ಪ್ರಚಲಿತ

ಬಿಗ್ ಬ್ರೇಕಿಂಗ್: ಡಿಕೆಶಿ ಬಿಜೆಪಿಗೆ..! ಯಡಿಯೂರಪ್ಪ ಸಿಎಂ ಪಕ್ಕಾ..! ರಾಜ್ಯ ರಾಜಕೀಯದಲ್ಲಿ ಮಿಂಚಿನ ಸಂಚಲನ..!

23K Shares

ಮುಖ್ಯಮಂತ್ರಿ ಆಗಿಯೇ ತೀರುತ್ತೇನೆ ಎಂದು ಹಠಹೊಂದಿಗೆ ಮಿಂಚಿನಂತೆ ರಾಜ್ಯಾದ್ಯಂತ ಸಂಚರಿಸಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇದೀಗ ಬಹುಮತ ಬಾರದೇ ಇದ್ದರೂ ಮುಖ್ಯಮಂತ್ರಿ ಸ್ಥಾನ ಪಕ್ಕಾ ಎಂಬಂತೆ ಮಿಂಚಿನಂತೆ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ಈ ಬಾರಿ ಹೇಗಾದರೂ ಮಾಡಿ ಅಧಿಕಾರದ ಗದ್ದುಗೆಗೆ ಏರಲೇ ಬೇಕು ಎಂಬ ಹಠಕ್ಕೆ ಬಿದ್ದು ಕೆಲಸ ಮಾಡಿದ್ದ ಭಾರತೀಯ ಜನತಾ ಪಕ್ಷ ಇದೀಗ ಮತ್ತೊಂದು ರಣ ಕಹಳೆಯನ್ನು ಹೆಣೆದಿದ್ದಾರೆ. ಈಗಾಗಲೇ ಇಂದು ಸಂಜೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯಕ್ಕೆ ದೌಡಾಯಿಸಲಿದ್ದು, ಕಾರ್ಯಚಟುವಟಿಕೆಗಳು ಗರಿಗೆದರಿದೆ.

ಈ ಮಧ್ಯೆ ಭಾರತೀಯ ಜನತಾ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪನವರು ರಾಜಭವನದ ಕದ ತಟ್ಟಿದ್ದಾರೆ. ರಾಜ್ಯಪಾಲರನ್ನು ಭೇಟಿಯಾದ ಯಡಿಯೂರಪ್ಪನವರು ಈ ಬಾರಿ ನಾವು ಸರ್ಕಾರ ರಚಿಸುತ್ತೇವೆ. ಸಂಖ್ಯಾಬಲದ ಕೊರತೆ ಇದ್ದರೂ ನಾವು ಅದನ್ನೆಲ್ಲಾ ಸರಿಪಡಿಸಿಕೊಂಡು ಸರ್ಕಾರ ರಚಿಸುತ್ತೇವೆ. ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

 

Image result for yeddyurappa

ಈ ಮನವಿಗೆ ರಾಜ್ಯಪಾಲರು ಅಸ್ತು ಎಂದಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಭಾರತೀಯ ಜನತಾ ಪಕ್ಷ ಇಂದು ಸರ್ಕಾರ ರಚನೆಯತ್ತ ದಾಪುಗಾಲಿಟ್ಟಿತ್ತಾದರೂ ಕೊನೇ ಘಳಿಗೆಯಲ್ಲಿ 104 ಸ್ಥಾನಗಳಿಗೆ ಕುಸಿದಿತ್ತು. ಹೀಗಾಗಿ ಕೊಂಚ ಹಿನ್ನೆಡೆಯಾಗಿತ್ತು. ಆದರೆ ಇದೀಗ ರಾಜ್ಯಪಾಲರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅವಕಾಶ ನೀಡಿದ್ದರೆ ಎನ್ನಲಾಗಿದ್ದು ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನ ಪಕ್ಕಾ ಎನ್ನಲಾಗುತ್ತಿದೆ.

ಡಿಕೆಶಿ ಬಿಜೆಪಿಗೆ..?

ಬದಲಾದ ರಾಜಕೀಯ ವಿದ್ಯಮಾನದಲ್ಲಿ ಕಾಂಗ್ರೆಸ್‍ನ ರಾಜಕೀಯ ಚಾಣಾಕ್ಯ ಡಿಕೆ ಶಿವಕುಮಾರ್ ಭಾರತೀಯ ಜನತಾ ಪಕ್ಷದ ತೆಕ್ಕೆಗೆ ಬೀಳುತ್ತಾರಾ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಇದಕ್ಕೆ ಪೂರಕವೆಂಬಂತೆ ಡಿ.ಕೆ ಶಿವಕುಮಾರ್ ಕೂಡಾ ತನ್ನ ಬೆಂಬಲಿಗ ಶಾಸಕರು ಹಾಗೂ ಇಬ್ಬರು ಪಕ್ಷೇತರ ಶಾಸಕರನ್ನು ಒಟ್ಟುಗೂಡಿಸಿ ರಾಜಭವನಕ್ಕೆ ಭೇಟಿ ನೀಡಲು ಮುಂದಾಗಿದ್ದರು. ಆದರೆ ರಾಜಭವನದಲ್ಲಿ ರಾಜ್ಯಪಾಲರ ಭೇಟಿಗೆ ಅವಕಾಶ ಸಿಗದ ಕಾರಣ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಾಸಾಗಿದ್ದಾರೆ.

Related image

ಆದರೆ ರಾಷ್ಟ್ರೀಯ ಮಾಧ್ಯಮ ಮೂಲಗಳ ಪ್ರಕಾರ ಡಿಕೆ ಶಿವಕುಮಾರ್ ತನ್ನ ಕೆಲ ಬೆಂಬಲಿಗ ಶಾಸಕರನ್ನು ಕರೆದುಕೊಂಡು ಭಾರತೀಯ ಜನತಾ ಪಕ್ಷಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ವತಃ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕರೇ ಡಿಕೆ ಶಿವಕುಮಾರ್ ಅವರ ಜೊತೆಗೆ ಸಂಪರ್ಕದಲ್ಲಿದ್ದು ರಣತಂತ್ರ ಹೆಣೆಯುವ ಸಾಧ್ಯೆತೆ ಇದೆ ಎನ್ನಲಾಗುತ್ತಿದೆ.

ಈ ನಡುವೆ ಕಾಂಗ್ರೆಸ್‍ನ ಲಿಂಗಾಯತ ಶಾಸಕರು ಭಾರತೀಯ ಜನತಾ ಪಕ್ಷದ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್‍ನ 7 ಮಂದಿ ಶಾಸಕರು ಭಾರತೀಯ ಜನತಾ ಪಕ್ಷದ ಜೊತೆ ಸಂಪರ್ಕದಲ್ಲಿದ್ದು ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುವುದೇ ಆದರೆ ನಾವು ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಾರೆ ಛಲ ಬಿಡದ ಭಾರತೀಯ ಜನತಾ ಪಕ್ಷ ಇದೀಗ ಸರ್ಕಾರ ರಚಿಸಲು ರಣತಂತ್ರ ಹೆಣೆಯುತ್ತಿದೆ. ಶತಾಯ ಗತಾಯ ಈ ಬಾರಿ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಿಯೇ ಸಿದ್ದ ಎನ್ನುವ ಸೂತ್ರದೊಂದಿಗೆ ಪಕ್ಷ ಜಿದ್ದಿಗೆ ಬಿದ್ದಿದ್ದು, ಈ ಬಾರಿ ಬಿಜೆಪಿ ಸರ್ಕಾರ ಎನ್ನುವ ಧ್ಯೇಯ ವಾಕ್ಯಕ್ಕೆ ಅರ್ಥ ಸಿಗುವ ಹಾಗೆ ಮಾಡಿಯೇ ತೀರುತ್ತಾರೆ ಎನ್ನಲಾಗುತ್ತಿದೆ.

-ಸುನಿಲ್ ಪಣಪಿಲ

23K Shares
Tags

Related Articles

FOR DAILY ALERTS
Close