ಪ್ರಚಲಿತ

ರಾಮಮಂದಿರ ನಿರ್ಮಾಣಕ್ಕೆ ಅಡ್ಡಿಪಡಿಸುವ ಕಾಂಗ್ರೆಸ್ ಅರ್ಜಿ ತಿರಸ್ಕರಿಸಿದ ಕೋರ್ಟ್! ದೇಶದ ಜನರ ಮುಂದೆ ಮತ್ತೆ ಬೆತ್ತಲಾದ ಕಾಂಗ್ರೆಸ್!

ಕಾಂಗ್ರೆಸ್ ಹಿಂದೂ ವಿರೋಧಿ ಪಕ್ಷ ಎಂದು ಇದೀಗ ಹೊಸದಾಗಿ ಹೇಳಬೇಕಾದ ಅವಶ್ಯಕತೆ ಇಲ್ಲ. ಆದರೆ ಪದೇ ಪದೇ ತಾನು ಹಿಂದೂ ವಿರೋಧಿ ಎಂಬುದು ದೇಶದ ಜನರ ಮುಂದೆ ಪ್ರದರ್ಶನವಾಗುತ್ತಲೇ ಇದೆ. ತನ್ನ ಅಧಿಕಾರದ ಅವಧಿಯಲ್ಲಿ ತುಷ್ಟೀಕರಣದ ಆಡಳಿತ ನಡೆಸಿದ್ದ ಕಾಂಗ್ರೆಸ್ ಯಾವ ರೀತಿ ಹಿಂದೂಗಳನ್ನು ಮತ್ತು ಹಿಂದೂ ಸಂಸ್ಕೃತಿಯನ್ನು ನಾಶ ಮಾಡಲು ಪ್ರಯತ್ನಿಸಿತ್ತು ಎಂಬುದು ಈಗಾಗಲೇ ತಿಳಿದಿರುವ ಸತ್ಯಾಂಶ. ಇದೀಗ ರಾಮಮಂದಿರ ವಿಚಾರವಾಗಿಯೂ ಕಾಂಗ್ರೆಸ್ ಯಾವ ರೀತಿ ಅಡ್ಡಗಾಲು ಹಾಕಿತ್ತು ಮತ್ತು ಈಗಲೂ ರಾಮಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಇದೆ ಎಂಬುದು ಸ್ವತಃ ಸುಪ್ರೀಂ ಕೋರ್ಟ್ ಎದುರೇ ಬಯಲಾಗಿದೆ. ಒಂದೆಡೆ ರಾಮಮಂದಿರ ನಿರ್ಮಾಣವಾಗಬೇಕು ಎಂದು ಹಿಂದೂಗಳು ಆಗ್ರಹಿಸುತ್ತಲೇ ಇದ್ದಾರೆ , ಮೋದಿ ಸರಕಾರ ರಾಮಮಂದಿರ ನಿರ್ಮಾಣಕ್ಕೆ ಬೇಕಾದ ನಿರ್ಧಾರ ತೆಗೆದುಕೊಳ್ಳಲು ತಯಾರಿ ನಡೆಸುತ್ತಿದೆ, ಅಯೋಧ್ಯೆಯ ರಾಮಮಂದಿರದ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಇರುವಂತೆಯೇ ಈ ವಿಚಾರಣೆ ಮತ್ತಷ್ಟು ಸಮಯ ಹಿಂದಕ್ಕೆ ಹಾಕುವಂತೆ ಅರ್ಜಿ ಸಲ್ಲಿಸಿದ್ದು, ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.!

ಅಯೋಧ್ಯೆ ತೀರ್ಪು ತಡೆಯಲು ಕಾಂಗ್ರೆಸ್ ಯತ್ನ!

ತನ್ನ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೂ ಇಳಿಯುತ್ತದೆ ಎಂಬುದನ್ನು ಹೆಚ್ಚು ವಿವರವಾಗಿ ಹೇಳಬೇಕಾಗಿಲ್ಲ. ಯಾಕೆಂದರೆ ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯ. ಆದರೆ ಹಿಂದೂಗಳು ಆದೆಷ್ಟೋ ವರ್ಷಗಳಿಂದ ಹೋರಾಡುತ್ತಾ ಬಂದಿರುವ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ವಿಚಾರವಾಗಿ ಕಾಂಗ್ರೆಸ್ ಸಂಪೂರ್ಣ ಹಿಂದೂಗಳ ವಿರುದ್ಧ ನಿಂತಿದೆ. ಮೋದಿ ಸರಕಾರ ರಾಮ ಮಂದಿರ ನಿರ್ಮಾಣಕ್ಕೆ ಮುಂದಾದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಖಾಡೆ ಮಲಗುವುದು ಗ್ಯಾರಂಟಿ. ಆದ್ದರಿಂದಲೇ ರಾಮಮಂದಿರ ನಿರ್ಮಾಣವನ್ನು ಆದಷ್ಟು ಸಮಯ ತಡೆಯುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ಅದೇ ಕಾರಣಕ್ಕಾಗಿ ಕಾಂಗ್ರೆಸ್ ಸುಪ್ರೀಂ ಕೋರ್ಟ್‌ಗೆ ಒಂದು ಅರ್ಜಿ ಸಲ್ಲಿಸಿದೆ, ಆ ಅರ್ಜಿಯಲ್ಲಿ ಹೇಳಿದ ಪ್ರಕಾರ ಮುಂದಿನ ಲೋಕಸಭಾ ಚುನಾವಣೆಯ ನಂತರ ಅಯೋಧ್ಯೆಯ ವಿಚಾರಣೆ ಮುಂದುವರಿಸಬೇಕು ಎಂದು ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಮನವಿ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ವಿಚಾರಣೆಯ ವಿಷಯದಲ್ಲಿ ಯಾರೂ ಕೂಡ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಹೇಳಿಕೊಂಡಿದೆ. ಅದೇ ರೀತಿ ಅಯೋಧ್ಯೆಯ ವಿಚಾರ ಕೇವಲ ಒಂದು ದಿನದಲ್ಲಿ ಮುಕ್ತಾಯವಾಗುವ ವಿಚಾರವಲ್ಲ ಎಂದು ಹೇಳಿಕೊಂಡಿದೆ.!

ಸುಪ್ರೀಂ ಕೋರ್ಟ್ ಎದುರೇ ಕಾಂಗ್ರೆಸ್‌ನ ಕರಾಳ ಮುಖ ಅನಾವರಣ!

ರಾಜಕೀಯ ಲಾಭಕ್ಕಾಗಿ ಹಿಂದೂಗಳನ್ನು ಬಳಸಿಕೊಂಡಿರುವ ಕಾಂಗ್ರೆಸ್ ಇದೀಗ ಲೋಕಸಭಾ ಚುನಾವಣೆಯಲ್ಲೂ ಹಿಂದೂ ವಿರೋಧಿ ಎಂಬುದನ್ನು ಸಾಬೀತು ಪಡಿಸಲು ಹೊರಟಿದೆ. ಯಾಕೆಂದರೆ ಬಿಜೆಪಿ ಸರಕಾರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ತುದಿಕಾಲಲ್ಲಿ ನಿಂತಿದೆಯಾದರೂ, ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ಇರುವುದರಿಂದ ಯಾರೂ ಕೂಡ ಹಸ್ತಕ್ಷೇಪ ಮಾಡುವಂತಿಲ್ಲ. ಆದರೆ ಬಿಜೆಪಿಗೆ ರಾಮಮಂದಿರ ಅನಿವಾರ್ಯವಾಗಿದ್ದು, ಕಾಂಗ್ರೆಸ್ ವಿರೋಧಿಸುತ್ತಿದೆ. ಒಂದು ವೇಳೆ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾದರೆ ಮುಂದಿನ ಚುನಾವಣೆಯಲ್ಲೂ ಮೋದಿ ಮತ್ತೊಮ್ಮೆ ದಿಗ್ವಿಜಯ ಭಾರಿಸುತ್ತಾರೆ ಎಂಬುದು ಕಾಂಗ್ರೆಸ್‌ಗೂ ತಿಳಿದಿದೆ. ಆದ್ದರಿಂದಲೇ ಚುನಾವಣೆಯ ಮೊದಲು ಮಂದಿರ ನಿರ್ಮಾಣದ ಬಗ್ಗೆ ಬಗ್ಗೆ ಯಾವ ವಿಚಾರಣೆ ಕೂಡ ನಡೆಯದಂತೆ ಕಾಂಗ್ರೆಸ್ ಅಡ್ಡಗಾಲು ಇಟ್ಟಿದೆ. ಆದರೆ ಸುಪ್ರೀಂ ಕೋರ್ಟ್ ಕಾಂಗ್ರೆಸ್‌ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ್ದು, ಕಾಂಗ್ರೆಸ್‌ಗೆ ಭಾರೀ ಮುಖಭಂಗ ಉಂಟಾಗಿದೆ.!

–ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close