ಪ್ರಚಲಿತ

ಉಕ್ಕಿನ ಮಹಿಳೆಯಿಂದ ರಾಹುಲ್ ಗಾಂಧಿಗೆ ರಫೆಲ್ ಪಾಠ!! ರಕ್ಷಣಾ ವ್ಯವಹಾರಗಳು ಮತ್ತು ರಕ್ಷಣೆಯಲ್ಲೆ ವ್ಯವಹಾರದ ನಡುವಿನ ವ್ಯತ್ಯಾಸವನ್ನು ಬೋಧಿಸಿದರು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

 

ಎರಡು ದಿನಗಳ ಹಿಂದೆ ಅರುಣ್ ಜೇಟ್ಲಿ ಕೈಯಲ್ಲಿ ಜನ್ಮ ಜಾತಕ ಜಾಲಾಡಿಸಿಕೊಂಡ ರಾಹುಲ್ ಗಾಂಧಿಯನ್ನು ನಿನ್ನೆ ಉಕ್ಕಿನ ಮಹಿಳೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸರಿಯಾಗಿಯೆ ರುಬ್ಬಿದ್ದಾರೆ. ದೇಶದ ರಕ್ಷಣಾ ವ್ಯವಹಾರಗಳು ಮತ್ತು ರಕ್ಷಣೆಯಲ್ಲೆ ವ್ಯವ್ಯಹಾರ ನಡೆಸುವ ಮಧ್ಯೆ ತುಂಬಾ ವ್ಯತ್ಯಾಸವಿದೆ ಎನ್ನುವ ಪಾಠವನ್ನು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ಸಿಗೆ ಬೋಧಿಸಿದ್ದಾರೆ. ಕಾಂಗ್ರೆಸ್ ದೇಶದ ರಕ್ಷಣೆಯ ವಿಷಯದಂತಹ ಮಹತ್ವಪೂರ್ಣ ವಿಚಾರದಲ್ಲೂ ವ್ಯವಹಾರ ನಡೆಸುತ್ತದೆ ಎಂದು ರಾಹುಲ್ ಗೆ ಪರೋಕ್ಷವಾಗಿ ಛಾಟಿ ಬೀಸಿದರು ರಕ್ಷಣಾ ಸಚಿವೆ.

ರಕ್ಷಣಾ ಸಚಿವೆಯವರು ಕೊಟ್ಟ ಏಟಿನ ತುಣುಕುಗಳು

# ನರೇಂದ್ರ ಮೋದಿ ನೇತೃತ್ವದ ಸರಕಾರದ ಒಪ್ಪಂದದಡಿ ಮೂಲ ವಿಮಾನದ ಬೆಲೆ: 670 ಕೋಟಿ ರೂ
ಮನಮೋಹನರ ನೇತೃತ್ವದ ಯೂಪಿಎ ಸರಕಾರದ ಒಪ್ಪಂದದಡಿ ಮೂಲ ವಿಮಾನದ ಬೆಲೆ: 737 ಕೋಟಿ ರೂ. ಅಂದರೆ ಯೂಪಿಎಗಿಂತ ಶೇಕಡಾ 9 ರಷ್ಟು ಕಡಿಮೆ ಬೆಲೆಯಲ್ಲಿ ಮೂಲ ವಿಮಾನಗಳನ್ನು ಖರೀದಿಸಲಾಗಿದೆ.

# ಕನಿಷ್ಟ ಐದು ತಿಂಗಳ ಕಾಲಾವಕಾಶ ನೀಡಿ ಹಾರಾಡುವ ಸ್ಥಿತಿಯಲ್ಲಿರುವ ವಿಮಾನಗಳನ್ನೆ ಪಡೆಯಲು ಮೋದಿ ಸರಕಾರ ನಿರ್ಧರಿಸಿದೆ. ಈಗ ಭಾರತಕ್ಕೆ ಹಾರಾಡುವ ಸ್ಥಿತಿಯಲ್ಲಿ ಸಿಗಲಿರುವ ಒಟ್ಟು ವಿಮಾನಗಳು ಸಂಖ್ಯೆ 36. ಇದು ಯೂಪಿಎ ಸರಕಾರದ 18 ವಿಮಾನಗಳ ಸಂಖ್ಯೆಗಿಂತ ದುಪ್ಪಟ್ಟು.

# 1982 ಮತ್ತು1985 ರಲ್ಲಿ ಎರಡು ಬಾರಿ ಮಾತ್ರ ತುರ್ತು ಸಂಧರ್ಭದಲ್ಲಿ ಯುದ್ದ ವಿಮಾನಗಳನ್ನು ಖರೀದಿಸಲಾಗಿದೆ. ರಫೇಲ್ ನ ಮೊದಲನೆ ವಿಮಾನವನ್ನು 2019 ರ ಸೆಪ್ಟೆಂಬರಿನಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗುವುದು. ಉಳಿದ 36 ವಿಮಾನಗಳನ್ನು 2022 ರಲ್ಲಿ ವಿತರಿಸಲಾಗುವುದು. 14 ತಿಂಗಳ ಸಮಾಲೋಚನೆಯ ಬಳಿಕ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ.

# ಯೂಪಿಎ ಕಾಲದಲ್ಲಿ ಕೇವಲ ಒಂದು ಸ್ವಾಡ್ರನ್ ಗಳಿಗಷ್ಟೆ ಐದು ವರ್ಷಗಳ ಆರಂಭಿಕ ಸಾಗಣಿಕೆ ಬೆಂಬಲವನ್ನು ಕೇಳಲಾಗಿತ್ತು. ಮೋದಿ ಸರಕಾರದಲ್ಲಿ ಎರಡು ಸ್ಕಾಡ್ರನ್ಗಳಿಗೆ ಹೆಚ್ಚುವರಿ ವೆಚ್ಚವಿಲ್ಲದೆಯೆ ಐದು ವರ್ಷಗಳ ಆರಂಭಿಕ ಸಾಗಣಿಕೆ ಬೆಂಬಲವನ್ನು ಪಡೆಯಲಾಗಿದೆ.

# 2018 ರಲ್ಲಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಭಾರತಕ್ಕೆ ಭೇಟಿ ನೀಡಿದ ಸಮಯದಲ್ಲಿ ಕಾಂಗ್ರೆಸ್ ವಕ್ತಾರ, ಮ್ಯಾಕ್ರೋನ್ ಬಳಿ ರಫೆಲ್ ವ್ಯವಹಾರದ ಬಗ್ಗೆ ಮಾತನಾಡುವ ಉದ್ದೇಶವೆ ಇಲ್ಲ, ಏಕೆಂದರೆ ಇದು ಸರಕಾರದ ವೈಯಕ್ತಿಕ ವಿಚಾರ ಎಂದು ಹೇಳಿದ್ದರು. ಆದರೆ ಮೊನ್ನೆ ಸದನದಲ್ಲಿ ರಾಹುಲ್ ಗಾಂಧಿ ತಾನು ಮ್ಯಾಕ್ರೋನ್ ಅನ್ನು ಭೇಟಿಯಾಗಿದ್ದಾಗಿ ತಿಳಿಸಿ ಈ ಬಗ್ಗೆ ಮಾತನಾಡಿದ್ದಾಗಿ ಹೇಳಿದ್ದಾರೆ. ಕಾಂಗ್ರೆಸ್ ದೇಶದ ಜನರನ್ನು ತಪ್ಪು ದಾರಿಗೆಳೆಯುತ್ತಿದೆ ಮತ್ತು ಇವರಿಬ್ಬರಲ್ಲಿ ಯಾರು ಸತ್ಯ ಹೇಳುತ್ತಿದ್ದಾರೆ ಎಂದು ನನಗೆ ಗೊತ್ತಾಗಬೇಕು ಎಂದು ಸೀತಾರಾಮನ್ ಕಿಡಿ ಕಾರಿದರು.

# ಭಾರತ ಭೇಟಿ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ್ದ ಮ್ಯಾಕ್ರೋನ್ ಒಪ್ಪಂದ ತುಂಬಾ ಸೂಕ್ಷ್ಮ ವಿಚಾರ. ತಮಗೆ ಹಲವಾರು ಪ್ರತಿಸ್ಪರ್ಧಿಗಳಿರುವುದರಿಂದ ವಿಮಾನಗಳ ಬೆಲೆಯನ್ನು ಸಾರ್ವಜನಿಕವಾಗಿ ಚರ್ಚಿಸುವಂತಿಲ್ಲ ಎಂದಿದ್ದರು. ಆದರೆ ರಾಹುಲ್ ಗಾಂಧಿ ಮ್ಯಾಕ್ರೋನ್ ತಮಗೆ ಒಪ್ಪಂದದಲ್ಲಿ ರಹಸ್ಯವೇನಿಲ್ಲ, ಬೆಲೆಯನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಬಹುದೆಂದು ಹೇಳಿದ್ದಾರೆ ಎಂದು ಸದನದಲ್ಲೆ ಸುಳ್ಳು ಹೇಳಿದ್ದರು.

# ವಿಮಾನ ತಯಾರಿಕಾ ಕಾಂಟ್ರಾಕ್ಟ್ ಅನ್ನು ಎಚ್.ಎ.ಎಲ್ ಗೆ ನೀಡದಿರುವ ಆರೋಪಕ್ಕೆ ಉತ್ತರಿಸುತ್ತಾ , ಕಾಂಗ್ರೆಸ್ ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ನಿರ್ಮಿಸುವ ಗುತ್ತಿಗೆಯನ್ನು ಎಚ್.ಎ.ಎಲ್ ಗೆ ನೀಡದೆ ಹೊರದೇಶಕ್ಕೆ ಗುತ್ತಿಗೆ ನೀಡಿದ್ದು ಯಾಕೆ ಎಂದು ಕಟುವಾಗಿ ಪ್ರಶ್ನಿಸಿ, ಅಗಷ್ಟಾ ಗಾಯದ ಮೇಲೆ ರಫೆಲ್ ಬರೆ ಎಳೆದು ಬಿಟ್ಟರು ರಕ್ಷಣಾ ಸಚಿವೆ. ಎಚ್ಎಎಲ್ ಉದ್ಯೋಗಿಗಳನ್ನು ರಾಜಕೀಯಕ್ಕೆ ಎಳೆತಂದದ್ದಕ್ಕೆ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡ ಸಚಿವೆ, ಮೋದಿ ಸರಕಾರ ಎಚ್.ಎ.ಎಲ್ ಗೆ 1 ಲಕ್ಷ ಕೋಟಿ ಮೌಲ್ಯದ ಒಪ್ಪಂದಗಳನ್ನು ನೀಡಿರುವ ಬಗ್ಗೆ ಸದನಕ್ಕೆ ತಿಳಿಸಿದ್ದಾರೆ.

ದೇಶ ಮಾತ್ರವಲ್ಲ ಅಂತರಾಷ್ಟ್ರೀಯ ವೇದಿಕೆಯಲ್ಲೂ ತನ್ನ ಮಾನ ಹರಾಜು ಹಾಕಿಕೊಳ್ಳುತ್ತಿರುವ ಕಾಂಗ್ರೆಸ್, ದೇಶದ ಮಾನವನ್ನೂ ಹರಾಜಿಗಿಟ್ಟಿದೆ. ಜಗತ್ತಿನ ಎಲ್ಲಾ ದೇಶಗಳೂ ಇವತ್ತು ಭಾರತದ ವಿರೋಧ ಪಕ್ಷವನ್ನು ನೋಡಿ ಅಸಹ್ಯ ಪಡುತ್ತಿರಬಹುದು. ತಮ್ಮ ರಾಜಕೀಯ ಎದುರಾಳಿ ಎಂಥವನೆ ಆಗಿರಲಿ ಯಾವ ದೇಶದ ಪ್ರತಿಪಕ್ಷವೂ ತನ್ನ ದೇಶ ಮತ್ತು ನಾಗರಿಕರ ರಕ್ಷಣೆಯ ವಿಷಯದಲ್ಲಿ ಇಂತಹ ಹೊಲಸು ರಾಜಕೀಯ ಮಾಡಲಾರದು. ಇಂತಹ ಹೊಲಸು ರಾಜಕೀಯ ಕೇವಲ ಭಾರತದ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ!!

–ಶಾರ್ವರಿ

video courtesy: LS Tv/ NDTV, youtube

Tags

Related Articles

FOR DAILY ALERTS
 
FOR DAILY ALERTS
 
Close