ಪ್ರಚಲಿತ

ಗುಪ್ತಚರ ಇಲಾಖೆಯ ವರದಿ ಕಂಡು ಬೆಚ್ಚಿಬಿದ್ದ ದೇವೇಗೌಡರ ಕುಟುಂಬ! ಮಂಡ್ಯದಲ್ಲಿ ಮ್ಯಾಜಿಕ್ ಮಾಡ್ತಾರಾ ಸುಮಲತಾ ಅಂಬರೀಶ್?

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ನಡುವೆ ಪೈಪೋಟಿ ಜೋರಾಗಿದ್ದು ಕರ್ನಾಟಕದಲ್ಲೂ ತಯಾರಿ ಜೋರಾಗಿ ನಡೆಯುತ್ತಿದೆ. ಅದರಲ್ಲೂ ಈ ಬಾರಿ ಇಡೀ ರಾಜ್ಯದ ಗಮನ ಸೆಳೆದಿರುವುದು ಸಕ್ಕರೆ ನಾಡು ಮಂಡ್ಯ. ಹೌದು ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರ ಭಾರೀ ಕುತೂಹಲ ಕೆರಳಿಸಿದೆ, ಯಾಕೆಂದರೆ ಸುಮಲತಾ ಅಂಬರೀಶ್ ಅವರು ಈಗಾಗಲೇ ರಾಜಕೀಯಕ್ಕೆ ಕಾಲಿಟ್ಟಿದ್ದು ಈ ಬಾರಿ ಮಂಡ್ಯದಲ್ಲಿ ಸುಮಲತಾ ಅವರ ಪರ ಜನರ ಒಲವು ಹೆಚ್ಚಾಗಿದೆ. ಇತ್ತ ದೇವೇಗೌಡರ ಕುಟುಂಬ ಕೂಡ ಮಂಡ್ಯದಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದು ಎಲ್ಲಾ ಕಡೆಯಿಂದಲೂ ಮಂಡ್ಯ ರಂಗೇರುವಂತೆ ಮಾಡಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿಯಲಿದ್ದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನಿಖಿಲ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಅಂಬರೀಶ್ ಅವರು ಬದುಕಿರುವಾಗ ರಾಜ್ಯ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಕೈಕಟ್ಟಿ ನಿಲ್ಲುತ್ತಿದ್ದರು. ಆದರೆ ಈಗ ಸುಮಲತಾ ಅಂಬರೀಶ್ ಅವರನ್ನು ಹೀಯಾಳಿಸಿ ರಾಜಕೀಯ ಮಾಡುತ್ತಿರುವ ಜೆಡಿಎಸ್‌‌ಗೆ ಈ ಬಾರಿ ಮಂಡ್ಯದ ಜನತೆ ಪಾಠ ಕಲಿಸಲು ಸಜ್ಜಾಗಿ ನಿಂತಿದ್ದಾರೆ. ಈಗಾಗಲೇ ರೇವಣ್ಣ ಅವರು ಸುಮಲತಾ ಅಂಬರೀಶ್ ಅವರ ಬಗ್ಗೆ ಕೀಳಾಗಿ ಮಾತನಾಡಿರುವ ಬಗ್ಗೆ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದ್ದು ಇದೀಗ ಗುಪ್ತಚರ ಇಲಾಖೆಯ ವರದಿ ಕಂಡು ಸ್ವತಃ ಗೌಡರ ಕುಟುಂಬ ಬೆಚ್ಚಿಬಿದ್ದಿದೆ.!

ಮಂಡ್ಯ ರಾಜಕಾರಣದ ಬಗ್ಗೆ ಗುಪ್ತಚರ ಇಲಾಖೆ ವರದಿ ನೀಡಿದ್ದು ಈ ಬಾರಿ ಮಂಡ್ಯದ ಜನರ ಒಲವು ಸುಮಲತಾ ಅಂಬರೀಶ್ ಅವರ ಪರವಾಗಿ ಇದೆ ಎಂದು ಹೇಳಿಕೊಂಡಿದ್ದಾರೆ. ಅಂಬರೀಶ್ ಅವರ ವರ್ಚಸ್ಸು ಅವರು ಬದುಕಿದ್ದಾಗ ಮಾತ್ರವಲ್ಲದೆ ಸತ್ತ ನಂತರವೂ ಹಾಗೇ ಇದೆ, ಇದು ಸುಮಲತಾ ಅವರಿಗೆ ವರದಾನವಾಗಲಿದೆ. ಅದೇ ರೀತಿ ವರದಿಯನ್ನು ಗುಪ್ತಚರ ಇಲಾಖೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನೀಡಿದ್ದು ಇದನ್ನು ಕಂಡು ಕುಮಾರಸ್ವಾಮಿ ದಂಗಾಗಿದ್ದಾರೆ. ಯಾಕೆಂದರೆ ಮಗನನ್ನು ಮಂಡ್ಯದಿಂದ ಹೇಗಾದರೂ ಗೆಲ್ಲಿಸಬೇಕೆಂಬ ಹಠಕ್ಕೆ ಬಿದ್ದಿರುವ ಕುಮಾರಸ್ವಾಮಿ ಅವರು ಗುಪ್ತಚರ ಇಲಾಖೆಯ ವರದಿ ಕಂಡು ಅಕ್ಷರಶಃ ತತ್ತರಿಸಿದ್ದಾರೆ. ಇತ್ತ ಸ್ವತಃ ಜೆಡಿಎಸ್‌ ಕಾರ್ಯಕರ್ತರೇ ನಿಖಿಲ್ ವಿರುದ್ಧ ಅಸಮಧಾನ ತೋರ್ಪಡಿಸಿದ್ದು ಸುಮಲತಾ ಅಂಬರೀಶ್ ಅವರಿಗೆ ನಮ್ಮ ಬೆಂಬಲ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ‌ಇವೆಲ್ಲವೂ ಮಂಡ್ಯದ ಸದ್ಯದ ರಾಜಕೀಯ ಚಿತ್ರಣವಾದರೆ ದೇವೇಗೌಡರ ಕುಟುಂಬ ರಾಜಕಾರಣಕ್ಕೆ ಮಂಡ್ಯದಲ್ಲಿ ಬ್ರೇಕ್ ಬೀಳುವುದು ಗ್ಯಾರಂಟಿ.!

-ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close