ಪ್ರಚಲಿತ

ಖಾತೆ ತೆರೆದು ಪರದಾಡುತ್ತಿರುವ ಬಿಜೆಪಿ ಈ ಬಾರಿ ಕೇರಳದಲ್ಲಿ ಸರಕಾರ ರಚನೆ ಮಾಡುವುದು ಖಂಡಿತ! ಶಬರಿಮಲೆ ವಿಚಾರದಲ್ಲಿ ಕಮ್ಯುನಿಸ್ಟ್ ಸರಕಾರಕ್ಕೆ ಹಿನ್ನಡೆ ಕಟ್ಟಿಟ್ಟ ಬುತ್ತಿ???

ಸತ್ಯ ಇಂದು ಸೋಲಬಹುದು ಅಥವಾ ನಾಳೆ ಸೋಲನುಭವಿಸಬಹುದು ಆದರೆ ಸತ್ಯ ಎಂಬುದು ಬಚ್ಚಿಟ್ಟ ಬೆಂಕಿ ಇದ್ದಂತೆ ಅದನ್ನು ಹೆಚ್ಚು ಕಾಲ ಮುಚ್ಚಿಡಲು ಸಾಧ್ಯವಿಲ್ಲ. ಧರ್ಮ- ಅಧರ್ಮಗಳ ನಡುವಿನ ಯುದ್ಧ ಇಂದು ನೆನ್ನೆಯ ಕಥೆ ಅಲ್ಲ, ಇತಿಹಾಸದಲ್ಲಿ ಅಥವಾ ಪುರಾಣದಲ್ಲಿ ನಾವು ಇದನ್ನು ಕೇಳಿದ್ದೇವೆ. ಆದರೆ ಅಧರ್ಮದ ಎದುರು ಧರ್ಮಕ್ಕೆ ಎಂದೂ ಸೋಲಾದ ಇತಿಹಾಸ ಇಲ್ಲ. ಸದ್ಯ ನಮ್ಮ ದೇಶದಲ್ಲಿ ನಡೆಯುತ್ತಿರುವುದು ಇದೇ. ನೂರಾರು ವರ್ಷಗಳ ಇತಿಹಾಸವಿರುವ ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿಧಾನದ ವಿಚಾರವಾಗಿ ಹಿಂದೂ ವಿರೋಧಿಗಳೆಲ್ಲಾ ಒಂದಾಗಿ ತಮ್ಮ ತೀಟೆ ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ನಂಬಿದ ಭಕ್ತರ ಕೈಬಿಡದ ಅಯ್ಯಪ್ಪ ತನ್ನ ಸುತ್ತಮುತ್ತ ಈವರೆಗೆ ಯಾವೊಬ್ಬ ವಿರೋಧಿಯನ್ನೂ ಸುಳಿಯಲು ಬಿಡಲಿಲ್ಲ.

ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರು ಕೂಡ ಪ್ರವೇಶಿಸಬಹುದು ಎಂಬ ಆದೇಶವನ್ನು ಸುಪ್ರೀಂ ಕೋರ್ಟ್ ನೀಡಿತ್ತಾದರೂ ದೇಶ ವಿದೇಶಗಳಲ್ಲಿ ಅಯ್ಯಪ್ಪ ಭಕ್ತರ ಹೋರಾಟ ಮುಗಿಲು ಮುಟ್ಟಿತ್ತು. ಶಬರಿಮಲೆ ವಿಚಾರ ಎಷ್ಟರ ಮಟ್ಟಿಗೆ ಹಿಂದೂಗಳನ್ನು ಬಡಿದೆಬ್ಬಿಸಿದೆ ಎಂದರೆ ಕಮ್ಯುನಿಸ್ಟ್ ಕೋಟೆ ಕೇರಳದಲ್ಲಿ ಚುನಾವಣೆ ನಡೆದರೆ ಭಾರತೀಯ ಜನತಾ ಪಕ್ಷ ಅತ್ಯಂತ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಳ್ಳುವುದರಲ್ಲಿ ಸಂಶಯವಿಲ್ಲ, ಅಷ್ಟೇ ಅಲ್ಲದೆ ಕೇರಳವನ್ನು ತನ್ನ ಭದ್ರಕೋಟೆಯನ್ನಾಗಿ ಮಾಡಿಕೊಂಡಿರುವ ಕಮ್ಯುನಿಸ್ಟ್ ಕೆಂಪು ಉಗ್ರರು ಕೇಸರಿ ಸುನಾಮಿಗೆ ಕೊಚ್ಚಿ ಹೋಗುವುದು ಗ್ಯಾರಂಟಿ.!!

ಕೇರಳದಲ್ಲೂ ಅರಳಲಿದೆ ಕಮಲ – ಸಂಘಪರಿವಾರದ ಹೂಂಕಾರಕ್ಕೆ ನೆಲಸಮವಾಗಲಿದೆ ಕಮ್ಯುನಿಸ್ಟ್ ಕೋಟೆ!

ಕೇರಳದಲ್ಲಿ ಹಿಂದೂಗಳ ಸ್ಥಿತಿ ಎಷ್ಟರ ಮಟ್ಟಿಗೆ ಶೋಚನೀಯವಾಗಿದೆ ಎಂದರೆ ಕೇರಳ ಒಂದು ರೀತಿಯಲ್ಲಿ ಹಿಂದೂಗಳಿಗೆ ನರಕ ಇದ್ದಂತಾಗಿದೆ. ದೇವರ ನಾಡು ಕೇರಳದಲ್ಲಿ ರಾಕ್ಷಸರೇ ಹೆಚ್ಚಾಗಿದ್ದಾರೆ. ಅದೆಷ್ಟೋ ಹಿಂದೂ ಕಾರ್ಯಕರ್ತರು ತಮ್ಮ ಪ್ರಾಣ ಕಳೆದುಕೊಂಡರು, ಅದೆಷ್ಟೋ ಭಾಜಪ ಕಾರ್ಯಕರ್ತರು ಕಮ್ಯುನಿಸ್ಟರ ಕತ್ತಿ ಏಟಿಗೆ ಬಲಿಯಾದರು. ಆದರೆ ಅವೆಲ್ಲದಕ್ಕೂ ಇದೀಗ ಪೂರ್ಣ ವಿರಾಮ ಬೀಳುವ ಸಮಯ ಬಂದಿದೆ. ಕೇರಳದಲ್ಲಿ ಸಂಘಪರಿವಾರದ ಪ್ರಾಬಲ್ಯ ಹೆಚ್ಚಾಗುತ್ತಿದೆ ಜೊತೆಗೆ ಕಮ್ಯುನಿಸ್ಟರ ಕರಾಳ ಮುಖ ರಾಜ್ಯದ ಜನರ ಮುಂದೆ ಬಯಲಾಗುತ್ತಿದೆ. ಇವೆಲ್ಲವೂ ಭಾರತೀಯ ಜನತಾ ಪಕ್ಷಕ್ಕೆ ಒಂದು ರೀತಿಯ ಪ್ಲಸ್ ಪಾಯಿಂಟ್ ಆಗಿರುವುದರಿಂದ ಯಾವ ಕ್ಷಣದಲ್ಲಿ ಚುನಾವಣೆ ನಡೆದರೂ ಕೇಸರಿ ಪಕ್ಷ ವಿಜಯೋತ್ಸವ ಆಚರಿಸುವುದು ಖಂಡಿತ.

ಆದರೆ ಕೇರಳದಲ್ಲಿ ಕಮ್ಯುನಿಸ್ಟರನ್ನು‌ ಸೋಲಿಸುವುದು ಅಷ್ಟು ಸುಲಭವಲ್ಲ, ಕೇರಳದಲ್ಲಿ ಬಿಜೆಪಿ ಖಾತೆ ತೆರೆದಿದೆ ಆದರೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಪರದಾಡುವ ಸ್ಥಿತಿ ಇದೆ. ಆದರೆ ಶಬರಿಮಲೆ ವಿಚಾರವಾಗಿ ಇಡೀ ಕೇರಳ ಹಿಂದೂ ಸಮಾಜವೇ ಒಂದಾಗಿದ್ದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ತಮ್ಮ ಕುಲ ದೇವರು ಎಂಬಂತೆ ಪೂಜಿಸಿಕೊಂಡು ಬಂದಿರುವ ಶಬರಿಮಲೆ ಅಯ್ಯಪ್ಪ ದೇವಾಲಯದ ವಿರುದ್ಧ ಇಂದು ಹಿಂದೂ ವಿರೋಧಿಗಳು ಷಡ್ಯಂತ್ರ ನಡೆಸುತ್ತಿದ್ದಾರೆ, ಶಬರಿಮಲೆಯ ಆಚಾರ ವಿಚಾರಗಳನ್ನು ನಾಶ ಮಾಡಬೇಕೆಂಬ ಉದ್ದೇಶದಿಂದ ಕುತಂತ್ರ ನಡೆಸುವ ಎಲ್ಲಾ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲು ಹಿಂದೂಗಳು ಒಂದಾಗಿದ್ದಾರೆ. ಸರಕಾರ ಕೂಡ ಹಿಂದೂಗಳ ವಿರುದ್ಧ ಪಿತೂರಿ ನಡೆಸುತ್ತಿರುವುದು ಹಿಂದೂಗಳನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ.!

ಹಿಂದೂ ವಿರೋಧಿಗಳನ್ನು ಮಟ್ಟ ಹಾಕಲು ಬಿಜೆಪಿ ನಾಯಕರಿಗಿದೆ ಉತ್ತಮ ಅವಕಾಶ!

ಶಬರಿಮಲೆ ಎಂದರೆ ಅದು ಬಹಳ ಇತಿಹಾಸ ಇರುವ ದೇವಾಲಯ, ಅಲ್ಲಿನ ನೀತಿ ನಿಯಮಗಳನ್ನು ಪಾಲಿಸಿಕೊಂಡು ವೃತಾಚರಣೆ ಮಾಡಿಕೊಂಡು ಮಾಲೆ ಧರಿಸಿ ಬರುವ ಅಯ್ಯಪ್ಪ ಭಕ್ತರಿಗೆ ಮಾತ್ರ ಗೊತ್ತು ಸ್ವಾಮಿಯ ಲೀಲೆ. ಆದರೆ ಸ್ತ್ರೀ ಸಮಾನತೆಯ ಹೆಸರಿನಲ್ಲಿ ದೇವಾಲಯದ ಪಾವಿತ್ರ್ಯ ಹಾಳು ಮಾಡಲು ಪ್ರಯತ್ನಿಸುವ ಹಿಂದೂ ವಿರೋಧಿಗಳನ್ನು ಈಗಾಗಲೇ ಕೇರಳ ಹಿಂದೂಗಳು ಎದುರಿಸಿ‌ ವಿರೋಧಿಗಳ ಎಲ್ಲಾ ಪ್ರಯತ್ನವನ್ನು ವಿಫಲ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇದು ಇಲ್ಲಿಗೆ ಮುಗಿದ ವಿಚಾರವಲ್ಲ ಏಕೆಂದರೆ ಶಬರಿಮಲೆಗೆ ಬರುವ ಮಹಿಳೆಯರಿಗೆ ಕೇರಳ ಸರಕಾರ ಸಂಪೂರ್ಣ ಭದ್ರತೆ ಒದಗಿಸುತ್ತದೆ ಎಂದು ಪಿಣರಾಯಿ ವಿಜಯನ್ ಹೇಳಿಕೊಂಡಿದ್ದಾರೆ.

ಆದ್ದರಿಂದ ಯಾವ ಸಂದರ್ಭದಲ್ಲೂ ಷಡ್ಯಂತ್ರ ನಡೆಸಿ ಮಹಿಳೆಯರನ್ನು ದೇವಾಲಯದ ಒಳಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ. ಆದರೆ ಹಿಂದೂ ವಿರೋಧಿಗಳನ್ನು ಮಟ್ಟ ಹಾಕಲು ಭಾರತೀಯ ಜನತಾ ಪಕ್ಷದ ನಾಯಕರಿಗೆ ಇದು ಉತ್ತಮ ಅವಕಾಶ ಎಂದು ಹೇಳಬಹುದು. ‌ಕೇರಳದಲ್ಲಿ ಈಗಾಗಲೇ ಬಿಜೆಪಿ ನಡೆಸಿದ ಶಬರಿಮಲೆ ಸಂರಕ್ಷಣಾ ಸಮಾವೇಶದಲ್ಲಿ ಲಕ್ಷ ಲಕ್ಷ ಕಾರ್ಯಕರ್ತರು ಭಾಗವಹಿಸಿ ಕೇರಳದಲ್ಲಿ ರಣಕಹಳೆ ಮೊಳಗಿಸಿದ್ದರು.‌ ಇದನ್ನು ಕಂಡು ಕೇರಳ ಕಮ್ಯುನಿಸ್ಟ್ ಸರಕಾರ ಮಾತ್ರವಲ್ಲದೆ ಎಲ್ಲಾ ವಿಪಕ್ಷಗಳು ದಂಗಾಗಿದ್ದವು. ಆದ್ದರಿಂದ ಇದು ಬಿಜೆಪಿಯ ಪಾಲಿಗೆ ಮತ್ತಷ್ಟು ಬಲ ತುಂಬಿದ್ದು, ಈ ಬಾರಿ ಕೇರಳದಲ್ಲಿ ಕಮಲ ಅರಳಿಸುವುದು ಕಷ್ಟದ ಕೆಲಸವಲ್ಲ. ಶಬರಿಮಲೆ ಅಯ್ಯಪ್ಪನೇ ಎಲ್ಲಾ ಹಿಂದೂಗಳನ್ನು ಒಗ್ಗೂಡಿಸಿದ್ದಾನೆ ಎಂದ ಮೇಲೆ ಕಮ್ಯುನಿಸ್ಟ್ ಸರಕಾರದ ಅಂತ್ಯ ಖಚಿತ. ಆದ್ದರಿಂದ ಕೇರಳದಲ್ಲಿ ನಡೆಯುವ ಮುಂದಿನ ಚುನಾವಣೆಯನ್ನು ಚುನಾವಣೆ ಅನ್ನುವುದಕ್ಕಿಂತ ಧರ್ಮಯುದ್ಧ ಎಂದು ಕರೆಯುವುದು ಉತ್ತಮ.!!

“ಧರ್ಮ ಸಂಸ್ಥಾಪನಾರ್ಥಾಯಾ ಸಂಭವಾಮಿ ಯುಗೇ ಯುಗೇ”

–ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close