ಪ್ರಚಲಿತ

ಕಣ್ಣೀರಿನ ಮೂಲಕ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ದೇವೇಗೌಡರ ಕುಟುಂಬ! ಕಣ್ಣೀರಿಗೆ ಮರುಳಾಗುತ್ತಾರಾ ಕರ್ನಾಟಕದ ಜನತೆ?

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕಾರಣಿಗಳು ಯಾವ ಕೀಳು ಮಟ್ಟಕ್ಕೆ ಇಳಿಯುತ್ತಾರೆ ಎಂದರೆ ಸದ್ಯ ಕರ್ನಾಟಕದ ಒಂದು ಪಕ್ಷದ ನಾಯಕರನ್ನು ನೋಡಿ ರಾಜ್ಯದ ಜನರು ಹೊಟ್ಟೆ ಹುಣ್ಣಾಗುವಂತೆ ನಗುವಂತಾಗಿದೆ. ಯಾಕೆಂದರೆ ನಿನ್ನೆಯ ದಿನ ಜೆಡಿಎಸ್‌ ನಾಯಕರು ಮಾಡಿದ ನಾಟಕ ಯಾವ ರೀತಿ ಇತ್ತು ಎಂದರೆ ರಾಜ್ಯಾದ್ಯಂತ ದೇವೇಗೌಡರ ಕುಟುಂಬದ ಬಗ್ಗೆ ಟ್ರೋಲ್‌ಗಳ ಸುರಿಮಳೆಯೇ ಮಾಡಲಾಗಿತ್ತು. ಜನರಿಗೆ ಆಶ್ವಾಸನೆ ನೀಡಿ ಮತ ಕೇಳುವುದು ರಾಜಕೀಯ ಪಕ್ಷಗಳ ಒಂದು ಸ್ಟಾಟರ್ಜಿ ಆದರೆ ಜೆಡಿಎಸ್‌ ನಾಯಕರು ಕಣ್ಣೀರು ಸುರಿಸಿ ಮತ ಯಾಚನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಪ್ರತೀ ಚುನಾವಣೆಯಲ್ಲೂ ಅತ್ಯಂತ ಭಾವನಾತ್ಮಕವಾಗಿ ಮಾತನಾಡಿ ಚುನಾವಣಾ ಪ್ರಚಾರ ಮಾಡುವ ದೇವೇಗೌಡರು ಈ ಬಾರಿ ತನ್ನ ಇಡೀ ಕುಟುಂಬವನ್ನೇ ಈ ಒಂದು ಕಣ್ಣೀರಿನ ಪ್ರಚಾರಕ್ಕೆ ಎಳೆದುಕೊಂಡು ಬಂದಿದ್ದು ರಾಜ್ಯದ ಜನರ ಮುಂದೆ ಕಣ್ಣೀರಿನ ಮೂಲಕವೇ ಮತಯಾಚನೆಗೆ ಮುಂದಾಗಿದ್ದಾರೆ.

ಅಧಿಕಾರಕ್ಕಾಗಿ ಯಾವ ರೀತಿಯ ನಾಟಕ ಆಡುತ್ತಾರೆ ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೇ. ಆದರೆ ಸದ್ಯ ತಮ್ಮ ಕೈಗೆ ಅಧಿಕಾರ ಸಿಕ್ಕರೂ ಕೂಡ ಜನರ ಬಳಿ ಅಭಿವೃದ್ಧಿಯ ಕೆಲಸಗಳನ್ನು ಹಿಡಿದು ಪ್ರಚಾರ ಮಾಡುವ ಬದಲು ತಮ್ಮ ಕುಟುಂಬದ ಹಿನ್ನೆಲೆಯನ್ನು ಹೇಳಿಕೊಂಡು ಜನರನ್ನು ಮರಳು ಮಾಡಲು ಹೊರಟಿರುವ ಒಂದು ಪಕ್ಷವನ್ನು ಕಂಡು ಇಡೀ ರಾಜ್ಯವೇ ನಗುವಂತಾಗಿದೆ ಎಂದರೆ ಈ ಪಕ್ಷದ ನಾಯಕರ ನಾಟಕ ಯಾವ ರೀತಿ ಇದೆ ಎಂಬುದನ್ನು ಸೂಚಿಸುತ್ತದೆ.!

ಸೈನಿಕರ ಸಾವಿಗೆ ಕಣ್ಣೀರು ಬರಲಿಲ್ಲ, ಚುನಾವಣಾ ಪ್ರಚಾರಕ್ಕೆ ಕಣ್ಣೀರೇ ಗತಿ!

ದೇಶಕಾಯೋ ಸೈನಿಕರನ್ನು ಪಾಕಿಸ್ತಾನದ ಜಿಹಾದಿ ಉಗ್ರರು ರಾಕ್ಷಸರಂತೆ ಅಟ್ಟಹಾಸ ಮಾಡಿ ಕೊಂದಾಗ ಇಡೀ ದೇಶವೇ ಕಣ್ಣೀರಿಡುತ್ತಿದ್ದರು ಈ ಕುಟುಂಬ ಮಾತ್ರ ಕಣ್ಣೀರು ಹಾಕಿಲಿಲ್ಲ. ಆದರೆ ಇಂದು ಚುನಾವಣಾ ಪ್ರಚಾರಕ್ಕೆ ತೆರಳಿದಾಗ ವೇದಿಕೆಯಲ್ಲಿ ಕುಟುಂಬದ ಸದಸ್ಯರು ಕಣ್ಣೀರಲ್ಲೇ ತೇಲುತ್ತಿದ್ದರು. ಅಪ್ಪ ಮಗನನ್ನು ನೆನೆದು ಕಣ್ಣೀರಿಟ್ಟರೆ ಮಗ ಅಪ್ಪನನ್ನು ನೆನೆದು ಕಣ್ಣೀರಿಡುತ್ತಿರುವ ದೃಶ್ಯ ಕಂಡು ರಾಜ್ಯದ ಜನರು ಮಾತ್ರ ಬಿದ್ದು ಬಿದ್ದು ನಗಾಡುವಂತಾಗಿದೆ. ಪ್ರತೀ ಬಾರಿ ದೇವೇಗೌಡರು ಚುನಾವಣಾ ಸಂದರ್ಭದಲ್ಲಿ ‘ನನ್ನದು ಈ ಬಾರಿ ಕೊನೆಯ ಚುನಾವಣೆ, ಮುಂದೆ ನಾನು ಸ್ಪರ್ಧಿಸುವುದಿಲ್ಲ’ ಎಂದು ಹೇಳಿಕೊಂಡು ಈವರೆಗೆ ಬಂದು ತಲುಪಿದ್ದಾರೆ. ಈ ಬಾರಿಯೂ ತಮ್ಮ ಹಳೇ ಡೈಲಾಗ್ ಮತ್ತೊಮ್ಮೆ ಉಪಯೋಗಿಸಿದ್ದು ಸೇರಿದ್ದ ಕಾರ್ಯಕರ್ತರ ಮುಂದೆ ವೇದಿಕೆಯಲ್ಲೇ ಕಣ್ಣೀರಿಟ್ಟ ಘಟನೆ ನಡೆದಿದೆ.

ಒಂದೆಡೆ ದೇವೇಗೌಡರು ಕಣ್ಣೀರಿಟ್ಟರೆ, ಇತ್ತ ಮಗ ರೇವಣ್ಣ ಮತ್ತು ಮೊಮ್ಮಗ ಪ್ರಜ್ವಲ್ ರೇವಣ್ಣ ಕೂಡ ನಾವೇನೂ ಕಮ್ಮಿ ಇಲ್ಲ ಎಂಬಂತೆ ಕಣ್ಣೀರಿಟ್ಟು ಜನರ ಮನವೊಲಿಕೆಗೆ ಪ್ರಯತ್ನಿಸಿದ್ದಾರೆ. ಇಷ್ಟೆಲ್ಲಾ ಆದರೂ ರಾಜ್ಯದ ಜನರು ಮಾತ್ರ ಮರುಳಾಗಲಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಗೌಡರ ಕುಟುಂಬದ ವಿರುದ್ಧ ನೂರಾರು ಟ್ರೋಲ್‌ಗಳು ಹರಿದಾಡತೊಡಗಿದವು. ರಾಜ್ಯ ಬಿಜೆಪಿಯಂತೂ ಕಣ್ಣೀರಿಟ್ಟ ಗೌಡರ ಕುಟುಂಬದ ವಿರುದ್ಧ ಆಕ್ರೋಶಭರಿತ ಟ್ವೀಟ್ ಮಾಡಿದ್ದು, ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಕಣ್ಣೀರು ಬರಲಿಲ್ಲ, ಸೈನಿಕರು ಹುತಾತ್ಮರಾದಾಗ ಕಣ್ಣೀರು ಬರಲಿಲ್ಲ , ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ಕಣ್ಣೀರು ತುಂಬಿ ತುಳುಕುತ್ತಿದೆ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿ ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ನಿಜಕ್ಕೂ ಇದೊಂದು ರಾಜ್ಯದ ದುರಾದೃಷ್ಟ ಅಲ್ಲದೇ ಮತ್ತಿನ್ನೇನೂ ಅಲ್ಲ, ಯಾಕೆಂದರೆ ಜನರ ಹಿತ ಕಾಯಬೇಕಾದ ನಾಯಕರೇ ಕಣ್ಣೀರಿಟ್ಟು ಜನರನ್ನು ಮರುಳು ಮಾಡುತ್ತಿದ್ದಾರೆ ಎಂದರೆ ಇದಕ್ಕಿಂದ ದೌರ್ಭಾಗ್ಯ ಬೇರೊಂದಿಲ್ಲ..!

-ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close