ಪ್ರಚಲಿತ

ನರೇಂದ್ರನಿಗೆ ನಮೋ ಎಂದ ಮಹೇಂದ್ರ! ಮೋದಿ ಆಡಳಿತವನ್ನು ಸ್ವೀಕರಿಸಿದ ಕೂಲ್ ಕ್ಯಾಪ್ಟನ್!

ರೇಂದ್ರ ಮೋದಿ ಭಾರತದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ನಂತರ ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನ್ನಲ್ಲೇ ಹೊಸ ಶಕೆ ಆರಂಭವಾಗಿತ್ತು. ಜಗತ್ತೇ ಕೊಂಡಾಡುವ ನಾಯನಾಗಿ ಪ್ರಧಾನಿ ಮೋದಿ ಬೆಳೆದಿದ್ದರು. ವಿರೋಧ ಪಕ್ಷಗಳು ಅದೆಷ್ಟೇ ವಿರೋಧಿಸಿದ್ದರೂ ಕೂಡಾ ತಮ್ಮ ಕೆಲಸಗಳನ್ನು ನಿಷ್ಟೆಯಿಂದ ಮಾಡುತ್ತಾ ಬಂದ ಪ್ರಧಾನಿ ಮೋದಿ ಇದೀಗ ಮುಂದಿನ ಲೋಕ ಸಮರಕ್ಕೆ ಸಜ್ಜಾಗುತ್ತಿದ್ದಾರೆ.

Image result for modi with dhoni

ಅಂದಹಾಗೆ ಮೋದಿಯವರ ಕಳೆದ 4 ವರ್ಷಗಳ ಅಭಿವೃದ್ಧಿಯ ಬಗ್ಗೆ ಭಾರತೀಯ ಜನತಾ ಪಕ್ಷ ಕೈಪಿಡಿಯನ್ನು ರಚಿಸಿದ್ದು ಇದನ್ನು ಪ್ರಮುಖರಿಗೆ ನೀಡುವ “ಸಂಪರ್ಕ್ for ಸಮರ್ಥನ್” ಎಂಬ ಅಭಿಯಾನ ನಡೆಸುತ್ತಿದೆ. ಈ ಅಭಿಯಾನ ದೇಶದ ಬಹುತೇಕ ಮಂದಿಗೆ ತಲುಪಿದ್ದು ಸ್ವತಃ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಈ ಅಭಿಯಾನಕ್ಕೆ ಇಳಿದಿದ್ದಾರೆ.

ಕೂಲ್ ಕ್ಯಾಪ್ಟನ್ ಭೇಟಿಯಾದ ಚಾಣಕ್ಯ!

ಇವರಿಬ್ಬರೂ ಗೇಮ್ ಫಿನಿಷರ್ ಎಂಬ ಖ್ಯಾತಿಯನ್ನು ಪಡೆದ ನಾಯಕರು. ಓರ್ವ ಕ್ರಿಕೆಟ್ ಮಾಂತ್ರಿಕನಾಗಿ ಕ್ರಿಕೆಟ್ ಅಂಗಳದಲ್ಲಿ ಪಂದ್ಯ ಸಂಕಷ್ಟದಲ್ಲಿದ್ದಾಗ ಅದನ್ನು ಗೆಲ್ಲಿಸುವ ಸಾಮಥ್ರ್ಯ ಹೊಂದಿದ್ದರೆ ಮತ್ತೋರ್ವ ಪಕ್ಷ ಸಂಕಷ್ಟದಲ್ಲಿದ್ದಾಗ ಅದನ್ನು ಗೆಲ್ಲಿಸುವ ಶಕ್ತಿಯನ್ನು ಹೊಂದಿದ್ದಾರೆ. ಹಾ, ಭಾರತದ ಕೂಲ್ ಕ್ಯಾಪ್ಟನ್ ಎಂದೇ ಖ್ಯಾತರಾದ ಮಹೇಂದ್ರ ಸಿಂಗ್ ಧೋನಿಯನ್ನು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಭೇಟಿಯಾಗಿ ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ 4 ವರ್ಷದ ಅವಧಿಯ ಆಡಳಿತ ಕೈಪಿಡಿಯನ್ನು ನೀಡಿ ಆಡಳಿತದ ಬಗ್ಗೆ ವಿವರಿಸಿದ್ದಾರೆ.

Image result for amit shah with dhoni

ಮೋದಿ ಸರ್ಕಾರ ಕಳೆದ 4 ವರ್ಷದ ಅವಧಿಯಲ್ಲಿ ಕೈಗೊಂಡ ಕಠಿಣ ನಿರ್ಧಾರಗಳು ಹಾಗೂ ಆಡಳಿತಾತ್ಮಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕ್ರಿಕೆಟಿಗ ಧೋನಿ ಅವರಿಗೆ ಅಮಿತ್ ಶಾ ವಿವರಿಸಿದ್ದಾರೆ. ಮತ್ತೆ ಚುನಾವಣೆ ನಡೆಯಲಿದ್ದು ಅಭಿವೃದ್ಧಿದಾಯಕ ಪಕ್ಷವಾದ ತಮ್ಮನ್ನು ಬೆಂಬಲಿಸಬೇಕಾಗಿ ಮನವಿ ಮಾಡಿಕೊಂಡಿದ್ದಾರೆ.

ಈ ವೇಳೆ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಕೂಡಾ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತವನ್ನು ಮೆಚ್ಚಿಕೊಂಡಿದ್ದಾರಂತೆ. ಮೋದಿಯವರು ನಡೆಸಿದ ಆಡಳಿತ ಹಾಗೂ ಅವರು ತೆಗೆದುಕೊಂಡ ಕಠಿಣ ನಿರ್ಧಾರಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಧೋನಿ ಅಮಿತ್ ಶಾ ಮನವಿಗೆ ಉತ್ತಮ ಸ್ಪಂಧನೆ ನೀಡಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ನಾಯಕರು ಹೇಳಿದ್ದಾರೆ.

Image result for amit shah with dhoni

ಭಾರತದ ಕ್ರಿಕೆಟ್ ತಂಡದ ವೀರೇಂದ್ರ ಸೆಹ್ವಾಗ್, ವಿರಾಟ್ ಕೋಹ್ಲಿ, ರೋಹಿತ್ ಶರ್ಮಾ, ಸಚಿನ್ ತೆಂಡುಲ್ಕರ್ ಸಹಿತ ಅನೇಕ ಕ್ರಿಕೆಟ್ ದಿಗ್ಗಜರು ಪ್ರಧಾನಿ ಮೋದಿಯವರನ್ನು ಒಪ್ಪಿಕೊಂಡಿದ್ದಾರೆ. ಇದೀಗ ಕೂಲ್ ಕ್ಯಾಪ್ಟನ್ ಧೋನಿ ಕೂಡಾ ಮೋದಿ ಆಡಳಿತಕ್ಕೆ ಬಹುಪರಾಕ್ ಎಂದಿದ್ದಾರೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close