ದೇಶಪ್ರಚಲಿತ

ನೌಕಾಪಡೆಯ ಮುಖ್ಯಸ್ಥನಿಂದ ಅಪಾಯದ ಸೂಚನೆ!! “ಕೋಳಿಯ ಕತ್ತು” ಅಂತಲೇ ಕರೆಯುವ ಈ ಪ್ರದೇಶದಿಂದ ಭಾರತಕ್ಕೆ ಎದುರಾಗುವ ಅಪಾಯದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ನೌಕಾಪಡೆ ಮುಖ್ಯಸ್ಥ!!

ಗಡಿಯಲ್ಲಿ ದೋಕ್ಲಾಂ ಬಿಕ್ಕಟ್ಟಿನ ನಂತರ ಚೀನಾ ಪದೇ ಪದೇ ಭಾರತೀಯ ಸೈನಿಕರಿಗೆ ಯುದ್ದದ ಬೆದರಿಕೆ ನೀಡುತ್ತಿದೆಯಲ್ಲದೇ ಗಡಿಯುದ್ದಕ್ಕೂ ತನ್ನ ಸೇನೆಯ ಸಂಖ್ಯೆಯನ್ನು ಹೆಚ್ಚಿಸುತ್ತಿರುವ ವಿಚಾರ ತಿಳಿದೇ ಇದೆ. ಆದರೆ ಪದೇ ಪದೇ ಗಡಿ ಉಲ್ಲಂಘನೆ ಮಾಡುತ್ತಿರುವ ಚೀನಾವು ತನ್ನ ಕುತಂತ್ರ ಬುದ್ದಿಯನ್ನು ತೋರಿಸುತ್ತಿರುವ ಬಗ್ಗೆ ಇದೀಗ ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ ಆತಂಕ ವ್ಯಕ್ತಪಡಿಸಿದ್ದಾರೆ.

ಹೌದು… ಈಗಾಗಲೇ ಭಾರತದಲ್ಲಿರುವ ಗಡಿ ಪ್ರದೇಶ ದೋಕ್ಲಾಂ ಅನ್ನು ತನ್ನದೆಂದು ವಾದಿಸುವ ಮೂಲಕ ಚೀನಾ ತನ್ನ ಕಾಲುಕೆರೆದಿದ್ದು, ಚೀನಾಕ್ಕೆ ಅದರದೇ ರೀತಿಯಲ್ಲಿ ಉತ್ತರಿಸಲು ಮುಂದಾಗಿರುವ ಭಾರತ ವಿವಾದಿತ ದೋಕ್ಲಾಂ ಗೆ ತನ್ನ ಹೆಚ್ಚುವರಿ ಪಡೆಗಳನ್ನು ರವಾನಿಸಿತ್ತು. ಆದರೆ ವಿವಾದಿತ ಪ್ರದೇಶದಲ್ಲಿ ಚೀನಾ ದೇಶವು ತನ್ನ ಹೆಚ್ಚುವರಿ ಪಡೆಗಳನ್ನು ರವಾನಿಸುವುದರೊಂದಿಗೆ ಇಂಡೋ-ಚೀನಾ ಗಡಿಯಲ್ಲಿ ಪ್ರಕ್ಷುಬದ್ಧ ವಾತಾವರಣ ಸೃಷ್ಟಿ ಮಾಡಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿನಿಂದಾಗಿ ಚೀನಾವು ದೋಕ್ಲಾಂನಿಂದ ಹಿಂದೆ ಸರಿದು ತನ್ನ ಸೋಲನ್ನು ಒಪ್ಪಿಕೊಂಡಿತ್ತು!!

ಆದರೂ ಗಡಿ ಭಾಗಗಳಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಚೀನಾದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ ಭಾರತದ ಪೂರ್ವದಲ್ಲಿರುವ ಭಾರತ-ಚೀನ ವಾಸ್ತವಿಕ ಗಡಿ ರೇಖೆ (ಎಲ್‍ಎಸಿ) ಯಲ್ಲಿ ಚೀನದ ಪೀಪಲ್ಸ್ ಲಿಬರೇಷನ್ ಆರ್ಮಿಯು (ಪಿಎಲ್‍ಎ) ಹೆಚ್ಚಾಗಿ ಗಡಿ ಉಲ್ಲಂಘನೆ ಮಾಡುತ್ತಿದ್ದು, ಇದು ಪೂರ್ವೋತ್ತರ ದೇಶಗಳನ್ನು ಭಾರತಕ್ಕೆ ಬೆಸೆಯುವ ಸಿಲಿಗುರಿ ಪ್ರಾಂತ್ಯಕ್ಕೆ ಅಪಾಯ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಗಡಿಯಲ್ಲಿ ದೋಕ್ಲಾಂ ಬಿಕ್ಕಟ್ಟಿನ ನಂತರ ಚೀನಾ ಪದೇ ಪದೇ ಭಾರತೀಯ ಸೈನಿಕರಿಗೆ ಯುದ್ದದ ಬೆದರಿಕೆ ನೀಡುತ್ತಿದ್ದು, ಗಡಿಯುದ್ದಕ್ಕೂ ತನ್ನ ಸೇನೆಯ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಅಷ್ಟೇ ಅಲ್ಲದೇ, ಗಡಿಯಲ್ಲಿ ತನ್ನ ಶಸ್ತ್ರಾಸ್ತ್ರಗಳ ನಿಯೋಜನೆಯ ನಂತರ ಚೀನಾ ಭಾರತಕ್ಕೆ ಪರೋಕ್ಷವಾಗಿ ತನ್ನ ಸಾಮರ್ಥ್ಯವನ್ನು ತಿಳಿಸುತ್ತಿದೆ ಎಂದು ಈ ಹಿಂದೆ ಮೂಲಗಳು ಅಭಿಪ್ರಾಯ ಪಟ್ಟಿತ್ತು!!

ಹಾಗಾಗಿ ಚೀನಾದ ಯಾವುದೇ ಮೂಲೆಗೂ ತಲುಪಬಲ್ಲ ಪರಮಾಣು ಸಾಮರ್ಥ್ಯದ ಅಗ್ನಿ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದ್ದು, ಈ ಕ್ಷಿಪಣಿಯನ್ನು ಒಡಿಶಾ ಕರಾವಳಿಯ ಭಾರತದ ಸುರಕ್ಷತಾ ಘಟಕದಿಂದ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ. ಆದರೆ ಚೀನಾ ಭಾರತದ ವಿರುದ್ದ ಕತ್ತಿ ಮಸೆಯುತ್ತಲೇ ಇದ್ದು, ಪಾಕಿಸ್ತಾನದೊಂದಿಗೆ ಕೈಜೊಡಿಸಿಕೊಂಡು ಭಯೋತ್ಪಾದನೆಗೂ ಕುಮ್ಮಕ್ಕು ನೀಡಿತ್ತು!!

ಈ ಎಲ್ಲಾ ಬೆಳವಣಿಗೆಯನ್ನು ಮನಗಂಡ ಭಾರತ ತನ್ನ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆ ನಡೆಸಿ ಚೀನಾಕ್ಕೆ ತನ್ನದೇ ರೀತಿಯಲ್ಲಿ ಉತ್ತರಿಸುತ್ತಿದೆ. ಇದಲ್ಲದೆ ಪ್ರಧಾನಿ ಮೋದಿ ತಮ್ಮ ರಾಜತಾಂತ್ರಿಕತೆಯ ಭಾಗವಾಗಿ ಚೀನಾ ವ್ಯಾಪಕ ಬಿಕ್ಕಟ್ಟು ಹೊಂದಿರುವ ಆಸ್ಯಾನ್ ರಾಷ್ಟ್ರಗಳ ಪ್ರಧಾನ ಮಂತ್ರಿಗಳನ್ನು ಭಾರತದ ಗಣತಂತ್ರ ದಿವಸಕ್ಕೆ ಆಹ್ವಾನಿಸಿದ್ದು ಚೀನಾ ಮತ್ತಷ್ಟು ಇಕ್ಕಟ್ಟಿಕೆ ಸಿಳುಕುವಂತೆ ಮಾಡಿತ್ತು.

ಆದರೂ ಚೀನದ ಪೀಪಲ್ಸ್ ಲಿಬರೇಷನ್ ಆರ್ಮಿಯು (ಪಿಎಲ್‍ಎ) ಹೆಚ್ಚಾಗಿ ಗಡಿ ಉಲ್ಲಂಘನೆ ಮಾಡುತ್ತಿದ್ದು, ಇದು ಪೂರ್ವೋತ್ತರ ದೇಶಗಳನ್ನು ಭಾರತಕ್ಕೆ ಬೆಸೆಯುವ ಸಿಲಿಗುರಿ ಪ್ರಾಂತ್ಯಕ್ಕೆ ಅಪಾಯ ಒಡ್ಡುವ ಸಾಧ್ಯತೆಗಳು ಹೆಚ್ಚಾಗಿದ್ದು, ಈ ಬಗ್ಗೆ ನೌಕಾಪಡೆಯ ಮುಖ್ಯಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ, ಎಲ್’ಎಸಿ ಪಹರೆ ಮಾಡುವ ತನ್ನ ವಾಯುಪಡೆಯ ವೆಸ್ಟರ್ನ್ ಥಿಯೇಟರ್ ಕಮಾಂಡ್ ವ್ಯವಸ್ಥೆ ಮೇಲ್ದರ್ಜೆಗೆ ಏರಿಸಿರುವ ಚೀನ, ಭಾರತದಿಂದ ಆಗುವ ಅಪಾಯವನ್ನು ಎದುರಿಸಲು ಈ ಕ್ರಮ ಕೈಗೊಂಡಿರುವುದಾಗಿ ಮಂಗಳವಾರ ಘೋಷಿಸಿದೆ.

ಇದರ ಬೆನ್ನಲ್ಲೇ ನೌಕಾಪಡೆ ಮುಖ್ಯಸ್ಥರ ಈ ಎಚ್ಚರಿಕೆ ಚೀನವನ್ನು ಲಘುವಾಗಿ ಪರಿಗಣಿಸದಿರುವಂತೆ ಸ್ಪಷ್ಟ ಸಂದೇಶ ರವಾನಿಸಿದೆ!! ಇದೇ ವೇಳೆ, ಡೋಕ್ಲಾಂನಲ್ಲಿ ಕಳೆದ ವರ್ಷ ಮಾಡಿದ್ದ ತರಲೆಯನ್ನು ಈ ವರ್ಷ ಚೀನ ಮಾಡಿಲ್ಲ ಎಂದು ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, ಈ ವರ್ಷ ನಾಥುಲಾ ಪಾಸ್ ಮೂಲಕವೇ ಯಾತ್ರಿಗಳು ಕೈಲಾಶ್ ಮಾನಸ ಸರೋವರ ಯಾತ್ರೆ ಕೈಗೊಳ್ಳಬಹುದಾಗಿದ್ದು, ಜೂ.8 ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಆದರೆ, ವಿವಾದದ ಕೇಂದ್ರ ಬಿಂದುವಾಗಿರುವ ಚುಂಬಿ ಕಣಿವೆಯು ಭಾರತದ ಮಹತ್ವದ ಯೋಜನೆಯಾಗಿರುವ ಸಿಲಿಗುರಿ ಕಾರಿಡಾರ್ ಯೋಜನೆ ನಡೆಯುತ್ತಿರುವ ಪ್ರದೇಶಕ್ಕೆ ತೀರಾ ಹತ್ತಿರದಲ್ಲಿದೆ. ಚುಂಬಿ ಕಣಿವೆ ಮಿಲಿಟರಿ ಕಾರ್ಯಾಚರಣೆಯ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಈ ಪ್ರದೇಶದಲ್ಲಿ ಚೀನಾ ಕಾಮಗಾರಿಗೆ ಭಾರತ ಅವಕಾಶ ನೀಡಿದ್ದೇ ಆದರೆ, ಈ ಪ್ರದೇಶದಲ್ಲಿ ಚೀನಾ ಪ್ರಾಬಲ್ಯ ಹೆಚ್ಚಾಗಲಿದೆ. ಇದರಿಂದ ಮುಂದೆ ಸಿಲಿಗುರಿ ಪ್ರದೇಶಕ್ಕೂ ದೊಡ್ಡ ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ ಚೀನಾ ಕಾಮಗಾರಿಯಿಂದ ಸಹಜವಾಗಿ ಭಾರತಕ್ಕೆ ದೊಡ್ಡ ಸಮಸ್ಯೆ ಎದುರಾಗುವ ಆತಂಕ ಸೃಷ್ಟಿಯಾಗಿದೆ.

ಈ ಸಿಲಿಗುರಿ ಕಾರಿಡಾರ್ ಪ್ರದೇಶವನ್ನು ಹಿಂದಿನಿಂದಲೂ “ಕೋಳಿಯ ಕತ್ತು” ಅಂತಲೇ ಕರೆಯುತ್ತಾರೆ. ಯಾಕೆಂದರೆ, ಈ ಪ್ರದೇಶ ಬಿಹಾರ ರಾಜ್ಯದಿಂದ ಬಾಂಗ್ಲಾದೇಶ ಹಾಗೂ ನೇಪಾಳ ಗಡಿಯ ಮಧ್ಯದಲ್ಲಿ ಹಾದು ಹೋಗಿದ್ದು, ಈಶಾನ್ಯ ರಾಜ್ಯಗಳನ್ನು ಸಂಪರ್ಕಿಸುವ ಸಣ್ಣ ಪ್ರದೇಶವಾಗಿದೆ. ಭಾರತ ಭೂಪಟದಲ್ಲಿ ನೋಡಲು ಇದು ಕೋಳಿ ಕತ್ತಿನಂತೆ ಕಾಣುವುದರಿಂದ ಇದಕ್ಕೆ ಈ ಹೆಸರಿನಿಂದ ಕರೆಯಲಾಗುತ್ತದೆ. ಈ ಪ್ರದೇಶಕ್ಕೆ ಹಾನಿಯಾದರೆ, ಭಾರತದಿಂದ ಈಶಾನ್ಯ ರಾಜ್ಯಗಳನ್ನು ತುಂಡರಿಸಿದಂತಾಗಲಿದೆ. ಈ ಎಲ್ಲಾ ಆತಂಕಗಳಿಂದಾಗಿ ಭಾರತವು ಚುಂಬಿ ಕಣಿವೆಯಲ್ಲಿ ಚೀನಾದ ರಸ್ತೆ ಕಾಮಗಾರಿಗೆ ವಿರೋಧ ವ್ಯಕ್ತಪಡಿಸುತ್ತಿದೆ.

ಆದರೆ ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿನಿಂದಾಗಿ ಚೀನಾ ಭಾರತದಲ್ಲಿ ನೇರವಾಗಿ ಯುದ್ದ ಸಾರಲು ಹಿಂದೆ ಮುಂದೆ ನೋಡುತ್ತಿದ್ದು, ಕಳೆದ ವರ್ಷದಂತೆ ಚೀನಾ ಗಡಿ ಪ್ರದೇಶದಲ್ಲಿ ಯಾವುದೇ ಕ್ಯಾತೆ ತೆಗೆಯದೆ ಮೌನವಹಿಸಿದೆಯಾದರೂ ಚೀನದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್‍ಎ)ಬಗ್ಗೆ ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ ಆತಂಕ ವ್ಯಕ್ತಪಡಿಸಿದ್ದಾರೆ!!!

– ಅಲೋಖಾ

Tags

Related Articles

Close