ಪ್ರಚಲಿತ

ಬ್ರೇಕಿಂಗ್! ಆಂದ್ರ ಮುಖ್ಯಮಂತ್ರಿಯನ್ನೇ ಬಂಧಿಸುವಂತೆ ಆದೇಶಿಸಿದ ಕೋರ್ಟ್! ಅರೆಸ್ಟ್ ವಾರೆಂಟ್‍ಗೆ ದಂಗಾದ ಟಿಡಿಪಿ ನಾಯಕ..!

ತನ್ನಲ್ಲಿ ಹಣಬಲವಿದೆ, ದೇಶದ ಮುಖ್ಯಮಂತ್ರಿಗಳಲ್ಲಿ ನಾನೇ ಶ್ರೀಮಂತನೆಂದು ಎಂದೆನಿಸಿಕೊಂಡಿದ್ದ ಟಿಡಿಪಿ ನಾಯಕ ಹಾಗೂ ಆಂದ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡೂಗೆ ಬಂಧನದ ಭೀತಿ ಎದುರಾಗಿದೆ. ಈ ಬಗ್ಗೆ ಚಂದ್ರಬಾಬು ನಾಯ್ಡು ಹಾಗೂ ಇತರೆ 15 ಮಂದಿಯ ವಿರುದ್ಧ ಮಹಾರಾಷ್ಟ್ರದ ಸ್ಥಳೀಯ ನ್ಯಾಯಾಲಯವೊಂದು ಅರೆಸ್ಟ್ ವಾರೆಂಟ್ ಕಳಿಸಿದ್ದು ಮುಖ್ಯಮಂತ್ರಿಗೇ ನಡುಕ ಆರಂಭವಾಗಿದೆ.

ಗೋದಾವರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಬಬ್ಲಿ ಪ್ರಾಜೆಕ್ಟ್ ವಿರುದ್ಧದ ಆಂದೋಲನಕ್ಕೆ ಸಂಬಂಧಿಸಿದ 2010ರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂದ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಅರೆಸ್ಟ್ ವಾರೆಂಟ್ ಕಳಿಸಿ ಬಂಧಿಸುವಂತೆ ಆದೇಶಿಸಿದೆ. ಚಂದ್ರಬಾಬು ನಾಯ್ಡು ಮತ್ತು ಇತರೆ 15 ಮಂದಿಯನ್ನು ಬಂಧಿಸಿ ಸೆ.21ರೊಳಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕೆಂದು ನಾಂದೇಡ್ ಜಿಲ್ಲೆಯ ಧರ್ಮಬಾದ್‍ನ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಎನ್.ಆರ್.ಗಜ್ಜಿಯೆ ಅವರು ಆದೇಶ ಹೊರಡಿಸಿದ್ದಾರೆ.

Image result for chandrababu naidu

ಈ ಹಿಂದೆಯೂ ಅಂದರೆ 2010ರಲ್ಲಿಯೂ ಚಂದ್ರಬಾಬು ನಾಯ್ಡುರನ್ನು ಬಂಧಿಸಲಾಗಿತ್ತು. ನಂತರ ಜಾಮೀನು ಪಡೆಯದೆಯೇ ಅನಧಿಕೃತವಾಗಿ ಜೈಲಿನಿಂದ ಹೊರ ಬಂದಿದ್ದರು. ಗೋದಾವರಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಬಾಬ್ಲಿ ಅಣೆಕಟ್ಟಿನಿಂದ ನದಿ ಪಾತ್ರದ ಜನತೆಗೆ ತೊಂದರೆಯಾಗಲಿದೆ ಎಂದು ಬಾಬ್ಲಿ ಯೋಜನೆಯನ್ನು ವಿರೋಧಿಸಿ ನಾಯ್ಡು ಹಾಗೂ ಟಿಡಿಪಿ ನಾಯಕರು ಸೇರಿ 2010ರಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ನಾಯ್ಡುರನ್ನು ಪುಣೆ ಜೈಲಿನಲ್ಲಿಡಲಾಗಿತ್ತು.

Image result for godavari river

ಇದೀಗ ಮತ್ತೆ ಈ ಕೇಸ್ ವಿಚಾರಕ್ಕೆ ಬಂದಿದ್ದು ಮತ್ತೆ ಬಂಧಿಸುವಂತೆ ಅರೆಸ್ಟ್ ವಾರೆಂಟ್ ಕಳಿಸಲಾಗಿದೆ. 2010ರಲ್ಲಿ ಚಂದ್ರಬಾಬು ನಾಯ್ಡು ರಾಜಕೀಯ ಪಕ್ಷವೊಂದರ ನಾಯಕರಾಗಿದ್ದರು. ಆದರೆ ಈಗ ಆಂದ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ. ಹೀಗಿರುವಾಗ ಮುಖ್ಯಮಂತ್ರಿಗಳನ್ನು ಬಂಧಿಸುವುದು ಸಾಧ್ಯವೇ ಎಂಬ ಪ್ರಶ್ನೆಯೂ ಎದುರಾಗಿದೆ. ಆದರೆ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂಬ ಸಂದೇಶವನ್ನು ನ್ಯಾಯಾಲಯ ನೀಡಿದೆ.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close