ಅಂಕಣ

ಹಿಂದುತ್ವದ ಪುನರುತ್ಥಾನಕ್ಕಾಗಿ ಪಣ ತೊಟ್ಟಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ಮತ್ತು ಕರ್ನಲ್ ಪುರೋಹಿತ್ ಅವರಿಗೆ ಯುಪಿಎ ಸರಕಾರ ಕೊಟ್ಟ ಯಾತನೆಗಳನ್ನು ಕೇಳಿದರೆ ನಿಮ್ಮ ರಕ್ತ ಕುದಿಯದೆ ಇರದು.

ಯುಪಿಎ ಎಂದರೆ ಸಾಕು ಮತ್ತೇನೂ ಹೇಳುವುದಕ್ಕೆ ಉಳಿಯುವುದಿಲ್ಲ. ಭಾರತದಲ್ಲಿ ಹಿಂದೂಗಳನ್ನು ನಿರ್ನಾಮ ಮಾಡಲೆಂದೇ ಹುಟ್ಟಿದ ಹಲವಾರು ಪಕ್ಷಗಳ ಚೌ ಚೌ ಬಾತ್ ಸರಕಾರವೇ ಯೂಪಿಎ. ಹಿಂದೂ ರಾಷ್ಟವಾದಿಗಳನ್ನು ಮುಘಲ ಮತ್ತು ಬ್ರಿಟಿಷರಷ್ಟೇ ಕ್ರೂರವಾಗಿ ನಡೆಸಿಕೊಂಡ, ನಡೆಸಿಕೊಳ್ಳುತ್ತಿರುವ ಪಕ್ಷವೇ ಕಾಂಗ್ರೆಸ್ ಕೃಪಾಪೋಷಿತ ಯೂಪಿಎ ಸರಕಾರ. ಭಾರತದಲ್ಲಿ “ಭಗವಾ ಆತಂಕವಾದ” ಎಂಬ ಹೊಸ ಪದವನ್ನು ಹುಟ್ಟು ಹಾಕಿ ಹಿಂದೂಗಳೆಲ್ಲರನ್ನೂ ಆತಂಕವಾದಿಗಳೆಂದು ಬಿಂಬಿಸಿದ್ದೇ ಕಾಂಗ್ರೆಸ್.

ಕಾಂಗ್ರೆಸ್ ನ ತುಷ್ಟೀಕರಣ ನೀತಿಯನ್ವಯ ಆತಂಕವಾದಿಗಳಿಗೆ ಧರ್ಮವಿಲ್ಲವಂತೆ. ಇಸ್ಲಾಂ ಭಯೋತ್ಪಾದನೆ ಎಂಬುದೂ ಇಲ್ಲವೇ ಇಲ್ಲವಂತೆ. ಆದರೆ ಹಿಂದೂಗಳೆಲ್ಲರೂ ಆತಂಕವಾದಿಗಳಂತೆ, ದೇಶದಲ್ಲಿ ಭಗವಾ ಆತಂಕವಾದವಿದೆಯಂತೆ. ಅಹಾ… ಏನು ತರ್ಕ, ಏನು ಸಬೂಬು! ‘ಹಿಂದೂ ಫೋಬಿಯಾ’ ಎಂಬ ಮಾನಸಿಕ ರೋಗದಿಂದ ಬಳಲುತ್ತಿರುವ ಹುಚ್ಚರ ಕುತರ್ಕಗಳಿವು.

ಆಕೆ ಹದಿಹರೆಯದ ತರುಣಿ. ಹಿಂದುತ್ವದ ಪುನರುತ್ಥಾನಕ್ಕಾಗಿ ಕಾವಿಯುಟ್ಟು ಶ್ರಮಿಸುತ್ತಿದ್ದಳು. ಆತ ದೇಶ ಕಾಯುವ ಖಾಕೀ ತೊಟ್ಟ ಸೈನಿಕ. ಆತನೂ ಅಷ್ಟೆ ಹಿಂದುತ್ವದ ಉಳಿವಿಗಾಗಿ ಹಗಲಿರುಳು ದುಡಿಯುತ್ತಿದ್ದನು. ಏನೊಂದೂ ತಪ್ಪು ಮಾಡದ ಇವರಿಬ್ಬರನ್ನು ‘ಮಕೋಕಾ’ ಕೇಸು ಹಾಕಿ ಇವರ ಸ್ನೇಹಿತರೋಡನೆ ಏಕಾಏಕಿ ಬಂಧಿಸಲಾಯಿತು. ನಂತರ ನಡೆದ ಘಟನೆಗಳನ್ನು ಕೇಳಿದರೆ ನಿಮ್ಮ ಮೈಯೆಲ್ಲಾ ಉರಿ ಬರುವುದು. ನಿಮ್ಮ ರಕ್ತ ಕುದಿಯುವುದು. ಇವರಿಬ್ಬರ ತಪ್ಪೇನು ಗೊತ್ತೆ? ಇವರು ಹಿಂದು ಆಗಿದ್ದರು ಮತ್ತು ಹಿಂದುತ್ವದ ಪುನರುತ್ಥಾನವನ್ನು ಪ್ರತಿಪಾದಿಸುತ್ತಿದ್ದರು ಎಂಬುದಷ್ಟೆ.

ವೀರ್ ಸಾವರ್ಕರ್ ರವರ ಹಿಂದೂ ರಾಷ್ಟವಾದವನ್ನು ಮುನ್ನೆಲೆಗೆ ತರಲು 2006 ರಲ್ಲಿ ನಿವೃತ್ತ ಸೇನಾಧಿಕಾರಿ ರಮೇಶ ಉಪಾಧ್ಯಾಯ ಮತ್ತು ಕರ್ನಲ್ ಪುರೋಹಿತ್ ರವರು “ಅಭಿನವ ಭಾರತ” ಎಂಬ ಹಿಂದೂ ಸಂಘಟನೆಯನ್ನು ಹುಟ್ಟು ಹಾಕಿದರು. ಈ ಸಂಘಟನೆಯ ಮುಖ್ಯ ಉದ್ದೇಶ ದಾರಿ ತಪ್ಪಿದ ಹಿಂದೂ ಸಮಾಜವನ್ನು ಮತ್ತೆ ಒಗ್ಗೂಡಿಸಿ ಹಿಂದೂ ಪುನರುತ್ಥಾನವನ್ನು ಮುನ್ನೆಲೆಗೆ ತಂದು ಹಿಂದೂ ರಾಷ್ಟ್ರವಾದವನ್ನು ಊರ್ಜಿತಗೊಳಿಸುವುದಾಗಿತ್ತು. 2008 ರಲ್ಲಿ ಹಿಮಾನಿ ಸಾವರ್ಕರ್( ದಾಮೋದರ್ ಸಾವರ್ಕರ್ ಮತ್ತು ನಾಥೂರಾಮ್ ಗೋಡ್ಸೆ ಅವರ ಸಂಬಂಧಿ) ರವರ ಅಧ್ಯಕ್ಷತೆಯಲ್ಲಿ ಮೊದಲ ಸಮ್ಮೇಳನವನ್ನು ನಡೆಸಲಾಯಿತು. “ಧರ್ಮ ರಕ್ಷಣೆಯೇ ಆದ್ಯ ಕರ್ತವ್ಯ” ಎಂಬ ಧ್ಯೇಯ ಮಂತ್ರದಿಂದ ಪ್ರಾರಂಭಗೊಂಡ ಈ ಸಂಘಟನೆಯ ಕಾರ್ಯಕರ್ತರನ್ನು ಏಕಾಏಕಿ ಬಂಧಿಸಲಾಯಿತು, ಕಾರಣ: 2006 ರ ಮಾಲೇಗಾಂವ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಅಬಿನವ ಭಾರತದ ಕಾರ್ಯಕರ್ತರ ಕೈವಾಡವಿತ್ತಂತೆ!

ನಿಜ ಹೇಳಬೇಕೆಂದರೆ ಅಭಿನವ ಭಾರತಕ್ಕೂ ಮಾಲೆಗಾಂವ್ ಪ್ರಕರಣಕ್ಕೂ ಸಂಬಂಧವೇ ಇರಲಿಲ್ಲ. ಸುಳ್ಳು ಆರೋಪ ಹೊರಿಸಿ ಅಭಿನವ ಭಾರತದ ಸ್ವಾಮೀ ಅಸೀಮಾನಂದ, ಸಾಧ್ವೀ ಪ್ರಜ್ಞಾ ಸಿಂಗ್ ಮತ್ತು ಕರ್ನಲ್ ಪುರೋಹಿತ್ ರನ್ನು ಬಂಧಿಸಲಾಯಿತು. ಸಾಧ್ವಿ ಪ್ರಜ್ಞಾ ಮತ್ತು ಕರ್ನಲ್ ಶ್ರೀಕಾಂತ್ ಪುರೋಹಿತ್ ರವರನ್ನು ಮೋಸದಿಂದ ಬಂಧಿಸಲಾಗಿತ್ತು. ಪೋಲೀಸ್ ಸ್ಟೇಶನ್ ಗೆ ಹೋಗುವವರೆಗೂ ಇವರಿಬ್ಬರಿಗೆ ಬಂಧನದ ವಿಷಯವೇ ತಿಳಿದಿರಲಿಲ್ಲ. ಮಕೋಕಾ ಕಾಯ್ದೆಯಡಿ ಇವರಿಬ್ಬರನ್ನೂ ಬಂಧಿಸಿ ಮುಂಬೈಯ ಎ.ಟಿ.ಎಸ್ ಪೋಲಿಸರ ಕೈಗೊಪ್ಪಿಸಲಾಯಿತು. ಅಲ್ಲಿಂದ ಮುಂದೆ ಇವರಿಬ್ಬರೂ ಅನುಭವಿಸಿದ್ದು ರೌರವ ನರಕ. ಸಾಧ್ವಿಯೆಂಬ ಸಂತಳನ್ನು ಮತ್ತು ದೇಶ ಕಾಯುವ ಸಿಪಾಯಿಯನ್ನು ಅತ್ಯಂತ ಅಮಾನವೀಯ ರೀತಿಯಲ್ಲಿ ನಡೆಸಿಕೊಂಡಿತು ಕಾಂಗ್ರೆಸ್ ಸರಕಾರ.

ಸಾಧ್ವಿಯವರು ಸನ್ಯಾಸ ಸ್ವೀಕರಿಸಿದ್ದಾರೆಂದು ಗೊತ್ತಿದ್ದೂ ಅವರ ಕೇಸರಿ ಬಟ್ಟೆಗಳನ್ನು ಬಿಚ್ಚಿ ಬೇರಾವುದೋ ಫ್ರಾಕ್ ತೊಡಿಸಲಾಯಿತು. ಪ್ರಾಣಿಗಳಿಗಿಂತಲೂ ಕಡೆಯಾಗಿ ನಡೆಸಿಕೊಳ್ಳಲಾಯಿತು. ಪೋಲಿಸರು ಮನಸೋ ಇಚ್ಚೆ ಆಕೆಯನ್ನು ಥಳಿಸುತ್ತಿದ್ದರು. ಒಬ್ಬನಾದ ನಂತರ ಮತ್ತೊಬ್ಬ ಎಂಬಂತೆ ಏಡೆಬಿಡದೆ ಹೊಡೆಯಲಾಗುತ್ತಿತ್ತು. ಜೈಲಿನ ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ಎತ್ತಿ ಎತ್ತಿ ಒಗೆಯಲಾಗುತ್ತಿತ್ತು. ಹೊಡೆತ ತಾಳಲಾರದೆ ಆಕೆ ಹಲವಾರು ಬಾರಿ ಮೂರ್ಛೆ ಹೋಗುತ್ತಿದ್ದಳು. ಪ್ರಜ್ಞೆ ಬಂದ ನಂತರ ಮತ್ತೆ ಹೊಡೆಯಲಾಗುತ್ತಿತ್ತು. ಆಕೆಯ ಸಹ ಕೈದಿಗಳು ಆಕೆಗೆ ಅಶ್ಲೀಲ ಮಾತುಗಳನ್ನು ಹೇಳುತ್ತಿದ್ದರು. ಆಕೆ ಕಿವಿಗೆ ಕೈ ಇಟ್ಟರೆ ಬಲವಂತವಾಗಿ ಕೈ ಸರಿಸಿ ಮತ್ತೆ ಮತ್ತೆ ಅಶ್ಲೀಲ ಮಾತುಗಳನ್ನು ಅಕೆಗೆ ಕೇಳಿಸುತ್ತಿದ್ದರು. ಅತ್ತ ಕರ್ನಲ್ ಅವರ ಸ್ಥಿತಿಯೂ ಭಿನ್ನವಾಗಿರಲಿಲ್ಲ. ಜೈಲಿನಲ್ಲಿ ಪೋಲಿಸರು ಅವರನ್ನು ಹಿಗ್ಗಾ ಮುಗ್ಗಾ ಥಳಿಸುತ್ತಿದ್ದರು. ಕರ್ನಲ್ ಅವರು ಮಣಿಗಂಟಿನ ತೊಂದರೆಯಿಂದ ಬಳತ್ತಿದ್ದುದರಿಂದ ಅವರ ಎರಡೂ ಮಣಿಗಂಟುಗಳಿಗೆ ಆಪರೇಶನ್ ಮಾಡಲಾಗಿತ್ತು. ಆದರೆ ಪೋಲೀಸರು ಅವರ ಎರಡೂ ಕಾಲುಗಳಿಗೆ ಹಗ್ಗ ಸಿಕ್ಕಿಸಿ ಎಳೆದು ಕಟ್ಟಿದ್ದರು.

ಕರ್ನಲ್ ಅವರು ದಮ್ಮಯ್ಯ ಹಾಗೆ ಮಾಡಬೇಡಿ, ಮಣಿಗಂಟಿನ ಆಪರೇಶನ್ ಆಗಿದೆ ಎಂದು ಗೋಗರೆದರೂ ಪಿಷಾಚಿಗಳಿಗೆ ಕರುಣೆ ಬರಲಿಲ್ಲ. ಅವರ ಈ ಅಮಾನವೀಯ ವರ್ತನೆಯಿಂದಾಗಿ ಕರ್ನಲ್ ಅವರ ಮಣಿಗಂಟು ಮತ್ತೊಮ್ಮೆ ಹರಿದು ಹೋಯಿತು. ಸಾಧ್ವಿ ಪ್ರಜ್ಞಾ ಸಿಂಗ್ ಮತ್ತು ಕರ್ನಲ್ ಅವರ ಮೇಲೆ ಒತ್ತಡ ಹೇರಲಾಯಿತು. ಮಾಲೆಗಾಂವ್ ಬ್ಲಾಸ್ಟ್ ಪ್ರಕರಣದಲ್ಲಿ ತಮ್ಮ ಕೈವಾಡವಿದೆಯೆಂದು ಒಪ್ಪಿಕೊಳ್ಳಬೇಕೆಂದು ಅವರಿಬ್ಬರಿಗೂ ದೈಹಿಕ ಮತ್ತು ಮಾನಸಿಕ ಯಾತನೆಗಳನ್ನು ನೀಡಲಾಯಿತು.

ಒಂದಲ್ಲ, ಎರಡಲ್ಲ, ಬರೋಬ್ಬರಿ ಒಂಭತ್ತು ವರ್ಷ ಅವರು ಮಾಡದೇ ಇದ್ದ ತಪ್ಪಿಗೆ ಅವರನ್ನು ಪರಿ ಪರಿಯಾಗಿ ಶಿಕ್ಷಿಸಲಾಯಿತು. ದೇಶದ ಜನರ ಮುಂದೆ ಅವರನ್ನು ಆತಂಕವಾದಿಗಳಂತೆ ಬಿಂಬಿಸಲಾಯಿತು. ಅದೆಂತಹ ಸಿಂಹದ ಗುಂಡಿಗೆಯೋ ಈ ಹಿಂದೂ ವೀರರದ್ದು! ಇಷ್ಟೆಲ್ಲಾ ಹಿಂಸೆ ಅನುಭವಿಸಿದರೂ ಇಬ್ಬರೂ ಸೋಲೊಪ್ಪಿಕೊಳ್ಳಲಿಲ್ಲ. ಇವರ ಜಾಗದಲ್ಲಿ ಬೇರೆ ಯಾರೇ ಇದ್ದರೂ ಸತ್ತೇ ಹೋಗುತ್ತಿದ್ದರು, ಇಲ್ಲಾ ಮಾಡದೇ ಇರುವ ತಪ್ಪನ್ನು ಒಪ್ಪಿಕೊಳ್ಳುತ್ತಿದ್ದರು. ಆದರೆ ಹಿಂದೂ ಸಿಂಹ ಯಾವತ್ತಿಗೂ ಸಿಂಹವೇ. ಅದು ಹೆದರುವುದಿಲ್ಲ, ಬೆದರುವುದಿಲ್ಲ.

ಒಂಬತ್ತು ವರ್ಷದ ನರಕ ವಾಸದ ಬಳಿಕ ಅಂದರೆ ಮೋದೀ ಸರಕಾರ ಬಂದ ಬಳಿಕ ಮೊದಲ ಬಾರಿಗೆ ಇವರಿಬ್ಬರಿಗೂ ಜಾಮೀನು ದೊರಕಿತು. ಆಶ್ಚರ್ಯವೆಂದರೆ ಎ.ಟಿ.ಎಸ್ ಪೋಲೀಸರಿಗೆ ಇವತ್ತಿನವರೆಗೆ ಇವರ ವಿರುದ್ದ ಒಂದೇ ಒಂದು ಸಾಕ್ಷಿ ಲಭಿಸಿಲ್ಲ. ಇವತ್ತಿನವರೆಗೂ ಇವರಿಬ್ಬರ ಮೇಲೆ ಚಾರ್ಜ್ ಶೀಟ್ ದಾಖಲಾಗಿಲ್ಲ. ಮೋದೀ ಸರಕಾರ ಇವರಿಬ್ಬರ ಪ್ರಕರಣವನ್ನು ಎನ್.ಐ.ಎ ಗೆ ಒಪ್ಪಿಸಿದ ಬಳಿಕವೂ ಇದುವರೆಗೂ ಮಾಲೆಗಾಂವ್ ಪ್ರಕರಣಕ್ಕೂ ಇವರಿಬ್ಬರಿಗೂ ಸಂಬಂಧವಿದೆಯೆಂದು ಸಾಬೀತು ಪಡಿಸಲು ಸಾಧ್ಯವಾಗಿಲ್ಲ. ಸತ್ಯ ಮೇವ ಜಯತೆ ಎನ್ನುವುದು ಇದಕ್ಕಾಗಿಯೇ. ಜೈಲಿಂದ ಹೊರಬಂದ ಮೇಲೆ ಈ ಹಿಂದೂ ಸಿಂಹಗಳು ಏನಂದವು ಗೊತ್ತೆ? ಒಬ್ಬ ಹೆಣ್ಣು ಮಗಳು ಸಹಿಸಲು ಅಸಾಧ್ಯವಾದಂತಹ ವೇದನೆಯನ್ನು ಅನುಭವಿಸಿದ ಮೇಲೂ ಸಾಧ್ವಿ ಪ್ರಜ್ಞಾ ಸಿಂಗ್ ನಾನು ನನ್ನ ಧರ್ಮವನ್ನು ಅತೀವವಾಗಿ ಪ್ರೀತಿಸುತ್ತೇನೆಂದಳು. ಅತ್ತ ಕರ್ನಲ್ ನಾನು ನನ್ನ ದೇಶವನ್ನು ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುತ್ತೇನೆಂದರು ಮಾತ್ರವಲ್ಲದೆ ತನ್ನ ನೆಚ್ಚಿನ ಭಾರತೀಯ ಸೇನೆಯನ್ನು ಮತ್ತೆ ಸೇರಿಕೊಂಡರು.

ಅಬ್ಬ!! ದೇಶ ಮತ್ತು ಧರ್ಮವನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವವರಿಗಷ್ಟೇ ಇಂತಹ ಯಾತನೆಗಳನ್ನು ತಡೆದುಕೊಂಡ ಮೇಲೂ ದೇಶ ಪ್ರೇಮದ ಮಾತುಗಳನ್ನಾಡಲು ಸಾಧ್ಯವೇನೋ! ಕಾಂಗ್ರೆಸ್ ಅನ್ನು ಗದ್ದುಗೆ ಏರಿಸಿದರೆ ಪರಿಣಾಮ ಏನಾಗುವುದೆಂಬುದು ನಿಮಗೆ ಗೊತ್ತೇ ಇದೆ. ಹಿಂದೂಗಳ ಸಮಾಧಿಯ ಮೇಲೆ ತನ್ನ ಸೌಧವನ್ನು ಕಟ್ಟಿಕೊಂಡ ಕಾಂಗ್ರೆಸ್ ಕೈಗೆ ಅಧಿಕಾರ ಕೊಡುವ ಮುನ್ನ ಹಿಂದುತ್ವಕ್ಕಾಗಿ ಪ್ರಾಣಾರ್ಪಣೆ ಮಾಡಿದ ನಿಮ್ಮ ಬಂಧು ಭಗಿನಿಯರನ್ನು ಒಮ್ಮೆ ನೆನೆಯಿರಿ. ನರ ಸತ್ತ ನಪುಸಂಕರಾಗಬೇಡಿ…ಕೆಚ್ಚೆದೆಯ ವೀರ ಸಿಂಹಗಳಾಗಿ ದೇಶ -ಧರ್ಮದ ರಕ್ಷಣೆ ಮಾಡಿ ಹಿಂದೂಗಳೆ. ನೆಮ್ಮದಿಯ ಬದುಕಿಗಾಗಿ ಕಾಂಗ್ರೆಸ್-ಕಮ್ಯೂನಿಷ್ಟ್ ಮುಕ್ತ ಭಾರತ ಮಾಡಿ ಮತದಾರ ಪ್ರಭುಗಳೆ.

ಶನ್ನು

Tags

Related Articles

FOR DAILY ALERTS
 
FOR DAILY ALERTS
 
Close