ಅಂಕಣ

ಭಾರತದ ರಾಷ್ಟ್ರಪಿತ, ಸೆಕ್ಯೂಲರ್ ಬ್ರಿಗೇಡ್, ಬುದ್ದಿಜೀವಿ ವರ್ಗ ಮತ್ತು ಟುಕುಡೆ ಗ್ಯಾಂಗಿನ ಸುಳ್ಳಿನ ಪರದೆ ಹರಿದು ಸತ್ಯದ ಬೆಳಕು ತೋರಿದ ಡಾ. ರಿಜ್ವಾನ್ ಅಹ್ಮದ್ ಎಂಬ ದೇಶಭಕ್ತನ ಮಾತುಗಳನ್ನು ಒಮ್ಮೆ ಕೇಳಿ ನೋಡಿ!!

ಒಂದು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಿಂತು “ಸೆಕ್ಯೂಲರ್- ಬುದ್ದಿಜೀವಿ-ಟುಕುಡೆ ಗ್ಯಾಂಗಿನ” ಮುಖದ ಬೆವರಿಳಿಸಿದ್ದಾರೆ ಡಾ.ರಿಜ್ವಾನ್ ಅಹ್ಮದ್ ಎಂಬ ದೇಶಭಕ್ತ! ರಿಜ್ವಾನ್ ಹೇಳುತ್ತಾರೆ: “ಬೆಳೆಗ್ಗಿನಿಂದ ಸಾಯಂಕಾಲದವರೆಗೆ ಕುರಾನ್ ಶರೀಫ್ ಮತ್ತು ಇಸ್ಲಾಮಿನ ಹೆಸರಿನಲ್ಲಿ ಹೆದರಿಸುವವರು ತನ್ನ ಮುಂದೆ ನಿಂತು ಮಾತನಾಡುವ ಧೈರ್ಯ ಹೊಂದಿಲ್ಲ, ಏಕೆಂದರೆ ನನಗೆ ಇಸ್ಲಾಮಿನ ಸತ್ಯ ಗೊತ್ತು ಮತ್ತು ನಾನು ಅವರ ಸುಳ್ಳನ್ನು ಬಹಿರಂಗ ಮಾಡುತ್ತೇನೆಂದೂ ಅವರಿಗೆ ಗೊತ್ತು.

1947ರಲ್ಲಿ ಭಾರತ-ಪಾಕಿಸ್ತಾನ ವಿಭಜನೆಯಾಗುತ್ತಿದ್ದಾಗ ದೇಶದಲ್ಲಿ ದಂಗೆಗಳಾದವು. ಆಗ ಈ ದೇಶದ “ರಾಷ್ಟ್ರಪಿತ” ಎನಿಸಿಕೊಂಡ ಮಹಾತ್ಮಾ ಗಾಂಧಿ ನನಗೆ ಕಾಶ್ಮೀರದಲ್ಲಿ “ಬೆಳಕು” ಕಾಣುತ್ತಿದೆ, ಮತ್ತೆ ಅಲ್ಲಿ ಹಿಂದೂ-ಮುಸಲ್ಮಾನರು ಸೌಹಾರ್ದದಿಂದ ಬದುಕುತ್ತಿದ್ದಾರೆ ಎಂದು ಹೇಳಿಕೆ ನೀಡುತ್ತಾರೆ. ಆದರೆ ಈ ದಿನ ದೇಶದಲ್ಲಿ ಹಿಂದೂ ಹೆಸರಿನಲ್ಲಿ, ಭಾರತ ವಿರೋಧಿ ಹೆಸರಿನಲ್ಲಿ, ಅತಿ ಹೆಚ್ಚು ದಂಗೆ, ಕ್ರೌರ್ಯ ಮತ್ತು ಅಮಾನವೀಯತೆ ನಡೆದಿದ್ದರೆ ಅದು ಕಾಶ್ಮೀರದ ಪಂಡಿತರ ಮೇಲೆ ನಡೆದಿದೆ. ದಂಗೆಯ ಉರಿಯಲ್ಲಿ ಎಲ್ಲಕ್ಕಿಂತ ಹೆಚ್ಚು ಉರಿದದ್ದು ಕಾಶ್ಮೀರ. ಆ ಬೆಳಕು ನಿಜವಾಗಿಯೂ ಗಾಂಧಿಜಿಗೆ ತೋರಿ ಬಂದಿದ್ದರೆ, ಕಾಶ್ಮೀರದ ಪಂಡಿತರ ಮೇಲೆ ಇಷ್ಟೊಂದು ಬರ್ಬರತೆ ಯಾಕಾಯಿತು? ಗಾಂಧಿಜಿಗೆ ಯಾವ ಬೆಳಕು ಅಲ್ಲಿ ತೋರಿ ಬಂತು ಎಂದು ನನಗೆ ಸಂಶಯ ಉಂಟಾಗುತ್ತದೆ! (1990ರಲ್ಲಿ ಮೂರು ಲಕ್ಷ ಕಾಶ್ಮೀರಿ ಪಂಡಿತರನ್ನು ಕೊಲ್ಲಲಾಯಿತು ಮತ್ತು ಅಳಿದುಳಿದವರು ತಮ್ಮದೆ ದೇಶದಲ್ಲಿ ನಿರಾಶ್ರಿತರಂತೆ ಬದುಕುತ್ತಿದ್ದಾರೆ)

ಒಬ್ಬ ಮಹಾನಾಯಕ, ಒಬ್ಬ ಪರಮಾಧಿಕಾರ ಹೊಂದಿದ ನಾಯಕನಿಗೆ ಮುಂಬರುವ ಹತ್ತು ದಿನಗಳಲ್ಲಾಗುವ ಭವಿಷ್ಯದ ಬಗ್ಗೆ ಊಹಿಸಲು ಸಾಧ್ಯವಿಲ್ಲವೆಂದರೆ ಆ ವ್ಯಕ್ತಿಗೆ ರಾಷ್ಟ್ರಪಿತನೆನಿಸಿಕೊಳ್ಳುವ ಅಧಿಕಾರವಿಲ್ಲ. ಯಾವ ಕಾಶ್ಮೀರದಲ್ಲಿ “ಜಾತ್ಯಾತೀತತೆಯ ಬೆಳಕು” ಗಾಂಧಿಜಿಗೆ ಕಂಡಿತೋ ಏನಾಯಿತು ಆ ಕಾಶ್ಮೀರದಲ್ಲಿ? ಹಿಂದೂಗಳು ಕಳೆದ ಎಪ್ಪತ್ತು ವರ್ಷಗಳಿಂದ ಸತತವಾಗಿ ಬೆಲೆ ತೆರುತ್ತಾ ಬಂದಿದ್ದಾರೆ ಅಲ್ಲಿ. ಅದನ್ನು ಊಹಿಸಲಾಗದ ಇವರೆಂತ ರಾಷ್ಟ್ರಪಿತ? ಕಾಶ್ಮೀರಿ ಪಂಡಿತರ ಕಗ್ಗೊಲೆ ನಡೆಸಲು ಭಾರತದ ಸಂವಿಧಾನ-ನ್ಯಾಯಾಂಗದ ಒಳಗೆ “ಮೂರು ಮಹಾ ದೇಶದ್ರೋಹಿಗಳು” ಸೇರಿ ಒಂದರ ಮೇಲೊಂದರಂತೆ ಸಮ್ಮತಿ ನೀಡುತ್ತಾ ಹೋಗುತ್ತಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಭಾರತದ ನ್ಯಾಯಾಂಗ ವ್ಯವಸ್ಥೆ ಮೌನವಾಗಿ ಇದನ್ನೆಲ್ಲಾ ನೋಡುತ್ತಿತ್ತು.

ಈ ದೇಶದಲ್ಲಿ ಸರಕಾರಗಳು ಬಂದವು ಹೋದವು. ಆದರೆ ಆ ಮೂರು ದೇಶದ್ರೋಹಿಗಳನ್ನು ಅಲ್ಲಿಂದ ಕಿತ್ತೊಗೆಯಲಿಲ್ಲ. ಇಡಿಯ ವಿಶ್ವಕ್ಕೆ ಗೊತ್ತು, ರಾತೋರಾತ್ರಿ ಕಾಶ್ಮೀರಿ ಪಂಡಿತರ ಮೇಲೆ ಅತ್ಯಾಚಾರ ನಡೆಸಿದರು, ಅವರನ್ನು ಬರ್ಬರವಾಗಿ ಕೊಂದರು. ಮಸೀದಿಗಳಿಂದ ಕಾಶ್ಮೀರಿ ಪುರುಷರನ್ನು ಕೊಲ್ಲಿ, ಇವರ ಯುವತಿ ಮತ್ತು ಮಹಿಳೆಯರನ್ನು ಇಟ್ಟುಕೊಳ್ಳಿ ಎಂದು ಘೋಷಣೆ ಕೂಗುತ್ತಿದ್ದರು. ಈ ಘೋಷಣೆಗಳನ್ನು ನಾನು ಹೇಳುತ್ತಿಲ್ಲ, ಬದಲಾಗಿ ಕಾಶ್ಮೀರದ ಮಸೀದಿಗಳಿಂದ ಕೇಳಿ ಬರುತ್ತಿದ್ದ ಘೋಷಣೆಗಳಿವು. ಅದರ ಮೇಲೆ ಟಿವಿ ಸ್ಟುಡಿಯೋದೊಳಗೆ ಕೂತು ಇವರು ಡಿಬೆಟ್ ಮಾಡುತ್ತಾರೆ. ಯಾರೋ ಹೈದರಿ, ಯಾರೋ ಬಾಬರಿ.. ಯಾರಿವರೆಲ್ಲ?

ಸ್ವಲ್ಪ ಯೋಚಿಸಿ, ಈ ವಿದ್ಯಾಸಂಸ್ಥೆಯಲ್ಲಿ ನೀವು ಓದುತ್ತೀರಿ, ಇಲ್ಲಿಯ ಆಡಳಿತ ನಿಮಗೆ ಉತ್ತಮ ವಿದ್ಯಾಭಾಸ ನೀಡಬೇಕೆಂದು ಕಾರ್ಯರತವಾಗಿರುವ ಈ ಸಂಸ್ಥೆಯಲ್ಲೆ ನಿಂತು ಕೊಂಡು ಅದರ ವಿರುದ್ದ ನೀವು ” ಹಮ್ ತೆರೆ ಟುಕುಡೆ ಕರ್ ದೇಂಗೆ ,ಇನ್ಶಾ ಅಲ್ಲಾಹ್” ಘೋಷಣೆ ಕೂಗುತ್ತೀರಿ? ಇದು ಸಾಧ್ಯವೆ? ಆದರೆ ಈ ದೇಶದಲ್ಲಿ ಜೆ.ಎನ್.ಯೂನಿಂದ ಹಿಡಿದು ಜಾಧವಪುರ, ಹೈದರಾಬಾದ್ ವರೆಗೆ ಬಹಿರಂಗವಾಗಿ ಜನರು ” ಭಾರತ್ ತೇರೆ ಟುಕುಡೆ ಹೋಂಗೆ, ಇನ್ಶಾ ಅಲ್ಲಾಹ್” ಘೋಷಣೆ ಕೂಗುತ್ತಾರೆ. ಟಿ.ವಿಗಳಲ್ಲಿ ತರ್ಕಗಳ ಮೂಲಕ ಅದು ಹಾಗಲ್ಲ, ಅದು ಹೀಗಲ್ಲ, ಅವರೆಲ್ಲ “ದಾರಿ ತಪ್ಪಿದ” ಜನರು ಎಂದು ಅವರನ್ನು ಬಚಾವು ಮಾಡಲಾಗುತ್ತಿದೆ, ಜನರಿಗೆ ಮನವರಿಕೆ ಮಾಡಲಾಗುತ್ತಿದೆ. ಜೆ.ಎನ್.ಯೂವಿನಲ್ಲಿ ದಾರಿ ತಪ್ಪಿದವರು ವಿದ್ಯಾಭಾಸ ಮಾಡುತ್ತಾರೆನ್ನುವುದು ನನಗೆ ಈಗಲೆ ತಿಳಿದದ್ದು!

ಇದೆಲ್ಲಾ ಏನು? ಈ ದೇಶದಲ್ಲಿ ಹಲವಾರು ವರ್ಷಗಳಿಂದ ಬಹುಸಂಖ್ಯಾತರ ಮೇಲೆ ಕಲ್ಲು ಎಸೆಯಲಾಗುತ್ತಿದೆ. ಅವರ ತಾಳ್ಮೆ, ಧೃತಿ ಮತ್ತು ಧೈರ್ಯದ ಪರೀಕ್ಷೆ ಮಾಡುತ್ತಿದ್ದೀರಿ ನೀವು? ಮೊತ್ತ ಮೊದಲ ಬಾರಿಗೆ ಒಂದು ಸರಕಾರ(ಮೋದಿ) 1993 ಯಲ್ಲಿ ರಚಿಸಲಾದ 16-17 ಹುರಿಯತ್ ಕಾನ್ಪರೆನ್ಸಿನ ವಂಚಕರ ವಿರುದ್ದ ಅವರಿಗೆ ಅವರದೆ ಭಾಷೆಯಲ್ಲಿ ಉತ್ತರ ಕೊಟ್ಟಿದೆ. ಈ ಉತ್ತರವನ್ನು ಎಪ್ಪತ್ತು ವರ್ಷಗಳ ಹಿಂದೆಯೆ ಅವರಿಗೆ ಕೊಡಬೇಕಾಗಿತ್ತು, ಈಗಲಾದರೂ ಅದನ್ನು ಕೊಡಲಾಗುತ್ತಿದೆ. ಇದೆ ಕಾರಣಕ್ಕೆ ದೆಹಲಿಯೊಳಗೆ ಕುಳಿತಿರುವ ಸೆಕ್ಯೂಲರ್ ಫಲಾನುಭವಿ ಕಳ್ಳರು “ಮಕ್ಕಳನ್ನು ಕೊಂದರು ನೋಡಿ, ಮಕ್ಕಳ ಮೇಲೆ ಬಂದೂಕು ಚಲಾಯಿಸಿದರು ನೋಡಿ” ಎಂದು ಬೊಂಬಡಾ ಬಜಾಯಿಸುತ್ತಾ ಇಲ್ಲಿಂದ, ವಿಶ್ವ ಸಂಸ್ಥೆಯವರೆಗೂ ಹೋಗುತ್ತಿದ್ದಾರೆ.

ಅವರು ಸ್ಮರಿಸಬೇಕಾದ ವಿಚಾರವೇನೆಂದರೆ ತಮಿಳುನಾಡಿನಲ್ಲಿ “ಹಿಂದಿ ವಿರೋಧಿ” ಚಳುವಳಿ ನಡೆದಾಗ ಅಣ್ಣಾ ದೊರೈ ಮಶೀನ್ ಗನ್ ನಿಂದ ಗುಂಡಿನ ಮಳೆಗರೆದಿದ್ದರು. ಆಗ ಸೆಕ್ಯೂಲರ್ ಗಳಿಗೆ ನೋವಾಗಿರಲಿಲ್ಲ. ಯಾರು ಭಾರತದ ಅಸ್ಮಿತೆಗೆ ಸವಾಲು ಹಾಕುತ್ತಾರೋ, ಯಾರು ಆರ್ಮಿ ಮೇಲೆ ಕಲ್ಲು ತೂರುತ್ತಾರೋ, ಯಾರು ನಿವೃತ್ತ ಸೈನಿಕರನ್ನು ಕೊಲ್ಲುತ್ತಾರೋ, ಕರ್ತವ್ಯ ನಿರತರಾದ ಪೋಲೀಸರನ್ನು ಕೊಲ್ಲುತ್ತಾರೋ ಅವರನ್ನು ಬಚಾವು ಮಾಡಲು ನಮ್ಮ ದೇಶದ “ಮಾನವಾಧಿಕಾರ ಕಾರ್ಯಕರ್ತರು” ಓಡಿ ಬರುತ್ತಾರೆ! ಇಂತವರಿಗೆ ದೇಶದ ಬೌದ್ಧಿಕ ಮಹಾಮಹಿಮ ವರ್ಗ ಸುರಕ್ಷತೆ ಕೊಡುತ್ತದೆ. ಇಂತಹವರಿಂದಾಗಿಯೆ ಮನೆಯ ಆದಾಯ ಮೂರು ಸಾವಿರ ರುಪಾಯಿ ಇರುವ ಕನಯ್ಯಾ ನಂತವರು ವಿಮಾನಗಳಲ್ಲಿ ಹಾರಾಡುತ್ತಾ ದೇಶದ ಮೂಲೆ ಮೂಲೆ ಸಂಚರಿಸುತ್ತಾ ಭಾಷಣ ಮಾಡುತ್ತಾರೆ. ವಿಮಾನದಲ್ಲಿ ಸುತ್ತಾಡಲು ಇವರ ಹಿಂದೆ ನಿಂತು ಇವರಿಗೆಲ್ಲ ಹಣ ಕೊಡುವವರು ಯಾರು? ನಾವು ಅದನ್ನು ತಿಳಿಯಲು ಬಯಸುತ್ತಿಲ್ಲ. ನೀವು ಅವರ ಬಗ್ಗೆ ತಿಳಿದುಕೊಳ್ಳಿ ಎಂದು ನಾನು ಬಯಸುತ್ತೇನೆ ಏಕೆಂದರೆ ಈ “ಶಕ್ತಿ”ಗಳು ತುಂಬಾ ಅಪಾಯಕಾರಿ”.

ಡಾ.ರಿಜ್ವಾನ್ ಹೇಳುತ್ತಿರುವ ಅಪಾಯಕಾರಿ ಶಕ್ತಿಗಳು ಯಾವುದು ಎನ್ನುವುದು ನಿಮಗೆ ಗೊತ್ತಾಗಿರಬಹುದು. ಅಪಾಯಕಾರಿ ಶಕ್ತಿಗಳನ್ನು ಸೋಲಿಸಿ, 2019 ರಲ್ಲಿ ಮೋದಿಯವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ. ಭಾರತ ಉಳಿಸಿ..

-ಶಾರ್ವರಿ

Tags

Related Articles

FOR DAILY ALERTS
 
FOR DAILY ALERTS
 
Close