ಪ್ರಚಲಿತ

ತನಗೆ ಸಿಕ್ಕಿದ್ದನ್ನೂ ದೇಶಕ್ಕೆ ನೀಡುವ ಅಪರೂಪದ ವ್ಯಕ್ತಿ ಮೋದಿ! ಮೋದಿ ಈವರೆಗೆ ದಾನ ಮಾಡಿದ್ದು ಎಷ್ಟು ಗೊತ್ತಾ?

ನರೇಂದ್ರ ಮೋದಿ ನರೇಂದ್ರ ಮೋದಿ ನರೇಂದ್ರ ಮೋದಿ….. ಈ‌ ಒಂದು ಹೆಸರು ಇಂದು ಇಡೀ ಜಗತ್ತಿನಲ್ಲಿ ಚಾಲ್ತಿಯಲ್ಲಿದೆ ಎಂದರೆ ಅದಕ್ಕೆ ಕಾರಣ ಅಸಾಧ್ಯವಾದ ಕೆಲಸಗಳನ್ನು ಸಾಧಿಸಿ ತೋರಿಸಿದ ಆ ವ್ಯಕ್ತಿಯ ಚಮತ್ಕಾರ ಅಲ್ಲದೆ ಮತ್ತಿನ್ನೇನೂ ಅಲ್ಲ. ‌ಯಾಕೆಂದರೆ ಮೋದಿ ಪ್ರಧಾನಮಂತ್ರಿ ಹುದ್ದೆ ಅಲಂಕರಿಸಿದ ನಂತರದಲ್ಲಿ ದೇಶದಲ್ಲಿ ಯಾವ ರೀತಿಯ ಬದಲಾವಣೆ ಮಾಡಿಬಿಟ್ಟರು ಎಂದರೆ ಕಳೆದ ಐದು ವರ್ಷಗಳಲ್ಲಿ ಮೋದಿಯ ಹೆಸರು ಚಾಲ್ತಿಯಲ್ಲಿಯೇ ಇದೆ. ಮೋದಿಯನ್ನು ಪ್ರೀತಿಸುವವರು, ಬೆಂಬಲಿಸುವವರು ಮತ್ತು ವಿರೋಧಿಗಳು ಕೂಡ ಪ್ರತೀ ದಿನ ಮೋದಿಯ ಹೆಸರು ಹೇಳಿಕೊಂಡೇ ತಿರುಗಾಡುತ್ತಾರೆ ಎಂದರೆ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಲೇಬೇಕು ಮೋದಿಯಲ್ಲಿರುವ ಆ ಶಕ್ತಿ ಯಾವುದು ಎಂದು. ಮೋದಿ ಅಧಿಕಾರ ವಹಿಸಿಕೊಂಡ ನಂತರ ಭಾರತವನ್ನು ಯಾರೂ ಊಹಿಸದ ರೀತಿಯಲ್ಲಿ ಬದಲಾಯಿಸಿಬಿಟ್ಟರು, ಇಂದು ಪ್ರತಿಯೊಬ್ಬರೂ ದೇಶದ ಬಗ್ಗೆ ಚಿಂತನೆ‌ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಮೋದಿ.

ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಭಾರತದ ಹೆಸರು ಮತ್ತಷ್ಟು ಹೆಚ್ಚು ಚಾಲ್ತಿಯಲ್ಲಿದೆ ಎಂದರೆ ಅದಕ್ಕೂ ಕಾರಣ ಮೋದಿಯೇ ಹೊರತು ಮತ್ಯಾರೂ ಅಲ್ಲ.‌ ಪ್ರಧಾನಿ ನರೇಂದ್ರ ಮೋದಿ ಮಾಡಿದ ಪ್ರತಿಯೊಂದು ಕೆಲಸವೂ ಯಶಸ್ವಿಯಾಗುತ್ತಿದೆ ಎಂದರೆ ದೇಶದ ಬಗೆಗಿನ‌ ಅವರ ದೃಷ್ಟಿಕೋನ ಯಾವ ರೀತಿ ಇದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.!

ಹೌದು ಮೋದಿ ಪ್ರತಿಯೊಂದು ವಿಚಾರದಲ್ಲೂ ವಿಶೇಷವಾಗಿ ಗುರುತಿಸಿಕೊಳ್ಳುತ್ತಾರೆ ಎಂಬುದು ವಿರೋಧಿಗಳು ಕೂಡ ಒಪ್ಪಿಕೊಂಡ ಸತ್ಯ. ಆದರೆ ಮೋದಿ ಯಾವ ರೀತಿ ವಿಶೇಷತೆಯನ್ನು ಹುಟ್ಟುಹಾಕುತ್ತಾರೆ ಎಂದರೆ ಅದು ನೋಡುವವರಿಗೆ ಮಾದರಿಯಾಗಿರುತ್ತದೆ ಮತ್ತು ಎಲ್ಲರೂ ಒಪ್ಪಿಕೊಳ್ಳುವಂತೆ ಇರುತ್ತದೆ. ಆದರೆ ಈ ಬಾರಿ ಮೋದಿ ಮತ್ತೊಂದು ಕೆಲಸದ ಮೂಲಕ ಮಾದರಿಯಾಗಿದ್ದಾರೆ ಮತ್ತು ಪ್ರತಿಯೊಬ್ಬರೂ ಮೆಚ್ಚಿಕೊಳ್ಳುವಂತೆ ಮಾಡಿದ್ದಾರೆ.‌ ಮೋದಿಗೆ ಹೋದಲ್ಲೆಲ್ಲಾ ಸಿಗುವ ಗೌರವ ಮತ್ತು ಉಡುಗೊರೆಗಳಿಗೆ ಲೆಕ್ಕವೇ ಇಲ್ಲ, ಆದರೆ ತನಗೆ ಬಂದ ಯಾವ ಉಡುಗರೆಯನ್ನು ಕೂಡ ತನ್ನ ಸ್ವಂತಕ್ಕಾಗಿ ಬಳಸಿಕೊಂಡವರಲ್ಲ ಮೋದಿಜೀ. ವಿದೇಶಕ್ಕೆ ಹೋದಾಗ ತನಗೆ ಏನೇ ಗೌರವ ಸಿಗಲಿ ಅದನ್ನು ಸಮಸ್ತ ಭಾರತೀಯರಿಗೆ ಸಮರ್ಪಿಸುವ ಪ್ರಧಾನಿ ಮೋದಿ ತನಗೆ ಸಿಗುವ ಉಡುಗೊರೆಯನ್ನು ಕೂಡ ದೇಶಕ್ಕಾಗಿ ಮೀಸಲಿಟ್ಟಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುವ ಕಷ್ಟವಾದರೂ ಒಪ್ಪಿಕೊಳ್ಳಲೇಬೇಕು.

ಹೌದು ಸ್ವತಃ ಪ್ರಧಾನಮಂತ್ರಿ ಕಛೇರಿಯಿಂದಲೇ ಈ ಬಗ್ಗೆ ಮಾಹಿತಿ ಲಭಿಸಿದ್ದು ಮೋದಿ ತನಗೆ ಬಂದ ಉಡುಗೊರೆಯನ್ನು ಮಾತ್ರವಲ್ಲದೆ ತನ್ನ ಸ್ವಂತ ಹಣವನ್ನು ಕೂಡ ದಾನ ಮಾಡುತ್ತಾರೆ ಎಂಬ ಸತ್ಯಾಂಶ ಬಯಲಾಗಿದೆ. ಇತ್ತೀಚೆಗೆ ಕುಂಭಮೇಳದ ಸಂದರ್ಭದಲ್ಲಿ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕುಂಭಮೇಳದ ಕಲ್ಯಾಣ ನಿಧಿಗೆ ತಮ್ಮ ಸ್ವಂತ ಹಣದಲ್ಲಿ ಬರೋಬ್ಬರಿ 21 ಲಕ್ಷ ನೀಡುವ ಮೂಲಕ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ.

ಕೋಟ್ಯಾಂತರ ಭಕ್ತರು ಆಗಮಿಸಿ ಕುಂಭಮೇಳದಲ್ಲಿ ಭಾಗವಹಿಸಿದರು ಕೂಡ ಅಚ್ಚುಕಟ್ಟಾಗಿ ನಿರ್ವಹಿಸಿದ ಕಾರ್ಯಗಳು ನಿಜಕ್ಕೂ ಶ್ಲಾಘನೀಯ. ‌ಅದೇ ರೀತಿ ಇತ್ತೀಚೆಗೆ ಮೋದಿಯವರಿಗೆ ದಕ್ಷಿಣ ಕೊರಿಯಾ ದೇಶವು ನೀಡಿದ ಅತ್ಯುತ್ತಮ ಶಾಂತಿ ಪ್ರಶಸ್ತಿಯ ಒಟ್ಟು 1.3 ಕೋಟಿ ಹಣವನ್ನು ಕೂಡ ಮೋದಿ ನಮಾಮಿ ಗಂಗಾ ಯೋಜನೆಗೆ ನೀಡುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದರು. ಇವಿಷ್ಟು ಮಾತ್ರವಲ್ಲದೆ ತಮಗೆ ಬಂದ ಉಡುಗೊರೆಯನ್ನು ಕೂಡ ಹರಾಜಿಗಿಟ್ಟು ಅದರಿಂದ ಬಂದ ಒಟ್ಟು ಹಣವನ್ನು ಕೂಡ ಇತರ ಯೋಜನೆಗಳಿಗೆ ಮೀಸಲಿಟ್ಟ ಮೋದಿ ತಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಸಂಬಳದ ಹಣವನ್ನೇ ದಾನ ಮಾಡಿದ್ದರು ಎಂಬುದು ವಿಶೇಷ.!

ಅದೇನೇ ಇರಲಿ ಮೋದಿ ತನಗೆ ಏನೇ ಸಿಕ್ಕರೂ ಅದನ್ನು ದೇಶಕ್ಕಾಗಿ ಸಮರ್ಪಿಸಿ ಸರ್ವಸ್ವವನ್ನೂ ತ್ಯಾಗ ಮಾಡಿ ಇತರರಿಗೆ ಮಾದರಿಯಾಗುತ್ತಿದ್ದಾರೆ ಎಂಬುದು ಒಪ್ಪಿಕೊಳ್ಳಲೇಬೇಕಾದ ಸತ್ಯ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close