ಪ್ರಚಲಿತರಾಜ್ಯ

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಬಿಜೆಪಿ ಅಭ್ಯರ್ಥಿ!! ಕಾಂಗ್ರೆಸ್ ಕಟ್ಟಿಹಾಕಲು ಮೋದಿಯಿಂದ ಮತ್ತೊಂದು ಮಾಸ್ಟರ್ ಸ್ಟ್ರೋಕ್..!

ನರೇಂದ್ರ ಮೋದಿ ಭಾರತದ ಪ್ರಧಾನ ಮಂತ್ರಿಯಾಗಿ ಯಾವಾಗ ಅಧಿಕಾರದ ಚುಕ್ಕಾನಿ ಹಿಡಿದರೋ ಅಂದಿನಿಂದ ಭಾರತದ ವೈಭವವೇ ಬದಲಾಗಿ ಹೋಗಿತ್ತು. ದೇಶ ವಿದೇಶದಲ್ಲಿ ಭವ್ಯ ಭಾರತದ ಕೀರ್ತಿ ಪತಾಕೆ ಬಾನೆತ್ತರದಲ್ಲಿ ಹಾರಿ ಹೋಗಿತ್ತು. ಹಾವಾಡಿಗರ ದೇಶ ಎನ್ನುತ್ತಿದ್ದ ವಿದೇಶಿಗರು ಈಗ ಭಾರತದ ಯಾವೊಬ್ಬ ಪ್ರಜೆಯೂ ವಿದೇಶಕ್ಕೆ ತೆರಳಿ ಭಾರತೀಯ ಸಂಸ್ಕøತಿಯಂತೆ ಕೈಮುಗಿದು ಸ್ವಾಗಿತಿಸುವಷ್ಟು ಭಾರತ ಬದಲಾಗಿದೆ.

ಪ್ರಧಾನಿ ಮೋದಿಯವರ ಅಮೋಘ ಸಾಧೆನಯನ್ನು ಕಂಡು ಭಾರತದ ಎಲ್ಲರೂ ಮೋದಿ ಮೋಡಿಗೆ ಒಳಗಾಗಿದ್ದರು. ಮೋದಿ ಮೋದಿ ಎಂಬ ಉಧ್ಘೋಷ ಎಲ್ಲೆಡೆಯೂ ಮುಗಿಲು ಮುಟ್ಟಿತ್ತು. ರೈತರು, ಉಧ್ಯಮಿಗಳು, ರಾಜಕಾರಣಿಗಳು, ವಿಪಕ್ಷ ನಾಯಕರು, ಸಾದು ಸಂತರು, ಸರ್ಕಾರಿ ಉಧ್ಯೋಗಿಗಳು, ಚಲನ ಚಿತ್ರ ನಟರು, ಕ್ರಿಕೆಟ್ ತಾರೆಯರು ಸಹಿತ ಎಲ್ಲರೂ ಮೋದಿಯವರನ್ನು ಒಪ್ಪಿಕೊಂಡಿದ್ದಾರೆ. ಕಳೆಗುಂದಿದ್ದ ಭಾರತವನ್ನು ಮತ್ತೆ ಪರಮ ವೈಭವಕ್ಕೆ ಏರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಯನ್ನು ವಿಶ್ವದ ನಾನಾ ರಾಷ್ಟ್ರಗಳು ಕೊಂಡಾಡಿದ್ದು, ಮೋದಿ ಆಗಮಿಸುತ್ತಾರೆ ಎಂದರೆ ಆ ರಾಷ್ಟ್ರಗಳು ಛಾತಕ ಪಕ್ಷಿಗಳಂತೆ ಕಾಯುತ್ತಾ ಕುಳಿತಿರುತ್ತಾರೆ.

ಮೋದಿಗೆ ಫಿದಾ ಆಗಿದ್ದ ಧರ್ಮಾಧಿಕಾರಿಗಳು…

ಧರ್ಮಸ್ಥಳ… ಸಾಕ್ಷಾತ್ ಶ್ರೀ ಮಂಜುನಾಥೇಶ್ವರ ನೆಲೆಯಾಗಿರುವ ಸನ್ನಿಧಾನ. ಮಾತು ಬಿಡ ಮಂಜುನಾಥ ಹಾಗೂ ವಚನ ಪ್ರಿಯ ಅಣ್ಣಪ್ಪ ಸ್ವಾಮಿ ನೆಲೆಯಾಗಿರುವ ಧರ್ಮಸ್ಥಳ ಇಂದು ವಿಶ್ವವಿಖ್ಯಾತ. ದೇಶದಲ್ಲಿರುವ ಅತ್ಯಂತ ಸ್ವಚ್ಚ ಧಾರ್ಮಿಕ ಕ್ಷೇತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಶ್ರೀ ಕ್ಷೇತ್ರ ಧರ್ಮಸ್ಥಳ. ಶ್ರೀ ಕ್ಷೇತ್ರ ಕೇವಲ ಭಕ್ತಿಯ ಪರಾಕಾಷ್ಟೆಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಇಲ್ಲಿ ನಡೆಯುವ ಪ್ರತಿಯೊಂದು ಆಚರಣೆಯೂ ಭಾರತ ದರ್ಶನವನ್ನು ಮಾಡಿಸುತ್ತದೆ. ಆರೋಗ್ಯ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಆರ್ಥಿಕ ಕ್ಷೇತ್ರ, ಧಾರ್ಮಿಕ ಕ್ಷೇತ್ರ ಸಹಿತ ಎಲ್ಲಾ ಕ್ಷೇತ್ರಗಳಲ್ಲಿಯೂ ಧರ್ಮಸ್ಥಳ ಹೆಸರುವಾಸಿಯಗಿದೆ. ಸ್ವಂತ ಉಧ್ಯೋಗದ ಕಲ್ಪನೆ ಎಲ್ಲರಿಗಿಂತ ಮೊದಲು ಧರ್ಮಸ್ಥಳಕ್ಕೆ ಮೂಡಿ ರುಡ್ ಸೆಟ್ ಎಂಬ ಸ್ವ ಉಧ್ಯೋಗ ತರಬೇತಿ ಕೇಂದ್ರವನ್ನು ರಾಜ್ಯದ ನನಾ ಕಡೆಗಳಲ್ಲಿ ನಿರ್ಮಿಸಿದೆ. ಬಡವರನ್ನು ಆರ್ಥಿಕವಾಗಿ ಮೇಲೆತ್ತಲು ಸ್ವಸಹಾಯ ಯೋಜನೆ, ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಭಾರೀ ಸಹಕಾರವನ್ನೇ ಧರ್ಮಸ್ಥಳ ಮಾಡಿದೆ.

Image result for veerendra heggade with modi

ಈ ಎಲ್ಲಾ ಸಾಧನೆಗೆ ಕಾರಣ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು. ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಭವ್ಯ ಭಾರತದ ಕಲ್ಪನೆಯನ್ನು ಯಾವ ರೀತಿ ಕಟ್ಟಿದ್ದರೋ ಅದೇ ರೀತಿಯ ಯೋಜನೆಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿಯವರು ತಮ್ಮ ಸೀಮಿತ ಆಡಳಿತ ಚೌಕಟ್ಟಿನಲ್ಲಿ ಮಾಡಿದ್ದಾರೆ. ಯೋಗ, ಸ್ವಚ್ಚತೆ, ಸ್ವ ಉಧ್ಯೋಗ ಸಹಿತ ಅನೇಕ ಕಾರ್ಯಕ್ರಮಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ತಮ್ಮ ಯೋಜನೆಯಲ್ಲಿ ಮಾಡಿಕೊಂಡಿದ್ದರು. ಈ ಯೋಜನೆ ಲಕ್ಷಾಂತರ ಜನರು ಕಾರ್ಯರೂಪಕ್ಕೆ ತರುವಂತೆ ಮಾಡಿದ್ದರು ಶ್ರೀ ವೀರೇಂದ್ರ ಹೆಗ್ಗಡೆಯವರು.

ಹಗ್ಗಡೆಗೆ ನಮೋ ಎಂದಿದ್ದ ಪ್ರಧಾನಿ…

ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಕಂಡರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಅದೇನೋ ಪ್ರೀತಿ. ಮೋದಿಯವರು ತಮ್ಮ ಸರ್ಕಾರದಲ್ಲಿ ಯಾವ ರೀತಿ ಯೋಜನೆಗಳನ್ನು ಜಾರಿಗೆ ತಂದಿದ್ದರೋ ಅದೇ ರೀತಿ ಹೆಗ್ಗಡೆಯವರು ತಮ್ಮ ಅಧಿಕಾರದ ಚೌಕಟ್ಟಿನಲ್ಲಿ ಇಂತಹ ಯೋಜನೆಯನ್ನು ಜಾರಿಗೆ ತಂದಿದ್ದರು. ಒಂದರ್ಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅಭಿವೃದ್ಧಿಯ ದೂರದೃಷ್ಟಿಯಲ್ಲಿ ಒಂದೇ ನಾಣ್ಯದ ಎರಡು ಮುಖಗಳು ಎಂದೇ ಹೇಳಬಹುದು. ಈ ಕಾರಣಕ್ಕಾಗಿಯೇ ಕಳೆದ ಬಾರಿ ಹೆಗ್ಗಡೆಯವರು ಕರೆದರೆಂದ ಮಾತ್ರಕ್ಕೆ ದೆಹಲಿಯಿಂದ ಓಡೋಡಿ ಧರ್ಮಸ್ಥಳಕ್ಕೆ ಆಗಮಿಸಿದ್ದರು ಪ್ರಧಾನಿ ನರೇಂದ್ರ ಮೋದಿ.

Image result for veerendra heggade with modi

ರಾಜ್ಯಸಭೆಗೆ ಆಯ್ಕೆಯಾಗುತ್ತಾರಾ ರಾಜರ್ಷಿ..?

ಭಾರತೀಯ ಜನತಾ ಪಕ್ಷದ ಲೆಕ್ಕಾಚಾರದ ಪ್ರಕಾರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಮುಂಬರುವ ರಾಜ್ಯಸಭಾ ಚುನಾವಣೆಗೆ ಆಯ್ಕೆಮಾಡುವ ಪ್ರಸ್ತಾಪವೂ ಬಂದಿದೆಯಂತೆ. ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆ ಶೀಘ್ರದಲ್ಲಿ ಬರಲಿದ್ದು, ಇದಕ್ಕಾಗಿ ಭಾರತೀಯ ಜನತಾ ಪಕ್ಷ ಎಲ್ಲಾ ಸಿದ್ದತೆಗಳನ್ನು ನಡೆಸುತ್ತಿದೆ. ಈಗಾಗಲೇ ಭಾರತೀಯ ಜನತಾ ಪಕ್ಷದ ಕರ್ನಾಟಕದ ಉಸ್ತುವಾರಿ ಮುರುಳಿಧರನ್ ಹಾಗೂ ಬಿಜೆಪಿ ಮುಖಂಡ ಕರ್ನಾಟಕದ ವಿಜಯ ಸಂಕೇಶ್ವರ ಇವರನ್ನು ರಾಜ್ಯಸಭೆಗೆ ಭಾರತೀಯ ಜನತಾ ಪಕ್ಷದಿಂದ ಆಯ್ಕೆ ಮಾಡುವ ಯೋಚನೆಯೂ ಹಾಗೂ ಪ್ರಸ್ತಾಪವೂ ಬಂದಿದೆ. ಆದರೆ ಮತಗಳ ಲೆಕ್ಕಾಚಾರದ ಮೇಲೆ ಎಲ್ಲಾ ನಿರ್ಧಾರವಾಗುವುದರಿಂದ ಭಾರತೀಯ ಜನತಾ ಪಕ್ಷ ವಿಶೇಷ ತಂತ್ರಗಾರಿಕೆಯನ್ನು ಹೆಣೆಯುವ ಸಾಧ್ಯತೆಯೂ ದಟ್ಟವಾಗಿದೆ.

ಹೆಗ್ಗಡೆಯೇ ಯಾಕೆ..?

ಒಂದು ವೇಳೆ ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಮತಗಳ ಕೊರತೆ ಎದುರಾದರೆ ಆ ಸಮಯದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಅವರನ್ನು ಗೆಲ್ಲಿಸಿ ರಾಜ್ಯಸಭೆಗೆ ಆಯ್ಕೆ ಮಾಡುವುದು ಭಾರತೀಯ ಜನತಾ ಪಕ್ಷದ ಲೆಕ್ಕಾಚಾರ. ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಕಣಕ್ಕಿಳಿಸಿದರೆ ಭಾರತೀಯ ಜನತಾ ಪಕ್ಷದ ಓಟ್ ಖಚಿತವಾಗಿರುತ್ತದೆ. ಮಾತ್ರವಲ್ಲದೆ ಇನ್ನುಳಿದ (ವಿರೋಧ ಪಕ್ಷಗಳ) ಜನಪ್ರತಿನಿದಿಗಳೂ ಅವರಿಗೆ ಮತ ಹಾಕಬಹುದು ಎಂಬ ಲೆಕ್ಕಾಚಾರವೂ ಕಮಲ ಪಾಳಯದಲ್ಲಿದೆ. ಈಗಾಗಲೇ ಹೆಗ್ಗಡೆಯವರ ಹೆಸರೂ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕರ ಕೈನಲ್ಲಿದ್ದು, ಹೆಗ್ಗಡೆ ಓಕೆ ಎಂದರೆ ಸ್ಪರ್ಧಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಹೆಗ್ಗಡೆಯವರು ಆಯ್ಕೆಯಾದರೆ..?

ಒಂದೊಮ್ಮೆ ಭಾರತೀಯ ಜನತಾ ಪಕ್ಷದ ನಾಯಕರು ಅಂದುಕೊಂಡಂತೆಯೇ ಆದರೆ ರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ಹೊಸ ಕ್ರಾಂತಿ ಸೃಷ್ಟಿಯಾಗಲಿದೆ. ಉತ್ತರ ಪ್ರದೇಶದಲ್ಲಿ ರಾಜ್ಯವನ್ನು ಆಳುತ್ತಿರುವ ಓರ್ವ ಸಂತನಿಂದ ಭಾರತ ಬದಲಾಗುತ್ತಿದೆ. ಇನ್ನ ಓರ್ವ ಧರ್ಮಾಧಿಕಾರಿಯವರನ್ನು ರಾಜ್ಯಸಭೆಗೆ ಆರಿಸಿದರೆ ಮತ್ತೊಂದು ರಾಜಕೀಯ ಕ್ರಾಂತಿ ನಡೆಯುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ. ಮಾತ್ರವಲ್ಲದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಭಾರತೀಯ ಜನತಾ ಪಕ್ಷದ ಎಲ್ಲಾ ಮುಖಂಡರಿಗೂ ಡಾ.ಡಿ.ವೀರೇಂದ್ರ ಹೆಗ್ಗಡೆಯವರೆಂದರೆ ಬಹು ಗೌರವ. ಹೀಗಾಗಿ ಅವರನ್ನು ಯಾರೊಬ್ಬರೂ ಕಡೆಗಣಿಸುವ ಗೋಜಿಗೆ ಹೋಗೋದಿಲ್ಲ ಅನ್ನೋದೂ ಸ್ಪಷ್ಟ.

ಮತ್ತೊಂದು ವಿಚಾರವನ್ನು ಗಮನದಲ್ಲಿ ಇಡಲೇಬೇಕು. ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಭಾರತ, ಯೋಗ ದಿನಾಚರಣೆ, ಸ್ವ ಉಧ್ಯೋಗ ಕಾರ್ಯಕ್ರಮ, ಆರೋಗ್ಯ ಹಾಗೂ ಶಿಕ್ಷಣ ಕೇತ್ರ, ಸಾಲ ನೀಡುವ ವಿಚಾರ ಹೀಗೆ ಎಲ್ಲಾ ಯೋಜನೆಗಳನ್ನೂ ಹೆಗ್ಗಡೆಯವರು ಈ ಮೊದಲೇ ಮಾಡುತ್ತಾ ಬಂದಿದ್ದಾರೆ. ಭಾರತದ ಸ್ಪಷ್ಟ ಕಲ್ಪನೆ ಪ್ರಧಾನಿ ನರೇಂದ್ರ ಮೋದಿಯಂತೆಯೇ ಹೆಗ್ಗಡೆಯವರಿಗೂ ಇದೆ. ಹೀಗಾಗಿ ಒಂದೊಮ್ಮೆ ಅವರು ರಾಜ್ಯಸಭೆಗೆ ಆಯ್ಕೆಯಾದರೆ ನೇರವಾಗಿ ಮಂತ್ರಿ ಸ್ಥಾನವನ್ನೂ ಪಡೆಯಬಹುದು ಎಂಬ ಸೂಚನೆಯೂ ಇದೆ. ಎಲ್ಲಾ ಯೋಜನೆಗಳನ್ನು ಸಮರ್ಥವಾಗಿ ನಿರ್ವಹಿಸುವ ಕಾರ್ಯಕ್ಷಮತೆ ಇರುವುದರಿಂದ ಮಂತ್ರಿಸ್ಥಾನವನ್ನು ಅಲಂಕರಿಸುವುದು ಹೆಗ್ಗಡೆಯವರಿಗೆ ಕಷ್ಟದ ಕೆಲಸವೇನಲ್ಲ.

ರಾಷ್ಟ್ರಪತಿ ಆಯ್ಕೆಗೂ ಕೇಳಿ ಬಂದಿತ್ತು ಹೆಗ್ಗಡೆ ಹೆಸರು..!

ಈ ಹಿಂದೆ ರಾಷ್ಟ್ರಪತಿ ಚುನಾವಣೆ ಎದುರಾದಾಗಲೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಹೆಸರು ಭಾರತೀಯ ಜನತಾ ಪಕ್ಷದ ಪಾಳಯದಲ್ಲಿ ಕೇಳಿ ಬಂದಿತ್ತು. ಸಾಮಾಜಿಕ ಕ್ರಾಂತಿಯನ್ನು ಸೃಷ್ಟಿಸಿದ್ದ ಹೆಗ್ಗಡೆಯವರನ್ನು ರಾಷ್ಟ್ರಪತಿ ಮಾಡುವ ಉದ್ಧೇಶ ಭಾರತೀಯ ಜನತಾ ಪಕ್ಷಕ್ಕೆ ಇತ್ತು. ಆದರೆ ವಿರೋಧ ಪಕ್ಷವನ್ನು ಕಟ್ಟಿ ಹಾಕಲು ದಲಿತ ಅಸ್ತ್ರವನ್ನು ಪ್ರಯೋಗಿಸಿದ ಕಮಲ ಪಡೆ ದಲಿತ ವ್ಯಕ್ತಿ ರಾಮಾನಾಥ್ ಕೋವಿಂದ್‍ರನ್ನು ಆಯ್ಕೆ ಮಾಡಿತ್ತು. ಈ ಮೂಲಕ ದಲಿತ ವ್ಯಕ್ತಿಗೆ ಪ್ರಶಾಸ್ತ್ಯ ಎಂಬ ಸ್ಲೋಗನ್ ಮೂಲಕ ದಲಿತ ಕಾರ್ಡ್‍ನ್ನು ಪ್ರಯೋಗಿಸುತ್ತಿದ್ದ ವಿರೋಧ ಪಕ್ಷಕ್ಕೆ ಭಾರೀ ಹೊಡೆತವನ್ನು ನೀಡಿತ್ತು ಭಾರತೀಯ ಜನತಾ ಪಕ್ಷ. ನಂತರ ಅದು ವರ್ಕೌಟ್ ಆಗಿ ದಲಿತ ಅಭ್ಯರ್ಥಿ ರಾಮನಾಥ್ ಕೋವಿಂದ್ ರಾಷ್ಟ್ರಪತಿಯೂ ಆಗಿದ್ದರು. ಈ ಮೂಲಕ ಕಮಲ ಪಾಳಯಕ್ಕೆ ಭಾರೀ ಯಶಸ್ಸನ್ನು ಪಡೆದಿತ್ತು.

ಒಟ್ಟಾರೆ ಭಾರತೀಯ ಜನತಾ ಪಕ್ಷ ಈಗ ಹೊಸ ಕಾರ್ಯತಂತ್ರವನ್ನೇ ಹೆಣೆದಿದ್ದು, ವಿರೋಧ ಪಕ್ಷಗಳ ಕೈಕಾಲು ಕಟ್ಟಿಹಾಕಲು ಸರ್ವ ಪ್ರಯತ್ನವನ್ನೂ ಮಾಡುತ್ತಿದೆ. ಭಾರತೀಯ ಜನತಾ ಪಕ್ಷದ ನಾಯಕರ ಈ ಆಫರ್‍ಗೆ ಹೆಗ್ಗಡೆ ಓಕೆ ಎಂದರೆ ರಾಷ್ಟ್ರ ರಾಜಕಾರಣದಲ್ಲಿ ಹೊಸ ಶಕೆ ಆರಂಭವಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಲಾಗುತ್ತಿದೆ. ಸಾಮಾಜಿಕ, ಆರೋಗ್ಯ, ಶಿಕ್ಷಣ, ಹಾಗೂ ಧಾರ್ಮಿಕ ಕ್ರಾಂತಿಯನ್ನು ಹುಟ್ಟು ಹಾಕಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ರಾಜ್ಯಸಭೆಗೆ ಆಯ್ಕೆಯಾದರೆ ರಾಷ್ಟ್ರದಲ್ಲಿ ಮಾತ್ರವಲ್ಲ ಕರ್ನಾಟಕದ ರಾಜಕೀಯ ಭವಿಷ್ಯವೂ ಬದಲಾಗಬಹುದು ಎಂಬ ಲೆಕ್ಕಾಚಾರ ಎದುರಾಗಿದೆ. ಕಮಲ ಪಾಳಯದ ಈ ಕಾರ್ಯತಂತ್ರ ಯಶಸ್ವಿಯಾಗಿದ್ದೇ ಆದರೆ ವಿರೋಧ ಪಕ್ಷಗಳು ಕಕ್ಕಾಬಿಕ್ಕಿಯಾಗುವುದರಲ್ಲಿ ಯಾವುದೇ ಸಂದೇಃ
ಹವೂ ಇಲ್ಲ ಎಂಬುವುದು ಅಷ್ಟೇ ಸತ್ಯ. ರಾಜಕೀಯದಲ್ಲಿ ಏನೂ ಬೇಕಾದರೂ ಆಗಬಹುದು ಎಂಬುವುದನ್ನು ಅಲ್ಲಗಳೆಯುವಂತಿಲ್ಲ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close