ರಾಮಜನ್ಮಭೂಮಿ ಅಯೋಧ್ಯೆಗೂ ದಕ್ಷಿಣ ಕೊರಿಯಾಗೂ ಎಲ್ಲಿಂದೆಲ್ಲಿಯ ಸಂಬಂಧ? ದಕ್ಷಿಣ ಕೊರಿಯಾ ಜನರಿಗೆ ಅಯೋಧ್ಯೆ ಎಂದರೆ ಪವಿತ್ರ ಸ್ಥಳ. ಇದೇ ಕಾರಣಕ್ಕೆ ಲಕ್ಷಾಂತರ ದಕ್ಷಿಣ ಕೊರಿಯನ್ನರು ಪ್ರತೀ ವರ್ಷವೂ ಅಯೋಧ್ಯೆಗೆ ಭೇಟಿ ನೀಡುತ್ತಾರೆ. ಈ ಸಂಬಂಧಕ್ಕೆ ಸಾವಿರಾರು ವರ್ಷಗಳ ಹಿನ್ನೆಲೆ ಇದೆ ಎಂಬುದು 60 ಲಕ್ಷ ಕೊರಿಯನ್ನರ ನಂಬಿಕೆ. ಅಚ್ಚರಿ ಆದರೂ ಇದು ಸತ್ಯ. ಇಂಥದ್ದೊಂದು ನಂಬಿಕೆ ಇಟ್ಟುಕೊಂಡೇ ಪ್ರತಿವರ್ಷ ಅಯೋಧ್ಯೆಗೆ ಸಾವಿರಾರು ಕೊರಿಯನ್ನರು ಬಂದು ಹೋಗುತ್ತಾರೆ.. ಕಾರಣ ಕೊರಿಯಾ ಇತಿಹಾಸ ಕಂಡ ಅತ್ಯಂತ ಪ್ರಖ್ಯಾತ ರಾಣಿ ಹಿಯೋ-ಹ್ವಾಂಗ್-ಒಕೆ.
ಹೌದು… ಕೊರಿಯಾದ ರಾಣಿಗೂ ಅಯೋಧ್ಯೆಗೂ ಸಹಸ್ರ ವರ್ಷಗಳ ಇತಿಹಾಸವಿದೆ. ಅಯೋಧ್ಯೆಯ ರಾಜಕುಮಾರಿ ಸುರಿರತ್ನಾ (16ನೇ ವಯಸ್ಸಿನಲ್ಲಿ) ಕ್ರಿಸ್ತಶಕ 48ರಲ್ಲಿ ಕೊರಿಯಾಕ್ಕೆ ಪ್ರಯಾಣ ಬೆಳೆಸಿ, ಗುಮ್ಗಾವನ್ ಗಯಾದ ಸ್ಥಾಪಕ ಹಾಗೂ ರಾಜ ಗಿಮ್ ಸುರೋ ಅವರನ್ನು ಮದುವೆಯಾಗಿ ಮೊದಲ ರಾಣಿಯಾಗುತ್ತಾರೆ. ನಂತರದಲ್ಲಿ ಇವರು ತಮ್ಮ ಹೆಸರನ್ನು ಹುರ್ ಹ್ವಾಂಗ್-ಒಕೆ ಎಂದು ಬದಲಾಯಿಸಿಕೊಳ್ಳುತ್ತಾರೆ ಎಂಬುದು ಕೊರಿಯಾದ ಇತಿಹಾಸಗಳ ಪುಟಗಳಲ್ಲಿರುವ ದಾಖಲಾಗಿದೆ. ಹೀಗಾಗಿಯೇ ಸುರಿರತ್ನಾ ತವರೂರಾದ ಅಯೋಧ್ಯೆಯನ್ನು ಇಂದಿಗೂ ಕೊರಿಯನ್ನರು ತಮ್ಮ ತವರೂರೆಂದೇ ನಂಬಿದ್ದಾರೆ.
ಈ ಮುಂಚೆ ಸಾಮಾನ್ಯ ಪ್ರದೇಶವಾಗಿದ್ದ ಕೊರಿಯಾ ಅಯೋಧ್ಯೆಯ ರಾಣಿ ಬಂದ ಬಳಿಕ ಅಲ್ಲಿನ ಸ್ಥಿತಿಗತಿಯೇ ಬದಲಾವಣೆಗೊಂಡಿತು. ಭಗವಾನ್ ಶ್ರೀರಾಮ ಹುಟ್ಟಿದ ಸ್ಥಳದಿಂದ ಬಂದವಳೆಂಬ ಕಾರಣಕ್ಕೆ ಅಲ್ಲಿನ ಜನತೆ ಈಕೆಯನ್ನು ತಾಯಿಯಂತೆ ನೋಡಿಕೊಂಡರು. ಈಕೆಯಿಂದಾಗಿ ಚದುರಿಹೋಗಿದ್ದ ಕೊರಿಯನ್ ಸಾಮ್ರಾಜ್ಯವೇ ಏಕೀಕರಣಗೊಂಡಿತು ಎಂದೂ ಹೇಳಲಾಗುತ್ತದೆ. ಸುರೋ ಕೊರಿಯಾದ ರಾಣಿಯಾದರೆ ಗಂಡ ರಾಜನಾಗಿ ರಾಜ್ಯಭಾರ ಮಾಡಲಾರಂಭಿಸಿದ. ಇವರ ರಾಜಧಾನಿ ಕೊರಿಯಾದ ಕಿಮ್ಹೆ ಎಂಬ ನಗರವಾಗಿತ್ತು. ರಾಣಿ ಸುರೋ ಶ್ರೀರಾಮನ ಅಯೋಧ್ಯ ನಗರದಲ್ಲಿ ಹುಟ್ಟಿದಳೆಂಬ ಕಾರಣಕ್ಕೆ ಭಾರೀ ರಾಜಮರ್ಯಾದೆಯನ್ನು ನೀಡಿ ಗೌರವಿಸುತ್ತಿದ್ದರು.
ಹಿಯೋ-ಹ್ವಾಂಗ್ ಕೊರಿಯಾದಿಂದ ಬರುವಾಗ ದಿವ್ಯ ಶಕ್ತಿಯ ಕಲ್ಲೊಂದನ್ನು ತಂದಿದ್ದಳು. ಈ ಕಲ್ಲು ಆಕೆಗೆ ಸಮುದ್ರವನ್ನು ಶಾಂತಗೊಳಿಸಲು ಮತ್ತು ದಾರಿ ತೋರಲು ಸಹಾಯ ಮಾಡಿತ್ತಂತೆ. ಅಲ್ಲದೇ ಈ ಕಲ್ಲಿನ ಸಹಾಯದಿಂದಲೇ ಆಕೆ ಕೊರಿಯಾಗೆ ಮರಳಿದ್ದಳು ಎನ್ನುತ್ತದೆ ಇತಿಹಾಸ. ಇದೇ ಕಾರಣಕ್ಕೆ ಕೊರಿಯನ್ನರು ಅಯೋಧ್ಯೆಯನ್ನು ತಮ್ಮ ತಾಯಿಯ ಮನೆ ಎಂದು ಭಾವಿಸುತ್ತಾರೆ. ಅಲ್ಲದೇ ಪ್ರತೀ ವರ್ಷ ಅಯೋಧ್ಯೆಗೆ ಭೇಟಿ ನೀಡಿ ತಮ್ಮ ರಾಣಿ ಹಿಯೋ-ಹ್ವಾಂಗ್ಳನ್ನು ನೆನೆಯುತ್ತಾರೆ.
ಅದಲ್ಲದೆ ಅಯೋಧ್ಯದಲ್ಲಿನ ಅವಳಿ ಮೀನಿನ ಕಲ್ಲಿಗೂ ಕೊರಿಯಾದಲ್ಲಿನ ಈ ಅವಳಿಮೀನಿನ ಕಲ್ಲಿಗೂ ಒಂದು ಸಾಮ್ಯತೆ ಇರುವುದನ್ನು ಪುರಾತತ್ವ ಇಲಾಖೆ ಪತ್ತೆಹಚ್ಚಿದೆ. ಇಂತಹ ಕಲ್ಲು ಅಯೋಧ್ಯೆ ಹೊರತುಪಡಿಸಿ ಕೊರಿಯಾದ ಬೇರೆಲ್ಲೂ ಸಿಗದಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಈ ಕಲ್ಲನ್ನು ಸಾಕ್ಷಿಯಾಗಿರಿಸಿದರೆ ಕೊರಿಯಾ ಮತ್ತು ಭಾರತಕ್ಕಿರುವ ಸಹಸ್ರ ಸಹಸ್ರ ಶತಮಾನಗಳ ಹಿಂದಿನ ಸಂಬಂಧವನ್ನು ವರ್ಣಿಸಬಹುದು. ಇಂದಿಗೂ ಅನೇಕ ಮಂದಿ ಕೊರಿಯನ್ನರು ಅಯೋಧ್ಯೆಗೆ ಆಗಮಿಸಿ ಭಗವಾನ್ ಶ್ರೀರಾಮನಿಗೆ ಕೈ ಮುಗಿಯುತ್ತಾರೆ. ಅಲ್ಲದೆ ಇಲ್ಲಿನ ಕಲ್ಲುಗಳಿಗೆ ಹೂ ಮುತ್ತೊಂದನ್ನು ನೀಡಿ ಗತಕಾಲದ ವೈಭವವನ್ನು ಸ್ಮರಿಸುತ್ತಾರೆ.
ಕೊರಿಯಾದಲ್ಲಿರುವ ಮೀನಿನ ಚಿನ್ಹೆಗೂ ಅಯೋಧ್ಯೆಗೂ ಇರುವ ಸಂಬಂಧವೇನು ಎಂಬ ಬಗ್ಗೆ ಪ್ರಶ್ನೆಯೂ ಈ ಸಂದರ್ಭದಲ್ಲಿ ಹುಟ್ಟುತ್ತದೆ. ಇಂದಿಗೂ ಉತ್ತರಪ್ರದೇಶ ರಾಜ್ಯದ ಪ್ರಮುಖ ಚಿನ್ಹೆ ಅವಳಿ ಮೀನುಗಳು. ಅಲ್ಲದೆ ಈ ಮೀನುಗಳು ಅಯೋಧ್ಯಾ ರಾಜದ ಸಂಕೇತವಾಗಿದೆ. ಅದೇ ರೀತಿ ಕೊರಿಯಾದ ಶ್ರೀಮಂತ ಕುಟುಂಬಗಳು ಇಂದಿಗೂ ಅವಳಿ ಮೀನಿನ ಚಿನ್ಹೆಯನ್ನು ಇಟ್ಟುಕೊಳ್ಳುತ್ತಾರೆ. ಇದೇ ಕಾರಣಕ್ಕೆ ಕೊರಿಯಾದ ಹಲವಾರು ಮಂದಿ ಭಗವಾನ್ ಶ್ರೀರಾಮನನ್ನು ಆರಾಧ್ಯದೇವರಾಗಿ ಪೂಜಿಸುತ್ತಾರೆ.
ಅಯೋಧ್ಯೆಗೆ ಮರಳಿದ ಹಿಯೋ-ಹ್ವಾಂಗ್ ನಂತರ ಹರಿದು ಹಂಚಿ ಹೋಗಿದ್ದ ಕೊರಿಯಾ ಭೂ-ಪ್ರದೇಶಗಳನ್ನು ಒಟ್ಟುಗೂಡಿಸಿ ಅಖಂಡ ಕೊರಿಯಾದ ಏಕಮಾತ್ರ ಮಹಾರಾಣಿಯಾಗಿ ಮೆರೆದಳು. ಆಕೆಯ ಶ್ರೆಯೋಭಿವೃದ್ಧಿಗೆ ಪಟ್ಟಕ್ಕೂ ಏರುವ ಮೊದಲು ಆಕೆ ಅಯೋಧ್ಯೆಗೆ ಭೇಟಿ ನೀಡಿದ್ದೇ ಕಾರಣ ಎಂಬ ನಂಬಿಕೆ ಕೊರಿಯನ್ನರಲ್ಲಿದೆ. ಸುರಿರತ್ನಾ ರಾಣಿಯ ಬೃಹತ್ ಸ್ಮಾರಕವನ್ನು ಅಯೋಧ್ಯೆಯಲ್ಲಿ ನಿರ್ಮಿಸಬೇಕೆಂಬುದು ದಕ್ಷಿಣ ಕೊರಿಯನ್ನರ ಬಹುದಿನಗಳ ಬೇಡಿಕೆ. ಪ್ರಧಾನಿ ನರೇಂದ್ರ ಮೋದಿ 2015ರಲ್ಲಿ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿದ್ದಾಗ ಅಯೋಧ್ಯೆ ಹಾಗೂ ಕೊರಿಯಾ ನಡುವಣ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಭರವಸೆ ನೀಡಿದ್ದರು.
source: news 13
- ಪವಿತ್ರ