿಗೆ ಅನಾಮಿಕ ಯೋಧನೊಬ್ಬ ಗುಂಡುಹೊಡೆದಿದ್ದಾನೆ ಎಂದು ಎನ್ನಲಾಗುತ್ತಿದೆ. ರಣರಂಗದಿಂದ ತಪ್ಪಿಸಿಕೊಂಡು ಕೋಟೆಯೊಳಗಡೆ ಅವಿತಿದ್ದ ಟಿಪ್ಪುವನ್ನು ಕೊಂದಿರುವುದು ದೊಡ್ಡನಂಜೇಗೌಡ ಹಾಗೂ ಉರಿಗೌಡರೆಂದು ಹೇಳಲಾಗುತ್ತಿದೆ. ಈ ಬಗ್ಗೆ ಆಳವಾದ ಸಂಶೋಧನೆ ನಡೆಯಬೇಕಿದೆ.

ಮೈಸೂರು ಸಂಸ್ಥಾನವನ್ನು ಉಳಿಸಲು ದೊಡ್ಡನಂಜೇಗೌಡ ಹಾಗೂ ಉರಿಗೌಡರ ಪಾತ್ರವೇನು ಎಂಬ ಬಗ್ಗೆ ಇತಿಹಾಸಗಾರರು ಸಾಕಷ್ಟು ಸಂಶೋಧನೆ ನಡೆಸಬೇಕಿದೆ. ಆದರೆ ಈ ಬಗ್ಗೆ ಯಾವುದೇ ಸಂಶೋಧನೆಗಳಾಗಲೀ, ಇತಿಹಾಸಕಾರರಾಗಲೀ ಧ್ವನಿ ಎತ್ತುವುದಿಲ್ಲ. ಟಿಪ್ಪುವನ್ನು ಹೀರೋ ಮಾಡುವ ಉದ್ದೇಶದಿಂದ ಆತನ ದುಷ್ಟತನವನ್ನು ಮರೆಮಾಚಿ ಹೀರೋ ಮಾಡಲಾಗಿದೆ. ಇದರ ಜೊತೆಗೆ ಇಸ್ಲಾಂನಲ್ಲಿ ಹರಾಂ ಎನ್ನುವ ಜಯಂತಿಯನ್ನು ಟಿಪ್ಪುವಿನ ಹೆಸರಲ್ಲಿ ಆಚರಿಸಿ ಇಸ್ಲಾಂಗೆ ಅಪಚಾರ ಎಸಗಲಾಗುತ್ತಿದೆ.

Postcard team

Tags

Related Articles

FOR DAILY ALERTS
 
FOR DAILY ALERTS
 
Close