ಪ್ರಚಲಿತ

ಸುಮಲತಾ ಅಂಬರೀಶರ ಜಾತಿ ಕೆಣಕಿದ ಜೆಡಿಎಸ್ ವಿರುದ್ಧ ಬೀದಿಗಿಳಿದ ಕಾಂಗ್ರೆಸ್ಸಿಗರು.! ಅನಿತಾ ಕುಮಾರಸ್ವಾಮಿಯವರು ಯಾವ ಸೀಮೆಯ ಗೌಡ್ತೀಯೆಂದ ಕಾಂಗ್ರೆಸ್ಸಿಗರು.!

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದ ಗಂಡು, ಮಾಜಿ ಸಚಿವ ದಿ.ಅಂಬರೀಶರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಸ್ವತಃ ಕಾಂಗ್ರೆಸ್ ನಾಯಕರೇ ಬಿ ಪಾರಂ ಹಿಡಿದುಕೊಂಡು ಅಂಬರೀಶ್ ಮನೆ ಬಾಗಿಲನ್ನು ಬಡಿದಿದ್ದರು. ಆದರೆ ಅಂಬರೀಶರು ಅದಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರೆ ಕಾಂಗ್ರೆಸ್ ನಾಯಕರ ವಿರುದ್ಧ ಬೇಸರಗೊಂಡಿದ್ದ ಕಾರಣ ಬಿ ಫಾರಂ ಸ್ವೀಕರಿಸಲು ಮೀನಾ-ಮೇಷಾ ಎನಿಸಿದ್ದು ಕೊನೆಯವರೆಗೂ ಬಿ ಫಾರಂ ಸ್ವೀಕರಿಸದೆ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಕಾರಣವಾಗಿದ್ದರು. ಮಾತ್ರವಲ್ಲದೆ ಅಂಬಿಯಿಂದ ತೆರವಾಗಿರುವ ಕ್ಷೇತ್ರ ಹಾಗೂ ಇಡಿಯ ಮಂಡ್ಯ ಜಿಲ್ಲೆ ಜೆಡಿಎಸ್ ಪಕ್ಷದ ಕಡಡೆ ಮುಖ ಮಾಡಿತ್ತು. ಅಂದಹಾಗೆ ಅಂದು ಜೆಡಿಎಸ್ ಆ ಪರಿಯ ಗೆಲುವು ಕಾಣಲು ಕಾರಣರಾಗಿದ್ದವರು ಇಂದು ಇಹಲೋಕ ತ್ಯಜಿಸಿರುವ ಮಾಜಿ ಸಚಿವ ಅಂಬರೀಶ್.

ಆದರೆ ಇಂದು ಅಂಬರೀಶರ ಅನುಪಸ್ಥಿತಿಯಲ್ಲಿ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ತಮ್ಮ ಬಾಲಬಿಚ್ಚಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಟಿಕೆಟ್ ಗುದ್ದಾಟ ಈಗಲೇ ತಾರಕಕ್ಕೇರಿದೆ. ಮೈತ್ರಿ ಸರ್ಕಾರದಲ್ಲಿ ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸಸುವುದಾದರೆ ಮಾಜಿ ಸಚಿವ ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ರವರನ್ನೇ ಅಭ್ಯರ್ಥಿ ಮಾಡಬೇಕು ಎಂದು ಮಂಡ್ಯ ಕಾಂಗ್ರೆಸ್ ಹಠಕ್ಕೆ ಬಿದ್ದಿದೆ.ಅಂಬಿಯಿಂದ ತೆರವಾಗಿರುವ ಮಂಡ್ಯ ಅನಾಥವಾಗಿದೆ. ಈ ಸ್ಥಾನ ತುಂಬಲು ಸುಮಲತಾ ಅಂಬರೀಶರೇ ಬರಬೇಕು ಎನ್ನುವ ಕೂಗು ಜೋರಾಗಿದೆ. ಈ ಕೂಗು ಕೇಳುತ್ತಿರುವಾಗಲೇ ಅತ್ತ ಮತ್ತೊಂದು ಯಡವಟ್ಟು ನಡೆದೇ ಬಿಟ್ಟಿದೆ.

ಜೆಡಿಎಸ್ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಸುಮಲತಾ ಅಂಬರೀಶ್ ವಿರುದ್ಧ ಜಾತಿಯ ಬಾಣ ಹೂಡಿದ್ದಾರೆ. “ಅಂಬರೀಶ್ ಅವರ ಪತ್ನಿ ಸುಮಲತಾರವರು ಗೌಡ್ತಿಯೇ ಅಲ್ಲ. ಅವರು ತೆಲುಗು ಮೂಲದವರು. ಹೀಗಾಗಿ ಅವರನ್ನು ಗೌಡ್ತಿ ಎಂದು ಹೇಗೆ ಹೇಳಲು ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ. ಮಾತ್ರವಲ್ಲದೆ ಮತ್ತೆ ಅಂಬರೀಶ್ ರವರು ಕೊನೆಯ ಚುನಾವಣೆಯನ್ನು ಯಾಕೆ ಎದುರಿಸಿಲ್ಲ? ಅಂದರೆ ಅವರಿಗೆ ಸೋಲಿನ ಭಯ ಇತ್ತು. ಅವರು ಕೇಂದ್ರ ಹಾಗೂ ರಾಜ್ಯದಲ್ಲಿ ಸಚಿವರಾಗಿದ್ದಾಗ ಏನು ಸಾಧನೆ ಮಾಡಿದ್ದರು?” ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ಶ್ರೀಕಂಠೇಗೌಡರ ಈ ರೌದ್ರ ಪ್ರಶ್ನೆಗೆ ಕೆರಳಿ ಕೆಂಡ ಕಾರಿರುವ ಮಂಡ್ಯ ಕಾಂಗ್ರೆಸ್ಸಿಗರು ಹಾಗೂ ಅಂಬರೀಶ್ ಅವರ ಅಭಿಮಾನಿಗಳು ರೆಬೆಲ್ ಆಗಿದ್ದಾರೆ. ಅಂಬರೀಶರನ್ನು ನಿಂದಿಸಿದ ಜೆಡಿಎಸ್ ನಾಯಕನ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಶ್ರೀಕಂಠೇಗೌಡರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ “ಜೆಡಿಎಸ್ ಇಂದು ಮಂಡ್ಯದಲ್ಲಿ ನೆಲೆಯೂರಲು ಕಾರಣವೇ ಅಂಬಿ ಅಣ್ಣ. ಅವರ ವಿರುದ್ಧ ಮಾತನಾಡುವ ನಿಮಗೆ ಅಧಿಕಾರದಲ್ಲಿ ಮುಂದುವರೆಯಲು ಯಾವುದೇ ಅರ್ಹತೆ ಇಲ್ಲ. ಕೂಡಲೇ ರಾಜೀನಾಮೆ ನೀಡಿ” ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಕಾಂಗ್ರೆಸ್ಸಿಗರು ಮತ್ತೊಂದು ಬಾಂಬ್ ಎಸೆದಿದ್ದಾರೆ. ಆಂದ್ರ ಸುದ್ಧಿವಹಿನಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಸಂದರ್ಶನವನ್ನು ಕಾಂಗ್ರೆಸ್ಸಿಗರು ಹಾಗೂ ಅಂಬರೀಶ್ ಅಭಿಮಾನಿಗಳು ಬಟಾಬಯಲು ಮಾಡಿದ್ದಾರೆ. “ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿಯವರು ಯಾವ ಸೀಮೆಯ ಗೌಡ್ತೀ? ಅವರು ತೆಲುಗು ಮೂಲದವರು ಎಂದು ಈ ಹಿಂದೆ ಸ್ವತಃ ಕುಮಾರಸ್ವಾಮಿಯವರೇ ಹೇಳಿದ್ದಾರಲ್ಲಾ? ಮೊದಲು ನಿಮ್ಮ ಪಕ್ಷದ ದೊರೆಯ ಕಥೆಯನ್ನು ಕೇಳಿ ನಂತರ ನಮ್ಮ ವಿಚಾರಕ್ಕೆ ಬನ್ನಿ” ಎಂದು ಜೆಡಿಎಸ್ ನಾಯಕನಿಗೆ ಮುಟ್ಟಿ ನೋಡುವಂತೆ ಹೇಳಿಕೆ ನೀಡಿದ್ದಾರೆ.

ರಾಜಕೀಯ ಸ್ವಾರ್ಥಕ್ಕಾಗಿ ಒಂದು ಹೆಣ್ಣಿನ ಜಾತಿಯನ್ನು ಕೆಣಕಿದ ಜೆಡಿಎಸ್ ನಾಯಕರ ನೀಚ ಹಾಗೂ ಕೆಳಮಟ್ಟದ ರಾಜಕೀಯದ ವಿರುದ್ಧ ಮಂಡ್ಯದಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು ಮೈತ್ರಿ ಸರ್ಕಾರದ ನಿದ್ದೆಗೆಡಡಿಸಿದೆ. ಇದೊಂದು ಭಾವನಾತ್ಮಕ ವಿಚಾರವಾಗಿದ್ದು ಸುಮಲತಾ ಅಂಬರೀಶರ ರಾಜಕೀಯ ಪ್ರವೇಶದ ವಿಷಯ ಉಭಯ ಪಕ್ಷಗಳ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close