ಪ್ರಚಲಿತ

ದೇಶಕ್ಕೆ ಮಾರಕವಾದ ಕಾಂಗ್ರೆಸ್ ೨೦೧೯ರ ಲೋಕಸಭಾ ಚುನಾವಣೆಯ ಬಗ್ಗೆ ಹೇಳಿದ್ದೇನು ಗೊತ್ತಾ.? ದೇಶವನ್ನೇ ಇಸ್ಲಾಮೀಕರಣ ಮಾಡಲು ಕಾಂಗ್ರೆಸ್ ಪ್ರಯತ್ನ.!

ಸನಾತನ ಹಿಂದೂ ಧರ್ಮವನ್ನು ಇತಿಹಾಸದಲ್ಲೇ ನಾಶ ಮಾಡಲು ಹಲವಾರು ಕೈಗಳು ಪ್ರಯತ್ನಿಸಿ ವಿಫಲರಾಗಿರುವುದು ಇಡೀ ಜಗತ್ತಿಗೆ ಗೊತ್ತಿರುವ ವಿಚಾರ. ಹಿಂದೂ ಧರ್ಮದ ವಿರೋಧವಾಗಿ ಯಾರೆಲ್ಲಾ ಪಿತೂರಿ ನಡೆಸುತ್ತಾ ಬಂದರೋ ಅವರೆಲ್ಲಾ ಕೈಲಾಗದೆ ಸೋತಿರುವುದು ನಮ್ಮ ಕಣ್ಣ ಮುಂದೆಯೇ ಇದೆ. ಇದು ಕೇವಲ ಇತಿಹಾಸದ ಪುಟಗಳಲ್ಲಿ ಮಾತ್ರವಲ್ಲ, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರವೂ ಕಾಂಗ್ರೆಸ್ ಪಕ್ಷದ ತೀಟೆ ತೀರಿಸಿಕೊಳ್ಳಲು ಹಿಂದೂ ಧರ್ಮವೇ ಗುರಿಯಾಗಿತ್ತು. ತಮ್ಮ ರಾಜಕೀಯ ಜೀವನದ ಬೆಳವಣಿಗೆಗಾಗಿ ಅಲ್ಪಸಂಖ್ಯಾತರು ಎನಿಸಿಕೊಂಡಿರುವ ಮುಸ್ಲೀಮರನ್ನು ಓಲೈಕೆ ಮಾಡುತ್ತಾ ಬಂದಿರುವ ಕಾಂಗ್ರೆಸ್, ಇಂದು ಇಡೀ ದೇಶದಲ್ಲೇ ಮುಸ್ಲೀಮರಿಗೆ ಮೊದಲ ಆದ್ಯತೆ ನೀಡಬೇಕೆಂಬ ಬೇಡಿಕೆ ಇಟ್ಟಿದೆ ಎಂದರೆ ನಮ್ಮ ದೇಶದಲ್ಲಿ ಯಾವ ರೀತಿಯ ರಾಜಕೀಯ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ‌.

ಯಾಕೆಂದರೆ ಸರಕಾರದ ಸವಲತ್ತುಗಳನ್ನು ಪಡೆದು ಕೊಬ್ಬಿರುವ ಮುಸ್ಲೀಮರಿಗೆ ಬೆಂಬಲವಾಗಿ ನಿಂತಿರುವುದೇ ಈ ಕಾಂಗ್ರೆಸ್. ಕಾಂಗ್ರೆಸ್‌ಗೆ ನಿಜವಾಗಿಯೂ ಮುಸ್ಲೀಮರ ಮೇಲೆ ಯಾವುದೇ ಕಾಳಜಿಯಿಲ್ಲ, ಬದಲಾಗಿ ಕೇವಲ ತಮ್ಮ ರಾಜಕೀಯಕ್ಕೆ ಮುಸ್ಲೀಮರನ್ನು ಬಳಸಿಕೊಂಡಿರುವ ಈ ಕಾಂಗ್ರೆಸ್ ಇದೀಗ ಭಾರತೀಯ ಜನತಾ ಪಕ್ಷದ ಬಗ್ಗೆ ಭಾರೀ ಆರೋಪ ಮಾಡಿ ತಾನು ಯಾವುದೇ ವಿಚಾರದಲ್ಲೂ ಮೂಗು ತೂರಿಸಿಲ್ಲ ಎಂಬುದಾಗಿ ಬಿಂಬಿಸಲು ಪ್ರಯತ್ನಿಸುತ್ತಿದೆ.!

ಈಗಾಗಲೇ ದೇಶದೆಲ್ಲೆಡೆ ೨೦೧೯ರ ಲೋಕಸಭಾ ಚುನಾವಣೆಯ ಬಗ್ಗೆ ತಯಾರಿ ನಡೆಸುತ್ತಿದ್ದಂತೆ ಕಾಂಗ್ರೆಸ್ ಮುಖಂಡ , ಸಂಸದರೂ ಆಗಿರುವಂತಹ ಶಶಿ ತರೂರ್ ಅವರು ಭಾರೀ ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದು, ಭಾರತವನ್ನು ಭಾರತೀಯ ಜನತಾ ಪಕ್ಷ ಹಿಂದೂ ರಾಷ್ಟ್ರ ಮಾಡಲು ಪ್ರಯತ್ನಿಸುತ್ತಿದೆ, ಇಂತಹ ಸನ್ನಿವೇಶ ಎದುರಾದರೆ ಭಾರತ ಹಿಂದೂ – ಪಾಕಿಸ್ತಾನವಾಗಲಿದೆ ಎಂದು ಹೇಳಿದ್ದಾರೆ. ಆದರೆ ಕಾಂಗ್ರೆಸ್‌ನ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ.!

ಬಿಜೆಪಿ ಗೆದ್ದರೆ ದೇಶ ಹಿಂದೂ ರಾಷ್ಟ್ರ..!

೨೦೧೪ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಕಾಂಗ್ರೆಸ್ ಮತ್ತು ಇತರ ಎಡಪಂಥೀಯ ಪಕ್ಷಗಳು ಇದೇ ರೀತಿ ಹೇಳಿಕೊಂಡು ತಿರುಗಾಡುತ್ತಿದ್ದವು. ಬಿಜೆಪಿ ಗೆದ್ದರೆ ಭಾರತದಲ್ಲಿ ಮುಸ್ಲೀಮರಿಗೆ ರಕ್ಷಣೆ ಇಲ್ಲ, ನರೇಂದ್ರ ಮೋದಿ ಪ್ರಧಾನಿಯಾದರೆ ದೇಶದಲ್ಲಿ ಹಿಂದೂಗಳ ಅಟ್ಟಹಾಸ ಹೆಚ್ಚಾಗುತ್ತದೆ ಎಂದು ಹೇಳಿ ದೇಶದಲ್ಲಿ ಒಂದು ರೀತಿಯ ಗೊಂದಲ ಸೃಷ್ಟಿಸಿದ್ದರು. ಆದರೆ ನರೇಂದ್ರ ಮೋದಿ ಮಾತ್ರ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ಮಂತ್ರ ಹೇಳಿಕೊಂಡು ಅಧಿಕಾರ ವಹಿಸಿಕೊಂಡರು. ಇದನ್ನು ಕಂಡು ಉಡೀ ದೇಶವೇ ನಿಬ್ಬೆರಗಾಗಿತ್ತು‌. ಯಾಕೆಂದರೆ ಪ್ರಧಾನಿ ಮೋದಿ ದೇಶದ ಹಿತಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಸ್ವತಃ ಅಲ್ಪಸಂಖ್ಯಾತರೇ ಒಪ್ಪಿಕೊಂಡರು. ಆದರೆ ಇದನ್ನು ಕಂಡು ಕಾಂಗ್ರೆಸ್‌ಗೆ ಭಾರೀ ಅವಮಾನ ಉಂಟಾಗಿ ಇದೀಗ ಮತ್ತೆ ಬಾಯಿ ಬಡಿದುಕೊಳ್ಳಲು ಪ್ರಾರಂಭಿಸಿದೆ.

 

೨೦Image result for modi೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಭಾರತ ಹಿಂದೂ ರಾಷ್ಟ್ರವಾಗಲಿದೆ. ದೇಶದಲ್ಲಿ ಮುಸ್ಲೀಮರು ಭಾರೀ ಕಷ್ಟ ಅನುಭವಿಸುತ್ತಾರೆ, ಬಿಜೆಪಿಗರ ಹಿಂದೂ ಪ್ರೇಮ ಭಾರತದ ಸಂವಿಧಾನವನ್ನೇ ಬದಲಾಯಿಸಬಹುದು ಎಂದು ಹೇಳುವ ಮೂಲಕ ಮತ್ತೊಮ್ಮೆ ದೇಶದ ಜನರಲ್ಲಿ ವಿಷಭೀಜ ಬಿತ್ತುವ ಪ್ರಯತ್ನ ನಡೆಸುತ್ತಿದ್ದಾರೆ.!

ಸಂಸತ್ತಿನಲ್ಲಿ ಬಿಜೆಪಿ ಮಹಾತ್ಮ ಗಾಂಧಿ ಅವರಿಗಿಂತ ಹೆಚ್ಚು ಸಾವರ್ಕರ್ ಅವರಿಗೆ ಗೌರವ ನೀಡುತ್ತದೆ ಎಂದು ಹೇಳಿರುವ ಶಶಿ ತರೂರ್, ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಸಂಸತ್ತಿನಲ್ಲಿ ಸಾವರ್ಕರ್ ಅವರ ಭಾವಚಿತ್ರ ಇಟ್ಟಿರುವದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಸಾವರ್ಕರ್ ಓರ್ವ ದೇಶಪ್ರೇಮಿ, ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಹೆಮ್ಮೆಯ ಭಾರತೀಯ, ಆದರೆ ಕಾಂಗ್ರೆಸ್ ದೃಷ್ಟಿಯಲ್ಲಿ ಸಾವರ್ಕರ್ ಅವರನ್ನು ಮೂರನೇ ವ್ಯಕ್ತಿಯಾಗಿ ಕಾಣಲಾಗುತ್ತಿದೆ ಎಂಬುದಕ್ಕೆ ಇದೀಗ ಮತ್ತೊಮ್ಮೆ ತರೂರ್ ಅವರ ಮಾತು ಸ್ಪಷ್ಟಪಡಿಸಿದೆ.!

ಭಾರತ ಹಿಂದೂ-ಪಾಕಿಸ್ತಾನ..!

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳು ಯಾವ ರೀತಿ ಕಷ್ಟ ಅನುಭವಿಸುತ್ತಿದ್ದಾರೋ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಭಾರತದಲ್ಲೂ ಅಂತಹ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಹೇಳಿರುವ ಶಶಿ ತರೂರ್, ಮುಸ್ಲೀಮರಿಗೆ ದೇಶದಲ್ಲಿ ರಕ್ಷಣೆ ಇಲ್ಲದಂತಾಗಬಹುದು ಎಂದು ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಇಂತಹ ಹೇಳಿಕೆ ನೀಡಿ ದೇಶದ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆಸುತ್ತಿದೆ ಎಂಬುದಕ್ಕೆ ಇದಕ್ಕಿಂತ ಹೆಚ್ಚಿನ ಪುರಾವೆ ಬೇಕಾಗಿಲ್ಲ. ಯಾಕೆಂದರೆ ಬಿಜೆಪಿ ಯಾವತ್ತೂ ಇಂತಹ ಹೇಳಿಕೆ ಕೂಡ ನೀಡಿಲ್ಲ.

Image result for shashi tharoor

ದೇಶದ ಜನರಿಗೆ ಒಂದೇ ಕಾನೂನು ತರಲು ಚಿಂತನೆ ನಡೆಸುತ್ತಿರುವ ಬಿಜೆಪಿ ಒಂದೆಡೆಯಾದರೆ, ಮುಸ್ಲೀಮರಿಗೆ ಪ್ರತ್ಯೇಕ ಕಾನೂನು ತರಲು ಕಾಂಗ್ರೆಸ್ ಆಗ್ರಹಿಸುತ್ತಿದೆ. ಹಾಗಾದರೆ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರು ಯಾರು.? ಎಂಬ ಪ್ರಶ್ನೆಗೆ ಕಾಂಗ್ರೆಸ್ ಉತ್ತರಿಸಲೇಬೇಕು. ಯಾಕೆಂದರೆ ಕೇವಲ ರಾಜಕೀಯ ಲಾಭಕ್ಕಾಗಿ ಮುಸ್ಲೀಮರನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಿದೆಯೇ ವಿನಃ ಅವರ ಮೇಲಿನ ಕಾಳಜಿಯಿಂದಲ್ಲ ಎಂಬುದು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು.!

ಕಾಂಗ್ರೆಸ್‌ ಹೇಳಿಕೆಗೆ ಹಿಗ್ಗಾಮುಗ್ಗಾ ಝಾಡಿಸಿದ ಬಿಜೆಪಿ..!

ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ಹೇಳಿಕೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿದ್ದು, ಬಿಜೆಪಿ ನಾಯಕರು ಕಾಂಗ್ರೆಸಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಈಗಾಗಲೇ ಚರ್ಚೆ ನಡೆಯುತ್ತಿದ್ದು ಬಿಜೆಪಿ ಮುಖಂಡ ಸಂಬಿತ್ ಪಾತ್ರ, ಕಾಂಗ್ರೆಸ್ ಒಂದು ನಾಚಿಕೆಕೆಟ್ಟ ಪಕ್ಷ, ಹಿಂದೂಗಳನ್ನು ಮತ್ತು ಭಾರತವನ್ನು ಹೀಯಾಳಿಸುವ ಯಾವುದೇ ಅವಕಾಶವನ್ನು ಈ ಕಾಂಗ್ರೆಸಿಗರು ಬಿಡುವುದಿಲ್ಲ ಎಂದು ಕಿಡಿ ಕಾರಿದ್ದಾರೆ. ದೇಶದಲ್ಲಿ ಪುಷ್ಟೀಕರಣದ ರಾಜಕೀಯ ನಡೆಸುತ್ತಿರುವುದೇ ಕಾಂಗ್ರೆಸ್, ಇದೀಗ ಚುನಾವಣೆಯನ್ನು ಎದುರಿಸಲು ಸಾಧ್ಯವಾಗದ ಕಾಂಗ್ರೆಸ್ ಈ ರೀತಿ ಬಿಜೆಪಿಯ ಮೇಲೆ ಆರೋಪ ಮಾಡಿ ದೇಶದ ಜನರಲ್ಲಿ ದ್ವೇಷದ ಭಾವನೆ ಸೃಷ್ಟಿಸುತ್ತಿದೆ ಎಂದಿದ್ದಾರೆ.

ನಿಜವಾಗಿಯೂ ಕಾಂಗ್ರೆಸ್ ಒಂದು ದೇಶದ್ರೋಹಿ ಪಕ್ಷ ಎಂಬುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇಕಿಲ್ಲ. ಯಾಕೆಂದರೆ ದೇಶವನ್ನು ಅಂದು ನೆಹರೂ ವಿಭಜನೆ ಮಾಡಿದರು,ಆದರೆ ಇದೀಗ ಮತ್ತೆ ಕಾಂಗ್ರೆಸಿಗರು ದೇಶದ ಜನರಲ್ಲಿ ವಿಷ ಭೀಜ ಬಿತ್ತುವ ಮೂಲಕ ಮತ್ತೊಮ್ಮೆ ದೇಶಕ್ಕೆ ಬೆಂಕಿ ಹಚ್ಚಲು ಹೊಂಚು ಹಾಕುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯೇ ಇದಕ್ಕೆಲ್ಲಾ ಉತ್ತರ ನೀಡಲಿದ್ದು, ಕಾಂಗ್ರೆಸ್‌ನ ಎಲ್ಲಾ ಮೋಸದಾಟಗಳಿಗೂ ಅಂತ್ಯ ಕಾಣಲಿದೆ ಎಂಬುದು ಸ್ಪಷ್ಟ..!

–ಸಾರ್ಥಕ್

Tags

Related Articles

FOR DAILY ALERTS
 
FOR DAILY ALERTS
 
Close