ಅಂಕಣಇತಿಹಾಸ

ಇಂಡೋ-ಪಾಕ್ ಯುದ್ಧದಲ್ಲಿ ಭಾರತ ಜಯಗಳಿಸಲು ಮುಖ್ಯ ಕಾರಣರಾಗಿದ್ದ ಈ ದೇಶಭಕ್ತ! ಯುದ್ಧ ಗೆಲ್ಲಲು ರಾಂಚೋದ್ಬಾಯಿ ರಬರಿ ಭಾರತೀಯ ಸೈನ್ಯಕ್ಕೆ ಮಾರ್ಗದರ್ಶನ ನೀಡಿದ್ದು ಹೇಗೆ ಗೊತ್ತಾ?!

ಅಂದಿನಿಂದ ಭಾರತ ಅದೆಷ್ಟು ಬಾರಿ ಶಾಂತಿಯುತವಾಗಿ ನಡೆದುಕೊಂಡರೂ ಪಾಕಿಸ್ತಾನ ಮಾತ್ರ ತನ್ನ ನರಿ ಬುದ್ಧಿಯನ್ನು ಬಿಡುವವರಲ್ಲ!! ಯಾಕೆಂದರೆ ಅವರು ತಮ್ಮ ಮನಸ್ಸಿನಲ್ಲಿ ಕಲ್ಮಶವನ್ನೇ ತುಂಬಿಕೊಂಡಿರುವವರು.. ಭಾರತ ತನ್ನಷ್ಟಕ್ಕೆ ತಾನಿದ್ದರೂ ಪಾಕ್ ಮಾತ್ರ ಅಂದಿನಿಂದ ಇಂದಿನವರೆಗೆ ತನ್ನ ನರಿಬುದ್ಧಿಯನ್ನು ತೋರಿಸುತ್ತಲೇ ಬರುತ್ತಿದೆ!! ಅಂದು ಭಾರತ ಪಾಕ್ ಯುದ್ದ ನಡೆದಾಗ ಅದೆಷ್ಟೋ ಭಾರತೀಯ ಯೋಧರು ದೇಶಕ್ಕೋಸ್ಕರ ಹೋರಾಡಿ ಪ್ರಾಣವನ್ನೇ ತ್ಯಾಗ ಮಾಡಿದ್ದಲ್ಲದೇ, ದೇಶದ ಹಿರಿಮೆಯನ್ನು ಹೆಚ್ಚಿಸುವಲ್ಲಿ ಬಹುದೊಡ್ಡ ಪಾತ್ರವನ್ನು ಮಾಡಿದ್ದಾರೆ. ಅಲ್ಲದೇ ಅದೆಷ್ಟೋ ವೀರಾಧಿ ವೀರರು ಭಾರತ ಪಾಕಿಸ್ತಾನದ ನಡುವೆ ನಡೆದ ನಾಲ್ಕು ಯುದ್ದದಲ್ಲಿ ಹೀರೋಗಳೆಂದೆನಿಸಿದ್ದಲ್ಲದೇ ತ್ಯಾಗ ಮತ್ತು ದೇಶಭಕ್ತಿಯ ಪರಿಕಲ್ಪಪನೆಗಳನ್ನು ಎತ್ತಿ ತೋರಿಸಿದ್ದಾರೆ!! ಆದರೆ ಭಾರತ-ಪಾಕಿಸ್ತಾನದ ನಡುವೆ ನಡೆದ ಯುದ್ದದಲ್ಲಿ ಸಾಮಾನ್ಯ ನಾಗರೀಕನೋರ್ವ ಹೀರೋ ಎನಿಸಿಕೊಂಡಿದ್ದಾರೆ ಎಂದರೆ ಅದು ನಿಜಕ್ಕೂ ಒಂದು ಬಾರಿ ಅಚ್ಚರಿಯಾಗುತ್ತದೆ ಅಲ್ಲವೆ?! ಈ ದೇಶಭಕ್ತನ ಬಗ್ಗೆ ನಾವು ನೆನೆಯಲೇ ಬೇಕು!!
ಯುದ್ಧದಲ್ಲಿ ಭಾರತೀಯ ಸೈನ್ಯಕ್ಕೆ ಮಾರ್ಗದರ್ಶನ ನೀಡಿದ್ದ ರೂವಾರಿಯೇ ರಾಂಚೋದ್ಬಾಯಿ ರಬರಿ!!
1965 ಮತ್ತು 1971ರಲ್ಲಿ ನಡೆದ ಇಂಡೋ-ಪಾಕ್ ಯುದ್ದದಲ್ಲಿ ಭಾರತೀಯ ಸೈನ್ಯಕ್ಕೆ ‘ಮಾರ್ಗದರ್ಶನ’ ನೀಡಿ ಹೀರೋ ಅನಿಸಿಕೊಂಡ ಆ ವ್ಯಕ್ತಿ ಬೇರಾರು ಅಲ್ಲ ಅವರೇ ರಾಂಚೋದ್ಬಾಯಿ ರಬರಿ! ದೇಶಕ್ಕೋಸ್ಕರ ಭಾರತೀಯ ಸೈನಿಕರಿಗೆ ಸಹಾಯಹಸ್ತವನ್ನು ನೀಡಿ ಅಸಾಧಾರಣ ಪಾತ್ರವನ್ನು ನಿರ್ವಹಿಸಿದ ರಾಂಚೋದ್ಬಾಯಿ ರಬರಿ, ಭಾರತೀಯ ಸೈನ್ಯ 2 ಯುದ್ದದಲ್ಲಿ ಜಯವನ್ನು ಗಳಿಸಿತು ಎಂದರೆ ಅದಕ್ಕೇ ಮುಖ್ಯ ರೂವಾರಿಯೇ ರಾಂಚೋದ್ಬಾಯಿ ರಬರಿ!
1965ರಂದು ಪಾಕಿಸ್ತಾನದ ಸೈನಿಕರು ಕುಚ್‍ನಲ್ಲಿನ ವಿದ್ಯಾಕೋಟ್ ಪೆÇೀಸ್ಟನ್ನು ವಶಪಡಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಸುಮಾರು 100ಕ್ಕೂ ಹೆಚ್ಚು ಭಾರತೀಯ ಸೈನಿಕರು ಹುತಾತ್ಮರಾದರಲ್ಲದೇ ಇದೇ ಸಮಯದಲ್ಲಿ ಪಾಕಿಸ್ತಾನ ಸೈನ್ಯವು, ಭಾರತೀಯ ಭೂ ಪ್ರದೇಶವನ್ನು ಸಂಪೂರ್ಣವಾಗಿ ನುಸುಳಿದ್ದರು!! ಆ ಸಂದರ್ಭದಲ್ಲಿ ಭಾರತೀಯ ಸೈನ್ಯಕ್ಕೆ ಮಾರ್ಗದರ್ಶನ ನೀಡಿ, ಪಾಕಿಸ್ತಾನ ಸೈನ್ಯವನ್ನು ಸದೆಬಡೆಯಲು ಮುಖ್ಯ ಕಾರಣರಾದವರು ರಾಂಚೋದ್ಬಾಯಿ!! ಪಾಕಿಸ್ತಾನದ ಸೈನಿಕರು ನುಸುಳಿದ್ದ ಆ ಪ್ರದೇಶದ ಬಗ್ಗೆ ಸಂಪೂರ್ಣವಾಗಿ ಅರಿವಿದ್ದ ಇವರು ಆ ಪ್ರದೇಶದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಾಗೂ ಮಾರ್ಗದರ್ಶನವನ್ನು ಭಾರತೀಯ ಸೈನಿಕರಿಗೆ ನೀಡಿದರು!!
ಅಷ್ಟೇ ಅಲ್ಲದೇ, ರಾಂಚೋದ್ಬಾಯಿ ರಬರಿ ಪಾಕಿಸ್ತಾನದ ನುಸುಳುಕೋರರು ಭಾರತದ ಗಡಿ ಪ್ರದೇಶಕ್ಕೆ ತಲುಪುವ ಸಮಯಕ್ಕೆ, ಭಾರತೀಯ ಸೈನಿಕರು ತಲುಪುವಂತೆ ಮಾಡಿದ್ದ ಹಿರಿಮೆ ಇವರದ್ದಾಗಿದೆ!! ಕೊನೆಗೆ ಇವರು ನೀಡಿದ ಸೂಚನೆಯಂತೆಯೇ ಭಾರತೀಯ ಸೈನಿಕರು, 1200 ಪಾಕಿಸ್ತಾನಿ ಸೈನಿಕರು ಇದ್ದ ನಿಖರವಾದ ಸ್ಥಳವನ್ನು ತಲುಪಿ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಿ ಜಯವನ್ನು ಸಾಧಿಸಿಕೊಂಡರು!!
ಒಂಟೆಯ ಮೇಲೆಯೇ ಕುಳಿತು ಸವಾರಿ ಮಾಡಿ ಪಾಕಿಸ್ತಾನದ ಗಡಿ ದಾಟಿದ್ದರು ರಾಂಚೋದ್ಬಾಯಿ ರಬರಿ!!
ಅದಲ್ಲದೆ ಮತ್ತೊಂದು ವಿಚಾರವೆಂದರೆ ಯುದ್ದದಲ್ಲಿ ಭಾರತೀಯ ಸೈನ್ಯದ ಯಶಸ್ಸಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದ ರಾಂಚೋದ್ಬಾಯಿ ರಬರಿ ಪಾಕಿಸ್ತಾನದ ಗಡಿಯನ್ನು ಒಂಟೆಯ ಮೇಲೆ ಕುಳಿತು ಸವಾರಿ ಮಾಡಿದ್ದರು!! ಈ ಮೂಲಕ ಪಾಕಿಸ್ತಾನದ ಗಡಿಯನ್ನು ತಲುಪಿ, ಪಾಕಿಸ್ತಾನದ ಪ್ರಮುಖ ಹಡಗು ತಾಣಗಳ ಮಾಹಿತಿಗಳನ್ನು ಸಂಗ್ರಹಿಸಿ, ಈ ಕಾರಣದಿಂದಾಗಿ 1971ರಲ್ಲಿ ಪಾಕಿಸ್ತಾನದ ಎದುರು ಜಯವನ್ನು ಸಾಧಿಸಲು ಕಾರಣವಾಯಿತು. ಅದಲ್ಲದೆ ಇವರು ನೀಡಿರುವ ಈ ಮಾಹಿತಿಯ ಆಧಾರದ ಮೆರೆಗೆ ನಮ್ಮ ಭಾರತೀಯ ಸೇನೆಯು ಯುದ್ದಕ್ಕೆ ಸಿದ್ಧತೆಯನ್ನು ಮಾಡಿದ್ದಲ್ಲದೇ ಯುದ್ದ ಸಾಮಾಗ್ರಿಗಳು ವಿರಳವಾದಾಗ, ಸೈನ್ಯಕ್ಕೆ ಅಗತ್ಯವಿರುವಷ್ಟು ಯುದ್ದಸಾಮಾಗ್ರಿಗಳನ್ನು ಸೈನಿಕರಿಗೆ ತಲುಪುವಂತೆ ಮಾಡುವ ಕೆಲಸವನ್ನು ಕೂಡ ರಾಂಚೋದ್ಬಾಯಿ ರಬರಿ ಮಾಡಿದ್ದರು. ಈ ಮೂಲಕ ಭಾರತೀಯ ಸೈನ್ಯವು ಪಾಕಿಸ್ತಾನದ ವಿರುದ್ದ ಜಯಗಳಿಸಿದ್ದಲ್ಲದೇ, ರಾಂಚೋದ್ಬಾಯಿ ರಬರಿ ಈ ಮೂಲಕ ಹೀರೋ ಎಂದೆನಿಸಿಕೊಂಡಿದ್ದಾರೆ!!
ಅಲ್ಲಿಯವರೆಗೆ ಭಾರತದ ಸೈನ್ಯದ ವಿವಿಧ ಹುದ್ದೆಗಳಿಗೆ ಕೇವಲ ಹುತಾತ್ಮ ಸೈನಿಕರ ಹಾಗೂ ವಿವಿಧ ದೇವರುಗಳ ಹೆಸರನ್ನು ಮಾತ್ರ ಇಡಲಾಗಿತ್ತು. ಆದರೆ ಒಬ್ಬ ಸಾಮಾನ್ಯ ವ್ಯಕ್ತಿಯೆನಿಸಿಕೊಂಡ ರಾಂಚೋದ್ಬಾಯಿ ಅವರ ಸಾಧನೆಗೆ, ದೇಶಕ್ಕಾಗಿ ಮಾಡಿದ ಸೇವೆಯನ್ನು ಪರಿಗಣಿಸಿ ಸೈನ್ಯದ ಒಂದು ಹುದ್ದೆಗೆ ಇವರ ಹೆಸರನ್ನು ನೀಡಲಾಗಿದೆ ಎಂದರೆ ನಿಜಕ್ಕೂ ಕೂಡ ಹೆಮ್ಮೆಯ ವಿಚಾರ!! ಇನ್ನು, ರಾಂಚೋದ್ಬಾಯಿ ರಬರಿ ಮಾಡಿದ ಈ ಸಾಧನೆಯನ್ನು ಮನಗಂಡು ಅನೇಕ ಪ್ರಶಸ್ತಿಗಳೂ ಇವರಿಗೆ ಒಲಿದು ಬಂದವು!! ಅದಲ್ಲದೆ 1965 ಮತ್ತು 1971ರಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಯುದ್ದದಲ್ಲಿ ರಾಂಚೋದ್ಬಾಯಿ ರಬರಿ ನಿಜವಾದ ನಾಯಕರೆನಿಸಿಕೊಂಡಿದ್ದು ಮಾತ್ರವಲ್ಲದೇ ಇಡೀ ದೇಶವೇ ಬೆರೆಗಾಗುವಂತಹ ಸಾಧನೆಯನ್ನು ಮಾಡಿದ ಏಕೈಕ ವ್ಯಕ್ತಿಯೆನಿಸಿಕೊಂಡಿದ್ದಾರೆ!! ಇಂತಹವರ ಇತಿಹಾಸ ಕೆಲವರಿಗೆ ಮಾತ್ರ ತಿಳಿದಿರಲು ಸಾಧ್ಯ.. ಇಂತಹ ದೇಶಭಕ್ತರನ್ನು ನಾವು ಎಂದಿಗೂ ಸ್ಮರಿಸಲೇ ಬೇಕು…
-ಪವಿತ್ರ
Tags

Related Articles

FOR DAILY ALERTS
 
FOR DAILY ALERTS
 
Close