ಅಂಕಣ

22 ಮಕ್ಕಳನ್ನು ರಕ್ಷಿಸಲು ಭಾರತೀಯ ಸೇನೆ ನಡೆಸಿದ ಇನ್ನೊಂದು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಗೊತ್ತೇ?! ಯಾವ ಮಾಧ್ಯಮಗಳೂ ಮಾತನಾಡುತ್ತಿಲ್ಲವೇಕೆ?

ಜಗತ್ತಿನ ಬಲಾಢ್ಯ ಸೇನೆಗಳಲ್ಲಿ ಒಂದಾಗಿರುವ ಭಾರತೀಯ ಸೇನೆ ಇಂದು ಗಡಿ ದಾಟಿಯೂ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಬಲ್ಲದು ಎಂಬುವುದಕ್ಕೆ ಇತ್ತೀಚೆಗೆ ನಡೆದ ನಿಖರ ದಾಳಿಯೇ ಸಾಕ್ಷಿ. ಈಗ ಅದಕ್ಕಿಂತಲೂ ಭೀಕರ ದಾಳಿಯನ್ನು ಭಾರತದ ಸೈನಿಕರು ನಡೆಸಿದ್ದಾರೆ. ಈ ದಾಳಿಯನ್ನು ನಡೆಸಿದ ಭಾರತದ ಸೈನಿಕರ ಧೈರ್ಯ, ಸಾಹಸ, ತ್ಯಾಗ ಮನೋಭಾವವನ್ನು ಇಡೀ ಜಗತ್ತೇ ಇಂದು ನಿಬ್ಬೆರಗಾಗಿ ನೋಡುತ್ತಿದೆ. ಭಾರತದ ಸೈನಿಕರು ಇಂದು ತಾನು ಏನು ಎಂಬುವುದನ್ನು ಇಡೀ ವಿಶ್ವಕ್ಕೆ ತೋರಿಸಿದ್ದಾರೆ. ಈ ಕಥೆಯನ್ನು ಕೇಳಿ ಪ್ರತೀ ಭಾರತೀಯನೂ ಹೆಮ್ಮೆ ಪಡಲೇಬೇಕು. ಯಾವುದೋ ಒಂದು ದೇಶದಲ್ಲಿ ಶತ್ರುಗಳನ್ನು ಎದುರು ಹಾಕುವುದಿದೆಯಲ್ಲಾ ಇದಕ್ಕಿಂತ ದೊಡ್ಡ ಸಾಹಸ ಬೇರ್ಯಾವುದೂ ಇಲ್ಲ.

ನಮ್ಮ ಸೈನಿಕರು ಭಾರತಕ್ಕಾಗಿ ಹೋರಾಡುವುದಷ್ಟೇ ಅಲ್ಲ. ವಿಶ್ವಸಂಸ್ಥೆಯ ವತಿಯಿಂದ ಶಾಂತಿ ಪಾಲನೆಗಾಗಿಯೂ ನಿಯೋಜನೆಗೊಂಡಿದ್ದಾರೆ. ಶಾಂತಿಪಾಲನೆಗಾಗಿ ನಡೆಸಿದ ಹೋರಾಟದಲ್ಲಿ ನಮ್ಮ ಸೈನಿಕರು ಪ್ರಾಣವನ್ನೂ ಅರ್ಪಿಸಿದ್ದಾರೆ. ಆದರೆ ಇತ್ತೀಚೆಗೆ ಭಾರತದ ಸೈನಿಕರು ಮಾಡಿದ ಮತ್ತೊಂದು ಸಾಹಸ ಪ್ರವೃತ್ತಿಯನ್ನು ಇಡೀ ವಿಶ್ವವೇ ಕೊಂಡಾಡುವಂತಾಗಿದೆ.

ವಿಶ್ವ ಸಂಸ್ಥೆ ವತಿಯಿಂದ ಕಾಂಗೋ ಗಣರಾಜ್ಯದಲ್ಲಿ ಶಾಂತಿ ಪಾಲನೆಗಾಗಿ ನಿಯೋಜನೆಗೊಂಡಿರುವ ಭಾರತೀಯ ಸೇನಾ ತುಕಡಿಯು ಅಲ್ಲಿ ಉಗ್ರರ ಗುಂಪಿನಲ್ಲಿ ಸೇರಿಕೊಂಡಿದ್ದ 22 ಮಕ್ಕಳನ್ನು ಯಶಸ್ವಿಯಾಗಿ ಕಾಪಾಡಿದೆ. ಕೊಂಚ ಏಮಾರಿದ್ದರೂ ಅಲ್ಲಿನ ಉಗ್ರರು ಸೈನಿಕರ ಜೊತೆಯಲ್ಲಿ ನಿರ್ದಯವಾಗಿ ವರ್ತಿಸಿರುತ್ತಿದ್ದರು. ಆದರೆ ಉಗ್ರರಿಗೆ ಯಾವುದೇ ಸುಳಿವೇ ಇಲ್ಲದಂತೆ ಒಮ್ಮೆಲೆ ದಾಳಿ ನಡೆಸಿ ಮಕ್ಕಳಿಗೆ ಹಾಗೂ ತನಗೆ ಸ್ವಲ್ಪವೂ ಅಪಾಯವಾಗದಂತೆ ರಕ್ಷಿಸಿ ಉಗ್ರರಿಗೆ ಮಣ್ಣುಮುಕ್ಕಿಸಿದ್ದಾರೆ.

ಕಾಂಗೋ ಗಣರಾಜ್ಯದಲ್ಲಿ ಶಾಂತಿ ಪಾಲನೆಗಾಗಿ ನಿಯೋಜನೆಗೊಂಡಿರುವ ಭಾರತೀಯ ಸೇನಾ ತುಕಡಿಯು ಅಲ್ಲಿ ಉಗ್ರರ ಗುಂಪಿನಲ್ಲಿ ಸೇರಿಕೊಂಡಿದ್ದ 22 ಮಕ್ಕಳನ್ನು ಕಾಪಾಡಿದೆ. ಆಂತರಿಕ ಗಲಭೆ ಪೀಡಿತ ಪ್ರದೇಶವಾದ ನ್ಯಾಬಿವೊಂಡೋ ಪ್ರಾಂತ್ಯದಲ್ಲಿ 16 ಗಂಡು ಮಕ್ಕಳು ಹಾಗೂ 8 ಹೆಣ್ಣು ಮಕ್ಕಳು ಈ ಪ್ರಾಂತ್ಯದಲ್ಲಿ ನೆಲೆಯೂರಿರುವ ಬಂಡುಕೋರರಿಂದ ಶಸ್ತ್ರಾಸ್ತ್ರ ತರಬೇತಿ ಪಡೆಯುತ್ತಿದ್ದರು.

ಇದನ್ನು ಕಾರ್ಯಾಚರಣೆ ವೇಳೆ ಗಮನಿಸಿದ ಭಾರತೀಯ ಸೇನಾ ಯೋಧರು, ಆ ತರಬೇತಿ ಶಿಬಿರದ ಮೇಲೆ ದಾಳಿ ನಡೆಸಿದ ಅಲ್ಲಿಂದ ಮಕ್ಕಳನ್ನು ಪಾರು ಮಾಡಿ ತಂದಿದ್ದಾರೆಂದು ವಿಶ್ವ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿಯಾಗಿದೆ.

ಇಷ್ಟು ಮಾತ್ರವಲ್ಲ ಬಂಡುಕೋರರ ಹಿಡಿತದಲ್ಲಿದ್ದ ಅಮಾಯಕರನ್ನೂ ರಕ್ಷಿಸುವಲ್ಲಿ ಸೇನಾಪಡೆ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಭಾರತದ ಮತ್ತೊಂದು ತುಕಡಿಯು ಬಂಡುಕೋರರು ಹಿಡಿತಕ್ಕೆ ಪಡೆಯಲು ಯತ್ನಿಸುತ್ತಿದ್ದ ಮಿರ್ಕಿ ಎಂಬ ಹಳ್ಳಿಯಲ್ಲಿದ್ದ ಸುಮಾರು 200 ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದೆ. ನಾಗರಿಕರನ್ನು ಯಶಸ್ವಿಯಾಗಿ ಸ್ಥಳಾಂತರಗೊಳಿಸಿದ ಬಳಿಕ ಇನ್ನು ಉಗ್ರರ ಬೇಟೆ ಶುರುವಾಗಲಿದೆ.

ಉಗ್ರರಿಗೆ ಯಾವುದೇ ಸುಳಿವು ಸಿಗದಂತೆ ಮಕ್ಕಳನ್ನು ಉಗ್ರರ ಹಿಡಿತದಿಂದ ರಕ್ಷಿಸಿಕೊಳ್ಳುವುದು ಸರ್ಜಿಕಲ್ ಸ್ಟ್ರೈಕ್‍ನಷ್ಟೇ ಸಾಹಸಮಯ ಎನ್ನುವುದನ್ನು ಅರಿತ ಇಡೀ ಜಗತ್ತೇ ಅರಿತುಕೊಂಡಿದೆ. ಇದರಿಂದ ಭಾರತದ ಘನತೆ ಇಡೀ ವಿಶ್ವದಲ್ಲೇ ಹೆಚ್ಚಿದಂತಾಗಿದೆ. ಭಾರತೀಯ ಸೈನಿಕರ ಕಾರ್ಯಾಚರಣೆ ಇಡೀ ವಿಶ್ವಕ್ಕೆ ಮತ್ತೊಮ್ಮೆ ಪರಿಚಯವಾದಂತೆ ಆಗಿದ್ದು, ಶತ್ರುರಾಷ್ಟ್ರಗಳಿಗೂ ಒಂದು ಪಾಠವಾಗಿದೆ.

ಕಾಂಗೋದಲ್ಲಿ ಬಂಡುಕೋರರ ಉಪಟಳವಿದ್ದು, ಬಂಡುಕೋರರು ಈಗಾಗಲೇ ಸಾವಿರಾರು ಮಂದಿ ನಾಗರಿಕರನ್ನು ಕೊಂದಿದ್ದಾರೆ. 2009ರಲ್ಲಿಯೇ ಲಾರ್ಡ್ಸ್ ರೆಸಿಟೆನ್ಸ್ ಬಂಡುಕೋರ ಸಂಘಟನೆ ಕಾಂಗೋದಲ್ಲಿ ಸುಮಾರು 321 ನಾಗರಿಕರನ್ನು ಹತ್ಯೆಗೈದಿರುವುದಾಗಿ ಮಾನವ ಹಕ್ಕು ಸಂಘಟನೆ ತಿಳಿಸಿತ್ತು. ಅಲ್ಲದೆ ಈ ಬಂಡುಕೋರರ ಸಂಘಟನೆ ಕನಿಷ್ಠ 250 ಜನರನ್ನು ಅಪಹರಿಸಿರುವುದಾಗಿಯೂ ನ್ಯೂಯಾರ್ಕ್ ಮೂಲದ ಮಾನವ ಹಕ್ಕು ಕಣ್ಗಾವಲು ಸಂಸ್ಥೆ ಅಂಕಿ-ಅಂಶ ಸಹಿತ ವಿವರಿಸಿದೆ. ಅಲ್ಲದೇ ಕಾಂಗೋ ಈಶಾನ್ಯ ಪ್ರದೇಶದ ಮಾಕಾಂಬೋದಲ್ಲಿ 80 ಮಕ್ಕಳನ್ನು ಹತ್ಯೆಗೈದಿರುವುದಾಗಿ ದೂರಿದೆ.

ಕಳೆದ 23ವರ್ಷಗಳ ಇತಿಹಾಸದಲ್ಲಿಯೇ ಲಾರ್ಡ್ಸ್ ರೆಸಿಟೆನ್ಸ್ ಬಂಡುಕೋರ ಸಂಘಟನೆ ನಡೆಸಿದ ಅತ್ಯಂತ ಹೇಯ ಘಟನೆ ಇದಾಗಿದೆ ಎಂದು ಆಫ್ರಿಕಾದ ಹಿರಿಯ ಸಂಶೋಧಕ ಅನ್ನೆಕೆ ವಾನ್ ವುಂಡೆನ್‍ಬೆರ್ಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2009ರ ಡಿಸೆಂಬರ್ 14ರಿಂದ 17ರವರೆಗೆ ಈ ಸಂಘಟನೆ 10 ಹಳ್ಳಿಗಳನ್ನು ಗುರಿಯಾಗಿರಿಸಿಕೊಂಡು ಈ ಹತ್ಯಾಕಾಂಡ ನಡೆಸಿರುವುದಾಗಿ ಮಾನವ ಹಕ್ಕು ಸಂಘಟನೆ ದೂರಿತ್ತು. ಎಲ್‍ಆರ್‍ಎ ಉಗಾಂಡ ಮೂಲದ ಬಂಡುಕೋರ ಚಳವಳಿ ಸಂಘಟನೆಯಾಗಿದೆ, ಅಲ್ಲಿಂದ ಹೊರಬಿದ್ದ ನಂತರ ಈ ಬಂಡುಕೋರರು, ಕಾಂಗೋ ಗಡಿಪ್ರದೇಶ ಹಾಗೂ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ಪ್ರದೇಶದಲ್ಲಿ ಅಟ್ಟಹಾಸಗೈಯುತ್ತಿದೆ.

ಮೆಡಿಕಲ್ ಚಾರಿಟಿ ಮೆಡಿಸಿನ್ಸ್ ಸಾನ್ಸ್ ಫ್ರಾಂಟಿಯರ್ಸ್ ಪ್ರಕಾರ, 2015ರಲ್ಲಿ ಕಾಂಗೋದ ದಕ್ಷಿಣ ಕಿವು ಪ್ರಾಂತ್ಯದ ಪೂರ್ವ ಪ್ರಜಾಸತ್ತಾತ್ಮಕ ಗಣರಾಜ್ಯದ ಪಟ್ಟಣವೊಂದರ ದಾಳಿ ನಡೆಸಿದ ಆತಂಕವಾದಿಗಳು ಬರೊಬ್ಬರಿ 127 ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದರು.

ಉಗ್ರರು ತಮ್ಮ ಕುಕೃತ್ಯವನ್ನು ಮುಗಿಸಿ ಸ್ಥಳದಿಂದ ತೆರಳಿದ ಮೇಲೆ ಅಲ್ಲಗೆ ಆಗಮಿಸಿದ ಎಮ್‍ಎಸ್‍ಎಫ್ ವೈದ್ಯಕೀಯ ಸಿಬ್ಬಂದಿ 127 ಪೀಡಿತರಿಗೆ ಚಿಕಿತ್ಸೆ ನೀಡಿದರು. ಸಂತ್ರಷ್ತರಲ್ಲಿ 14 ವರ್ಷದಬಾಲಕಿಯರಿಂದ ಹಿಡಿದು 70 ವರ್ಷದ ವೃದ್ಧರು ಕೂಡ ಸೇರಿದ್ದರು. ಈ ಉಗ್ರರು ಎಷ್ಟು ನಿರ್ದಯವಾಗಿ ವರ್ತಿಸುತ್ತಾರೆಂದರೆ ಇವರನ್ನು ಸದೆಬಡಿಯುವುದೆಂದರೆ ಅಷ್ಟು ಸುಲಭವಲ್ಲ. ಇಂಥವರ ಜೊತೆ ಹೋರಾಡುತ್ತಿರುವ ಭಾರತೀಯ ಸೇನೆ ಅವರನ್ನು ಯಶಸ್ವಿಯಾಗಿ ನಿಗ್ರಹಿಸುತ್ತಿದೆ.

ಉಗ್ರರ ಉಪಟಳವನ್ನು ನಿಗ್ರಹಿಸಿ ಶಾಂತಿಪಾಲನೆಗಾಗಿ ವಿಶ್ವದ ನಾನಾ ಸೈನಿಕರನ್ನು ನಿಯೋಜಿಸಲಾಗಿದ್ದು, ಉಗ್ರರನ್ನು ನಿಗ್ರಹಿಸಲಾಗುತ್ತಿದೆ. ಬಂಡುಕೋರರು ಮಕ್ಕಳನ್ನು ಕೆರಳಿಸಿ ಅವರಿಗೆ ಶಶಸ್ತ್ರ ತರಬೇತಿ ನೀಡಿ ಉಗ್ರರರನ್ನಾಗಿ ಪರಿವರ್ತಿಸುತ್ತಿದ್ದಾರೆ. ಇದನ್ನು ತಪ್ಪಿಸುವುದರಲ್ಲಿ ಶಾಂತಿಪಾಲನೆಗಾಗಿ ನಿಯೋಜನೆಗೊಂಡ ಭಾರತದ ಸೈನಿಕರು ಕೊನೆಗೂ ಯಶಸ್ವಿಯಾಗಿದ್ದಾರೆ.

  • postcard team

 

Tags

Related Articles

FOR DAILY ALERTS
 
FOR DAILY ALERTS
 
Close