ಪ್ರಚಲಿತ

ಬ್ರೇಕಿಂಗ್! ಹಿಂದೂ ಮುಖಂಡರ ಹೆಸರಿನಲ್ಲಿದ್ದ ರಸ್ತೆಗೆ ಮುಸ್ಲಿಮರ ಹೆಸರು ಮರುನಾಮಕರಣ ಮಾಡಿದ ಕಾರ್ಪೊರೇಟರ್! ಎಲ್ಲಾ ರಸ್ತೆಗಳು ಮಸೀದಿ ರಸ್ತೆ ಹೇಗಾಗುತ್ತೆ ಸ್ವಾಮಿ?

ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಲಹಾಬಾದ್ ಎಂಬ ಹೆಸರನ್ನು ಪ್ರಯಾಗ್‌ರಾಜ್ ಎಂದು ಮರುನಾಮಕರಣ ಮಾಡಿದ್ದರು. ಇದು ದೇಶಾದ್ಯಂತ ಯಾವ ರೀತಿ ಚರ್ಚೆಯಾಗಿತ್ತು ಎಂದರೆ ಹಿಂದೂ ವಿರೋಧಿಗಳೆಲ್ಲಾ ಒಂದಾಗಿ ಬೊಬ್ಬೆ ಇಟ್ಟರು, ಯಾಕೆಂದರೆ ಮುಸ್ಲಿಂ ದೊರೆಯ ಹೆಸರನ್ನು ಬದಲಾಯಿಸಿ ಪ್ರಯಾಗ್‌ರಾಜ್ ಎಂದು ಇಟ್ಟಿದ್ದರು. ಇದಕ್ಕೆ ಕಾರಣ ಕೂಡ ಬಲವಾಗಿಯೇ ಇದ್ದಿದ್ದರಿಂದ ಯಾವ ವಿರೋಧಿಗಳ ಆಟವೂ ನಡಯಲಿಲ್ಲ. ಆದತೆ ಇದೀಗ ಯೋಗಿ ರೀತಿಯಲ್ಲೇ ನಮ್ಮ ರಾಜ್ಯದಲ್ಲೊಬ್ಬ ಕಾರ್ಪೊರೇಟರ್ ತನಗೆ ಇಷ್ಟ ಬಂದ ರೀತಿಯಲ್ಲಿ ರಸ್ತೆ ಮಾತ್ರವಲ್ಲದೆ ಇಡೀ ಏರಿಯಾಗಳ ಹೆಸರನ್ನೇ ಬೇಕಾಬಿಟ್ಟಿ ಬದಲಾಯಿಸಿ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಿಸಿದ್ದಾನೆ.

ತನ್ನ ಏರಿಯಾಗಳಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಾಗದ ಈತ ಈಗ ರಸ್ತೆಗಳ ಹೆಸರು ಬದಲಾಯಿಸಿ ಭಾರೀ ವಿವಾದ ಹುಟ್ಟು ಹಾಕುದ್ದಾರೆ. ಯಾಕೆಂದರೆ ಮೈತ್ರಿ ಸರಕಾರದಲ್ಲಿ ಪದೇ ಪದೇ ಹಿಂದೂ ವಿರೋಧಿ ನೀತಿಯೇ ಎದ್ದು ಕಾಣುತ್ತಿದ್ದು, ಪ್ರತಿಯೊಬ್ಬರೂ ಕೂಡ ಹಿಂದೂಗಳ ವಿರುದ್ಧ ಒಂದಲ್ಲ ಒಂದು ಪಿತೂರಿ ನಡೆಸುತ್ತಲೇ ಇದ್ದಾರೆ. ಆದರೆ ಇದೀಗ ಬೆಂಗಳೂರಿನ ಬಾಪೂಜಿ ನಗರದ ಕಾರ್ಪೋರೆಟರ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದ್ದು ರಸ್ತೆಗಳ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾಯಿಸಲು ಬಿಡುವುದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.!

ಮುಸ್ಲಿಂ ಧರ್ಮದ ವ್ಯಕ್ತಿಗಳ ಹೆಸರು ಮರುನಾಮಕರಣ ಮಾಡಿದ ಮುಸ್ಲಿಂ ಕಾರ್ಪೊರೇಟರ್!

ಅಧಿಕಾರ ಇದ್ದರೆ ಏನೂ ಮಾಡಬಹುದು ಎಂಬ ಅಹಂ ತಲೆಯಲ್ಲಿ ಇಟ್ಟುಕೊಂಡ ಕಾರ್ಪೊರೇಟರ್ ಅಜ್ಮಲ್ ಬೇಗ್ ಎಂಬಾತ ಇದೀಗ ಭಾರೀ ವಿವಾದ ಸೃಷ್ಟಿಸಿದ್ದಾರೆ. ತನ್ನ ಏರಿಯಾಗಳಲ್ಲಿ ಇದ್ದ ರಸ್ತೆಗಳ ಹೆಸರು ಹಿಂದೂ ಮುಖಂಡರ ಹೆಸರಿನಲ್ಲಿ ಅದೆಷ್ಟೋ ವರ್ಷಗಳಿಂದ ಇದ್ದರೂ ಇದೀಗ ಏಕಾಏಕಿ ಯಾರಿಗೂ ಪರಿಚಯವಿಲ್ಲದ ಮುಸ್ಲಿಂ ಪ್ರಮುಖರು ಎಂಬ ಕಾರಣಕ್ಕಾಗಿ ರಸ್ತೆಗಳ ಹೆಸರನ್ನು ಬದಲಾಯಿಸಿದ್ದಾರೆ. ಜನರ ದುಡ್ಡಲ್ಲಿ ನಿರ್ಮಿಸಿರುವ ರಸ್ತೆಗೆ ತನಗೆ ಇಷ್ಟ ಬಂದಂತೆ ಹೆಸರು ಇಡಲು ಇದೇನು ಇವರು ಸ್ವಂತ ಹಣದಿಂದ ನಿರ್ಮಸಿದ ರಸ್ತೆಯೇ ಎಂದು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಅಜ್ಮಲ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಷ್ಟಕ್ಕೂ ಹೊರ ಹೆಸರು ಇಡುತ್ತಿರುವ ಮುಸ್ಲಿಂ ನಾಯಕರು ಯಾರೆಂದೇ ಗೊತ್ತಿಲ್ಲ, ಮಾತ್ರವಲ್ಲದೆ ಧರ್ಮ ಗುರುಗಳೂ ಅಲ್ಲ. ಆದರೂ ಬಲವಂತವಾಗಿ ಹಿಂದೂಗಳ ಹೆಸರನ್ನು ಬದಲಾಯಿಸಬೇಕು ಎಂಬ ಉದ್ದೇಶದಿಂದ ಈ ರೀತಿ ಪ್ರಯತ್ನಿಸಿದ್ದು, ಮಾಧ್ಯಮಗಳಲ್ಲಿ ಈ ಬಗ್ಗೆ ಪ್ರಸಾರವಾಗುತ್ತಿದ್ದಂತೆ ಕಾರ್ಪೊರೇಟರ್ ಅಜ್ಮಲ್ ಬೇಗ್ ಫೋನ್ ಆಫ್ ಮಾಡಿ ನಾಪತ್ತೆಯಾಗಿದ್ದಾರೆ.

ಬಾಪೂಜಿ ನಗರದ ಏರಿಯಾಗಳಿಗೆ ಅಪರಿಚಿತ ಮುಸ್ಲಿಂ ವ್ಯಕ್ತಿಗಳ ಹೆಸರು ಇಡಲು ಮುಂದಾಗಿರುವ ಅಜ್ಮಲ್ ಬೇಗ್, ಈಗಿರುವ ಸಂತೋಷ್ ಟೆಂಟ್‌ನಿಂದ ಶೋಭಾ ಟೆಂಟ್ ವರೆಗಿನ ರಸ್ತೆಗೆ ಜಾಮಿಯಾ ಮಸೀದಿ ರಸ್ತೆ ಎಂದು, ಶಾಮಣ್ಣ ಗಾರ್ಡನ್ ೬ನೇ ಕ್ರಾಸ್ ರಸ್ತೆಗೆ ಖುದಾದತ್ ಮಸೀದಿ ರಸ್ತೆ, ಬಾಪೂಜಿನಗರದ ೧ನೇ ಮುಖ್ಯ ರಸ್ತೆಗೆ ಹೀರಾ ಮಸೀದಿ ರಸ್ತೆ, ಸುನ್ನಿ ಚೌಕದಿಂದ ಮೈಸೂರು ರಸ್ತೆವರೆಗಿನ ಪೈಪ್ ಲೈನ್ ರಸ್ತೆಗೆ ಸುಬಾನಿಯಾ ಮಸೀದಿ ರಸ್ತೆ ಶಾಮಣ್ಣ ಗಾರ್ಡನ್ ಅಂಡರ್ ಪಾಸ್ ಪೈಪ್ ಲೈನ್ ರಸ್ತೆಗೆ ಗಫೂರ್ ರಸ್ತೆ ಎಂದು ಮರುನಾಮಕರಣ ಮಾಡದ ಅಜ್ಮಲ್ ಬೇಗ್, ತನ್ನ ಏರಿಯಾಗಳಲ್ಲಿ ಇರುವಂತಹ ಎಲ್ಲಾ ಹಿಂದೂ ಹೆಸರಿನ ರಸ್ತೆಗೆ ಮುಸ್ಲಿಂ ವ್ಯಕ್ತಿಗಳ ಹೆಸರು ಇಡಲು ಹೊರಟಿದ್ದಾರೆ. ಇಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ನಡುವೆ ಕೋಮು ಗಲಭೆ ಸೃಷ್ಟಿಸುವ ಎಲ್ಲಾ ಪ್ರಯತ್ನಗಳು ಎದ್ದು ಕಾಣುತ್ತಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಸರಿಯಾದ ತನಿಖೆ ನಡೆಸಬೇಕಿದೆ.!

ಮಾಜಿ ಕಾರ್ಪೊರೇಟರ್ ಈ ಬಗ್ಗೆ ಈಗಾಗಲೇ ಎಚ್ಚರಿಕೆಯ ಪತ್ರ ನೀಡಿದ್ದು, ಈ ರೀತಿ ತನಗೆ ಇಷ್ಟ ಬಂದಂತೆ ಹೆಸರು ಬದಲಾಯಿಸುವುದು ಬಹಳ ಅಪಾಯಕಾರಿ ಎಂದು ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಈ ರೀತಿ ಹೆಸರು ಬದಲಾಯಿಸಲು ಅವಕಾಶ ನೀಡಬಾರದು, ಯಾಕೆಂದರೆ ಎರಡು ಧರ್ಮಗಳ ನಡುವೆ ಗಲಭೆ ಸೃಷ್ಟಿಸುವುದೇ ಇದರ ಹಿಂದಿರುವ ಉದ್ದೇಶ ಎಂದಿದ್ದಾರೆ ವಿ‌.ಕೃಷ್ಣ. ಈ ಬಗ್ಗೆ ಸ್ವತಃ ಕುಮಾರಸ್ವಾಮಿ ಸರಕಾರವೇ ತನಿಖೆ ನಡೆಸದೇ ಇದ್ದರೆ ರಾಜ್ಯ ಸರ್ಕಾರದ ವಿರುದ್ಧ ಹಿಂದೂಗಳು ರೊಚ್ಚಿಗೇಳುವುದು ಗ್ಯಾರಂಟಿ. ಯಾಕೆಂದರೆ ಪ್ರತೀ ಬಾರಿ ರಾಜ್ಯ ಸರಕಾರ ಹಿಂದೂ ವಿರೋಧಿ ನೀತಿಯನ್ನೇ ಅನುಸರಿಸಿಕೊಂಡು ಬಂದಿದ್ದು ಹಿಂದೂ ವಿರೋಧಿ ಸರಕಾರ ಎಂದು ಸಾಬೀತುಪಡಿಸಿದೆ. ಆದ್ದರಿಂದ ರಸ್ತೆಗೆ ಮರುನಾಮಕರಣ ಮಾಡದಂತೆ ರಾಜ್ಯ ಸರಕಾರ ತಡೆಯಲೇಬೇಕು ಎಂಬುದು ಜನರ ಆಗ್ರಹ.!!

–ಓಂಕಾರ್

Tags

Related Articles

FOR DAILY ALERTS
 
FOR DAILY ALERTS
 
Close